ಭಾಗಂ6

1 ಅಣ್ಣ ತಮ್ಮಂದಿರ್ ನಿಂಗಲ್ ಯಾರಾರ್ ತಪ್ಪು ಮಾಡಿರಂವ ಆಗಿದಲೇ ನಂಬಿಕೆಯಿಂದ ಇರ ನಿಂಗ ಅಂಥವರ್ನೆ ವಳ್ಳೆದಾಗಿ ಮಾಡಿ ಸರಿ ಆದ ದಾರಿಲ್ ಅವರ್ನೆ ನಡ್ಸಕ್ ಅಂದಲೇ ನೀ ಅಂವನಲಕ ತಪ್ಪು ಮಾಡಿರಂವ ಆಗಿರದೆ ಎಚ್ಚರಿಕೆಯಿಂದ ಇರಕ್. 2 ಒಬ್ಬರ್ನ ಪಾಡ್ನೆ ಒಬ್ಬರ್ ಹೊತ್ತೊಣ್ ಹಿಂಗೆ ಯೇಸುಸ್ವಾಮಿನ ಮಾತ್ನೆ ಉಳ್ಸಿಕೊತ್ತಿರ್. 3 ಒಬ್ಬ ತಾ ದೊಡ್ಡವ ಅಂದ್ ಹೇಳ್ಯೋಡಿದಲೇ ತನ್ನೆ ತಾನೆವೆ ಹೇಳಿಕೊತ್ತೇನೆ, 4 ಯಲ್ಲಾರ್ ತನ್ನ ನಡೆನೆ ತೆನೆವೆ ಗೊತ್ತುಮಾಡ್ಯೋಕ್ ತನ್ನ ನಡೆನೆ ವಳ್ಳೆದಾಗಿ ಇದ್ದಲೇ ಖುಷಿ ಪಡಲಿ ಅಂದಲೇ ಬೇರೆವಂದಿಗೆ ಹೇಳಿ ತಾ ವಳ್ಳೆದಂದ್ ಹಾಳಾದ್ ಬೇಡ್. 5 ಯಲ್ಲಾರ್ ತಂಗ ಪಾಡ್ನೆ ತಂಗವೇ ವರಕ್. 6 ದೈವನ ವಾಕ್ಯನೆ ಕೇಳಂವನ ವಾಕ್ಯನೆ ಹೇಳಂವನ ವಂದಿಗೆ ತನಗ್ ಇರ ವಳ್ಳೆದ್ನೆಲ್ಲಾ ಅಮ್ವನೊಂದಿಗೆ ಹೇಳಲಿ. 7 ಮೋಸ ಮಾಡಿದ್ನೇ ದೈವ ನಗಿವವರ್ ಅಂದ್ ಹೇಳಬೇಡ ಬಿತ್ತಿದ್ನವೇ ಕುಯ್ ತ್ತಿಗೆ ಅಂಬದ್ನೆ ಮರೆಬೇಡಾ. 8 ತಡಿನ ಆಸೆಯಿಂದ ಬಿತ್ತಾಂವನ ತಡಿನ ಆಸೆಯಿಂದ ನಾಶ ಆಗಿರದ್ನೆ ಕುಯ್ ತ್ತೇನೆ, ಅಂದಲೇ ಆತ್ಮನೇ ಕಾರ್ಯನೆ ಮಾಡಂವ ಬಿತ್ತಿದಂವ ಆತ್ಮಯಿಂದ ಪುನಃ ಜಿಂವಾನೆ ಪಡಿತ್ತೇನೆ. 9 ವಲ್ಲೆ ಕಾರ್ಯನೆ ಮಾಡಗ ಬೇಜಾರ ಮಾಡದಿರ್ನೆ ಸೋತುವೋಗದೆ ಇರೋ ಆಗ ವಳ್ಳೆ ಸಮಲ್ ವಳ್ಳೆ ಫಲನೆ ಕೊಯಿತ್ತಿಗ. 10 ಆಗ ನಂಗಗ್ ಸಮ ಇರಗ ಯಲ್ಲಾರ್ಗ್ ವಳ್ಳೆದ್ನೆ ಮಾಡಮಾ ಮುಖ್ಯ ಆಗಿ ದೈವನ ಮಕ್ಕಗ್ ಮಾಡಮಾ. 11 ನನ್ನ ಕೈಯಿಂದ ದೊಡ್ಡ ದೊಡ್ಡ ಅಕ್ಷರನೇ ನಾ ನಿಂಗಗ್ ಬರ್ದಿದ್ದೀನಿ ನೋಡ್ನ್. 12 ತಂಗನ ತಡಿ ಸಂದಾಗಿ ಕಾಣಲೇ ಇಷ್ಟ ಪಡವರ್ ತಂಗಗ್ ಕ್ರಿಸ್ತನ ಶಿಲುಬೆಯಿಂದ ಪಾಡ್ ಆಗಬಾರ್ದದ್ ನಿಂಗನೇ ಪಡ್ ಪಡ್ಸಿತ್ತೆರೆ. 13 ಸುನ್ನತಿ ಮಾಡಿಸಿಕೊಳ್ಳುವ ತಂಗರ್ ಸತ್ಯಪುಸ್ತಕನ ನ್ಯಾಮಲ್ ನಡ್ಯದಿಲ್ಲೇ ಅಂದಲೇ ಅವರ್ ನಿಂಗ ತಡಿನ ವಿಷಯಲ್ ಜಾಸ್ತಿ ಅದಲಕ ನಿಂಗಗ್ ಸುನ್ನತಿಯಾಗ ಬೇಕೆಂದ್ ಕೇಳಿಕೊತ್ತೀನಿ. 14 ನಾ ಆರ್ ನಂಗ ಯೇಸುಸ್ವಾಮಿನ ಶಿಲುಬೆನೆ ಬುಟ್ ಬೇರೆ ಯಾನಲ್ ದೊಡ್ದದಂದ್ ಹೇಳದ್ ಬೇಡವೇ ಬೇಡ ಆ ಶಿಲುಬೆಯಿಂದ ನನ್ನ ಪಾಲ್ಗ್ ಲೋಕವೇ ಶಿಲುಬೆಗ್ ಹಾಕ್ಸಿ ಸತ್ತದೆದೆ. ನಾನ್ ಕೂಡ ಲೋಕನ ಪಾಲ್ಗ್ ಶಿಲುಬೆಗ್ ಹಾಕ್ಸಿ ಸತ್ತ್ ದೀನಿ. 15 ಸುನ್ನತಿ ಮಾಡ್ಸದ್ ಮಾಡ್ಸ್ ದದ್ ಮುಖ್ಯ ಅಲ್ಲ ವಸದಾಗಿ ಹುಟ್ಟಿದ್ ದೊಡ್ಡದು. 16 ಈ ನ್ಯಾಮನೆ ನಡ್ಯಾವರ್ಗ್ ಅಂದಲೇ ಇಸ್ರಾಯೆಲ ರಾಜನ ದೈವ ಮಕ್ಕ ಯಲ್ಲಾರ್ಗ್ ಶಾಂತಿ ಸಮಾದಾನ ಕರುಣೆ ಸಿಕ್ಕಲಿ. 17 ಇನ್ ಮುಂದಕ್ ಯಾರ್ ನನಗ್ ತೊಂದ್ರಿ ಮಾಡದೆ ಇರಲಿ ಯೇಸುಸ್ವಾಮಿ ಆಳಂದ್ ಗೊತ್ತು ಮಾಡಿರ ಕೆಂಪು ಗುರುತು ನನ್ನ ತಡಿಲ್ ಇದೆ. 18 ಅಣ್ಣ ತಮ್ಮಂದಿರೆ ನಿಂಗ ಒಡ್ಯಾ ಆಗಿರ ಯೇಸುಸ್ವಾಮಿನ ಅನುಗ್ರಹ ನಿಂಗವಂದಿಗೆ ಇರಲಿ. ಆಮೆನ್.