Chapter 6

1 ಯೇಸು ಅಲ್ಲಿಂದ ಹೋಗಿ, ತಂಗ ಸ್ವಂತ ಊರ್ಗ್ ವಾದ. ಆಗ ಶಿಷ್ಯರು ಅವರ್ ಜೊತೆಲುವಾದರು. 2 ಕೆಲಸ ಮಾಡಿದ ಜಿನಲು ಅಲ್ಲಿವೇ ಪಾರ್ಥನೆ ಗುಡಿಲ್ ದ್ಯಾವರ ವಾಕ್ಯಗನೇ ಬೋಧಿಸಿತ್ತಿದರು. ಸುಮಾರ್ ಜನರು ಯೇಸು ಹಾಳ ಮಾತುಗನೇ ಕಾಳಿ ಆಸರ್ಯಆದ್ದರು “ಇವೆಲ್ಲಾ ಇವನಗ್ ಎಲ್ಲೆಯಿಂದ ಬತ್ತು? ಇಂವಾ ಪಡ್ದ್ ಬುದ್ದಿಯಂಥದ? ಇವಾನಿಂದ ದೊಡ್ಡಕಾರ್ಯಗ ಆಗದು ಹೆಂಗೆ? 3 ಇಂವಾ ಮರ ಕೆಲಸ ಮಾಡ ಆಸಾರಿವೇ? ಮರಿಯ ಮಙವೇ? ಯಾಕೋಬ, ಯಸ್, ಯೂದ ಮತ್ತೆ ಸಿಮೋನ ಇವರು ಎಲ್ಲಾರ್ ಇವನ ಅಣ್ಣದಿರುತ್ತೇ? ಇವಾಂನ ತೆಂಗೆದಿರ್ ಇಲ್ಲಿವೇ ಉವುರಿಗೆಅಲ್ಲಾ? ಅತ್ತ ಹಾಳೋಡ್ ಯೇಸುನೇ ಒಪ್ಪಿತಿಲೆ. 4 ಆಗ ಯೇಸು “ಪ್ರವಾದಿಗು ಬೇರೆ ಎಲ್ಲಯಾದರು ಮರ್ಯದಿ ಸಿಕ್ಕಿತ್ತದೆ ಅಂಗವೇ ಸ್ವಂತ ಊರ್ಲ್ ಸ್ವಂತ ಜನರ್ಗ್. ಸ್ವಂತ ಮನೆಲ್ ಮಾರ್ಯದಿ ಸಿಕ್ಕದಿಲ್ಲೆ” ಅಂದರು. 5 ಯೇಸು ಆ ಊರ್ಲ್ ಸುಮಾರ್ ದೊಡ್ಡಕಾರ್ಯಗನೇ ಮಾಡಲೆ ಅತಿಲೆ. ಅಂವಾ ತಂಗ ಕೈಗನೆ ಸೆಟೆ ಜನ ಕಾಯಿಲೆಯವರು ಮೇಲೆ ಮಡಾಗಿ ಅವರ ಕಾಣುಲೆಗನೇ ವಾಸೆ ಮಾಡಿನಾ ಇಬೇ ಅಲ್ಲದೆ ಬೇರೆ ಯಾವುದುವೇ ದೊಡ್ಡ ಕಾರ್ಯನೇ ಅಂವಾ ಮಾಡಿತಿಲೆ. 6 ಆ ಜನರ್ಗ್ ನಂಬಿಕೆ ಇಲ್ಲದ್ದನೆ ಯೇಸುಗ್ ಪೂರ ಆಸರ್ಯಆತ್ತು. 7 ಅಂಗೆವೆ ಯೇಸು ಸುತ್ತಮುತ್ತಲ್ ಇರ ಊರ್ಗ್ ಹೋಗಿ ಜನರ್ಗ್ ಬೋಧನೆ ಹಾಲಿತಿದರು. ಅಂಗೆವೆ ಹನ್ನೆರಡು ಜನ ಶಿಷ್ಯರ್ನೆ ಕರ್ದು ಅವರ್ಗ್ ದೆವ್ವಾ ಬುಡುಸಲೇ ಅಧಿಕಾರ ಕೊಟ್ಟು, ಅವರ್ನೆ ಇಬ್ಬೊಬ್ಬರಾಗಿ ಕಾಳ್ಸಿದರ್. 8 ಯೇಸು ಅವರ್ಗ್ ಹಾಳಖಿದದು, “ನಿಂಗ ವಾಗಗ ಯಾವುದ್ನೆ ಎತ್ತೋಗಬಾಡ. ದೊಣ್ಣೆನೇ ಮತ್ರ ಎತ್ತೋನು” ರೋಟ್ಟಿ ಜೋಳಿಗೆ ಮತ್ತೆ ನಿಮಗೆ ಜೇಬುಲ್ ದುಡ್ಡುಗನೇ ಎತೋಗಬಾಡ. 9 ಕಾಲುಗು ಸಪ್ಪಲ್ನೆ ಮಟ್ಟೋಡರೇ ಸಾಕು ಇಕೋಡಿರ ಬಟ್ಟೆವೇ ಸಾಕು.” ಅತ್ತ ಅಪ್ಪಣೆ ಕೊಟ್ಟರು. 10 ನಿಂಗ ಒಂದು ಮನೆಗ್ ವಾದಗ ಆ ಊರ್ನೆ ಬುಟ್ಟುವಾಗಗಟ್ಟಿ ಆ ಮನೆಲ್ಲೆ ಇರ್ನೆ. 11 ಯಾವ ಊರು ಜನರು ನಿಂಗನೇ ಸೇರ್ಸ್‍ದೋದರ್ ಮತ್ತೆ ನಿಂಗ ಹಾಲ ಮಾತುನೇ ಕಾಳದೊದರೆ. ಆ ಊರ್ನೆ ಬುಟ್ಟು ವಾಗಗ ನಿಂಗ ಕಾಲ್ಗು ಅಂಟೋಡಿರ ಧೂಳುನೇ ಓರಿಸಿಬುಡುನ್. ಅವರ್ಗ್ ವಿರೋಧ ಅದು ಸಾಕ್ಷಿ ಆಗಿರುತ್ತದೆ” ಅಂದರು. 12 ಶಿಷ್ಯರ್ ಹೋಗಿ, “ನಿಂಗ ಪಾಪಗನೇ ಬುಟ್ಟು ದ್ಯಾವರ್ ಕಡೆಗು ತಿರುಗೋನು” ಅತ್ತ ಹಾಳಿ ಜನರ್ಗು ಬೋಧನೆ ಹಾಳಿದರ್. 13 ದೆವ್ವಾ ಹಿಡ್ರ್‍ವಾರ್ ಸುಮಾರ್ ಜನರೇ ಶಿಷ್ಯರ್ ವಾಸೆ ಮಾಡಿದ್ದರು. ಮತ್ತೆ ಕಾಯಿಲೆಲೂ ಇರಜನರ್ಗ್ ಹಣ್ಣಿಹಾಕಿ ವಾಸೆಮಾಡಿದರ್. 14 ಯೇಸು ಎಲ್ಲಾ ಕಡೆಗ್ ಗೊತ್ತಾಗಿತ್ತು. ಆಗ ರಾಜ ಹೆರೋಧನಗ್ ಯೇಸು ಸುದ್ದಿನೇ ಕಾಳಿನಾ. ಸೆಟ್ ಜನರು “ಇಂವಾ (ಯೇಸು) ನೀರುಲ್ಲೂ ದೀಕ್ಷಾಸ್ನಾನ ಕೊಡ ಯೋಹಾನ. ಇಂವಾ ಪುನ ಬದಿಕಿ ಬಂದೌವುನಿಗೆ; ಅಂಗವೇ ಈ ಅದ್ಬುತಕಾರ್ಯಗನೇ ಮಾಡಲೆ ಬಲ ಅದಿಗೆ” ಅತ್ತ ಹಾಳಿದರು. 15 ಇನ್ನೂ ಸೆಟ್ಟೆ ಜನರು “ಇಂವಾ ಎಲಿಯ” ಅತ್ತ ಇನ್ನೂ ಸೆಟ್ಟೆ ಜನರು. “ಹಳ್ಳಿ ಕಾಲದ ಪ್ರಾದಿಗಂಗೆ ಇಂವಾ ಒಬ್ಬ ಪ್ರವಾದಿ” ಅತ್ತ ಹಾಳಿತ್ತಿದರ್. 16 ಇದೆಲ್ಲಾ ಕಾಳಿದ ಹೆರೋದ, “ನಿಜವೇ, ನಾ ತಲೆಕೀದ ಯೋಹನವೇ ತಿರಿಗಿ ಬದಿಕಿ ಬಂದವುನಿಗೆ” ಅತ್ತ ಹಾಳಿನಾ. 17 ಹೆರೋದ ತಾ ಎಟ್ಟೊಡಿದ ಹೆರೋದಳು ದೆಸೆಯಿಂದವೇ ಯೋಹಾನನೆ ಹಿಡ್ತಸಿ ಸಿರೇಮನೆಲ್ ಕಟ್ಟಿಹಾಕಿಸಿನಾ. ಆ ಹೆರೋದಳು ಹೆರೋದನ ಅಣ್ಣವೇ ಆದ ಫಿಲಿಪ್ಪನ ಹಿಂಡ್ರು. 18 ಯೋಹಾನ ಹೆರೋದನಾಗ್ “ನೀ ನಿಂಗ ಅಣ್ಣನ ಹಿಂಡ್ರುನೇ ಇಟ್ಟೋಡಿರದ್ ಸರಿಕಾಣಿ” ಅತ್ತ ಹಾಳಿತಿನಾ. 19 ಇದರ ದೆಸೆಲು ಹೆರೋದಳು ಹೋಹಾನ ಮೇಲೆವೆ ಕಿಚ್ಚುಮಾಡಿ ಅವನೇ ಕೊಂದಕಕರ್ ಅತ್ತ ಹಾಳಿದ. ಆಗ ತಾ ಸೇಡು ತೀರ್ಸ್‍ಬಲೇ ಅಬಯಿಂದ ಅತಿಲೆ. 20 ಹೆರೋದ ಯೋಹಾನನೇ ಒಳ್ಳೆಂವಾ ಮತ್ತೆ ಪರಿಶುದ್ಧ ಅಗಿರಂವಾ ಅತ್ತೆ ತಿಳುದು ಅಂಜೋಡು ಅನವಾಗ್ ಯಾವುದೇ ಕೇಡು ಆಗದಂಗೆವೆ ನೋಡಿಕೊತ್ತಿನಾ. ಆಗ ಯೋಹಾನ ಹಾಳದದ್ನೆ ಅಂವಾ ಕಾಳಿದಾಗ ಮನ್ಸ್‍ಲ್ ಗಲಿಬಿಲಿ ಮಾಡಿದರ್, ಅಂವನ ಮಾತುನೇ ಕುಷಿಲು ಕಾಳಿತಿನಾ. 21 ಕೆಡಜನಲು, ಹೆರೋದಿಯಳು ಒಳ್ಳೆ ಸಮಯ ಸಿಕ್ಕಿತು. ಯೆರೋದನ ಹುಟ್ಟಿದ ಜಿನಲು ಅಧಿಕಾರಿಗನೇ ಸೇನಾಧಿಪತಿಗನೇ ಮತ್ತೆ ಗಲಿಲೇಯ ಸೀಮೇಲು ಇರ ದೊಡ್ಡವರ್ಗು ಊಟ ಏರ್ಪಡಿಸಿನಾ. 22 ಆ ಸಭೆಲು ಹೆರೋದಿಯಳು ಮಗ ಊಟದ ಸಭೆಗು ಬಂದ ಕುಣಾದಾಡಿದ. ಹೆರೋದ್ ಅವನ ಜೊತೆಲು ಊಟಗು ಕುತ್ತಿದವರೆಲ್ಲಾರ್ ಅದುನೇ ನೋಡಿ ಕುಷಿಪಟ್ಟರ್. 23 ಆಗ ರಾಜ ಹೆರೋದ ಅಬಳಗ್, “ನಿನಗ್ ಯಾನ ಬೇಕಾದರೂ ಕಾಳು ಕೊಡಿತ್ತೀನಿ “ಅನ್ನ ಆಗ, “ನೀ ಯಾನ ಕಾಳೋಡರ್ ಸರಿ, ನನ್ನ ರಾಜ್ಯಲು ಅರ್ಧನೇ ಕಾಲೋಡರೇ ಅದುನೇ ನಿನಗ್ ಕೊಡಿತ್ತೀನಿ” ಅತ್ತ ಮಾತುಕೊಟ್ಟ. 24 ಆಗ ಅಬ್ಬ ತಂಗ ಅವ್ವೆ ಅತ್ರಗ್ ಹೋಗಿ. “ನಾ ಯಾನಾಥ ಕಾಳಬಲ್ಲೇ?” ಅತ್ತ ಕಾಳಿದ ಅಬಳ ಅವ್ವೆ. “ನೀರಲ್ಲೂ ದೀಕ್ಷಾಸ್ನಾನ ಕೊಡ ಯೋಹಾನನ ತಲೆನೇ ಕಾಲೋ ಅತ್ತ ಹಾಳಿದ. 25 ಆ ಅಣ್ಣು ಬಯಾಗನೇ ರಾಜನ ಅತ್ರ ಬಂಧ್ರು, “ನೀರ್ಲೂ ದೀಕ್ಷಾಸ್ನಾನ ಕೊಡ ಯೋಹಾನನ ತಲೆನೇ ಒಂದು ತಟ್ಟೆಲೆ ಈಗವೇ ತಂದುಕೊಡು ಇದ್ನೆವೇ ನಾ ಬೇಡಾಬದು” ಅತ್ತ ಹಾಳಿದ. 26 ಅರಸನಾಗ್ ಪೂರವೇ ಬ್ಯಾಜರ ಅತ್ತು. ಅಂಗವೇ ನಂಟ್ರುಮಂದಕ್ ಅಂವಾ ಕೊಟ್ಟ ಮತು ದೆಸೆಲು ಅಬಳ ಅಸೆನೆ ತೀರಿಸಿತ್ತೀನಿ ಅನ್ನ. 27 ಅದುಕ್ ಅಂವಾ ಒಬ್ಬ ಕಾವುಲ್‍ಗಾರನೇ ಕರ್ದು ಈಗವೇ ಯೋಹಾನನನ ತಲೆನೆ ತರಕೆ ಅತ್ತ ಹಾಳಿ ಕಾಳಿಸಿನಾ. 28 ಕಾವುಲ್‍ಗಾರ ಸಿರೇಮನೆಗ್ ಹೋಗಿ ಯೋಹಾನನನ ತಲೆನೆ ಕತ್ತರ್‍ಸೋಡು. ಅದುನೇ ತಟ್ಟೆಗ್ ಹಾಕೊಡ್ ಅಣ್ಣುಗ್ ತಂದುಕೊಟ್ಟ ಅಬಾ ಅದುನೇ ತಂಗ ಅವ್ವೆಗು ಕೊಟ್ಟ. 29 ಇದುನೇ ಕಾಳಿದ ಯೋಹಾನನ ಶಿಷ್ಯರ್ ಅಲ್ಲಿಗ್ ಬಂದು ತಡಿನೇ ಎತ್ತೋಡು ಹೋಗಿ ಊಲಿದರ್. 30 ಆಗವೇ ಅಪಫಸ್ತಲರ್ ಯೇಸು ಅತ್ರ ತಿರಿಗಿ ಬಂದು ತಂಗ ಮಾಡಿದ ಎಲ್ಲಾ ಕಾರ್ಯನೇ ಅವರ್ ದ್ಯಾವರ ವಾಕ್ಯಗನೇ ಹಾಳಿದದ್ನೆ ಎಲ್ಲಾ ಒಪ್ಪಿಸಿದರು. 31 ಆನರ್ ಗುಂಪುಗುಂಪಾಗಿ ಬಂದೋಡ್ ಹೋಗೊಡಿದಾಗ ಯೇಸುಗ್ ಮತ್ತು ಅವರ್ ಶಿಷ್ಯರ್ ಊಟಮಾಡಲೇ ಹಾತಿತಿಲೇ. 32 ಅಂಗೆವೇ ಯೇಸು, “ಬಾರ್ನ್ ನನ್ನ ಜೊತೆಲು ನಂಗ ಬೆಂಗಾಡು ಜಾಗಗ್ ಹೋಗಿ ಸೆಟೆ ತಳರ್‍ಸೋಡ್ ಬರೋ” ಅಂದರು. ಅಂಗವೇ ಅವರೆಲ್ಲಾರ್ ಸೇರಿ ದೋಣಿನೇ ಹತ್ತಿ ಬೆಂಗಾಡುಗು ವಾದರ್ . 33 ಆಗ ಅವರ್ ವಾಗದ್ನೆ ಕಂಡ್ ಗುರುತು ಇಡ್ತು ಸುಮಾರ್ ಜನ ಎಲ್ಲಾ ಉರ್ಗ್‍ಯಿಂದ ಕಾಲ್ದಾರಿಲ್ ಬ್ಯಾಗನೇ ಹೋಗಿ ಅವರ್‍ಗಿಂತ ಮುಚ್ಚೆವೇ ಆ ಜಾಗಗ್ ಸೇರಿದರ್. 34 ಯೇಸು ಅಲ್ಲಿಗ್ ಬಂದಾಗ ಸುಮಾರ ಜನರ್ ತಂಗಗಾಗಿ ಕಾಡೋಡಿರದ್ನೆ ನೋಡಿದರ್. ಅವರ್, ಮೇಯಿಸವರ್ ಕಾಣಿ ಅತ್ತ ಕುರಿಗ ಮಾದ್ರಿ ಇರದ್ನೆ ಕಂಡು ಬ್ಯಾಜರ ಮಾಡಿ; ಅವರ್ಗ ಸುಮಾರ್ ಸುದ್ಬಿಗನೇ ಹಾಳಿತ್ತಿದರು. 35 ಅಂಗೆವೇ ಸಾಯಿಂಕಾಲ ಅಗೋಡ್ ಬತ್ತು. ಶಿಷ್ಯರು ಯೇಸು ಅತ್ರಗ್ ಬಂದು. 36 “ಈಗಾಗವೇ ಹೊತ್ತು ಮುಳುಗಿ ಹೊತು; ಇದು ಯಾರ್ ಇಲ್ಲಗ ಜಾಗ ಇನ್ನೂ ಜನರ್ನೆ ಕಾಳಿಸಿಬುಡು. ಅವರ್ ಅತ್ರದ ಊರ್ಗ್ ಹೋಗಿ ಊಟಗು ಯಾನಾದರ್ ಎತ್ತಬಲಿ” ಅತ್ತ ಹಾಳಿದರು. 37 ಅದುಕ್ ಯೇಸು, “ನಿಂಗವೇ ಅವರಗ್ಗ ಊಟಗ್ ಕೊಡುನೆ” ಅತ್ತ ಹಾಳಿದರ್ ಅದ್ಕುವರ್ “ನಂಗೆ ಹೋಗಿ ಇನ್ನೂರು ಬೆಳ್ಳದುಡ್ಡುಗ್ ರೊಟ್ಟಗನೇ ಎತ್ತೋಡು ಅವರ್ಗ್ ಊಟಗ್ ಕೊಡಕಾ?” ಅತ್ತ ಕಾಳಿದರ್. 38 ಯೇಸು ಶಿಷ್ಯರ್ಗ್. “ಈಗ ನಿಂಗತ್ರ ಯಾಸ ರೊಟರ್ಟಿ ಅವಿಗೆ? ಹೋಗಿ ನೋಡ್ನ ಅತ್ತ ಹಾಳಿನ. ಶಿಷ್ಯರ್ ಹೋಗಿ ರೊಟ್ಟಿಗನೇ ಲಕ್ಕಕಿ ಬಂದು, “ನಂಗ ಅತ್ರ ಐದು ರೊಟ್ಟಿ ಮತ್ತೆ ಎರಡು ಮೀನು ಅದಿಗೆ” ಅತ್ತ ಹಾಳಿದರು. 39 ಎಲ್ಲಾರ್ ಸಾಲಸಾಲಾಗಿ ಹಸುರ್ ಹುಲ್ಲು ಮೇಲೆ ಊಟಗು ಕೂತಬಲೇ ಯೇಸು ಹಾಳಿದರು. 40 ಅವರ್ ಐವತ್‍ಅಂಗ್ ನೂರರಂಗೆ ಸಾಲುಸಾಲಗಿ ಕೂತರ್. 41 ಯೇಸು ಐದು ರೊಟ್ಟಿ ಮತ್ತೆ ಎರಡು ಮೀನಗನೇ ಎತ್ತೊಡು, ಆಕಾಸದ ಕಡೆಗ್ ನೋಡಿ. ರೋಟಿಗಾಗಿ ದ್ಯಾವರ್ಗ್ ಪಾರ್ಥನೆ ಮಾಡಿನಾ. ಮತ್ತೆ ರೊಟ್ಟಿನೇ ಮುರ್ತು ಅದುನೇ ಶಿಷ್ಯರ್ಗ್ ಕೊಟ್ಟು ಜನರ್ಗ್ ಹಂಚಲೇ ಹಾಳಿದರು. ಅಂಗವೇ ಎರುಡು ಮೀನುಗನೇ ಎತ್ತೋಡು ಜನರ್ಗ್ ಹಂಚಲೇ ಶಿಷ್ಯರ್ಗ್ ಕೊಟ್ಟರು. 42 ಎಲ್ಲಾರ್ ಹೊಟ್ಟೆ ತುಂಬಾ ತಿಂದು ಕುಷಿಲ್ ಸಾಕಾತ್ತು ಅಂದರ್ (*ಒಂದು ಬೆಳ್ಳಿದುಡ್ಡು – ಕೆಲಸದವರ ಒಂದು ಜಿನದ ಕೂಲಿ) 43 ಇನ್ನು ಉಳ್ಳುದ್ದ ರೊಟ್ಟಿ ಮತ್ತೆ ಮೀನು ತುಂಡುಗನೇ ಸೇರಿಸಿದಾಗ, ಅಬೆ ಹನ್ನೆರಡು ಕುಕ್ಕೆ ತುಂಬವೇ ಆಗಿತ್ತು. 44 ಊಟ ಮಾಡಿದವರ್ಗ್ ಗಂಡುಸಾರ್ ಮಾತ್ರವೇ ಐದುಸಾವುರ. 45 ಇದಾದಗ ಯೇಸು ತಂಗ ಜನರ್ ಗುಂಪನೇ ಕಾಳ್ಸಿಬುಡಗವೇ ಶಿಷ್ಯರು ದೋಣಿ ಹತ್ತಿ ತಂಗಗಿಂತ ಮುಮದಕ್ ಸಮುದ್ರದ ಆ ಕಡೆಗ್ ಬೆತ್ಸಾಯಿಗ್ ವಾಗಲೇ ಅವರ್ಗ್ ಹಾಳಿನಾ. 46 ಜನರ್ನೆ ಹಾಳಿ ಕಾಳ್ಸಿದಾಗ ಯೇಸು ಪಾರ್ಥನೆ ಮಾಡಲೇ ಬಟ್ಟಗು ವಾದರ್. 47 ಸಾಯಿಂಕಾಲ ಅದಾಗ ದೋಣಿ ಸಮುದ್ರದ ಮದ್ದೆಲು ಇತ್ತು. ಆಗ ಯೇಸು ಒಬ್ಬರುವೇ ದಿಡಲು ಇದ್ದರು. 48 ಎದುರುಗಾಳಿ ಬೀಸದ್ನೆ ಶಿಷ್ಯರು ಕಂಡ್ ದೋಣಿನೇ ಮುಂದಕು ನಡ್ಸಾಲೆ ಅವರ್ ಕೈಲ್ ಆತಿಲ್ ಇದ್ನೆ ಕಂಡೋಡ್ ಯೇಸು ಸಮುದ್ರ ನೀರುಮೇಲೆ ನಡುದೊಡ್ ಅವರ್ ಕಡೆಗ್ ಬಂದು ಅವರ್ನೆ ದಾಟಿ ಮುಂದಕ್ ಹೋಗೋಡಿದ್ದರ್. 49 ಆಗ ಸುಮಾರ್ ಬಣಕರಿಯಗಳಿಗೆಲ್: ಸಮುದ್ರ್ ಮೇಲೆ ನಡ್ದ್ ಬತ್ತಿದ ಯೇಸುನೇ ಶಿಷ್ಯರು ನೋಡಿದರ್; ಭೂತ ಅಂದೋಡ್ ಬೇಂಯಾಲ್ ಕಿರಿಸಿದರ್. ಅವರೆಲ್ಲಾರ್ ಯೇಸುನೇ ನೋಡಿ ಅಂಜೋಡರು. 50 ಆಗವೇ ಯೇಸು ಅವರ್ ಜೊತೆಲ್ ಮಾತ್ತಾಡಿ. “ಅಂಜಬಾಡ, ಬೇರೆ ಯಾರ್ ಕಾಣಿ, ನಾವೇ; ಧೈರ್ಯಲ್ ಇರ್ನು” ಅತ್ತ ಅವರ್ ಜೊತೆಲು ಮಾತಾಡಿ ದೋಣಿಲ್ ಹತ್ತಿದರ್. 51 ಗ ಎದ್ರಗಾಳಿ ನಿತ್ತುಹೋತು. ಶಿಷ್ಯರು ಆಸರ್ಯಪಟ್ಟರ್. ಅವರ್ ಮನ್ಸ್ ಕಲ್ಲಾಗೊಡಿತ್ತು. 52 ರೊಟ್ಟಿಲ್ ಆದ ಅದ್ಭುತನೇ ಅವರ್ ಇನ್ನೂ ತಿಳ್ದೋಡಿತಿಲ್. 53 ಅವರ್ ಎಲ್ಲಾರು ಸಮುದ್ರನೇ ದಾಟಿ ಗೆನಸರೇತ್ ಊರು ದಿಡಗು ಸೇರಿದರ್. 54 ಅವರ್ ದೋಣಿಯಿಂದ ವರಗೆ ಬಂದಾಗ ಜನಗರ ಯೇಸುನೇ ಗುರುತು ಹಿಡ್ತರ್. 55 ಯೇಸು ಬಂದಿರ ಸುದ್ದಿನೇ ಆ ಸಿಮೇಲು ಇರ ಜನರ್ಗು ಎಲಲಾ ಹಾಳಲೆ ಅವರ್ ಓಡಿವಾದರ್ ಯೇಸು ವಾದ ಜಾಗಗೆಲ್ಲಾ ಜನರ್ ಕಾಯಿಲೆ ಜನರ್ನೆ ಹಾಸಿಗೇಲ್ ತಂದರ್. 56 ಅಂವಾ ಯಾವು ಸೀಮೆಗು ಯಾವ ಊರ್ಗು ವಾದರ್, ಅಲ್ಲಿಯವರ್ವ್ ಕಾಯಿಲೆಯನರ್ನ್ ಅವರ್ ಅತ್ರ ಕರ್ದ್ ಬಂದು ನಿಮಗಬಟ್ಟೆಗೊಂಡನೇ ಮುಟ್ಟಕತ್ತ ಯೇಸುನೇ ಕಾಲೋಡರು. ಅಂಗವೇ ಮುಟ್ಟಿದವರೆಲ್ಲಾರ್ ವಾಸೆ ಆದರ್.