Ruth 2
Ruth 2:1
ಬೋವಜನಿಗೂ ಸತ್ತುಹೋದ ನವೊಮಿಯ ಗಂಡನಿಗೂ ಇದ್ದ ಸಂಬಂಧವೇನು?
ಬೋವಜನು ನವೊಮಿಯ ಗಂಡನ ಸಂಬಂಧಿಕನಾಗಿದ್ದನು.
Ruth 2:2
ರೂತಳು ಮೊದಲ ಬಾರಿಗೆ ಹಕ್ಕಲಾಯುವುದಕ್ಕೆ ಹೋದ ಸಮಯದಲ್ಲಿ, ಅವಳು ಕಾಳುಗಳನ್ನು ಹಕ್ಕಲಾಯುವಾಗ ಯಾರನ್ನು ಹಿಂಬಾಲಿಸುವುದಾಗಿ ಹೇಳಿದಳು?
ಅವಳಿಗೆ ಯಾರ ದೃಷ್ಟಿಯಲ್ಲಿ ದಯೆ ದೊರಕುವುದೋ ಅವನನ್ನು ಅವಳು ಹಿಂಬಾಲಿಸುವಳು.
Ruth 2:4
ಬೋವಜನು ತನ್ನ ಕೆಲಸಗಾರರಿಗೆ ಏನೆಂದು ಹೇಳಿ ವಂದಿಸಿದನು?
“ಯೆಹೋವನು ನಿಮ್ಮ ಸಂಗಡ ಇರಲಿ” ಎಂದು ಅವನು ಹೇಳಿದನು.
Ruth 2:5
ಬೋವಜನು ರೂತಳ ಬಗ್ಗೆ ಏನನ್ನು ತಿಳಿಯಲು ಬಯಸಿದನು?
ಅವಳು ಯಾರಿಗೆ ಸೇರಿದವಳೆಂದು ತಿಳಿಯಲು ಅವನು ಬಯಸಿದನು.
Ruth 2:8
ಬೋವಜನು ರೂತಳಿಗೆ ಹಕ್ಕಲಾಯುವುದರ ಬಗ್ಗೆ ಯಾವ ಸೂಚನೆಗಳನ್ನು ಕೊಟ್ಟನು?
ಅವನು ತನ್ನ ಹೊಲವನ್ನು ಬಿಟ್ಟು ಹೋಗದೆ, ತನ್ನ ಹೆಣ್ಣಾಳುಗಳೊಂದಿಗೆ ತನ್ನ ಹೊಲದಲ್ಲಿ ಇದ್ದುಕೊಂಡು ಕೆಲಸ ಮಾಡುವಂತೆ ರೂತಳಿಗೆ ಹೇಳಿದನು.
Ruth 2:10
ಶುಭಕರವಾದ ಸೂಚನೆಗಳು ದೊರೆತ ನಂತರ, ರೂತಳು ಬೋವಜನಿಗೆ ಯಾವ ಪ್ರಶ್ನೆ ಕೇಳಿದನು?
ಅವಳು ಬೋವಜನಿಗೆ ನಿನ್ನ ದೃಷ್ಟಿಯಲ್ಲಿ ಯಾಕೆ ನನಗೆ ದಯೆದೊರಕಿದೆ ಎಂದು ಕೇಳಿದಳು.
Ruth 2:11
ರೂತಳ ಕುರಿತು ಬೋವಜನು ಕೇಳಿದ ಒಳ್ಳೆಯ ಸುದ್ದಿಯು ಯಾವುದಾಗಿತ್ತು?
ನವೊಮಿಯನ್ನು ಹಿಂಬಾಲಿಸಲು ರೂತಳು ತನ್ನ ಮನೆಯನ್ನು ಬಿಟ್ಟು ಹೊರಟುಬಂದಳೆಂದು ಅವನು ಕೇಳಿದ್ದನು.
Ruth 2:12
ರೂತಳು ಯಾವಾತನ ರೆಕ್ಕೆಗಳ ಮರೆಯಲ್ಲಿ ಆಶ್ರಯ ಪಡೆದಿದ್ದಾಳೆಂದು ಬೋವಜನು ಹೇಳಿದನು?
ರೂತಳು ಯೆಹೋವನ ರೆಕ್ಕೆಗಳ ಮರೆಯಲ್ಲಿ ಆಶ್ರಯ ಪಡೆದಿದ್ದಳು.
Ruth 2:15
ಊಟವಾದ ನಂತರ ಕೆಲಸಕ್ಕೆ ಮರಳಿದಾಗ ಬೋವಜನು ರೂತಳಿಗೆ ಮಾಡಿದ ಮತ್ತೊಂದು ಉಪಕಾರ ಏನಾಗಿತ್ತು?
ಸಿವುಡುಗಳ ಬಳಿಯಲ್ಲಿ ಹಕ್ಕಲಾಯುವದಕ್ಕೆ ಅವನು ರೂತಳಿಗೆ ಅವಕಾಶ ಮಾಡಿಕೊಟ್ಟನು.
Ruth 2:16
ರೂತಳಿಗಾಗಿ ಏನು ಮಾಡಬೇಕೆಂದು ಬೋವಜನು ತನ್ನ ಕೆಲಸಗಾರರಿಗೆ ಹೇಳಿದನು?
ಕಟ್ಟುಗಳಿಂದ ರೂತಳಿಗೆ ತೆನೆಗಳನ್ನು ಕಿತ್ತುಹಾಕುವಂತೆ ಅವನು ಕೊಯ್ಯುವವರಿಗೆ ಆಜ್ಞಾಪಿಸಿದನು.
Ruth 2:19
ರೂತಳು ತೆಗೆದುಕೊಂಡು ಬಂದ ತುಂಬಾ ಧಾನ್ಯವನ್ನು ನವೊಮಿ ನೋಡಿದಾಗ, ಅವಳು ರೂತಳಿಗೆ ಏನೆಂದು ಪ್ರಶ್ನೆ ಕೇಳಿದಳು?
ಈ ಹೊತ್ತು ರೂತಳೇ ಎಲ್ಲಿ ಹಕ್ಕಲಾಯಿದಿ ಎಂದು ಅವಳು ಕೇಳಿದಳು.
Ruth 2:20
ಬೋವಜನು ರೂತಳಿಗೆ ಸಹಾಯ ಮಾಡಿದನೆಂದು ಕೇಳಿದಾಗ ನವೊಮಿಯು ಬೋವಜನಿಗೆ ಏನೆಂದು ಹರಸಿದಳು?
“ಅವನು ಯೆಹೋವನಿಂದ ಆಶೀರ್ವದಿಸಲ್ಪಡಲಿ” ಎಂದು ಹರಸಿದಳು.
Ruth 2:22
ಬೋವಜನ ಹೆಣ್ಣಾಳುಗಳೊಂದಿಗೆ ಕೆಲಸ ಮಾಡುವುದು ರೂತಳಿಗೆ ಒಳ್ಳೆಯದು ಎಂದು ನವೊಮಿ ಯಾಕೆ ಭಾವಿಸಿದಳು?
ಹಾಗೆ ಮಾಡುವುದರಿಂದ, ರೂತಳಿಗೆ ಬೇರೆ ಯಾವುದೇ ಹೊಲದಲ್ಲಿ ತೊಂದರೆಯಾಗುವುದಿಲ್ಲ.
Ruth 2:23
ಉಳಿದ ಜವೆಗೋದಿಯ ಸುಗ್ಗಿಯ ತನಕ ರೂತಳು ಏನು ಮಾಡಿದಳು?
ಅವಳು ಬೋವಜನ ಕೆಲಸಗಾರರೊಂದಿಗೆ ಹಕ್ಕಲಾಯುತ್ತಾ ನವೊಮಿಯೊಂದಿಗೆ ವಾಸಿಸುತ್ತಿದ್ದಳು.