Ruth 4

Ruth 4:1

ರೂತಳಿಗೆ ಸಮೀಪಬಂಧು ಯಾರು ಎಂಬ ಸಮಸ್ಯೆಯನ್ನು ಪರಿಹರಿಸಲು ಬೋವಜನು ಎಲ್ಲಿಗೆ ಹೋದನು?

ಅವನು ಊರುಬಾಗಿಲಿಗೆ ಹೋದನು.

Ruth 4:2

ಸಾಕ್ಷಿಗಳಾಗಿ ಕುಳಿತುಕೊಳ್ಳಲು ಬೋವಜನು ಯಾರನ್ನು ಕೇಳಿಕೊಂಡನು?

ಅವನು ಊರಿನ ಹಿರಿಯರಲ್ಲಿ ಹತ್ತು ಮಂದಿಯನ್ನು ಕೇಳಿಕೊಂಡನು.

Ruth 4:3

ಬೋವಜನು ಮೊದಲು ಇತರ ಸಮೀಪಬಂಧುವಿಗೆ ಮೊದಲು ಏನೆಂದು ಹೇಳಿದನು?

ನವೊಮಿಯು ಎಲೀಮೆಲೆಕನ ಪಾಲಿಗೆ ಬಂದ ಹೊಲದ ಭಾಗವನ್ನು ಮಾರಬೇಕೆಂದ್ದಿದ್ದಾಳೆ ಎಂದು ಅವನಿಗೆ ತಿಳಿಸಿದನು.

Ruth 4:4

ಹೊಲದ ಭಾಗವನ್ನು ಕೊಂಡುಕೊಳ್ಳುವ ಬಗ್ಗೆ ಇತರ ಸಂಬಂಧಿ ಏನು ಮಾಡಬೇಕೆಂದು ಬೋವಜನು ಸಲಹೆ ನೀಡಿದನು?

ಸಮೀಪಬಂಧು ಅದನ್ನು ಬಿಡಿಸಿಕೊಳ್ಳಬಹುದು ಎಂದು ಬೋವಜನು ಸಲಹೆ ನೀಡಿದನು.

ಆ ಬೇರೆ ಸಮೀಪಬಂಧುವಿನ ಉತ್ತರ ಏನಾಗಿತ್ತು?

ಅವನು ತಾನೇ ಅದನ್ನು ಬಿಡಿಸಿಕೊಳ್ಳವುದಾಗಿ ಹೇಳಿದನು.

Ruth 4:5

ಬೋವಜನು ಆ ಬೇರೆ ಸಮೀಪಬಂಧು ಮಾಡಬೇಕೆಂದು ಬಯಸಿದ ಮತ್ತೊಂದು ವಿಷಯವು ಏನಾಗಿತ್ತು?

ಎಲೀಮೆಲೆಕನ ಅಸ್ತಿಪಾಸ್ತಿಯು ಅವನ ಹೆಸರಿನಲ್ಲೇ ಉಳಿಯುವಂತೆ ಅವನು ರೂತಳನ್ನು ಮದುವೆಯಾಗಬೇಕಾಗುತ್ತದೆ ಎಂದು ಅವನು ಅವನಿಗೆ ಹೇಳಿದನು.

Ruth 4:6

ರೂತಳನ್ನು ಮದುವೆಯಾಗಬೇಕಾಗುತ್ತದೆ ಎಂದು ತಿಳಿದಾಗ ಇತರ ಸಮೀಪಬಂಧುವಿನ ಉತ್ತರ ಏನಾಗಿತ್ತು?

ಅವನು ಹೊಲವನ್ನು ಬಿಡಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದನು.

ಸಮೀಪಬಂಧು ತಾನು ಬಿಡಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಯಾಕೆ ಹೇಳಿದನು?

ಅದು ತನ್ನ ಸ್ವಂತ ಆಸ್ಥಿಯನ್ನು ಹಾನಿಯಾಗುತ್ತದೆ ಎಂದು ಹೇಳಿದನು.

Ruth 4:8

ಬೋವಜನು ಆ ಹೊಲವನ್ನು ಬಿಡಿಸಿಕೊಳ್ಳಬಹುದೆಂದು ಒಪ್ಪಿಕೊಂಡನೆಂದು ತೋರಿಸಲು ಸಮೀಪಬಂಧು ಏನು ಮಾಡಿದನು?

ಅವನು ತನ್ನ ಕೆರವನ್ನು ಬಿಚ್ಚಿಕೊಟ್ಟನು.

Ruth 4:9

ಹಿರಿಯರು ಸಾಕ್ಷಿಯಾಗಿದ್ದಾರೆಂದು ಬೋವಜನು ಹೇಳಿದ ಮೊದಲ ಒಪ್ಪಂದ ಯಾವುದು?

ಎಲೀಮೆಲೆಕನಿಗೆ ಸೇರಿದ ಎಲ್ಲಾ ಹೊಲವನ್ನು ಬೋವಜನು ಕೊಂಡುಕೊಂಡನು ಎಂಬುದಕ್ಕೆ ಅವರು ಸಾಕ್ಷಿಯಾಗಿದ್ದರು.

Ruth 4:10

ಹಿರಿಯರು ಸಾಕ್ಷಿಯಾಗಿದ್ದಾರೆಂದು ಬೋವಜನು ಹೇಳಿದ ಎರಡನೇ ಒಪ್ಪಂದ ಯಾವುದು?

ಬೋವಜನು ರೂತಳನ್ನು ತನ್ನ ಹೆಂಡತಿಯಾಗಿ ಸ್ವೀಕರಿಸಿದ್ದಾನೆ ಎಂಬುದಕ್ಕೆ ಅವರು ಸಾಕ್ಷಿಯಾಗಿದ್ದರು.

Ruth 4:12

ಬೋವಜನು ಜನರು ಎಂಥ ಆಶೀರ್ವಾದವನ್ನು ಹೊಂದಲಿ ಎಂದು ಹರಸಿದರು?

ತಾಮಾರಳಿಂದ ಯೆಹೂದನಿಗೆ ಮಗನು ಹುಟ್ಟಿದಂತೆಯೇ ಯೆಹೋವನು ರೂತಳ ಮೂಲಕ ಅವನಿಗೆ ಸಂತತಿಯನ್ನು ಕೊಡಬೇಕೆಂದು ಅವರು ಬಯಸಿದರು.

Ruth 4:15

ಏಳು ಗಂಡುಮಕ್ಕಳಗಿಂತ ಹೆಚ್ಚಾಗಿ ನವೊಮಿಗೆ ರೂತಳು ಉತ್ತಮ ಎಂದು ಸ್ತ್ರೀಯರು ಯಾಕೆ ಹೇಳಿದರು?

ರೂತಳಿಗೆ ನವೊಮಿಯ ಮೇಲಿದ್ದ ಪ್ರೀತಿ ಮತ್ತು ರೂತಳು ನವೊಮಿಗೆ ಮೊಮ್ಮಗನಿಗೆ ಹಡೆದಿದ್ದರಿಂದ ಅವರು ಹಾಗೆ ಹೇಳಿದರು.

Ruth 4:16

ರೂತಳ ಮಗನಿಗೆ ನವೊಮಿಯು ಏನಾದಳು?

ನವೊಮಿ ಅವನ ದಾದಿ ಅಥವಾ ಆರೈಕೆದಾರಳಾದಳು.

Ruth 4:17

ರೂತಳ ಮಗನ ಹೆಸರು ಏನು?

ಅವನ ಹೆಸರು ಓಬೇದನು.

ಓಬೇದನು ಯಾರಿಗೆ ತಂದೆಯು ಮತ್ತು ಅಜ್ಜನು ಆಗಿದ್ದನು?

ಓಬೇದನು ಇಷಯನ ತಂದೆಯು ಮತ್ತು ದಾವೀದನ ಅಜ್ಜನು ಆಗಿದ್ದನು.