Chapter 4

1 ಯೇಸು ಗಲಿಲಾಯ ಸಮುದ್ರದ ಅತ್ರಲ್ ಬೋಧನೆ ಹಾಳೋಡಿದರ್, ಜನರು ಅವರ ಸುತ್ತವೆ ಸೇರಿಬಂದಿದರು. ಅದ್ಕು ಅವರು ಸಮುದ್ರಲಿದ ದೋಣಿ ಒಂದುನೇ ಹತ್ತಿ ಕುತ್ತರು. 2 ಆನರ್ ದಿಡಲೇ ಇದ್ದರು. ಆಗ ಯೇಸು ಅವರ್ಗ್ ಸುಮಾರ್ ಮಾತು ಕಥೆ ರೂಪಲ್ ಹಿಂಗೆವೇ ಬೋಧನೆ ಹಾಳಿದರು. 3 ಆಗ ಬಿತ್ತುವಂವಾ ಒಬ್ಬ ಬಿತ್ತುದಕ್ ವಾದ. 4 ಕೊಟ್ಟೆ ಹಾಕೋಡಿದ್ದಾಗ ಸೆಟೆ ಕೊಟ್ಟೆ ಕಾಲ್ದ್‍ರಿಲೂ ಬುದ್ದತು. ಆಗ ಹಕ್ಕಿ ಬಂದು ಅದುನೆಲ್ಲಾ ತಿಂದುಬುಟ್ಟಿತು. 5 ಬೇರೆ ಸೆಟೆ ಕೊಟ್ಟೆಗ ಸುಮಾರ್ ಮಣ್ಣು ಇಲ್ಲದ ಕಲ್ಲುನೆಲದ ಮೇಲೆ ಬುದ್ದತ್. ಅಲ್ಲಿ ಮಣ್ಣು ಸೆಟೆ ಇದ್ದಲ್ಲಿ ಬ್ಯಾಗನೇ ಮೊಳುಕೆ ಹಾತು; 6 ಬಿಸಲು ಬಂದಗ ಬಾಡಿಹೋತು: ಆಳಾಗಿ ಬೇರುವಾಗಲೇ ಆತಿಲೆ. ಅದ್ಕು ಅದು ವಣಗಿಹೋತು; 7 ಬೇರೆ ಸೆಟೆ ಕೊಟ್ಟೆಗ ಮುಳ್ಳುಗಿಡದ ವಳಗೆ ಬುದತು. ಮುಳ್ಳುಗಿಡಗ ಬಳುದು ಅಬೆನ್ನೆ ಅವುಕ್ಕಿ ಬಳಿಯಲೇ ಬುಟ್ಟತಿಲೆ. ಅದಕು ಆ ಸೆಟೆ ಪಲಕೊಟ್ಟತಿಲೆ. 8 ಬೇರೆ ಸೆಟೆ ಕೊಟ್ಟೆಗ ಒಳ್ಳೆ ನೆಲಲೂ ಬುದ್ಧತ್ತು. ಆ ಕೊಟ್ಟೆ ಮುಳುತು. ಬಳುದು ಫಲಬುಟ್ಟತ್ತು ಸೆಟೆ ಕೊಟ್ಟೆಗ ಮೂವತ್ತಾಸ್ ಸುಮಾರ್ ಸೆಟೆ ಕೊಟ್ಟೆಗ ಆರುವತ್ತಾಸ್ ಇನ್ನೂ ಸೆಟೆ ಕೊಟ್ಟೆಗ ನೂರಾಸ್ ಫಲಕೊಟ್ಟತ್. 9 ಈ ಕಥೆಗನೇ ಹಾಳಿದಾಗ ಯೇಸು. “ಕಾಳದುಕ್ ಕಿವಿ ಇರಂವಾ ಕಾಳಲಿ” ಅತ್ತ ಹಾಳಿದರ್. 10 ಬೋಧನೆನೆ ಕಾಳಿದವರ್ಗ್ ಸೆಟೆ ಜನ ಯೇಸು ಒಬ್ಬರೇ ಇದಾಗ, ಹನ್ನೆರುಡು ಜನ ಶಿಷ್ಯರು ಜೊತೆಲು ಬಂದ್, ಅವರ್ ಹಾಳಿದ ಕಥೆಗನೆ ಬಡ್ಸಿ ಹಾಳಿ ಕೊಡಕತ್ತ ಕಾಳೊಡರ್. 11 ಅದ್ಕು ಯೇಸು “ದದ್ಯಾವರ ರಾಜ್ಯದ ಗುಟ್ಟುನೆ ನಿಂಗಗ್ ಹಾಳಿತಿನಿ, ಇನ್ನು ಇರವರ್ಗ್ ಅದೆಲ್ಲಾ ಕಥರೂಪಲು ಮರೆಆಗಿದಿಗೆ. ಯಾಕೆಂದರೆ, 12 ಕಣ್ಣಿದ್ದು ನೋಡಿದರು ಅವರ್ಗು ಕಾಣದಿಲೆ; ಕಿವಿಯಿಂದ ಕಾಳಿದರ್ ಅವರ್ ತಿಳುದಬದಿಲೆ, ಕಂಡು ತಿಳುದೊಡರ್ ಅವರು ದ್ಯಾವರ್ ಕಡೆಗು ತಿರುಗೊಡು: ಪಾಪಸಮೆ ಹೊಂದಿತರೆ” ಅಂದರ್. 13 ಆಗವೇ ಯೇಸು ಅವರ್ಗ, “ಈ ಕಥೆಗ ನಿಂಗಗು ಅರ್ಥ ಮಾಡಬದಿಲ್ಲೆ? ಅಂದರೆ ಬೇರೆ ಎಲ್ಲಾ ಕತೆಗನೇ ಹೆಂಗೇ ಅರ್ಥ ಮಾಡಿಕೊತ್ತಿದ್ದೆರ್? 14 ಈ ಕಥೆಲು ಬಿತ್ತುವಂವ್ವಾ “ದ್ಯಾವರ ವಾಕ್ಯ” ಅತ್ತ ಕೊಟ್ಟೆ ಬಿತ್ತಿತ್ತಾನೆ; 15 ಸೆಟೆ ಜನರು ದ್ಯಾಔರ ವಾಕ್ಯನೇ ಕಾಳಿತ್ತಾರೆ; ಅಂಗೇವೇ ಅವರ್ಗು ಬಿತ್ತಿದ ವಾಕ್ಯನೇ ಸೈತಾನನ್ ಬಂದು ತಗುತುಬುಡುತ್ತಾನೆ. ಆ ಜನವೇ ದಾರಿ ಮಗ್ಗಲಾಗಿರವರ್. 16 ಇನ್ನೂ ಸೆಟೆ ಜನರ್ ದ್ಯಾವರ್ ವಾಕ್ಯನೆ ಕಾಳಿತ್ತಾರೆ. ಮತ್ತೆ ಕುಸಿಯಿಂದವೇ ಅದುನೇ ಬ್ಯಾಗನೇ ಇಟ್ಟುಕೆಳ್ಳುತ್ತಾರೆ. 17 ಅಂಗೆವೇ ಆ ವಾಕ್ಯ ತಂಗತ್ರ ಆಳಾಗಿ ಬೇರೂರಲೇ ಅವರು ಬುಡದಿಲ್ಲೆ. ಅವರು ಆ ವಾಕ್ಯನೇ ಸೆಟೆ ಕಾಲಮಾತ್ರ ಇಟ್ಟುಕೊತ್ತಾರೆ. ಆ ವಾಕ್ಯಯಿಂದವೇ ಕಷ್ಟಗ. ಹಿಂಸೆಗ ಬಂದಗ ಅವರು ಅದುನೇ ಬ್ಯಾಗ ಬುಟ್ಟುಬುಡಿತ್ತಾರೆ. ಇವರ್ವ್ ಕೊಟ್ಟೆ ಬುದ್ಧ ಬಂಡೆಯ ನೆಲ ಆಗಿರುವರು. 18 ಇನ್ನೂ ಸೆಟೆ ಜನರು ಮುಳ್ಳು ಗಿಡಗ ನೆಲ ಅಂಗೆ ಇರುವರು. ಈ ಜನರ್ ವಾಕ್ಯನೇ ಕಾಳಿತ್ತಾರೆ. 19 ಅಂಗೆವೇ ಅವರ್ಲು ಇರಸಿಂತೆಗ, ದುಡ್ಡು ಆಸೆಗೂ ಮತ್ತೆ ಇನ್ನೂ ಬೇರೆ ಬೇರೆ ಅಸೆಗ ಅವರ್ನೆ ಅವುಕ್ಕಿ ಬಳಿಯಲೇ ಬುಟ್ಟತಿಲೆ. ಅದ್ಕುವೇ ಅವರ್ಲ್ ವಾಕ್ಯ ಫಲ ಕೊಟ್ಟತಿಲೆ. 20 ಇನ್ನೂ ಸೆಟೆ ಜನರು ಕೊಟ್ಟೆ ಬುದ್ಧ ಒಳ್ಳೆ ನೆಲದಂಗೆ ಉರಿಗೆ. ಅವರು ವಾಕ್ಯನೇ ಇಟ್ಟೊಡು ಫಲಕೊಡಿತ್ತಾರೆ. ಸೆಟೆ ಸಲ ಮೂವತ್ತಾಸ್, ಮತ್ತೆ ಅರ್ವ್ ತಾಸ್, ಸುಮಾರ್ ನೂರಾಸ್ ಫಲಕೊಡಿತ್ತಾರೆ ಅತ್ತ ಹಾಳಿದರ್. ಇದುವೇ ಒಳ್ಳೆ ನೆಲಲ್ಲೂ ಬುದ್ಧ ಕೊಟ್ಟೆಗು ಸಮ ಆಗಿರಿತ್ತಾರೆ” ಅಂದರು. 21 ಆಗ ಯೇಸು ಅವರ್ಗು “ನಿಮಗೆ ಕತ್ತದೀಪನೇ ತಂದು ತಪಲೇವಳಕ್ ಆಗಲಿ ಮಂಚದ ಕಳಳು ಆಗಲಿ ಮಾಡಗಿತ್ತಿದ್ದೇರಾ? ಕಾಣಿ ನಿಂಗ ದೀಪ ಕಂಬದ ಮೇಲವೇ ಮಾಡತಿತ್ತದ್ದೇರು” ಅತ್ತ ಹಾಳಿದರು. 22 ಆಗ ಎಲ್ಲಾ ಸಂದಾಗಿ ಕಾಣಿಸಿತ್ತದೆ. ಗುಟ್ಟಾಗಿರದ್ ಎಲ್ಲಾವೇ ಬೈಲಗು ಬತ್ತದೆ. 23 ಕಳದುಕ್ ಕಿವಿಇರಂವಾ ಕಾಳುಸಬಲಿ. 24 “ನಿಂಗ ಕಾಳದ್ನೆ ಉಸರಾಗಿ ಕಾಳುಸೋನು; ಬೇರೆಯವರ್ಗು ನಿಮಗ ಕೊಡ ಅಳತೆಲು ದ್ಯಾವರ್ ನಿಂಗಗು ಅಳ್ದು ಕೊಡಿತ್ತಾರೆ; ಇನ್ನೂ ಯಾಚ್ಚಾಗಿ ಕೊಡಿತ್ತಾರೆ. 25 ಇರಂವಾನಗ್ ಇನ್ನೂ ಯಾಚ್ಚಾಗಿ ಕೊಡಲಾಗುತ್ತದೆ. ಕಾಣಿ ಅತ್ತ ಹಾಳಂವಾಯಿಂದ ಇದದ್ನೆ ಎತ್ತಬಲ್ಲೇ ಅತ್ತದೆ”, ಅತ್ ಹಾಳಿದರ್. ಬೆತ್ತಲೆ ಇರ ಕೊಟ್ಟೆನೆ ತಿಳುದು ಯೇಸು ಹಾಳಿದ ಕಥೆ. 26 ಯೇಸು ಇನ್ನೊಂದು ಕಥೆನೆ ಹಾಳದರ್, “ದ್ಯಾವರ ರಾಜ್ಯನೇ ಒಬ್ಬ ತಂಗ ವಾಲಲ್ ಹಾಕಿದ ಬಿತ್ನಗ್ ಸಮಾಗೆದಿಗೆ. 27 ಬಿತ್ತೆನೆ ಮಾಡಿದ ಮೇಲೆ ಅಂವಾ ಸಾಯಿಂಕಾಲ ಮಾಕಿ, ಬೆಳ್ಳಿಗೆ ಇದ್ದಾಗ, ಅವನಾಗ್ ಗೋತ್ತಾಗದೇ ಆ ಕೊಟ್ಟ ಮೊಳುತು ಬಿಳಿತ್ತದೆ. 28 ಭೂಮಿ ಮುಚ್ಚಿ ಸೊಸಿನೇ ಅಂಗೆವೇ ಒಡೆನೇ ಆಗ ತೆನೆತುಂಬಾ ಕಾಳುನೆ ತನ್ನ ಕುಷಿಗ್ ತಾವೇ ಮಾಡಿತ್ತದೆ. 29 ಬಳೆ ಮಾಗಿದಾಗ ಕೀಲು ಬಂದಿದ್ದಿಗೆ ಅತ್ತ ಕೆಲಸಗಾರ ಕುಡ್ಲುನೇ ಹಾಕಿತ್ತಾನೆ” ಅತ್ತ ಹಾಳಿದರು. 30 ಯೇಸು ದ್ಯಾವರ್ ತಂಗ ವಾಕ್ಯಗನೇ ಮುಂದೆ ಹಾಳಿ, “ದ್ಯಾವರ ರಾಜ್ಯನೇ ಇನೂ ಯಾವುದಕ ಸಮಮಾಡಕು? ಅದ್ಕು ಯಾವ ಕಥಗನೇ ಹಾಳಕ್? 31 ಭೂಮಿಲು ಇರ ಕೊಟ್ಟೆಗಗಿಂತ ಸಣ್ಣದಾಗಿರ ಸಾಸುವೇ ಕಾಳುಗು ಅದುನೇ ಹಾಳಬೋದು. 32 ಅಂಗೆವೇ ನಿಂಗ ಈ ಕಾಳುನೇ ಬಿತ್ತಿದಾಗ, ಅದು ಬಳುದು, ಎಲ್ಲಾ ಕಾಯಿಬುಡು ಗಿಡಗಿಂಗ ದೊಡ್ಡದಾಗಿ ಬಿಳಿತ್ತವೆ. ಹಕ್ಕಿಗ ಅಲ್ಲಿಗ್ ಬಂದು ಅದರ ನಳಾಲೂಲು ಗೂಡುಮಾಡಿ ಇರಾಸು ದೊಡ್ಡ ಮರ ಕೊಂಬುಲ್ಲೂ ಅದು ಇರಿತ್ತದೆ” ಅತ್ತ ಹಾಳಿದರ್. 33 ಯೇಸು ಈ ತರ ಕಥೇ ರೂಪಲು ಜನರ್ಗು ದ್ಯಾವರ್ ಒಳ್ಳೆಸುದ್ಧಿನೇ ಅವರವರ್ಗು (ತಿಳುದ ಬಂಗೆ) ಹಾಳಿತಿದರು. ಅಂಗೆವೆ ಕಥೆಗೆ ರೂಪಲ್ ಹಾಳದ ಬೋಧಿಸಿತಿತ್ತಿಲೆ. 34 ಯೇಸು ಜನರ್ಗು ಯಾಗುಲು ಕಥೆಗೆ ರೂಪಾಲು ಹಾಳಿತ್ತಿದರ್. ಅಂಗೆವೆ ತಂಗ ಶಿಷ್ಯರ್ ಮಾತ್ರ ಇರಗ ಇಲ್ಲಾವೇ ಅವರ್ಗು ಬಿಚ್ಚಿ ಹಾಳಿತಿದರ್. 35 ಆ ಜಿನ ಸಾಯಿಂಕಾಲ ಯೇಸು ತಂಗ ಶಿಷ್ಯರು, “ಸಮುದ್ರದ ಆಸೆದಿಡಗ್ ಹೋಗೊ” ಅಂದರ್. 36 ಆಗ ಶಿಷ್ಯರೂ ಜನ ಗುಂಪನೇ ಬುಟ್ಟು ದೋಣಿಲು ಕೂತಿದ ಯೇಸುನೇ ಅಂಗವೇ ತಮಗ ಜೊತೆಲೆ ಕರ್ರ್ದೊಡ್ ವಾದರ್. 37 ಆ ದೋಣಿ ಜೊತೆಲ್ ಬೇರೆ ದೋಣಿ ಇದ್ದೂ, ಸೆಟೆ ಮುಂದಕ್ ಹೋಗೋಡಿದಾಗ ದೊಡ್ಡ ಬಿರುಗಾಳಿ ಎದ್ದತು, ತೆರೆಗ ದೋಣಿಗ್ ಬಡುದ್, ದೋಣಿ ನಳಕು ನೀರು ಉಕ್ಕಿ ಅದು ತುಂಬಿ ಮುಳುಗಿವಾಗಂಗೆ ಇತ್ತು. 38 ಯೇಸು ದೋಣಿ ಹಿಂದಕು ತಲೆದಿಂಬುಗ್ ವರಗಿ ಮಾಕಿತ್ತಿದರ್, ಶಿಷ್ಯರ್ ಅವರ್ನೆ ಏಳಿಸಿ “ಗುರುವೇ ನಂಗ ಸಾಯಿತ್ತಿದ್ದೇಗೆ. 39 ನಿಮಗಗು ಬ್ಯಾಸರ ಕಾಣೀಯಾ? ಅಂದರ್ ಆಗ ಯೇಸು ಎದ್ದು, ಬಿರುಗಾಳಿಗು ಅಂದಿಸಿದರ್, ಸಮುದ್ರಗು “ಸುಮ್ಮನಿರು! ಸದ್ದು ಮಡಬಾಡ” ಅಂಗೆ ಹಾಳಿದಾಗ ಅಗವೇ ಬಿರುಗಲಿ ನಿತ್ತು ಯಾವುದೇ ಸದ್ದಿಲ್ಲದೇ ಅತ್ತು. 40 ಯೇಸು ತಂಗ ಶಿಷ್ಯರ್ಗ್. “ನಿಂಗ ಯಾಕ ಅಂಜಿತ್ತಿದ್ದೇರ್? ನಿಂಗಗಿನ್ನೂ ನಂಬಿಕೆ ಕಾಣಿಯಾ? ಅತ್ತ ಕಾಳಿದರ್. 41 ಶಿಷ್ಯರು ಅಂಜಿನಡಿಗಿ, “ಬಿರುಗಾಳಿ ಮತ್ತೆ ಸಮುದ್ರಗ ಇವರ್ ಹಾಳ ಮಾತುನೇ ಕಾಳಾಗ ಇವರ್ ಯಾರ ಇರಬೋದು? ಅತ್ತ ತಂಗತಂಗವಳಗೆ ಮಾತಾಡೋಡರು.