1 ಆಗ ಪಾರಿಸಾಯರ್ ಮತ್ತೆ ಜರುಸಲೇಮ್‍ಯಿಂದ ಸೆಟ್ ಜನರ್ ದ್ಯಾವರ ವಾಕ್ಯಗನೇ ಕಲ್ಸಿಕೊಡವರ್ ಯೇಸು ಅತ್ರ ಬಂದು ಸೇರಿದ್ದರ್. 2 ಯೇಸು ಶಿಷ್ಯರ್ಲ್ ಸೆಟ್ಟೆ ಜನರ್ ಕೈನೇ ತೊಳಿಯದೆ ಕೊಳೆಕೈಲ್ ಊಟಮಾಡದ್ನೆ ಪರಿಸಾಯರ್ ಮತ್ತೆ ದ್ಯಾವರ ವಾಕ್ಯಗನೆ ಕಲ್ಸಿಕೊಡವರ್. 3 ಪರಿಸಾಯರ್ ಬೇರೆ ಯಹೂದ್ಯರೆಲ್ಲರ್ ತಾತ ಮೂತ್ತತ್ತಾತಾತನಕಾಲದ ಕಟ್ಟಲ್ ಕೈನ್ ತೊಳಿಯದೆ ಊಟಮಾಡಿತಿತ್ತಿಲೆ. ತಂಗ ದೊಡ್ಡವರ್ ಕೊಟ್ಟ ಮಾತುಗಲೂ ನಡ್ಪ್ ಅವರ್ ಹಿಂಗೆವೇ ಮಡಿತ್ತಿದರ್. 4 ಪೇಟೆಯಿಂದ ಹೋಗಿ ಬಂದರೆ ನೀರು ಮೀದುವೇ ಊಟ ಮಾಡಿತಿದರ್; ಸೌರಿಗೆ ಸೊಂಬು, ತಪ್ಪಲೆಗನೇ ಸಂದಾಗಿ ತೊಳಿತಿದರ್; ಇಬೆ ಬೇರೆ ಬೆರೆ ಸುಮಾರ್ ಕಟ್‍ಗನ್ ಅವರ್ ರೂಡಿ ಮಾಡೋಡಿದರ್. 5 ಅದ್ದು ಪರಿಸಾಯರ್ ದ್ಯಾವರ ವಾಕ್ಯಗನೆ ಕಲ್ಸಿಕೊಡವರ್, “ನಿಂಗ ಶಿಷ್ಯರ್ ಮೂತ್ತತ್ತಾತನಕಾಲಲೂ ಬಂದ ಕಟ್ಟ್‍ಗನೇ ಯಾಕ ಮಾಡದಿಲೆ? ಕೊಳೆಕೈಲ್ ಅವರ್ ಊಟ ಮಾಡಿತ್ತಿವುರಿಗೆ ಅಲ್ಲಾ? ಅತ್ತ ಯೇಸುನೇ ಕಾಳಿದರು. 6 ಅದ್ಕು ಯೇಸು “ವಳಗೆವಂದು, ವರೆಗವೆಂದು ಮಾತಾಡವರ್ಗ್ ನಿಂಗ ವಿಷಯದಲ್ಲಿ ಯೇಶಾಯ ಯಾಸ ಸಂದಾಗಿ ಹಾಳಿವುನಿಗೆ; ಈ ಜನರೂ ಮಾತುಗಲೂ ನನ್ನ ವಗಳಿತ್ತಾರೆ ಅಂಗವೇ ಅವರ್ ಮನ್ಸ್ ನನ್ನಗ್ ದೂರ ಆಗಿದಿಗೆ. 7 ಇವರ್ ನನ್ನನೇ ಕೊಂಡಾಡರು ಯಾವುದ್ ಪ್ರಯೋಜನ ಕಾಣಿ ಯಾಕಂದ್ರ್ ಮನಸರ್ ಕಟ್ಟ್‍ಗನೇ ಅವರ್ ಹಾಳಿತ್ತಾರೆ. 8 “ನಿಂಗ ದ್ಯಾವರ ಮಾತುಗನೇ ಬುಟ್ಟು ಮನುಸರ್ ಮಾಡ ಕಟ್ಟ್‍ಗನೆ ಹಿಡ್ತ್‍ಕೊತಿದೆರ್” ಅತ್ತ ಹಾಳಿನಾ. 9 ಅಂವಾ ಇನ್ನೂ ಅವರ್ಗ್ ನಿಂಗ ಮೂತ್ತತ್ತಾತತನ ಕಟ್ಟ್‍ಗನೇ ಹಿಡ್ತ್ ನಡಿಯೂ ದ್ಯಾವರ ಮಾತುಗನೇ ದೂರಮಾಡಿತ್ತಿದರ್; ಯಾನ ಸಂದದಿಗೆ ಅಲ್ಲಾ. 10 “ನಿಂಗ ಅವ್ವೆಅಪ್ಪನಗ್ ಮರ್ಯದಿಕೊಡಕ್; ಅಪ್ಪನೆ ಆಗಲಿ, ಅವ್ವೆನೆ ಆಗಲಿ ಶಾಪ ಹಾಕವನೆ ಕೊಂದಕಕ್” ಅತ್ತ ಮೋಶೆ ಕೊಟ್ಟ ಮಾತು. 11 ನಿಂಗವೇ ಒಬ್ಬ ತಿಂಗ ಅಪ್ಪನಗೆ ಆಗಲಿ, ಅವ್ವೆಗೆ ಆಗಲಿ ನೋಡಿ ನಾ ನಿಂಗಗ್ ಕೊಡಲೆ ಇರದ್ನೆ “ಕೊರ್ಬಾನ್” ಅನ್ನ ಕಾಣಿಕೆನೆ ದ್ಯಾವರ್ಗು ಕೊಟ್ಟಿದೇಗೆ ಅತ್ತ ಹಾಳಿಬುಟ್ಟರೆ ಸಾಕು. 12 ಮುಂದಕೂ ಅನ್ನ ತಂಗ ಅಪ್ಪನಗ್ ಮತ್ತೆ ಅವ್ವೆಗ್ ಇನ್ಯಾನ ಮಾಡಬಾರ್ದ್ ಅತ್ತ ಹಾಳಿತ್ತಿದ್ದೆರ್. 13 “ಹಿಂದವೇ ನಿಂಗ ಕಲ್ಲೋಡ್ ಬಂದ ಕಟ್ಟ್‍ಗಯಿಂದ ದ್ಯಾವರ ವಾಕ್ಯಗನೇ ದೂರ ಮಾಡಿತ್ತಿದ್ದೆರ್. ಮತ್ತೆ ಇಂಥ ಕಾರ್ಯಗನೆ ಇನ್ನೂ ಯಾಸೋ ಮಾಡಿತ್ತಿದ್ದೇರ್ ಅತ್ತ ಹಳಿದರು. 14 ಅಂಗವೇ ಯೇಸು ಜನರ್ ಗುಂಪುನೆ ತಂಗ ಅತ್ರಗ್‍ಕರ್ದು. 15 “ನಾ ಹಾಳದ್ನೆ ನಿಂಗ ಎಲ್ಲಾರ್ ಕಾಳಿ ತಿಳ್‍ದೋನು: ವರಗೆಯಿಂದ ಮನುಸನ ವಳಗೆ ವಾಗಂತದು ಅವನೇ ವಲಸು ಮಾಡದಿಲೆ. 16 ಮನುಸನ ವಳಗೆಯಿಂದ ವರೆಗೆ ಬರಂತದು ಅವನೆ ವಲಸಸು ಮಾಡಿತ್ತದೆ (ಕಾಳಲೆ ಕಿವಿಇರಂವಾ ಕಾಳಲಿ)” ಅಂದರು. 17 ಯೇಸು ಜನರ್ ಗುಂಪುನೇ ಬುಟ್ಟು ಮನೆಗೂ ಸೇರಿದ ಮೇಲೆ ಶಿಷ್ಯರ್, ಅವರ್ ಅತ್ರಗ್ ಬಂದು ಆ ಕಥೆ ಅರ್ಥಯಾನ ಅತ್ತ ಕಾಳಿದರ್. 18 ಅದ್ಕು ಅವರ್ “ನಿಂಗಗ್ ಅಸೋವೇ ಬುದ್ದಿ ಕಾಣಿ? ನಿಂಗಗ್ ಇದು ಅರ್ಥ ಆತಿಲೆ? 19 ವರಗೆಯಿಂದ ಮನುಸನ ವಳಗೆ ವಾಗದು ಯಾವುದುವೇ ಅನವೇ ವಲಸು ಮಾಡದಿಲೆ. ಅಂವಾ ತಿಂದದು ಅವನ ಮನ್ಸ್‍ಗ್ ವಾಗದೇ ಹೊಟ್ಟೆಗು ಮತ್ರ ಸೇರಿ ಮತ್ತೆ ತಡಿಯಿಂದ ವರಗೆ ವಾತದೆ (ಹಿಂಗವೇ ಯಾವುದ್ನೆ ತಿಂದರು ವಲಸ್ ಆಗದಿಲೆ ಅತ್ತ ಯೇಸು ಹಾಳಿದರ್) 20 ಅಂಗವೇ ಮನ್ಸ್ ವಳಗೆಯಿಂದ ವರಗೆ ಬರದು ಅವನ ಯೇಚುನೆಗ ಅವನೆ ವಲಸು ಮಾಡಿತ್ತದೆ. ಮನುಸನ ಮನ್ಸ್‍ವಳಗೆಯಿಂದ ಕೆಟ್ಟಯೋಚುನೆ, ಸೂಳೆತನ, ಕದಿಯಾದು, ಕೊಂದಕದು, ಹಾದ್ರತನ, ದುಡ್ಡುಆಸೆ. 21 ಕೇಡುಮಾಡದು, ಮೋಸಮಾಡದು, ಬಂಡತನ, ಹೊಟ್ಟೆಕಿಸು, ಸಾಡಿಅಳದು. ಬಡಯಿಕೊಚ್ಚಬದು. 22 ಮತ್ತೆ ಸೊಕ್ಕು, ಬುದ್ದಿಗೇಡುತನ, ಕೆಲಿಯಾದು ಇಬೆಬೆ ಮೊದ್ಲು ವಳಗೆ ಬರಂಥದು. 23 ಈ ಎಲ್ಲಾ ಕೇಡುಗೆ ಮನುಸನ ಮನ್ಸ್ ವಳಗೆಯಿಂದ ವರಗೆ ಬಂದು ಅವನೆ ವಲಸು ಮಾಡಿತನವೆ” ಅಂದರ್. 24 ಯೇಸು ಅಲ್ಲಿಂದೆ ಹೋಗಿ ಟೈರ್ ಮತ್ತೆ ಸಿಮೋನ್ ಸೀಮೆ ಅತ್ರ ಇದ್ದ ಊರ್ಗ್ ಹೋಗಿ ಒಂದು ಮನೆಲ್ ಉಳುದೊಡರ್, ತಂಗ ಜನರೂ ಕಣ್ಣು ಕಾಣ್ಸಲೇಗ ಅತ್ತ ಅವರ್ ಹಾಳಿದರು ಅದು ಆತಿಲೆ. 25 ಆಗವೇ ಒಬ್ಬ ಹೆಂಗುಸು ಅವರೂ ಸುದ್ದಿನೆ ಕಾಳಿ ವಳಗೆ ಬಂದು, ಅವರ್ ಕಾಲ್ಗು ಬುದ್ಧ. ಅಬಳ ಮಗಳಗ್ ದೆವ್ವಾ ಹಿಡ್ತೀತು. 26 ಅಬ ಒಬ್ಬ ಗ್ರೀಕ್ ಹೆಂಗುಸು, ಸಿರಿಯ ಪೆನಿಷ್ಯ ಸೀಮೆಗು ಸೇರಿದವಾ. ಅಬ ತನ್ನ ಮಗಯಿಂದ ದೆವ್ವಾ ಬುಡ್ಸಕತ್ತ ಅಬ ಯೇಸುನೆ ಕಾಳಿಕೊತಾಳೆ. 27 ಅಂಗೆವೆ ಯೇಸು ಅಬಳಗ್, “ಮೊದ್ಲು ಮಕ್ಕ ತಿಂದು ಹೊಟ್ಟೆ ತುಂಬಲಿ,ಮಕ್ಕ ಊಟನೇ ನಾಯಿಗಗ್ ಹಾಕದು ಸರಿಕಾಣಿ” ಅತತ ಹಾಳಿದರ್. 28 ಅದುಕ್ ಅಬ, “ಅದು ನಿಜವೇ ಸಾಮಿ; ಅಮಗೆವೇ ಮಕ್ಕ ತಿಂದುಬಟ್ಟ ಚೊರ್‍ಪಾರ್‍ಗನೆ ಮೇಜು ಕಳಗೆ ಇರ ನಾಯಿಗ ತಿತ್ತವೆ ಅಲ? ಅತ್ತ ಕಾಳಿದ. 29 ಅಬಳ ಮಾತುಗನೇ ಕಾಳಿ ಯೇಸು “ಸಂದಾಗಿ ಹಾಳಿದ ಬ್ಯಾಜರ ಮಾಡದೇ ಮನೆಗ್ ಹೋಗು, ದೆವ್ವಾ ನಿನ್ನ ಮಗಳನೇ ಬುಟ್ಟು ಹೋಗಿದಿಗೆ” ಅಂದರ್. 30 ಅಬ ಮನೆಗ್ ವಾದಗ, ಮಗ ಹಾಸಿಗೆ ಮೇಲೆ ವಾಸೆ ಆಗಿಮಾಕಿರದ್ನೆ ಕಂಡಗ ದೆವ್ವಾ ಅಬಳನೆ ಬುಟ್ಟು ಹೋತು. ಕಿವಿಕಾಳದಂವಾನಗ್ ಕಿವಿ ಕಾಳಿದದು. 31 ಯೇಸು ಆ ಜಾಗನೆ ಬುಟ್ಟು ಸಿದೋನಿನ ದಾರಿಗಲೂ ದೆಕಪೋಲಿ ಊರ್ನೆ ದಾಟಿ ಗಲಿಲಾಯ ಸಮುದ್ರಗ್ ವಾದರ್. 32 ಕೂದಲೆ ಮಾತಾಡಂವಾ ಒಬ್ಬ ಕಿವುಡನೇ ಜನರೂ ಅವರ್ ಅತ್ರಗು ಕರ್ದ್‍ತಂದರ್ ಅವನ ಮೇಲೆ ಕೈಗನೆ ಮಾಡಗಕತ್ತ ಕಾಳೋಡರು. 33 ಯೇಸು ಅವನೆ ಜನ ಗುಂಪುಯಿಂದ ಕರ್ದೋಗಿ, ತಂಗ ಬೊಟ್ಟುನೆ ಅವನ ಕಿವಿವಳಗೆ ಹಾಕಿ ತುಪ್ಪಿ, ಅವನ ನಾಲಿಗೆನೆ ಮುಟ್ಟಿದರ್. 34 ಆಗ ಆಕಾಸದ ಕಡೆಗ್ ನೋಡಿ, ಉಸುರು, ಆಳ್ತ್, ಅಫಥಾ” ಅತ್ತ ಹಾಳಿದರ್ (ಎಪಥಾ ಎಂದರೆ ತೆಗಿಯಲಿ). 35 ಆಗವೇ ಅವನ ಕಿವಕಾಳಿತ್ತು. ನಾಲಿಗೆ ಸಡ್ಲ್ ಆತು: ಅಂವಾ ಸಂದಾಗಿ ಮತ್ತಾಡಿತಿನ. 36 ಇದ್ನೆ ಯಾರ್ಗ್ ಹಾಳಬಾರ್ದು ಅತ್ತ ಖಂಡಿತಾ ಆಗಿ ಯೇಸು ಜನರ್ಗ್ ಹಾಳಿದರ್, ಅಂಗೆವೇ ಯಾಸು ಹಾಳಿದರ್ ಕಾಳದೇ ಅವರ್ ಇದ್ದಸ್ ಈ ಕಾರ್ಯನೇ ಹಾಳಿತ್ತಿದ್ದರು. 37 ಜನರ್ ನಿಜರ್‍ಲು ಆಸರ್ಯಆಗಿ, “ಯೇಸು ಎಲ್ಲನೇ ಒಳ್ಳೆ ರೀತಿಲ್ ಮಾತ್ತಾಡಿತಾನೆ; ಅಂವಾ ಕವಿಕಾಳದಂವಾನಗ್ ಕವಿ ಕಾಳಂಗ ಮಾಡಿತಾನೆ. ಮಾತು ಬರದವರ್ಗ್ ಮಾತಾಡಂಗೆ ಮಾಡಿತಾನೆ” ಅತ್ತ ಹಾಳಿದರ್.