Ruth 3

Ruth 3:1

ನವೊಮಿಯು ರೂತಳ ಕುರಿತಾಗಿರುವ ತನ್ನ ಆಸೆ ಏನೆಂದು ಹೇಳಿದಳು?

ರೂತಳು ಒಂದು ವಿಶ್ರಾಂತಿಯ ನೆಲೆ ದೊರಬೇಕೆಂದು ಅವಳು ಬಯಸಿದಳು, ಅಂದರೆ ಅವಳನ್ನು ಚೆನ್ನಾಗಿ ನೋಡಿಕೊಳ್ಳುವ ವ್ಯಕ್ತಿಯನ್ನು ಮದುವೆಯಾಗಬೇಕೆಂದು ಬಯಸಿದಳು.

Ruth 3:3

ಕಣಕ್ಕೆ ಹೋಗುವ ಮೊದಲು ರೂತಳಿಗೆ ಏನು ಮಾಡಲು ನವೊಮಿ ಹೇಳಿದಳು?

ಸ್ನಾನಮಾಡಿ, ತೈಲ ಹಚ್ಚಿಕೊಂಡು ಮೇಲಂಗಿಯನ್ನು ಹಾಕಿಕೊಳ್ಳಲು ಅವಳು ಆಕೆಗೆ ಹೇಳಿದಳು.

Ruth 3:4

ಬೋವಜನು ಮಲಗಿದ್ದ ಸ್ಥಳಕ್ಕೆ ಹೋದಾಗ ರೂತಳು ಏನು ಮಾಡಬೇಕಾಗಿತ್ತು?

ಅವಳು ಅವನ ಕಾಲುಗಳ ಮೇಲಣ ಹೊದಿಕೆಯನ್ನು ತೆಗೆದುಬಿಟ್ಟು ಅಲ್ಲಿ ಮಲಗಬೇಕಾಗಿತ್ತು.

Ruth 3:5

ನವೊಮಿಯು ಹೇಳಿದ ಮಾತುಗಳ ವಿಷಯದಲ್ಲಿ ರೂತಳ ಮನೋಭಾವವು ಏನಾಗಿತ್ತು?

ನವೊಮಿ ಮಾಡಲು ಹೇಳಿದ್ದನ್ನೆಲ್ಲ ಮಾಡುತ್ತೇನೆ ಎಂದು ಅವಳು ಹೇಳಿದಳು.

Ruth 3:8

ಮಧ್ಯರಾತ್ರಿಯಲ್ಲಿ, ಬೋವಜನು ಏನನ್ನು ಕಂಡು ಬೆಚ್ಚಿಬಿದ್ದನು?

ಒಬ್ಬ ಸ್ತ್ರೀ ತನ್ನ ಕಾಲುಗಳ ಬಳಿಯಲ್ಲಿ ಮಲಗಿರುವುದನ್ನು ಕಂಡು ಆತ ಬೆಚ್ಚಿಬಿದ್ದನು!

Ruth 3:9

ರೂತಳು ಬೋವಜನ ಬಳಿಯಲ್ಲಿ ಕೇಳಿಕೊಂಡ ಕೋರಿಕೆ ಏನಾಗಿತ್ತು?

ಅವಳು ಬೋವಜನನ್ನು ಅವನ ಹೊದಿಕೆಯ ಅಂಚನ್ನು ತನ್ನ ಮೇಲೆ ಹಾಕೆಂದು ಕೇಳಿಕೊಂಡಳು, ಏಕೆಂದರೆ ಅವನು ಸಮೀಪಬಂಧುವಾಗಿದ್ದನು.

Ruth 3:10

ಯೆಹೋವನು ರೂತಳನ್ನು ಆಶೀರ್ವದಿಸಲಿ ಎಂದು ಬೋವಜನು ಯಾಕೆ ಕೇಳಿಕೊಂಡನು?

ಬೋವಜನು ರೂತಳನ್ನು ಆಶೀರ್ವದಿಸಿದ ಕಾರಣ ಅವಳು ಯೌವನಸ್ಥರನ್ನು ಹಿಂಬಾಲಿಸದೆ ಬೋವಜನನ್ನು ಹಿಂಬಾಲಿಸಿದ್ದಳು.

Ruth 3:11

ರೂತಳ ಕೋರಿಕೆಯ ವಿಷಯದಲ್ಲಿ ತಾನು ಏನು ಮಾಡುವೆನೆಂದು ಬೋವಜನು ಹೇಳಿದನು?

ಅವಳು ಕೇಳಿದ್ದನ್ನೆಲ್ಲ ಮಾಡುತ್ತೇನೆ ಎಂದು ಹೇಳಿದನು.

Ruth 3:12

ರೂತಳ ಸಮೀಪಬಂಧುವಾಗಿದ್ದ ಬೋವಜನನ್ನು ತಕ್ಷಣವೇ ಅವನ ಜವಬ್ದಾರಿಯನ್ನು ಮಾಡದಂತೆ ಯಾವದು ಅಡಚಣೆಯಾಗಿತ್ತು?

ಬೋವಜನಿಗಿಂತ ಹತ್ತಿರವಿರುವ ಇನ್ನೊಬ್ಬ ಸಮೀಪಬಂಧು ಇದ್ದನು.

Ruth 3:13

ರೂತಳಿಗೆ ಸಮೀಪಬಂಧುವಾಗಿ ಯಾರು ಮೈದುನಧರ್ಮವನ್ನು ನೆರವೇರಿಸುವರು ಎಂದು ಬೋವಜನು ಹೇಗೆ ನಿರ್ಧರಿಸುವುದಕ್ಕಿದ್ದನು?

ಸಮೀಪಬಂಧು ರೂತಳನ್ನು ಮದುವೆಯಾಗಿ ಮೈದುನಧರ್ಮವನ್ನು ನೆರವೇರಿಸಲು ಸಿದ್ಧನಿದ್ದರೆ, ಬೋವಜನು ಅವನಿಗೆ ಅದನ್ನು ಮಾಡಲು ಬಿಡುತ್ತಾನೆ. ಅವನು ಸಿದ್ಧನಿಲ್ಲದಿದ್ದರೆ, ಬೋವಜನೇ ಸಮೀಪಬಂಧುವಾಗಿ ಮೈದುನಧರ್ಮವನ್ನು ನೆರವೇರಿಸುವನು.

Ruth 3:14

ಯಾರಾದರೂ ಅವಳನ್ನು ಗುರುತಿಸುವ ಮೊದಲೇ ಕತ್ತಲಿರುವಾಗಲೇ ರೂತಳು ಯಾಕೆ ಕಣದಿಂದ ಹೊರಟುಹೋದಳು?

ಅವಳು ಕಣಕ್ಕೆ ಬಂದಿದ್ದಾಳೆಂದು ಜನರು ತಿಳಿದುಕೊಳ್ಳಬಾರದೆಂದು ಬೋವಜನು ಬಯಸಿದನು.

Ruth 3:15

ಕಣವನ್ನು ಬಿಟ್ಟು ಹೊರಡುವ ಮೊದಲು ಬೋವಜನು ರೂತಳಿಗೆ ಯಾವ ಬಹುಮಾನವನ್ನು ಕೊಟ್ಟನು?

ಅವನು ಅವಳಿಗೆ ಆರು ಪಡಿ ಜವೆಗೋದಿಯನ್ನು ಕೊಟ್ಟನು.

Ruth 3:18

ಬೋವಜನು ಬಹು ಬೇಗನೇ ಸಮಸ್ಯೆಯನ್ನು ಬಗೆಹರಿಸುತ್ತಾನೆ ಎಂದು ನವೊಮಿಗೆ ಭರವಸವಿತ್ತಾ?

ಅವನು ಅದೇ ದಿನದ ಅಂತ್ಯದ ವೇಳೆಗೆ ಅದನ್ನು ಪರಿಹರಿಸುವನು.