1 ಸುಮಾರ್ ಜಿನ ಕಳುದಾಗ ಯೇಸು ಪುನ ಕಪೆರ್ನವುಮಿಗು ಬಂದರ್. ಅವರ್ ಮನೆಲೂರಿಗೆ ಅತ್ತ ಸುದ್ದ ಆತು. 2 ಆನರ್ ಗುಂಪುಗುಂಪಾಗಿ ಯೇಸು ಮಾತುಗನೇ ಕಾಳಲೆ ಎಲ್ಲಾರ್ ಸೇರಿದರ್. ಆಗ ಮನೆ ತುಂಬಿ ಹೋತು. ಅಲ್ಲಿ ನಿಲ್ಲಲೆ ಹೊರಗೆನು ಜಾಗ ಸಾಲದೆ ಹೋತ್. ಯೇಸು ಅಲ್ಲಿ ಸೇರಿದ ಜನಗುಂಪುಗು ದ್ಯಾವರ ವಾಕ್ಯಗನೆ ಹಾಳಿತ್ತಿದ್ದರು. 3 ಆಗ ಒಬ್ಬ ಲಕ್ಕ್‍ವೀದವನೆ ನಾಕಾಳು ಹೊತ್ತೂಡು ಅಲ್ಲಿಗೂ ಬಂದರ್. 4 ಮನೆಲು ಜನ ತುಂಬಿಹೋಗಿದರು. ಅವರ್ ಅಂವಾನೆ ಯೇಸು ಅತ್ರ ತರಲಾತಿಲೆ ಅದುಕ್ ಅವರ್ ಯೇಸು ಇದ ಮನೆ ಉದ್ದಕ್ ಹೋಗಿ ಯೇಸು ನಿತಿರ ನಟ್ಟಗೆ ಹಂಚುನೆ ತಗುತ್ ಹಾಕಿದರ್. ಆಗ ಒಂದು ಕನ್ನ ಮಾಡಿ ಕಾಯಿಲೆದಂದನಾ ಹಾಸಿಗೆನಾ ಹಾಸಿಗೆನೆ ಕಳಕು ಇಳಿಸಿದರ್. 5 ಯೇಸು ಅವರ ನಂಬಿಕೆನೆ ಮೆಚ್ಚಿ ಆ ಲಕ್ಕುವೀದವನ್. “ನಿನ್ನ ಪಾಪನೆ ಸಮಿಸಿದೆನಿ” ಅತ್ತ ಹಾಳಿದರ್. 6 ಆಗ ಸೆಟೆಗುಂಪು ದ್ಯಾವರ ವಾಕ್ಯಗನೆ ಕಲ್ಸಿಕೊಡವರ್, ಅಲ್ಲಿ ಕುಡೋಡಿದರ್. ಯೇಸು ಹಾಳದದ್ನೆ ಕಾಳಿದ ಅವರ್. 7 “ಇಂವಾ ಹಿಂಗ್ಯಾಕ ಹಾಳಿತವುನಿಗೆ? ಇದು ದ್ಯಾವರ್ಗ್ ವಿರೋಧ ಆಗಿ ಮಾತಾಡದು ಒಬ್ಬನೇ ಪಾಪಗನೆ ಸಮಿಸಲೆ ಆಗದ್” ಅತ್ತ ತಂಗ ಮನ್ಸ್‍ಲ್ ಅಂದೊಡರ್. 8 ಅವರ್ ಹಿಂಗೆವೆ ಏಚುಣಿ ಮಾಡದ್ನೆ ಯೇಸು ಆಗವೆ ತಿಳುದೊಡ್ ಅವರ್ಗ್, “ನಿಂಗ ಮನ್ಸ್‍ಲ್ ಹಿಂಗೆ ಏಚುಣಿ ಮಾಡದ್ಯಾಕ? 9 ಯಾವುದ್ ಸುಲ್ವ್‍ವೇ? ನಿನ್ನ ಪಾಪಗನೆ ಸಮಿಸದಿಗೆ” ಅತ್ತ ಹಾಳದೊ? ಅಲ್ಲಂದರೆ, “ಎದ್ ನಿನ್ನ ಹಾಸಿಗೆನೆ ಹೊತೊಡ್ ನಡೆದೊಡು ಹೋಗು ಅತ್ತ ಹಾಳದೋ?” 10 ಭೂಲೋಕಲು ಪಾವಗನೆ ಸುಮುಸಲೆ ಮನಸಮಙನಗ್ ಅಧಿಕಾರ ಅದಿಗೆ ಅತ್ತ ಈ ಮಾದ್ರಿ ನಿಂಗಗ್ ಗೊತಾಗಕ್”, ಅತ್ತ ಹಾಳಿ. ಆ ಲಕ್ಕುವಿದ ಕಾಯಿಲೆದಂವಾನೆ ನೋಡಿ. 11 “ನಾ ನಿಂಗಗ್ ಹಾಳೀತಿನಿ, ‘ಎದ್, ನಿನ್ನ ಹಾಸಿಗೆನೆ ಎತ್ತೊಡು ಮನೆಗೂ ನಡುದೊಡು ಹೋಗು” ಅತ್ತ ಹಾಳಿದರ್. 12 ಎಲ್ಲಾರ್ ನೊಡೊಡಿದ ಅಂಗೆ ಅಂವಾ ಇದ್ ನಿತ್ತೊಡ್, ತನ್ನ ಹಾಸಿಗೆನೆ ತಾವೆ ಎತ್ತೊಡ್ ಹೋಗಿಬುಟ. ಅಲ್ಲಿ ಸೇರಿದವರೆಲ್ಲರ್ ಆಸರ್ಯಆದರ್. “ಇಂಥ ಕಾರ್ಯನೆ ನಂಗ ಯಾಗಲೆ ನೋಡಿತಿಲೆ!” ಅತ್ತ ದ್ಯವಾರ್ನೆ ಕೊಂಡಾಡಿದರ್. 13 ಯೇಸು ಪುನ ಗಲಿಲಾಯ ಸಮುದ್ರ ಅತ್ರ ವಾದರ್, ಜನಗುಂಪು ಅವರ್ನೆ ಸುಡೊಡಿದರ್, ಯೇಸು ಅವರ್ಗ್ ಒಳ್ಳೆಸುದ್ದಿನೆ ಹಾಳಿದರ್. 14 ಆಗ ಅಲಿಂದವೆ ಹೊಗೋಡಿರಗ ಅಲ್ಪಾಯನ ಮಙ ಲೇವಿಯು ವರಿದುಡ್ಡು ಎತ್ತ ಜಾಗಲ್ ಕೂಡೊಡಿರದ್ನೆ ಯೇಸು ನೋಡಿದರ್, “ನನ್ನ ಇಂದಕ್ ಬಾ” ಅತ್ತ ಹಾಳಿ ಕರ್ದ್‍ರ್. ಲೇವಿಯು ಎದ್ದು ಅವರ್ ಇಂದಕ್‍ವಾದ. 15 ಆಗ ಯೇಸು ಲೇವಿಯ ಮನೆಲ್ ಊಟಗ್ ಕೊತ್ತೋಡಿದರ್, ಸುಮಾರ್ ಗುಂಪು ವರಿದುಡ್ಡು ಎತ್ತವರ್. ಮತ್ತೆ ಪಾಪದವರ್, ಅಲಿಗ್ ಬಂದರ್, ಇವರೆಲ್ಲರು ಯೇಸು ಮತ್ತೆ ಅವರ್ ಶಿಷ್ಯರು ಗುಂಪುಲ್ ಊಟಗ್ ಕೂತಿದರ್. ಇಂಥವರ್ ಸುಮಾರ್‍ಗುಂಪು ಯೇಸು ಜೊತೆಲ್‍ವಾದರ್. 16 ಪರಿಸಾಯ ಗುಂಪುಲ್ ಸೇರಿದ ದ್ಯಾವರ ವಾಕ್ಯನೆ ಕಲ್ಸಿಕೊಡವರ್ ಸೆಟೆಜನರ್, ವರಿದುಡ್ಡು ಎತ್ತವರ್ ಮತೆ ಪಾಪದವರ್ ಜೊತೆಲ್ ಯೇಸು ಊಟಮಾಡದ್ನೆ ನೋಡಿ. “ಇಂವಾ ಇಂಥ ಪಾಪದ ಜನರ್ ಜೊತೆಲ್ ಊಟಮಾಡದ್ಯಾಕ? “ಅತ್ತ ಯೇಸು ಜೊತೇಲ್ ಇರ ಶಿಯರ್ನೆ ಕಾಳಿದರ್ (“ಪರಿಸಾಯರ್ – ಮೋಶೆಗ್ ದ್ಯೌಅರ್ ಬರ್ದ್‍ಕೊಟ್ಟ ಕಟ್ಟಳೆ ಮಾದ್ರಿ ನಡುದೊಡು ಬಂದ ಯೂದ ಜನದ ಒಂದು ಗುಂಪು). 17 ಇದ್ನೆ ಕಾಳೊಡು ಯೇಸು ಅವರ್ಗ್. “ಮದ್ದುಕೊಡವರ್ ಬ್ಯಾಕಗಿರದ್ ಕಾಯಿಲೆದವರ್ಗ್, ಕಾಯಿಲೆ ಇಲ್ಲದವರರ್ಗ್ ಅಲ್ಲ, ನಾ ಕರಿಯಾಲೆ ಬಂದರಿದ್ ನೀತಿವಂತರ್ನೆ ಅಲ್ಲ, ಪಾಪದವರ್ನೆ,” ಅಂದರ್. 18 ಯೋಹಾನನ ಶಿಷ್ಯರ್ ಮತ್ತು ಪರಿಸಾಯರ್ ಅಸ್ತೊಡು ಇದ್ದರು. ಸೆಟೆ ಜನರ್ ಯೇಸು ಅತ್ರ ಬಂದು, “ಯೋಹಾನನ ಶಿಷ್ಯರ್ ಮತ್ತೆ ಪರಿಸಾಯರ್ ಶಿಷ್ಯರ್ ಅಸ್ತೊಡುವುರಿಗೆ ಅಂಗೆವೆ ನಿಂಗ ಶಿಷ್ಯರ್ ಯಾಕ ಅಸ್ತೊಡು ಇರದಿಲೆ? ಅತ್ತ ಕಾಳಿದರ್. 19 ಅದ್ಕು ಯೇಸು “ಮದುವೆಗಂಡು ಜೊತೆಲ್ ಇರಗ ಅವನ ಜೊತಿನವರ್ ಅಸ್ತೊಡು ಇರಲೆ ಅತದೆಯ? ನಿಜ್ಗಲ್ ಕಾಣಿ, ಅಂವಾ ತಂಗ ಜೊತೆಲ್ ಇರಗಟಿ ಅವರ್ ಅಸ್ತೊಡು ಇರದಿಲೆ. 20 ಮದುವೆಗಂಡು ಅವರಿಂದವೇ ಬುಟುವಾಗಕಾಲ ಬತದೆ. ಆಗ ಅವರ್ ಅಸ್ತೋಡು ಇರಿತರೆ. 21 ಹಳೆ ಬಟ್ಟೆಗ್ ವಸ ಬಟ್ಟೆನೆ ಅಪಡ್ಡೆ ಯಾರ್ ಹಾಕದಿಲೆ. ಹಾಕಿದರೆ ವಸ ಅಪಡ್ಡೆ ಹಳೆ ಬಟ್ಟೆನೆ ಸುಮಾರ್ ಕಿತಾಕಿತದೆ. 22 ಅಂಗವೇ. ಅನರ್ ವಾಸ ದ್ರಾಕ್ಷಾರಸನೆ ಹಳೆ ಸರ್ಮದಶೀಲಲ್ ಹಾಕದಿಲೆ. ಯಾನಂದರೆ ಅದು ಸರ್ಮದಶೀಲನೆ ಗಿಳುತ್ ಹಾಕಿಬುಡಿತದೆ. ಅದ್ಕು ದ್ರಾಕ್ಷಾರಸನೆ ಹಾಳಗಿವತದೆ. ಅಂಗೆವೆ ಜನರ್ ಯಾಗ್‍ಲ್ ವಸ ದ್ರಾಕ್ಷಾರಸನೆ ವಸ ಸರ್ಮದಶೀಲಲ್ ಹಾಕಿ ಮಾಡಿತರೆ” ಅತ್ರ ಹಾಳಿದರು. 23 ಕೆಲಸ ಮಾಡಿದ ಜಿನಲ್, ಯೇಸು ಗೋದುವೆವಲಲ್ ವಾಗಗ ಜೊತ್‍ಲಿದ ಶಿಷ್ಯರ್ ತೆನೆಗನೆ ಕೀಲಿತಿದರ್. 24 ಇದ್ನೆ ನೋಡಿ ಪೆರಿಸಾಯರ್, “ನೋಡು ಕೆಲಸಮಾಡದಜಿನ ನಿನ್ನ ಶಿಷ್ಯರ್ ತಪ್ಪುಕೆಲ್ಸ ಮಾಡಿತರಲ್ಲ. ಇದು ಸರಿಯಾ? ಅತ್ತೆ ಯೇಸುನೆ ಕಾಳಿದರ್. 25 ಅದಕು ಯೇಸು “ಇಂದೆ ದಾವೀದ ರಾಜ ಮತ್ತೆ ಅವನ ಜೊತಿನವರ್ ಅಸ್ತಾಗ ತಿನ್ನಲೆ ಯಾವುದಿಲದಗ ಯಾನ ಮಾಡಿವುರಿಗೆ ಅತ್ತ ನಿಮಗ ವದಕಲ್ಸ್? 26 ದೊಡ್ಡತಮ್ಮಡಿ ಅಬಿಯಾತರನ ಕಾಲಲು ಅಂವಾ ದ್ಯಾವರ ಗುಡಿವಳಕೊತಿ, ತಮ್ಮಡಿ ಅಲ್ಲದೆ ಬೇರೆ ಯಾರ್ ತಿನ್ನಬರದ್ ಎಡೆಇಡ ರೊಟ್ಟಿಗನೆ ತಿಂದ; ಅಂಗವೆ ತಂಗ ಜೊತ್‍ಲಿದವರ್ಗ್ ಕೊಟ್ಟಲ್ಲ.? “ಅತ್ತ ಅವರ್ನ್ ಕಾಳಿದರು. 27 ಆಗ ಯೇಸು ಅವರ್ಗ್, “ಕೆಲಸಮಾಡದೆ ಇರಜಿನ ಮನುಸರುಗಾಗಿ ಹೊರ್ತು ಮನಸ ಇರದು ಕೆಲಸಮಾಡದ ಜಿನಗ್ ಅಲ್ಲ.” 28 ಅಂಗೆವ ಮನುಸಮಙ ಕೆಲಸಮಾಡದ ಜಿನಗ್ ಒಡಿಯ ಅಗಿವುನಿಗೆ? ಅತ್ತ ಹಾಳಿನ.