ರೂತಳು ಒಂದು ವಿಶ್ರಾಂತಿಯ ನೆಲೆ ದೊರಬೇಕೆಂದು ಅವಳು ಬಯಸಿದಳು, ಅಂದರೆ ಅವಳನ್ನು ಚೆನ್ನಾಗಿ ನೋಡಿಕೊಳ್ಳುವ ವ್ಯಕ್ತಿಯನ್ನು ಮದುವೆಯಾಗಬೇಕೆಂದು ಬಯಸಿದಳು.
ಸ್ನಾನಮಾಡಿ, ತೈಲ ಹಚ್ಚಿಕೊಂಡು ಮೇಲಂಗಿಯನ್ನು ಹಾಕಿಕೊಳ್ಳಲು ಅವಳು ಆಕೆಗೆ ಹೇಳಿದಳು.
ಅವಳು ಅವನ ಕಾಲುಗಳ ಮೇಲಣ ಹೊದಿಕೆಯನ್ನು ತೆಗೆದುಬಿಟ್ಟು ಅಲ್ಲಿ ಮಲಗಬೇಕಾಗಿತ್ತು.
ನವೊಮಿ ಮಾಡಲು ಹೇಳಿದ್ದನ್ನೆಲ್ಲ ಮಾಡುತ್ತೇನೆ ಎಂದು ಅವಳು ಹೇಳಿದಳು.
ಒಬ್ಬ ಸ್ತ್ರೀ ತನ್ನ ಕಾಲುಗಳ ಬಳಿಯಲ್ಲಿ ಮಲಗಿರುವುದನ್ನು ಕಂಡು ಆತ ಬೆಚ್ಚಿಬಿದ್ದನು!
ಅವಳು ಬೋವಜನನ್ನು ಅವನ ಹೊದಿಕೆಯ ಅಂಚನ್ನು ತನ್ನ ಮೇಲೆ ಹಾಕೆಂದು ಕೇಳಿಕೊಂಡಳು, ಏಕೆಂದರೆ ಅವನು ಸಮೀಪಬಂಧುವಾಗಿದ್ದನು.
ಬೋವಜನು ರೂತಳನ್ನು ಆಶೀರ್ವದಿಸಿದ ಕಾರಣ ಅವಳು ಯೌವನಸ್ಥರನ್ನು ಹಿಂಬಾಲಿಸದೆ ಬೋವಜನನ್ನು ಹಿಂಬಾಲಿಸಿದ್ದಳು.
ಅವಳು ಕೇಳಿದ್ದನ್ನೆಲ್ಲ ಮಾಡುತ್ತೇನೆ ಎಂದು ಹೇಳಿದನು.
ಬೋವಜನಿಗಿಂತ ಹತ್ತಿರವಿರುವ ಇನ್ನೊಬ್ಬ ಸಮೀಪಬಂಧು ಇದ್ದನು.
ಸಮೀಪಬಂಧು ರೂತಳನ್ನು ಮದುವೆಯಾಗಿ ಮೈದುನಧರ್ಮವನ್ನು ನೆರವೇರಿಸಲು ಸಿದ್ಧನಿದ್ದರೆ, ಬೋವಜನು ಅವನಿಗೆ ಅದನ್ನು ಮಾಡಲು ಬಿಡುತ್ತಾನೆ. ಅವನು ಸಿದ್ಧನಿಲ್ಲದಿದ್ದರೆ, ಬೋವಜನೇ ಸಮೀಪಬಂಧುವಾಗಿ ಮೈದುನಧರ್ಮವನ್ನು ನೆರವೇರಿಸುವನು.
ಅವಳು ಕಣಕ್ಕೆ ಬಂದಿದ್ದಾಳೆಂದು ಜನರು ತಿಳಿದುಕೊಳ್ಳಬಾರದೆಂದು ಬೋವಜನು ಬಯಸಿದನು.
ಅವನು ಅವಳಿಗೆ ಆರು ಪಡಿ ಜವೆಗೋದಿಯನ್ನು ಕೊಟ್ಟನು.
ಅವನು ಅದೇ ದಿನದ ಅಂತ್ಯದ ವೇಳೆಗೆ ಅದನ್ನು ಪರಿಹರಿಸುವನು.