As part of the translation process, it is necessary that several people check the translation to make sure that it is clearly communicating the message that it should communicate. A beginning translator who was told to check his translation once said, “But I speak my native language perfectly. The translation is for that language. What more is needed?” What he said was true, but there are two more things to keep in mind.
First, he may not have understood the source text correctly, and so someone who knows what it should say might be able to correct the translation. This could be because he did not correctly understand a phrase or expression in the source language. In this case, someone else who understands the source language well can correct the translation.
Or it could be that he did not understand something about what the Bible meant to communicate at a certain place. In this case, someone who knows the Bible well, such as a Bible teacher or a Bible translation checker, can correct the translation.
Secondly, although the translator may know very well what the text should say, the way he translated it might mean something else to a different person. That is, another person might think that the translation is talking about something other than what the translator intended. Or the person hearing or reading the translation might not understand what the translator was trying to say.
It often happens when one person writes a sentence and then another person reads it (or sometimes even if the first person reads it again later), that they understand it to say something different from what the writer meant. Take the following sentence as an example.
“John took Peter to the temple and then he went home.”
In his mind when he wrote it, the writer meant that Peter went home, but the reader thought that the writer probably meant that it was John who went home. The sentence needs to be changed so that it is more clear.
Finally, a translation team is very close to and involved in their work, and so they sometimes do not see mistakes that others can see more easily. For these reasons, it is always necessary to check what someone else understands from the translation so that you (the translator) can make it more accurate and more clear.
This Checking Manual is a guide to the process of checking. It will guide you through several kinds of checks that will allow you to fix these problems. We believe that having many people doing a variety of different checks will result in a faster checking process, allow broad church participation and ownership, and produce better translations.
For more examples of the things that need to be checked, see Types of Things to Check.
Credits: Quotation used by permission, © 2013, SIL International, Sharing Our Native Culture, p. 69.
ನಿಖರತೆಗಾಗಿ, ಸ್ಪಷ್ಟತೆಗಾಗಿ, ಮತ್ತು ಸ್ವಾಭಾವಿಕತೆಗಾಗಿ ಇತರ ಭಾಷೆಗಗಳಲ್ಲಿ ಮಾಡಿದ ಬೈಬಲ್ ಅನುವಾದಗಳನ್ನು ಹೇಗೆ ಪರಿಶೀಲನೆ ಮಾಡಬೇಕೆಂದು ಈ ಕೈ ಪುಸ್ತಕವು ವಿವರಿಸುತ್ತದೆ. (ಗೇಟ್ ವೇ ಭಾಷೆಯನ್ನು ಪರಿಶೀಲನೆ ಮಾಡುವುದಕ್ಕಿರುವ ಪದ್ಧತಿಗಾಗಿ, Gateway Language Manual ನೋಡಿರಿ). ಈ ಅನುವಾದ ಪರಿಶೀಲನೆ ಮಾಡುವ ಕೈ ಪುಸ್ತಕವು ಕೂಡ ಅನುವಾದವನ್ನು ಅನುಮೋದನೆ ಮಾಡುವ ಪ್ರಾಮುಖ್ಯತೆಯ ಕುರಿತಾಗಿ ಮತ್ತು ಭಾಷೆಯ ಪ್ರಾಂತ್ಯದ ಸಭೆಯ ನಾಯಕರಿಂದ ಅನುವಾದ ಪದ್ಧತಿಯ ಕುರಿತಾಗಿಯು ಚರ್ಚೆ ಮಾಡುತ್ತದೆ
ಅನುವಾದ ತಂಡವು ತಮ್ಮ ಕೆಲಸಗಳನ್ನು ಒಬ್ಬರನ್ನೊಬ್ಬರು ಪರಿಶೀಲನೆ ಮಾಡುವುದಕ್ಕೆ ಉಪಯೋಗಿಸುವ ಅನುವಾದವನ್ನು ಪರಿಶೀಲನೆ ಮಾಡುವುದಕ್ಕೆ ಕೈ ಪುಸ್ತಕವು ನಿಯಮಗಳೊಂದಿಗೆ ಆರಂಭವಾಗುತ್ತದೆ. ಈ ಪರಿಶೀಲನೆಗಳಲ್ಲಿ ಬಾಯಿ ಮಾತಿನಿಂದ ಪರಿಶೀಲನೆ ಮಾಡುವವರು ಇರುತ್ತಾರೆ ಮತ್ತು ತಂಡದವರೆಲ್ಲರು ಬಾಯಿ ಮಾತಿನಿಂದ ಪರಿಶೀಲನೆ ಮಾಡುವ ಭಾಗಗಳು ಇರುತ್ತವೆ. translationCore ಸಾಫ್ಟ್.ವೇರ್ ಮೂಲಕ ಅನುವಾದವನ್ನು ಪರಿಶೀಲನೆ ಮಾಡುವುದಕ್ಕೆ ಅನುವಾದ ತಂಡವು ಉಪಯೋಗಿಸಬೇಕಾದ ಕೆಲವು ನಿಯಮಗಳನ್ನು ಕೊಡಲ್ಪಟ್ಟಿರುತ್ತವೆ. ಇವುಗಳಲ್ಲಿ ಅನುವಾದ ಪದಗಳ ಪರಿಶೀಲನೆ ಮತ್ತು [ಅನುವಾದ ಸೂಚನೆಗಳನ್ನು ಪರಿಶೀಲನೆ] ಒಳಗೊಂಡಿರುತ್ತವೆ (../trans-note-check/01.md).
ಇದೆಲ್ಲಾ ಆದನಂತರ, ಸ್ಪಷ್ಟತೆಗಾಗಿ ಮತ್ತು ಸ್ವಾಭಾವಿಕತೆಗಾಗಿ [ಭಾಷೆಯ ಸಮುದಾಯದೊಂದಿಗೆ] ಅನುವಾದವನ್ನು ಪರಿಶೀಲನೆ ಮಾಡುವ ಅವಶ್ಯಕತೆ ಅನುವಾದ ತಂಡಕ್ಕೆ ಇರುತ್ತದೆ. ಇದಕ್ಕೆ ಕಾರಣ ಅನುವಾದ ತಂಡಕ್ಕೆ ಗೊತ್ತಿರದ ಕೆಲವೊಂದು ವಿಷಯಗಳನ್ನು ಇನ್ನೂ ಇತರ ಭಾಷೆಯನ್ನು ಮಾತನಾಡುವವರು ಸಲಹೆಗಳನ್ನು ನೀಡುವುದರಿಂದ ಇದು ತುಂಬಾ ಪ್ರಾಮುಖ್ಯ. ಕೆಲವೊಂದುಬಾರಿ ಅನುವಾದ ತಂಡವು ಅನುವಾದವನ್ನು ಒಂದು ರೀತಿಯಲ್ಲಿ ಅಂದರೆ ಅರ್ಥವಾಗದ ರೀತಿಯಲ್ಲಿ ಮಾಡುತ್ತಿರುತ್ತಾರೆ, ಯಾಕಂದರೆ ಅವರು ಮೂಲ ಭಾಷೆಯನ್ನೂ ಭಾಷೆಯಲ್ಲಿನ ಅಕ್ಷರಾರ್ಥವಾಗಿ ಅನುವಾದ ಮಾಡುತ್ತಾರೆ. ಭಾಷೆಯನ್ನು ಮಾಡುವ ಇತರರು ಅದನ್ನು ಸರಿಪಡಿಸಲು ಸಹಾಯಕವಾಗಿರುತ್ತಾರೆ. ಇಂಥ ಸಮಯದಲ್ಲೇ ಅನುವಾದ ತಂಡವು ಇನ್ನೊಂದು ಪರಿಶೀಲನೆ ಮಾಡಬಹುದು, ಅದೇನಂದರೆ ಸಭಾಪಾಲಕರೊಂದಿಗೆ ಪರಿಶೀಲನೆ ಮಾಡಿಸುವುದು ಅಥವಾ [ಸಭಾ ನಾಯಕರ ಪರಿಶೀಲನೆ] ಮಾಡುವುದು (../language-community-check/01.md). ಸಭಾಪಾಲಕರು ಗೇಟ್ ವೆ ಭಾಷೆಯಲ್ಲಿ ಬೈಬಲ್ ಕುರಿತಾಗಿ ಹೆಚ್ಚಾಗಿ ತಿಳಿದಿರುವುದರಿಂದ, ಅವರು ಅನುವಾದವು ನಿಖರತೆಯಾಗಿ ಇದೆಯೋ ಇಲ್ಲವೋ ಎಂದು ಗೇಟ್ ವೆ ಬೈಬಲ್.ಗಾಗಿ ಪರಿಶೀಲನೆ ಮಾಡುತ್ತಾರೆ. ಅನುವಾದ ತಂಡವು ನೋಡದ ಕೆಲವೊಂದು ತಪ್ಪುಗಳನ್ನು ಅವರು ಕೂಡ ಕಂಡುಹಿಡಿಯುತ್ತಾರೆ, ಯಾಕಂದರೆ ಅನುವಾದ ತಂಡವು ಆ ಕೆಲಸದಲ್ಲಿ ಅಷ್ಟು ಹತ್ತಿರವಾಗಿ ಅಥವಾ ಹೆಚ್ಚಾಗಿ ಕೆಲಸಮಾಡಿರುವುದಿಲ್ಲ. ಅಷ್ಟೇ ಅಲ್ಲದೆ, ಅನುವಾದ ತಂಡದಲ್ಲಿರದ ಭಾಷೆಯನ್ನು ಮಾತನಾಡದ ಸಭಾಪಾಲಕರಿಗೆ ಇರುವ ಬೈಬಲ್ ಜ್ಞಾನವು ಅಥವಾ ಅನುಭವವು ಅನುವಾದ ತಂಡಕ್ಕೆ ಇರದಿರಬಹುದು. ಈ ವಿಧಾನದಲ್ಲಿ, ಸಂಪೂರ್ಣ ಭಾಷೆಯ ಸಮುದಾಯದವರು ಭಾಷಾಂತರ ಮಾಡುವ ಭಾಷೆಯಲ್ಲಿ ಬೈಬಲ್ ಅನುವಾದವು ನಿಖರತೆಯಾಗಿದೆ, ಸ್ಪಷ್ಟವಾಗಿದೆ ಮತ್ತು ಸ್ವಾಭಾವಿಕವಾಗಿದೆಯೆಂದು ನಿಶ್ಚಯಪಡಿಸುವುದಕ್ಕೆ ಎಲ್ಲರು ಕೆಲಸ ಮಾಡುವರು.
ಬೈಬಲ್ ಅನುವಾದ ನಿಖರತೆಯನ್ನು ಪರಿಶೀಲನೆ ಮಾಡುವ ಇನ್ನಿತರ ವಿಧಾನವು ಏನಂದರೆ ನಲ್ಲಿ [ಶಬ್ದವನ್ನು ಜೋಡಣೆ] ಮಾಡುವ (../accuracy-check/01.md) ಸಾಧನೆಯನ್ನು ಉಪಯೋಗಿಸಿ ಬೈಬಲ್ ಭಾಷೆಯ ವಾಸ್ತವಿಕ ಭಾಷೆಯಗಳನ್ನು ಜೋಡಿಸುವುದಾಗಿರುತ್ತದೆ. ಈ ಎಲ್ಲಾ ಪರಿಶೀಲನೆಗಳನ್ನು ಮಾಡಿದಾದನಂತರ ಮತ್ತು ಅನುವಾದವನ್ನು ಜೋಡಣೆ ಮಾಡಿದನಂತರ, ಸ್ಥಳೀಯ ಸಭೆಯ ನಾಯಕರ ಗುಂಪು ಅನುವಾದವನ್ನು ಪುನರ್ ಪರಿಶೀಲನೆಯನ್ನು ಮಾಡುವರು ಮತ್ತು ಅವರ ಅನುಮೋದನೆಯನ್ನು ತಿಳಿಸುವರು. ಯಾಕಂದರೆ ಸಭೆಯ ಅನೇಕಮಂದಿ ನಾಯಕರು ಅನುವಾದ ಮಾಡಿರುವ ಭಾಷೆಯನ್ನು ಮಾತನಾಡುವುದಿಲ್ಲ, ತಿದ್ದುಪಡಿ ಮಾಡುವುದಕ್ಕೆ ಅನುವಾದಕ್ಕೆ ತಿರುಗಿ ಹೋಗುವುದಕ್ಕೆ ಕೆಲವೊಂದು ನಿಯಮಗಳು ಕೂಡ ಇದ್ದಾವೆ, ಇದರಿಂದ ಜನರು ಮಾತನಾಡದ ಭಾಷೆಯಲ್ಲಿ ಅನುವಾದವನ್ನು ಪರಿಶೀಲನೆ ಮಾಡುವುದಕ್ಕೆ ಜನರಿಗೆ ಅನುಮತಿಯನ್ನು ಕೊಡುತ್ತವೆ.
ಅನುವಾದದ ತಂಡನಿಖರವಾದ , ಸ್ವಾಭಾವಿಕವಾದ, ಸ್ಪಷ್ಟವಾದ ಮತ್ತು ಸಭೆಯಿಂದ ಸ್ವೀಕೃತವಾದ ಅನುವಾದವನ್ನು ಮಾಡುವುದೇ ಪರಿಶೀಲನೆ ಮಾಡುವ ಗುರಿಯಾಗಿರುತ್ತದೆ. ಅನುವಾದ ತಂಡವು ಕೂಡ ಈ ಗುರಿಯನ್ನು ತಲುಪಬೇಕಾದ ಅವಶ್ಯಕತೆ ಇರುತ್ತದೆ. ಇದು ತುಂಬಾ ಸುಲಭವಾಗಿ ಕಾಣಿಸಿಕೊಳ್ಳಬಹುದು, ಆದರೆ ಇದನ್ನು ಮಾಡುವುದು ತುಂಬಾ ಕಷ್ಟ, ಮತ್ತು ಅನೇಕ ಜನರು ಇದಕ್ಕೆ ಬೇಕಾಗಿರುತ್ತಾರೆ, ಇದನ್ನು ಸಾಧಿಸುವುದಕ್ಕೆ ಅನುವಾದವನ್ನು ಅನೇಕಬಾರಿ ತಿದ್ದುಪಡಿ ಮಾಡಬೇಕಾಗಿರುತ್ತದೆ. ಈ ಕಾರಣಕ್ಕಾಗಿ ನಿಖರತೆಯ, ಸ್ವಾಭಾವಿಕವಾದ, ಸ್ಪಷ್ಟವಾದ ಮತ್ತು ಸಭೆಯಿಂದ ಸ್ವೀಕೃತವಾದ ಅನುವಾದವನ್ನು ಮಾಡುವುದಕ್ಕೆ ಅನುವಾದ ತಂಡದವರಿಗೆ ಸಹಾಯ ಮಾಡುವುದರಲ್ಲಿ ಪರಿಶೀಲಕರು ತುಂಬಾ ಪ್ರಾಮುಖ್ಯವಾದ ಪಾತ್ರೆಯನ್ನು ವಹಿಸುತ್ತಾರೆ.
ಪರಿಶೀಲಕರಾಗಿರುವ ಸಭಾಪಾಲಕರು, ಸಭಾ ನಾಯಕರು, ಮತ್ತು ಸಭೆಗಳ ಜಾಲ ವ್ಯವಸ್ಥಾಪಕಗಳ ನಾಯಕರು ಸರಿಯಾದ ನಿಖರತೆಯ ಅನುವಾದ ಮಾಡುವುದಕ್ಕೆ ಅನುವಾದ ತಂಡಕ್ಕೆ ಸಹಾಯ ಮಾಡುವರು. ಅವರು ಇದನ್ನು ಮೂಲ ಭಾಷೆಯ ಅನುವಾದದೊಂದಿಗೆ ಹೋಲಿಸಿಕೊಳ್ಳುತ್ತಾ ಮಾಡುವರು ಮತ್ತು, ಸಾಧ್ಯವಾದಲ್ಲಿ ಬೈಬಲ್ ಅಸಲಿ ಭಾಷೆಯೊಂದಿಗೆ ಹೋಲಿಸಿಕೊಳ್ಳುತ್ತಾ ಪರಿಶೀಲನೆ ಮಾಡುತ್ತಾರೆ. (ನಿಖರತೆಯ ಅನುವಾದಗಳ ಕುರಿತು ಹೆಚ್ಚಿನ ಮಾಹಿತಿಗಾಗಿ, ನಿಖರತೆಯ ಅನುವಾದಗಳನ್ನು ಮಾಡಿರಿ ಎನ್ನುವ ಶೀರ್ಷಿಕೆಯನ್ನು ನೋಡಿರಿ.)
ಭಾಷೆಯ ಸಮುದಾಯದ ಸದಸ್ಯರಾಗಿರುವ ಪರಿಶೀಲಕರು ಸ್ಪಷ್ಟವಾದ ಅನುವಾದವನ್ನುಂಟು ಮಾಡುವದಕ್ಕೆ ಅನುವಾದ ತಂಡಕ್ಕೆ ಸಹಾಯ ಮಾಡುವರು. ಅವರು ಮಾಡಿದ ಅನುವಾದವನ್ನು ಕೇಳಿಕೊಳ್ಳುತ್ತಾ ಇದನ್ನು ಮಾಡುವರು ಮತ್ತು ಅವರಿಗೆ ಗೊತ್ತಾಗದ ಅಥವಾ ಅರ್ಥವಾಗದ ಅಥವಾ ಗಲಿಬಿಲಿ ಇರುವ ಅನುವಾದಗಳನ್ನು ಗುರುತಿಸುವರು. ಆಗ ಅನುವಾದ ತಂಡದವರು ಅವುಗಳನ್ನು ಗಮನಿಸಿ ಬಗೆಹರಿಸುವರು, ಇದರಿಂದ ಅವು ಸ್ಪಷ್ಟವಾಗುತ್ತವೆ. ಸ್ಪಷ್ಟವಾದ ಅನುವಾದಗಳ ಕುರಿತಾಗಿ ಇನ್ನಿತರ ಹೆಚ್ಚಿನ ಮಾಹಿತಿಗಾಗಿ, ಸ್ಪಷ್ಟವಾದ ಅನುವಾದಗಳನ್ನು ಮಾಡಿರಿ ಎನ್ನುವ ಶೀರ್ಷಿಕೆಯನ್ನು ನೋಡಿರಿ.
ಭಾಷೆಯ ಸಮುದಾಯದ ಸದಸ್ಯರಾಗಿರುವ ಪರಿಶೀಲಕರು ಸ್ವಾಭಾವಿಕವಾದ ಅನುವಾದವನ್ನು ಮಾಡುವದಕ್ಕೆ ಅನುವಾದ ತಂಡಕ್ಕೆ ಸಹಾಯ ಮಾಡುವರು. ಅವರು ಮಾಡಿದ ಅನುವಾದವನ್ನು ಕೇಳಿಕೊಳ್ಳುತ್ತಾ ಇದನ್ನು ಮಾಡುವರು ಮತ್ತು ಅನುವಾದವು ವಿಭಿನ್ನವಾಗಿ ಎಲ್ಲೆಲ್ಲಿ ಕೇಳಿಸುತ್ತದೋ ಅಲ್ಲಲ್ಲಿ ಮತ್ತು ಅವರ ಭಾಷೆಯನ್ನು ಮಾಡುವವರು ಮಾತನಾಡುವ ವಿಧಾನದಲ್ಲಿ ಶಬ್ದ ಕೇಳಿಸದ ಸ್ಥಳಗಳನ್ನು ಗುರುತಿಸುವರು. ಆಗ ಅನುವಾದ ತಂಡದವರು ಆ ಸ್ಥಳಗಳನ್ನು ಗಮನಿಸಿ ಅವುಗಳನ್ನು ಬಗೆಹರಿಸುವರು, ಇದರಿಂದ ಅವು ಸ್ವಾಭಾವಿಕವಾದ ಭಾಷೆಯಲ್ಲಿ ಕೇಳಿಸಿಕೊಳ್ಳುತ್ತವೆ. - ಸ್ವಾಭಾವಿಕವಾದ ಅನುವಾದಗಳ ಕುರಿತಾಗಿ ಇನ್ನಿತರ ಹೆಚ್ಚಿನ ಮಾಹಿತಿಗಾಗಿ, ಸ್ವಾಭಾವಿಕವಾದ ಅನುವಾದಗಳನ್ನು ಮಾಡಿರಿ ಎನ್ನುವ ಶೀರ್ಷಿಕೆಯನ್ನು ನೋಡಿರಿ.
ಭಾಷೆಯ ಸಮುದಾಯದಲ್ಲಿ ಸಭೆಯ ಸದಸ್ಯರಾಗಿರುವ ಪರಿಶೀಲಕರು ಆ ಸಮುದಾಯದಲ್ಲಿರುವ ಸಭೆಯಿಂದ ಸ್ವೀಕೃತವಾಗುವ ಮತ್ತು ನಿರ್ಧಾರಣೆ ಅನುವಾದವನ್ನು ಮಾಡುವದಕ್ಕೆ ಅವರು ಅನುವಾದ ತಂಡಕ್ಕೆ ಸಹಾಯ ಮಾಡುವರು. ಅವರು ಆ ಭಾಷೆಯ ಸಮುದಾಯದಿಂದ ಇತರ ಸಭೆಗಳ ನಾಯಕರೊಂದಿಗೆ ಮತ್ತು ಸದಸ್ಯರೊಂದಿಗೆ ಸೇರಿ ಈ ಕೆಲಸವನ್ನು ಮಾಡುವರು ಮತ್ತು ಈ ಅನುವಾದವು ಚೆನ್ನಾಗಿದೆಯೆಂದು ಒಪ್ಪಿಕೊಳ್ಳುವರು, ಆದನಂತರ ಸಮುದಾಯದಲ್ಲಿರುವ ಸಭೆಗಳಿಂದ ಅಂದು ಸ್ವೀಕರಿಸಲ್ಪಡುತ್ತದೆ ಮತ್ತು ಉಪಯೋಗಿಸಲ್ಪಡುತ್ತದೆ. - ಸಭೆಯಿಂದ ಅನುಮೋದನೆ ಹೊಂದಿದ ಅನುವಾದಗಳ ಕುರಿತಾಗಿ ಇನ್ನಿತರ ಹೆಚ್ಚಿನ ಮಾಹಿತಿಗಾಗಿ, ಸಭೆಯಿಂದ ಅನುಮೋದನೆ ಮಾಡಿದ ಅನುವಾದಗಳನ್ನು ಮಾಡಿರಿ ಎನ್ನುವ ಶೀರ್ಷಿಕೆಯನ್ನು ನೋಡಿರಿ.
ಬೈಬಲ್ ಸಭೆಯ ಚರಿತ್ರೆಗೆ (ಚರಿತ್ರೆಯೆಲ್ಲಾ ಸಂಘಟನೆಗಳಿಗೂ) ಮತ್ತು ವಿಶ್ವಕ್ಕೂ (ಪ್ರಪಂಚದಲ್ಲಿರುವ ಎಲ್ಲಾವುದಕ್ಕೂ) ಸಂಬಂಧ ಹೊಂದಿರುತ್ತದೆ. ಸಭೆಯ ಪ್ರತಿಯೊಂದು ಭಾಗವು ಸಭೆಯಲ್ಲಿರುವ ಇನ್ನೊಂದು ಭಾಗಕ್ಕೆ, ಅಂದರೆ ನಾವು ಆ ವಾಕ್ಯವನ್ನು ಹೇಗೆ ವ್ಯಾಖ್ಯಾನ ಮಾಡುತ್ತಿದ್ದೇವೆ, ಹೇಗೆ ಪ್ರಕಟನೆ ಮಾಡುತ್ತಿದ್ದೇವೆ ಮತ್ತು ಬೈಬಲ್ ಹೇಳುವ ವಿಷಯಗಳಿಗೆ ಹೇಗೆ ಜೀವನ ಮಾಡುತ್ತಿದ್ದೇವೆ ಎನ್ನುವ ವಿಷಯಗಳಲ್ಲಿ ಸಭೆ ಹೊಣೆಯಾಗಿರಬೇಕು. ಬೈಬಲ್ ಅನುವಾದಕ್ಕೆ ಸಂಬಂಧಪಟ್ಟ ವಿಷಯಕ್ಕೆ ಬರುವಾಗ, ಪ್ರಪಂದಲ್ಲಿರುವ ಪ್ರತಿಯೊಂದು ಭಾಷೆಗೆ ಬೈಬಲ್.ನಲ್ಲಿರುವ ಪ್ರತಿಯೊಂದು ವಿಷಯವನ್ನು ವ್ಯಕ್ತಪಡಿಸುವ ಸ್ವಂತ ವಿಧಾನ ಒಂದಿರುತ್ತದೆ. ಆದರೂ, ಅವರು ಆ ಅರ್ಥವನ್ನು ಹೇಗೆ ವ್ಯಕ್ತಪಡಿಸುತ್ತಿರುವ ಸಭೆಯ ಒಂದು ಒಂದು ಭಾಗ ಆ ಭಾಷೆಯನ್ನು ಮಾತನಾಡುವ ಸಭೆಯ ಮತ್ತೊಂದು ಭಾಗಕ್ಕೆ ಹೊಣೆಗಾರಿಕೆಯಾಗಿರಬೇಕು. ಆ ಕಾರಣದಿಂದಲೇ, ಬೈಬಲ್ ಅನುವಾದ ಮಾಡುವ ಪ್ರತಿಯೊಬ್ಬರೂ ಅದನ್ನು ಬೇರೊಬ್ಬರು ಹೇಗೆ ಅನುವಾದ ಮಾಡಿದ್ದಾರೆಂದು ಅಧ್ಯಯನ ಮಾಡಲೇ ಬೇಕು. ಅವರು ತಪ್ಪದೇ ಬೈಬಲ್ ಭಾಷೆಗಳಲ್ಲಿ ತುಂಬಾ ಹೆಚ್ಚಾದ ಪರಿಣಿತಿಯನ್ನು ಪಡೆದಂಥವರಿಂದ ಸರಿಮಾಡಿಕೊಳ್ಳುವುದಕ್ಕೆ ಸಿದ್ಧರಿರಬೇಕು ಮತ್ತು ಅವರಿಂದ ಸಲಹೆಗಳನ್ನು ಪಡೆದುಕೊಳ್ಳಬೇಕು. ಅಷ್ಟೇ ಅಲ್ಲದೆ, ಅದನ್ನು ಸಭೆ ಹೇಗೆ ಅರ್ಥಮಾಡಿಕೊಂಡಿದೆ ಮತ್ತು ಇತಿಹಾಸದ ಮೂಲಕ ಬೈಬಲನ್ನು ಹೇಗೆ ವ್ಯಾಖ್ಯಾನಿಸಿದೆ ಎಂದೆನ್ನುವ ವಿಷಯಗಳನ್ನು ಸಹ ಅವರು ಅರ್ಥಮಾಡಿಕೊಳ್ಳಬೇಕು.
ಮೇಲೆ ಅರ್ಥಮಾಡಿಕೊಂಡಿರುವ ಪ್ರಕಾರ, ಪ್ರತಿಯೊಂದು ಭಾಷೆಯನ್ನು ಮಾತನಾಡುವ ಸಭೆಯು ತಮ್ಮ ಭಾಷೆಯಲ್ಲಿ ಅನುವಾದ ಮಾಡಿರುವ ಬೈಬಲ್ ಎಷ್ಟರಮಟ್ಟಿಗೆ ಉತ್ತಮವಾಗಿದೆಯೋ ಇಲ್ಲವೋ ಎಂದು ಅಥವಾ ಚೆನ್ನಾಗಿದೆಯೋ ಇಲ್ಲವೋ ಎಂದು ತಮಗೋಸ್ಕರ ತಾವೇ ನಿರ್ಣಯಿಸಿಕೊಳ್ಳುವ ಅಧಿಕಾರ ಹೊಂದಿಕೊಂಡಿರುತ್ತದೆ. ಪರಿಶೀಲನೆ ಮಾಡುವುದಕ್ಕೆ ಮತ್ತು ಬೈಬಲ್ ಅನುವಾದವನ್ನು ಅನುಮೋದನೆ ಮಾಡುವದಕ್ಕೆ ಇರುವ ಅಧಿಕಾರ ಸಾಮರ್ಥ್ಯದಿಂದ ಬೇರ್ಪಡಿಸಲಾಗಿರುತ್ತದೆ, ಅಥವಾ ಬೈಬಲ್ ಅನುವಾದವನ್ನು ಪರಿಶೀಲನೆ ಮಾಡುವ ಪ್ರಕ್ರೀಯೆಯಿಂದ (ಈ ವಿಧಾನವನ್ನು ಇನ್ನೂ ಹೆಚ್ಚಾಗಿ ಮಾಡಲಾಗಿರುತ್ತದೆ) ಸಾಮರ್ಥ್ಯವನ್ನು ತೆಗೆದುಹಾಕಲಾಗಿರುತ್ತದೆ. ಬೈಬಲ್ ಅನುವಾದದ ಗುಣಮಟ್ಟವನ್ನು ನಿರ್ಧರಿಸುವ ಅಧಿಕಾರವು ಅನುವಾದದ ಭಾಷೆಯನ್ನು ಮಾತನಾಡುವ ಸಭೆಗೆ ಸಂಬಂಧಪಟ್ಟಿರುತ್ತದೆ, ತಮ್ಮ ಪ್ರಸ್ತುತ ಸಾಮರ್ಥ್ಯ, ಅನುಭವ ಮೇಲೆ ಆಧಾರಪಟ್ಟಿರುತ್ತದೆ, ಅಥವಾ ಬೈಬಲ್ ಅನುವಾದವನ್ನು ಪರಿಶೀಲನೆ ಮಾಡುವುದಕ್ಕೆ ಕೊಡುವ ಸಂಪನ್ಮೂಲಗಳನ್ನು ಉಪಯೋಗಿಸುವದರ ಮೇಲೆ ಆಧಾರಪಟ್ಟಿರುತ್ತದೆ. ಆದ್ದರಿಂದ, ಭಾಷೆಯನ್ನು ಮಾತನಾಡುವ ಸಮುದಾಯದಲ್ಲಿರುವ ಸಭೆಯು ಪರಿಶೀಲನೆ ಮಾಡುವ ಅಧಿಕಾರವನ್ನು ಮತ್ತು ತಮ್ಮ ಬೈಬಲ್ ಅನುವಾದವನ್ನು ಅವರೇ ಅನುಮೋದನೆ ಮಾಡಿಕೊಳ್ಳುವುದಕ್ಕು, unfoldingWord ಉಪಕರಣಗಳನ್ನು ಉಪಯೋಗಿಸುವುದಕ್ಕು ಹಕ್ಕನ್ನು ಪಡೆದುಕೊಂಡಿರುತ್ತದೆ. ಇದರಲ್ಲಿ translationAcademy ಯ ಘಟಕಗಳು ಹೊಂದಿರುತ್ತವೆ, ಉತ್ತಮವಾದ ವಿಧಾನವನ್ನು ಉಪಯೋಗಿಸಿ ತಮ್ಮ ಬೈಬಲ್ ಅನುವಾದದ ಗುಣಮಟ್ಟವನ್ನು ಪರಿಶೀಲನೆ ಮಾಡುವುದಕ್ಕೆ ಪ್ರತಿಯೊಂದು ಸಭೆಯು ಸಾಮರ್ಥ್ಯವನ್ನು ಹೊಂದಿರುತ್ತದೆಯೆಂದು ನಿಶ್ಚಯಗೊಳಿಸುಕೊಳ್ಳುವುದಕ್ಕೆ ಈ ಘಟಕಗಳನ್ನು ತಯಾರು ಮಾಡಲಾಗಿರುತ್ತದೆ. ಬೈಬಲ್ ಪರಿಣಿತಿಯನ್ನು ಪಡೆದವರು ಬೈಬಲ್ ಕುರಿತಾಗಿ ಹೇಳಿರುವ ವಿಷಯಗಳನ್ನು ತಿಳಿದುಕೊಳ್ಳುವುದಕ್ಕೂ ಮತ್ತು ಇತರ ಭಾಷೆಗಳಲ್ಲಿ ಅದನ್ನು ಸಭೆಯ ಇತರ ಭಾಗಗಳಲ್ಲಿರುವವರು ಹೇಗೆ ಅನುವಾದ ಮಾಡಿದ್ದಾರೆಂದು ತಿಳಿದುಕೊಳ್ಳುವುದಕ್ಕೆ ಪ್ರತಿಯೊಂದು ಭಾಷೆಯ ಸಮುದಾಯದಲ್ಲಿರುವ ಸಭೆಗೆ ಈ ಉಪಕರಣಗಳನ್ನು ಕೊಡಲು ತಯಾರಿಸಲಾಗಿರುತ್ತದೆ.
ಅನುವಾದವನ್ನು ಪರಿಶೀಲನೆ ಮಾಡುವುದಕ್ಕೆ ಇರುವ ಪ್ರಕ್ರೀಯೆಯ ಕುರಿತಾಗಿ ಕೈಪಿಡಿಯಲ್ಲಿ ಇನ್ನೂ ಹೆಚ್ಚಾಗಿ ವಿವರಿಸಲ್ಪಟ್ಟಿರುತ್ತದೆ.
ಈ ಸಮಯದಲ್ಲಿ, ಮೊದಲನೆಯ ರಚನೆ ಎಂದು ಕರೆಯಲ್ಪಡುವ ಘಟಕದಲ್ಲಿ ಕೊಡಲ್ಪಟ್ಟಿರುವ ನಿಯಮಗಳನ್ನು ಅನುಸರಿಸಿ ನಿಮ್ಮ ಅನುವಾದದಲ್ಲಿ ಕನಿಷ್ಠ ಮೊದಲನೆಯ ಅಧ್ಯಾಯವನ್ನಾದರೂ ನೀವು ಈಗಾಗಲೇ ಪೂರ್ತಿಮಾಡಿರಬಹುದು. ಅದನ್ನು ಪರಿಶೀಲಿಸಲು, ಅದರಲ್ಲಿ ಯಾವುದಾದರು ತಪ್ಪುಗಳು ಅಥವಾ ಸಮಸ್ಯೆಗಳು ಇಲ್ಲದ ಹಾಗೆ ಮತ್ತು ಅದನ್ನು ಅತ್ಯುತ್ತಮವಾಗಿ ಮಾಡಲು ಈ ಹಂತದಲ್ಲಿ ನಿಮಗೆ ಬೇರೆಯವರ ಸಹಾಯ ಬೇಕಾಗಿರುತ್ತದೆ. ಅನುವಾದಕರು ಅಥವಾ ಅನುವಾದದ ತಂಡದವರು ಪರಿಶುದ್ಧ ಗ್ರಂಥದಲ್ಲಿ ಹೆಚ್ಚಿನ ಕಥೆಗಳು ಅಥವಾ ಅಧ್ಯಾಯಗಳು ಅನುವಾದ ಮಾಡುವುದಕ್ಕೆ ಮುಂಚೆಯೇ ಅವರ ಅನುವಾದವನ್ನು ಪರಿಶೀಲಿಸಬೇಕು, ಅದರಿಂದ ಅನುವಾದ ಕ್ರಮದಲ್ಲಿ ಅವರ ತಪ್ಪುಗಳನ್ನು ಆದಷ್ಟು ಬೇಗನೆ ಅವರು ತಿಳಿದುಕೊಂಡು ಅವುಗಳನ್ನು ತಿದ್ದುಪಡಿ ಮಾಡಿಕೊಳ್ಳುವರು. ಅನುವಾದ ಮುಗಿಸುವುದಕ್ಕೆ ಮುಂಚೆ ಈ ಕ್ರಮದ ಅನೇಕ ಹಂತಗಳನ್ನು ಹಲವಬಾರಿ ಮಾಡುವ ಅಗತ್ಯತೆ ಇರಬಹುದು. ಮೌಖಿಕ ಪಾಲುದಾರ ಪರಿಶೀಲನೆ ಮಾಡುವುದಕ್ಕೆ ಈ ಕೆಳಕಂಡ ಹಂತಗಳನ್ನು ಅವಲಂಬಿಸಿ.
ತಂಡವಾಗಿ ಒಂದು ಭಾಗದ ಅನುವಾದವನ್ನು ಪರಿಶೀಲಿಸಲು, ತಂಡವು ಮೌಖಿಕ ಗಾತ್ರದ ಪರಿಶೀಲನೆಯನ್ನು ಮಾಡಬೇಕು. ಇದನ್ನು ಮಾಡಲು ಪ್ರತಿಯೊಬ್ಬ ಅನುವಾದಕನು ತನ್ನ ಅನುವಾದವನ್ನು ತಂಡದ ಉಳಿದವರಿಗೆ ಕೇಳುವ ಹಾಗೆ ಜೋರಾಗಿ ಓದುತ್ತಾನೆ. ಪ್ರತಿ ಭಾಗದ ಕೊನೆಯಲ್ಲಿ ಭಾಷಾಂತರಕಾರನು ಓದುವುದನ್ನು ನಿಲ್ಲಿಸುತ್ತಾನೆ, ಇದರಿಂದ ತಂಡವು ಆ ಭಾಗದ ಬಗ್ಗೆ ಚರ್ಚಿಸಲು ಸಾಧ್ಯವಾಗುತ್ತದೆ. ಅನುವಾದಕನು ಪಠ್ಯವನ್ನು ಮೌಖಿಕವಾಗಿ ಓದುತ್ತಿರುವಾಗ, ಪ್ರತಿಯೊಂದು ಲಿಖಿತ ಅನುವಾದವನ್ನು ಎಲ್ಲಾರು ನೋಡಬಹುದಾದ ರೀತಿಯಲ್ಲಿ ಯೋಜಿಸಲಾಗಿದೆ.
ತಂಡದ ಸದಸ್ಯರ ಕರ್ತವ್ಯಗಳನ್ನು ವಿಂಗಡಿಸಲಾಗಿದೆ – ತಂಡದ ಪ್ರತಿ ಸದಸ್ಯರು ಒಂದು ಸಮಯದಲ್ಲಿ ಕೆಳಗಿನ ಪಾತ್ರಗಳಲ್ಲಿ ಒಂದನ್ನು ಮಾತ್ರ ನಿರ್ವಹಿಸುವುದು ಮುಖ್ಯ.
ತಂಡವು ತಮ್ಮ ಅನುವಾದಗಳಲ್ಲಿ ತೃಪ್ತರಾಗುವವರೆಗೆ ಈ ಹಂತಗಳನ್ನು ಅಗತ್ಯವಿರುವಂತೆ ಪುನರಾವರ್ತಿಸಬಹುದು.
ಈ ಸಮಯದಲ್ಲಿ, ಅನುವಾದವನ್ನು ಮೊದಲ ಕರಡು ಪ್ರತಿ ಎಂದು ಪರಿಗಣಿಸಲಾಗುತ್ತದೆ, ಮತ್ತು ತಂಡವು ಈ ಕೆಳಗಿನವುಗಳನ್ನು ಮಾಡಬೇಕಾಗುತ್ತದೆ.
ಅನುವಾದ ಸ್ಟುಡಿಯೋ ಫೈಲ್ ಹಾಗು ಆಡಿಯೋ ರೆಕಾರ್ಡಿಂಗ್ ಅನ್ನು ಬಾಗಿಲು43 ರಲ್ಲಿ ತಂಡದ ಬಂಡಾರಕ್ಕೆ ಅಪ್ಲೋಡ್ ಮಾಡಬೆಕು
ಅನುವಾದ ಪದಗಳ ಬಂದಿರುವ ಪ್ರತಿಯೊಂದು ವಾಕ್ಯಕ್ಕಾಗಿ ಆಯ್ಕೆ ಮಾಡಿದನಂತರ, ಆ ವಾಕ್ಯಕ್ಕಾಗಿರುವ ಪಟ್ಟಿಯನ್ನು ಪರಿಶೀಲನೆ ಮಾಡಬಹುದು. ಕೆಳಗಿರುವ ಸೂಚನೆಗಳೆಲ್ಲವು ಪುನರ್ಪರಿಶೀಲನೆ ಮಾಡುವವರಿಗೆ ಅಥವಾ ಅನುವಾದ ತಂಡದವರಿಗೆ ಕೊಡಲ್ಪಟ್ಟಿವೆ.
ಆ ಸಂದರ್ಭದಲ್ಲಿ ಕೆಲವೊಂದು ಅನುವಾದ ಪದಗಳ ಗೋಸ್ಕರ ಉಪಯೋಗಿಸಿದ ಅನುವಾದವು ಸರಿಯಾಗಿಲ್ಲವೆಂದು ನಿಮಗೆ ನಿಶ್ಚಯವಿಲ್ಲದಿದ್ದರೆ, ಅನುವಾದ ತಂಡವು ಮಾಡುವ ಅನುವಾದವು ಅನುವಾದ ಪದಗಳ ಹಾಳೆಯನ್ನು ನೋಡುವುದಕ್ಕೆ ಅದು ಸಹಾಯಕರವಾಗಿರಬಹುದು. ಅನುವಾದ ತಂಡದ ಮೇಲೆ ನೀವು ಇತರರೊಂದಿಗೆ ಕಠಿಣ ಪದಕ್ಕೋಸ್ಕರ ಚರ್ಚೆ ಮಾಡಬಹುದು ಮತ್ತು ಎಲ್ಲರು ಸೇರಿ ಪರಿಹಾರವನ್ನು ಕಂಡುಕೊಳ್ಳುವುದಕ್ಕೆ ಪ್ರಯತ್ನ ಮಾಡಬಹುದು. ಕೆಲವೊಂದು ಸಂದರ್ಭಗಳಲ್ಲಿ ನೀವು ವಿವಿಧ ಪದಗಳನ್ನು ಉಪಯೋಗಿಸಿಕೊಳ್ಳಬಹುದು, ಅಥವಾ ಅನುವಾದ ಪದಗಳ ಪದವನ್ನು ಅನುವಾದ ಮಾಡುವುದಕ್ಕೆ ಬೇರೊಂದು ಮಾರ್ಗವನ್ನು ಕಂಡುಹಿಡಿಯಬಹುದು, ಅಂದರೆ ದೊಡ್ಡ ವಾಕ್ಯವನ್ನು ಬಳಸಿ ಅನುವಾದ ಮಾಡಬಹುದು.
ಮೂಲ ಅನುವಾದಕ್ಕೆ ಪ್ರವೇಶ
ಪರಿಶೀಲಿಸಲು ಒಂದು ವಚನವನ್ನು ಆಯ್ಕೆ ಮಾಡಿ ಮತ್ತು ನೀಲಿ ಪಟ್ಟಿಯಲ್ಲಿರುವ ಆ ವಚನದ ಟಿಪ್ಪಣಿಯನ್ನು ಓದಿರಿ. ಹೊಸ ವರ್ಗಕ್ಕೆ ತೆರಳುವ ಮೊದಲು ಒಂದೇ ವರ್ಗದಲ್ಲಿರುವ ಎಲ್ಲಾ ಪದ್ಯಗಳನ್ನು ಪರಿಶೀಲಿಸುವುದು ಉತ್ತಮ.
ಕೆಲವು ಟಿಪ್ಪಣಿಗಳು ಪರಿಶೀಲಿಸುವ ನಿರ್ಧಿಷ್ಟ ವಚನಕ್ಕೆ ಅನ್ವಯವಾಗುವ ಹೆಚ್ಚು ಸಾಮಾನ್ಯ ಸಮಸ್ಯೆಗಳನ್ನು ಉಲ್ಲೇಖಿಸುತ್ತದೆ. ಈ ಹೆಚ್ಚು ಸಾಮಾನ್ಯ ಸಮಸ್ಯಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಅದು ಪ್ರಸ್ತುತ ವಚನಕ್ಕೆ ಹೇಗೆ ಅನ್ವಯಿಸುತ್ತದೆ ಎಂದು ತಿಳಿಯಲು ಫಲಕದ ಬಲಭಾಗದಲ್ಲಿರುವ ಮಾಹಿತಿಯನ್ನು ಓದಿರಿ.
ನೀವು ಏನನ್ನಾದರು ಬದಲಿಸಿದ್ದರೆ, ನಿಮ್ಮ ಆಯ್ಕೆಯನ್ನು ಮತ್ತೆ ಮಾಡಬಾಕಾಗಬಹುದು.
ಟಿಪ್ಪಣಿ ವಿಭಾಗದಲ್ಲಿನ ಎಲ್ಲಾ ವಚನಗಳನ್ನು ಆಯ್ಕೆ ಮಾಡಿದ ನಂತರ, ಆವರ್ಗದಲ್ಲಿನ ಅನುವಾದಗಳ ಪಟ್ಟಿಯನ್ನು ಪರಿಶೀಸಬಹುದು. ಈ ಕೆಳಗಿನ ಸೂಚನೆಯು ವಿಮರ್ಶಕರಿಗೆ ಅಥವಾ ಅನುವಾದ ತಂಡಕ್ಕೆ ಮಾತ್ರ.
“ಹೇಳಿಕೆ” ಆಯ್ಕೆ ಮಾಡಿ
ಹೇಳಿಕೆಯನ್ನು ಓದಿರಿ, ಮತ್ತು ಇದರ ಬಗ್ಗೆ ನೀವು ಏನು ಮಾಡುತ್ತೀರಿ ಎಂದು ನಿರ್ಧರಿಸಿ.
ನಿಮಗಾಗಿ ಉಳಿದಿರುವ ಎಲ್ಲಾ ಹೇಳಿಕೆಯಲ್ಲಿ ಕಾರ್ಯನಿರ್ವಹಿಸುವವರೆಗೆ ಈ ಪ್ರಕ್ರಿಯೆಯನ್ನು ಮುಂದುವರೆಸಿರಿ.
ನೀವು ಟಿಪ್ಪಣಿ ವರ್ಗ ಅಥವಾ ಸತ್ಯವೇದ ಪುಸ್ತಕವನ್ನು ಪರಿಶೀಲಿಸಿದ ನಂತರ, ಇನ್ನೂ ಕೆಲವು ವಚನಗಳು ಹಾಗು ಟಿಪ್ಪಣಿ ಪರಿಶೀಲನೆಯ ಬಗ್ಗೆ ನೀವು ಪ್ರಶ್ನೆಗಳನ್ನು ಹೊಂದಿರಬಹುದು. ಅನುವಾದ ತಂಡದಲ್ಲಿ ಇತರರೊಂದಿಗೆ ಕಷ್ಟಕರವಾದ ವಚನವನ್ನು ಚರ್ಚಿಸಲು ನೀವು ಬಯಸಬಹುದು, ಒಟ್ಟಿಗೆ ಪರಹಾರಗಳನ್ನು ಕಂಡುಹಿಡಿಯಲು ಪ್ರಯತ್ನಿಸಬಹುದು, ಹೆಚ್ಚು ಸತ್ಯವೇದ ಅನುವಾದ ಸಂಪನ್ಮೂಲಗಳನ್ನು ಅಧ್ಯಾಯನ ಮಾಡಿ, ಅಥವಾ ಪ್ರಶ್ನೆಗಳನ್ನು ಸತ್ಯವೇದ ಅನುವಾದ ತಜ್ಞರಿಗೆ ಉಲ್ಲೇಖಿಸಿ.
ತಂಡವಾಗಿ ಪರಿಶೀಲನೆಗಳನ್ನು ಮಾಡಿದ ಮೇಲೆ ಪರಿಶೀಲನೆ ಮತ್ತು ಹೇಳಲ್ಪಟ್ಟಿರುವ ಹಂತಗಳನ್ನು ಅನುವಾದ ತಂಡ ಸಂಪೂರ್ಣಗೊಳಿಸಿದ ಅನುವಾದವನ್ನು ಭಾಷಾಂತರ ಸಮುದಾಯದ ಮೂಲಕ ಪರಿಶೀಲನೆ ಮಾಡಿಸುವುದಕ್ಕೆ ಸಿದ್ಧವಾಗಿರುತ್ತದೆ. ಭಾಷಾಂತರ ಮಾಡುವ ಭಾಷೆಯಲ್ಲಿ ಸ್ಪಷ್ಟವಾಗಿ ಮತ್ತು ಸ್ವಾಭಾವಿಕವಾಗಿರುವಂತೆ ಸಮುದಾಯವು ಅನುವಾದ ತಂಡಕ್ಕೆ ಸಹಾಯ ಮಾಡುತ್ತಾರೆ. ಇದನ್ನು ಮಾಡುವುದಕ್ಕೆ, ಅನುವಾದ ವರ್ಗದವರು ಸಮುದಾಯದ ಪರಿಶೀಲನೆಯ ವಿಧಾನದಲ್ಲಿ ತರಬೇತಿ ಹೊಂದಿದ ಜನರನ್ನು ಆಯ್ಕೆ ಮಾಡಿಕೊಳ್ಳಬೇಕು. ಅನುವಾದ ಮಾಡಿದ ಜನರೇ ಇಲ್ಲಿಯೂ ಕೆಲಸ ಮಾಡಬಹುದು.
ಈ ಜನರು ಸಮುದಾಯವಿರುವ ಪ್ರತಿಯೊಂದು ಕಡೆಗೆ ಹೋಗಿ, ಮತ್ತು ಭಾಷೆಯ ಸಮುದಾಯದಲ್ಲಿರುವ ಸದಸ್ಯರೊಂದಿಗೆ ಅನುವಾದವನ್ನು ಪರಿಶೀಲನೆ ಮಾಡುತ್ತಾರೆ. ಈ ಪರಿಶೀಲನೆಯನ್ನು ಅನೇಕರ ಜೊತೆಯಲ್ಲಿ ಅಂದರೆ ಯೌವನಸ್ಥರು, ವೃದ್ಧರು, ಸ್ತ್ರೀ ಪುರುಷರು ಮತ್ತು ಆ ಭಾಷೆಯ ಪ್ರಾಂತ್ಯದಲ್ಲಿನ ಅನೇಕ ವಿಭಾಗಗಳಲ್ಲಿನ ಪ್ರಸಂಗಿಗಳು ಮತ್ತು ಇನ್ನೂ ಅನೇಕರಿಂದ ಮಾಡಿಸಿದರೆ ಇನ್ನೂ ಒಳ್ಳೇಯದು, ಇದರ ಮೂಲಕ ಆ ಅನುವಾದವು ಎಲ್ಲರು ಅರ್ಥ ಮಾಡಿಕೊಳ್ಳುವುದಕ್ಕೆ ಸಹಾಯಕವಾಗುವುದು.
ಅನುವಾದದ ಸ್ಪಷ್ಟತೆಗಾಗಿ ಮತ್ತು ಸ್ವಾಭಾವಿಕತೆಗಾಗಿ ಪರಿಶೀಲನೆ ಮಾಡುವುದಕ್ಕೆ, ಅದನ್ನು ಮೂಲ ಭಾಷೆಗೆ ಹೋಲಿಸಿ ನೋಡಿದರೆ ಯಾವ ಪ್ರಯೋಜನವೂ ಇರುವುದಿಲ್ಲ. ಸಮುದಾಯದೊಂದಿಗೆ ಮಾಡುವ ಈ ಪರಿಶೀಲನೆಗಳಲ್ಲಿ, ಯಾರೂ ಕೂಡ ಮೂಲ ಭಾಷೆಯ ಬೈಬಲನ್ನು ನೋಡಬಾರದು. ಜನರು ಸಹಜವಾಗಿ ನಿಖರತೆಗಾಗಿ ಪರಿಶೀಲನೆ ಮಾಡುವಂತೆ ಇತರ ಪರಿಶೀಲನೆಗಳಿಗಾಗಿಯೂ ಮೂಲ ಭಾಷೆಯ ಬೈಬಲನ್ನು ನೋಡುತ್ತಾರೆ, ಆದರೆ ಈ ಪರಿಶೀಲನೆಗಳ ಸಮಯದಲ್ಲಿ ಅದನ್ನು ನೋಡುವುದಿಲ್ಲ .
ಸ್ವಾಭಾವಿಕತೆಗಾಗಿ ಪರಿಶೀಲನೆ ಮಾಡುವುದಕ್ಕೆ, ಭಾಷೆಯ ಸಮುದಾಯದ ಸದಸ್ಯರಿಗೆ ವಾಕ್ಯ ಭಾಗವನ್ನು ಕೇಳಿಸಬಹುದು ಅಥವಾ ಅದನ್ನು ನೀವು ಓದಿಸಲೂ ಬಹುದು. ನೀವು ಆ ಅನುವಾದವನ್ನು ಕೇಳಿಸುವುದಕ್ಕೆ ಮುಂಚಿತವಾಗಿ ಅಥವಾ ಓದುವುದಕ್ಕೆ ಮುಂಚಿತವಾಗಿ, ಅವರ ಭಾಷೆಯಲ್ಲಿ ಸ್ವಾಭಾವಿಕವಾಗಿರದವುಗಳನ್ನು ಅವರು ಒಂದುವೇಳೆ ಕೇಳಿಸಿಕೊಂಡರೆ ಅವರು ನಿಮ್ಮನ್ನು ನಿಲ್ಲಿಸಬೇಕೆಂದು ಕೇಳುವ ಜನರಿಗೆ ಹೇಳಿರಿ. [ಸ್ವಾಭಾವಿಕತೆಗಾಗಿ ಅನುವಾದವನ್ನು ಹೇಗೆ ಪರಿಶೀಲನೆ ಮಾಡಬೇಕು ಎನ್ನುವದರ ಕುರಿತಾಗಿ ಹೆಚ್ಚಿನ ಮಾಹಿತಿಗಾಗಿ, ಸ್ವಾಭಾವಿಕ ಅನುವಾದ ನೋಡಿರಿ.] ಅವರು ನಿಮ್ಮನ್ನು ನಿಲ್ಲಿಸಿದಾಗ, ಯಾವುದು ಸ್ವಾಭಾವಿಕವಲ್ಲ ಎನ್ನುವುದನ್ನು ಅವರಿಗೆ ಕೇಳಿರಿ, ಮತ್ತು ಅವರು ಹೇಳುವ ಮಾತುಗಳನ್ನು ಗುರುತಿಸಿಕೊಂಡು, ಅವುಗಳನ್ನು ಇನ್ನೂ ಸ್ವಾಭಾವಿಕವಾಗಿ ಮಾಡಲು ಪ್ರಯತ್ನಿಸಿ ಅವರು ಕೊಡುವ ಉತ್ತರವನ್ನು ದಾಖಲು ಮಾಡಿಕೊಳ್ಳಿರಿ ಅಥವಾ ಆ ಪದ ಅಥವಾ ಮಾತನ್ನು ವಾಕ್ಯ ಮತ್ತು ಅಧ್ಯಾಯದ ಸಮೇತವಾಗಿ ಬರೆದುಕೊಳ್ಳಿರಿ. ಇದರಿಂದ ಅನುವಾದ ತಂಡವು ಅನುವಾದದಲ್ಲಿರುವ ಮಾತನ್ನು ಅಥವಾ ಪದವನ್ನು ಅವರ ವಿಧಾನದಲ್ಲಿ ಉಪಯೋಗಿಸುವುದನ್ನು ಪರಿಗಣಿಸಬೇಕು.
ಸ್ಪಷ್ಟತೆಗಾಗಿ ಅನುವಾದವನ್ನು ಪರಿಶೀಲನೆ ಮಾಡುವುದಕ್ಕೆ, ಪ್ರತಿಯೊಂದು * ಬೈಬಲ್ ಕಥೆಗಾಗಿ * ಮತ್ತು ನೀವು ಉಪಯೋಗಿಸುವಂತಹ ಪ್ರತಿಯೊಂದು ಬೈಬಲ್ ಅಧ್ಯಾಯಕ್ಕಾಗಿ ಪ್ರಶ್ನೋತ್ತರಗಳ ಪಟ್ಟಿ ಒಂದಿದೆ. ಭಾಷೆಯ ಸಮುದಾಯದವರು ಆ ಪ್ರಶ್ನೆಗಳಿಗೆ ಸುಲಭವಾಗಿ ಉತ್ತರಗಳನ್ನು ಕೊಡುವಾಗ, ಆ ಅನುವಾದವು ತುಂಬಾ ಸ್ಪಷ್ಟವಾಗಿದೆಯೆಂದು ನೀವು ತಿಳಿದುಕೊಳ್ಳುವಿರಿ. (See http://ufw.io/tq/ for the questions.)
ಈ ಪ್ರಶ್ನೆಗಳನ್ನು ಉಪಯೋಗಿಸುವುದಕ್ಕೆ, ಈ ಕೆಳಗಿನ ಹಂತಗಳನ್ನು ಅನುಸರಿಸಿರಿ :
ಸ್ಪಷ್ಟವಾದ ಅನುವಾದವನ್ನು ಮಾಡುವುದರ ಕುರಿತಾಗಿ ಇನ್ನೂ ಹೆಚ್ಚಾದ ಮಾಹಿತಿಗಾಗಿ, [ಸ್ಪಷ್ಟತೆ] ಯನ್ನು ನೋಡಿರಿ (../clear/01.md). ಸಮುದಾಯದೊಂದಿಗೆ ಅನುವಾದವನ್ನು ಪರಿಶೀಲನೆ ಮಾಡುವುದಕ್ಕೆ ನೀವು ಉಪಯೋಗಿಸುವ ಅನುವಾದ ಪ್ರಶ್ನೆಗಳಿಗಿಂತ ಇತರ ವಿಧಾನಗಳು ಇವೆ. ಇನ್ನಿತರ ವಿಧಾನಗಳಿಗೋಸ್ಕರ, [ಇತರ ವಿಧಾನಗಳು] ನೋಡಿರಿ (../other-methods/01.md).
ಪ್ರಶ್ನಿಸುವುದರ ಜೊತೆಯಲ್ಲಿ, ಅನುವಾದ ಸ್ಪಷ್ಟವಾಗಿದಿಯೋ, ಓದುವುದಕ್ಕೆ ಸುಲಭವಾಗಿದಿಯೋ ಮತ್ತು ಕೇಳುವವರಿಗೆ ಸಹಜವಾಗಿ ಧ್ವನಿಸುತ್ತಿದೆಯೋ ಎಂದು ಪರೀಕ್ಷಿಸಲು ಬೇರೆ ವಿಧಾನಗಳಿವೆ. ಕೆಳಕಂಡ ವಿಧಾನಗಳನ್ನು ನೀವು ಪ್ರಯತ್ನಿಸಬಹುದು:
ಅನುವಾದವು ತುಂಬಾ ಸ್ಪಷ್ಟವಾಗಿರಬೇಕು. ಇದರ ಅರ್ಥವೇನೆಂದರೆ, ಆ ಅನುವಾದವನ್ನು ಓದಿದವರು ಅಥವಾ ಅದನ್ನು ಕೇಳಿದವರು ತುಂಬಾ ಸುಲಭವಾಗಿ ಅರ್ಥಮಾಡಿಕೊಳ್ಳುವಂತೆ ಇರಬೇಕು. ನಿಮ್ಮಷ್ಟಕ್ಕೆ ನೀವು ಓದಿದಾಗ ಆ ಅನುವಾದವು ಸ್ಪಷ್ಟವಾಗಿದೆಯೋ ಇಲ್ಲವೋ ಎಂದು ನಿಮಗೆ ಅರ್ಥವಾಗುವ ಸಾಧ್ಯತೆಯಿರುತ್ತದೆ. ಭಾಷೆಯ ಸಮುದಾಯದಲ್ಲಿ ಒಬ್ಬರನ್ನು ಕೂಡಿಸಿಕೊಂಡು ಅವರಿಗೆ ಗಟ್ಟಿಯಾಗಿ ಓದಿ ಹೇಳಿದರೆ ಇನ್ನೂ ಉತ್ತಮ. ನೀವು ಅನುವಾದವನ್ನು ಓದುತ್ತಿರುವಾಗ ಆ ಅನುವಾದವು ಸ್ಪಷ್ಟವಾಗಿದೆಯೋ ಇಲ್ಲವೋ ಎಂದು ನಿಮ್ಮನ್ನು ನೀವೇ ಕೇಳಿಕೊಳ್ಳಿರಿ, ಅಥವಾ ನೀವು ಓದುತ್ತಿರುವಾಗ ಯಾರು ಕೇಳುತ್ತಿದ್ದಾರೋ ಅವರನ್ನು ಕೇಳಿರಿ, ಪರೀಕ್ಷೆ ಮಾಡುವ ಈ ಭಾಗದಲ್ಲಿ ಹೊಸ ಅನುವಾದವನ್ನು ಮೂಲ ಭಾಷೆಯ ಅನುವಾದಕ್ಕೆ ಹೋಲಿಸಿ ನೋಡಬೇಡಿರಿ. ಎಲ್ಲಾದರೊಂದಲ್ಲಿ ನಿಮಗೆ ಸಮಸ್ಯೆ ಕಂಡುಬಂದರೆ, ಆ ಸಮಸ್ಯೆಯ ಕುರಿತಾಗಿ ಬರೆದುಕೊಳ್ಳಿರಿ, ಇದರಿಂದ ಈ ಅನುವಾದವನ್ನು ಓದಿ ಮುಗಿಸದಾದನಂತರ ಬೇರೊಂದು ಸಮಯದಲ್ಲಿ ಆ ಅನುವಾದದೊಂದಿಗೆ ಇರುವ ಸಮಸ್ಯೆಯ ಕುರಿತಾಗಿ ಚರ್ಚೆ ಮಾಡಬಹುದು.
ಹೆಚ್ಚುವರಿ ಸಹಾಯ:
ಸತ್ಯವೇದವನ್ನು ಸ್ವಾಭಾವಿಕವಾಗಿ ಅನುವಾದ ಮಾಡುವುದು ಎಂದರೆ:
ಅನುವಾದ ಮಾಡಿರುವುದು ಒಬ್ಬ ವಿದೇಶೀಯನು ಮಾಡಿರುವಂತೆ ಅಲ್ಲ ಲಕ್ಷ್ಯ ಭಾಷೆಯ ಸಮಾಜದ ಒಬ್ಬ ಸದಸ್ಯರು ಬರೆದಂತೆ ಇರಬೇಕು. ಲಕ್ಷ್ಯ ಭಾಷೆಯ ಮಾತುಗಾರರು ಅದನ್ನು ಹೇಳಿದಂತೆಯೇ ಅನುವಾದವು ವಿಷಯಗಳನ್ನು ಹೇಳಬೇಕು. ಅನುವಾದ ಸ್ವಾಭಾವಿಕವಾಗಿದ್ದಾಗ, ಅರ್ಥಮಾಡಿಕೊಳ್ಳುವುದು ಸುಲಭವಾಗಿರುತ್ತದೆ.
ಅನುವಾದ ಸ್ವಾಭಾವಿಕವಗಿದ್ದೆಯೋ ಎಂದು ಪರೀಕ್ಷಿಸಲು, ಮೂಲ ಭಾಷೆಯೊಂದಿಗೆ ಅದನ್ನು ಹೋಲಿಸುವುದು ಸಹಾಯಕರವಾಗಿರುವದಿಲ್ಲ. ಸ್ವಾಭಾವಿಕ ಈ ಪರೀಕ್ಷೆಯಲ್ಲಿ, ಯಾರು ಮೂಲ ಭಾಷೆಯಲ್ಲಿ ಸತ್ಯವೇದವನ್ನು ನೋಡಬಾರದು. ನಿಖರತೆಗಾಗಿ ಪರೀಕ್ಷೆ ಮತ್ತು ಇನ್ನಿತರ ಪರೀಕ್ಷೆಗಳಿಗಾಗಿ ಜನರು ಮೂಲ ಭಾಷೆಯಲ್ಲಿ ಸತ್ಯವೇದವನ್ನು ನೋಡುತ್ತಾರೆ ಆದರೆ ಈ ಪರೀಕ್ಷೆಯಲ್ಲಿ ನೋಡುವುದಿಲ್ಲ.
ಅನುವಾದ ಸ್ವಾಭಾವಿಕವಾಗಿರಲು ನೀವು ಅಥವಾ ಭಾಷಾ ಸಮುದಾಯದ ಬೇರೊಬ್ಬರು ಅದನ್ನು ಗಟ್ಟಿಯಾಗಿ ಓದಬೇಕು ಅಥವಾ ಅದರ ರಿಕಾರ್ಡಿಂಗನ್ನು ನುಡಿಸಬೇಕು. ಬರವಣಿಗೆಯಲ್ಲಿ ಅದನ್ನು ನೋಡುತ್ತಿರುವಾಗ ಅನುವಾದದ ಸ್ವಾಭಾವಿಕತ್ವವನ್ನು ಪರೀಕ್ಷಿಸುವುದು ಕಷ್ಟಕರವಾಗಿರುತ್ತದೆ. ಆದರೆ ನಿಮ್ಮ ಜನರು ಭಾಷೆಯನ್ನು ಕೇಳಿದಾಗ, ಅದು ಸರಿಯಾಗಿದ್ದೆಯೋ ಇಲ್ಲವೋ ಎಂದು ಅವರು ತಕ್ಷಣವೇ ತಿಳಿಯುತ್ತಾರೆ.
ಲಕ್ಷ್ಯ ಭಾಷೆಯನ್ನು ಮಾತಾಡುವ ಮೊತ್ತೊಬ್ಬ ವ್ಯಕ್ತಿಗೆ ಅಥವಾ ಜನರ ಗುಂಪಿಗೆ ಅದನ್ನು ನೀವು ಗಟ್ಟಿಯಾಗಿ ಓದಿ ಹೇಳಬಹುದು. ನೀವು ಅದನ್ನು ಓದುವುದಕ್ಕೆ ಪ್ರಾರಂಭಿಸುವುದಕ್ಕಿಂತ ಮೊದಲು, ನಿಮ್ಮ ಭಾಷೆಯ ಸಮುದಾಯದಲ್ಲಿ ಕೇಳದಿರುವ ಮಾತುಗಳನ್ನು ಅವರು ಕೇಳಿಸಿಕೊಂಡಾಗ ನೀವು ಓದುವುದನ್ನು ನಿಲ್ಲಿಸುವಂತೆ ಅದನ್ನು ಕೇಳುತ್ತಿರುವ ಜನರಿಗೆ ಸೂಚಿಸಿರಿ. ಯಾರಾದರು ನಿಮ್ಮನ್ನು ನಿಲ್ಲಿಸಿದರೆ, ಆ ಸಂಗತಿಯನ್ನು ಇನ್ನು ಸ್ವಾಭಾವಿಕವಾಗಿ ಯಾವ ರೀತಿಯಲ್ಲಿ ಹೇಳಬಹುದೆಂದು ನೀವು ಒಟ್ಟಿಗೆ ಚರ್ಚೆ ಮಾಡಬಹುದು.
ಅನುವಾದ ಕುರಿತು ಮಾತಾಡುತ್ತಿರುವಾಗ, ನಿಮ್ಮ ಗ್ರಾಮದಲ್ಲಿ ಇದೆ ರೀತಿಯದ ಸಂದರ್ಭದಲ್ಲಿ ಯಾವ ರೀತಿಯಲ್ಲಿ ಮಾತಾಡುತ್ತಾರೆಂದು ಒಂದು ಸನ್ನಿವೇಶವನ್ನು ನೆನಪು ಮಾಡಿಕೊಳ್ಳುವುದು ಸಹಾಯಕರವಾಗಿರುತ್ತದೆ. ಆ ವಿಷಯವನ್ನು ಕುರಿತು ನಿಮಗೆ ತಿಳಿದಿರುವ ಜನರು ಹೇಗೆ ಮಾತಾಡುತ್ತಾರೆಂದು ಊಹಿಸಿಕೊಳ್ಳಿ ಮತ್ತು ಗಟ್ಟಿಯಾಗಿ ಅದೇ ರೀತಿಯಲ್ಲಿ ಹೇಳಿ. ಆ ರೀತಿಯಲ್ಲಿ ಹೇಳಿರುವುದು ಒಳ್ಳೆಯದೆಂದು ಮತ್ತು ಸ್ವಾಭಾವಿಕವಾದ ರೀತಿಯೆಂದು ಬೇರೆಯವರು ಅಂಗೀಕರಿಸಿದರೆ, ಅನುವಾದವನ್ನು ಆ ರೀತಿಯಲ್ಲೇ ಮಾಡಿರಿ.
ಅನುವಾದ ಭಾಗವನ್ನು ಹಲವಾರು ಬಾರಿ ಓದುವುದು ಅಥವಾ ನುಡಿಸುವುದು ಸಹ ಸಹಾಯಕರವಾಗಿರುತ್ತದೆ. ಅವರು ಕೇಳುತ್ತಿರುವ ಪ್ರತಿಯೊಂದು ಬಾರಿ ಅದರಲ್ಲಿ ಅವರು ವ್ಯತ್ಯಾಸವನ್ನು ಕಾಣಬಹುದು – ಆ ಸಂಗತಿಗಳನ್ನು ಇನ್ನು ಸ್ವಾಭಾವಿಕವಾಗಿ ಹೇಳಬಹುದು.
ಹೊಸ ಅನುವಾದವನ್ನು ನೀವು ಓದುತ್ತಿರುವಾಗ, ಈ ಪ್ರಶ್ನೆಗಳನ್ನು ನಿಮಗೆ ನೀವೇ ಕೇಳಿಕೊಳ್ಳಿರಿ. ಇದರಿಂದ ಭಾಷೆಯ ಸಮುದಾಯಕ್ಕೆ ಅಂಗೀಕೃತ ಶೈಲಿಯಲ್ಲಿ ಅನುವಾದ ಮಾಡಿದ್ದಾರೋ ಇಲ್ಲವೋ ಎಂದು ತಿಳಿದುಕೊಳ್ಳುವುದಕ್ಕೆ ಈ ಪ್ರಶ್ನೆಗಳು ಸಹಾಯ ಮಾಡುತ್ತವೆ.
ಅನುವಾದವು ತಪ್ಪಾದ ಶೈಲಿಯಲ್ಲಿ ಭಾಷೆಯನ್ನು ಉಪಯೋಗಿಸುವುದಾದರೆ, ಅದರ ಬಗ್ಗೆ ಗಮನ ಹರಿಸಿ, ಅದನ್ನು ಎತ್ತಿ ಹಿಡಿಯಿರಿ. ಇದರಿಂದ ನೀವು ಅದರ ಕುರಿತಾಗಿ ಅನುವಾದ ತಂಡದೊಂದಿಗೆ ಚರ್ಚೆ ಮಾಡಬಹುದು.
ಸಮುದಾಯ ಪರಿಶೀಲಕರ ಕೆಲಸಕ್ಕಾಗಿ ಇದನ್ನು ಪರಿಶೀಲನೆ ಮಾಡುವ ಪಟ್ಟಿಯಂತೆ ಈ ಪುಟವನ್ನು ನೀವು ಉಪಯೋಗಿಸಬಹುದು, ಮತ್ತು ಇದನ್ನು ನೀವು ಮುದ್ರಿಸಬಹುದು, ಆ ಪರೀಶೀಲನ ಪಟ್ಟಿಯನ್ನು ಅನುವಾದದ ತಂಡ ಮತ್ತು ಸಮುದಾಯದ ನಾಯಕರು ತುಂಬತಕ್ಕದ್ದು , ಮತ್ತು ಈ ಅನುವಾದಕ್ಕಾಗಿ ಉಪಯೋಗಿಸಿದ ಪರಿಶೀಲನೆ ಪದ್ಧತಿ ದಾಖಲಾತಿಯಾಗಿಯೂ ಇದನ್ನು ಇಟ್ಟುಕೊಳ್ಳಬಹುದು.
ಅನುವಾದ ತಂಡದ ಸದಸ್ಯರಾಗಿರುವ ನಾವು ಭಾಷೆಯ ಸಮುದಾಯ ಸದಸ್ಯರೊಂದಿಗೆ ________ ಅನುವಾದವನ್ನು ಪರಿಶೀಲನೆ ಮಾಡಿದ್ದೇವೆಂದು ಅನುಮೋದನೆ ಮಾಡಬಹುದು.
ದಯೆವಿಟ್ಟು ಕೆಳಗಿನ ಪ್ರಶ್ನೆಗಳಿಗೆ ಉತ್ತರ ನೀಡಿ. ಈ ಪ್ರಶ್ನೆಗಳಿಗೆ ಉತ್ತರಗಳನ್ನು ಕೊಡುವುದರ ಮೂಲಕ ಕ್ರೈಸ್ತ ಸಮುದಾಯದಲ್ಲಿರುವವರಿಗೆ ವ್ಯಾಪಕ ಮಟ್ಟಿಗೆ ಸಹಾಯ ಮಾಡುವವರಾಗಿರುತ್ತೇವೆ, ಇದರ ಮೂಲಕ ಅನುವಾದ ಮಾಡುವ ಭಾಷೆಯ ಸಮುದಾಯದ ಜನರು ಅನುವಾದವು ಸ್ಪಷ್ಟವಾಗಿದೆ, ನಿಖರತೆಯಾಗಿದೆ, ಮತ್ತು ಸ್ವಾಭಾವಿಕವಾಗಿದೆಯೆಂದು ತಿಳಿದುಕೊಳ್ಳುವರು.
ಈ ಅನುವಾದವು ಸ್ಥಳೀಯ ಸಮುದಾಯಕ್ಕೆ ಎಷ್ಟರ ಮಟ್ಟಿಗೆ ಸ್ವೀಕೃತವಾಗಿದೆಯೆನ್ನುವದರ ಕುರಿತಾಗಿ ಸಾರಾಂಶ ವ್ಯಾಖ್ಯೆಯನ್ನು ಮಾಡುವುದಕ್ಕೆ ಸಮುದಾಯದ ನಾಯಕರು ತಮ್ಮ ಸ್ವಂತ ಮಾಹಿತಿಯನ್ನು ಸೇರಿಸುವುದಕ್ಕೆ ಇಷ್ಟಪಡಬಹುದು. ಬೃಹತ್ ಸಭೆಯ ನಾಯಕತ್ವಕ್ಕೆ ಈ ಮಾಹಿತಿಯು ಲಭ್ಯದಲ್ಲಿರಬೇಕು. ಮತ್ತು ಇದಕ್ಕೆ ಮುಂಚಿತವಾಗಿಯೇ ಮಾಡಿರುವ ಪರಿಶೀಲನೆ ಪದ್ಧತಿಯಲ್ಲಿ ನಿಶ್ಚಿತತೆಯನ್ನು ಹೊಂದಿಕೊಳ್ಳುವುದಕ್ಕೆ ಮತ್ತು ಅವುಗಳನ್ನು ಅರ್ಥಮಾಡಿಕೊಳ್ಳುವುದಕ್ಕೆ ಇದು ಅವರಿಗೆ ಸಹಾಯಕವಾಗಿರುವುದು. ಅವರು ನಿಖರತೆಯ ಪರಿಶೀಲನೆಯನ್ನು ಮಾಡುವಾಗ ಮತ್ತು ಕೊನೆಯ ಕ್ರಮಬದ್ಧವಾದ ಪರಿಶೀಲನೆ ಮಾಡುವಾಗ ಸ್ಥಳೀಯ ಕ್ರೈಸ್ತ ಸಮುದಾಯದಿಂದ ಅನುಮೋದನೆ ಮಾಡಲ್ಪಟ್ಟಿರುವ ಅನುವಾದವನ್ನು ಮೌಲ್ಯೀಕರಿಸುವುದಕ್ಕೆ ಇದು ಅವರಿಗೆ ಸಹಾಯ ಮಾಡುತ್ತದೆ.
ಸ್ವಭಾವಿಕತೆಗೋಸ್ಕರ ಮತ್ತು ಸ್ಪಷ್ಟತೆಯಗೋಸ್ಕರ ಸಮುದಾಯದ ಸದಸ್ಯರಿಂದ ಅನುವಾದವು ಪರಿಶೀಲನೆ ಮಾಡಿದಾದನಂತರ, ನಿಖರತೆಗಾಗಿ ಆ ಅನುವಾದವು ಸಭಾ ನಾಯಕರಿಂದ ಪರಿಶೀಲನೆ ಮಾಡಲ್ಪಡುವುದು. ನಿಖರತೆಯ ಪರಿಶೀಲನೆಯನ್ನು ಮಾಡುವ ಸಭಾ ನಾಯಕರಿಗೆ ಈ ಕೆಳಗಿನಂತೆ ಮಾರ್ಗಸೂಚಿಗಳು ಇರುತ್ತವೆ. ಅವರು ಅನುವಾದ ಮಾಡಲ್ಪಟ್ಟ ಭಾಷೆಯನ್ನು ತಿಳಿದವರಾಗಿರಬೇಕು ಅಥವಾ ಮಾತೃ ಭಾಷೆಯನ್ನಾಡುವವರಾಗಿರಬೇಕು ಮತ್ತು ಮೂಲ ಭಾಷೆಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುವವರಾಗಿರಬೇಕು. ಇವರು ಅನುವಾದ ಮಾಡಿದವರಾಗಿರಬಾರದು, ಅಂದರೆ ಅನುವಾದ ಮಾಡಿದವರು ಪರಿಶೀಲಕರು ಒಬ್ಬರೇ ಆಗಿರಬಾರದು. ಅವರು ಸತ್ಯವೇದವನ್ನು ಚೆನ್ನಾಗಿ ಅರಿತ ಸಭಾ ನಾಯಕರಾಗಿರಬೇಕು. ಸಹಜವಾಗಿ ಈ ಪುನಪರಿಶೀಲಕರೆಲ್ಲರು ಸಭಾಪಾಲಕರಾಗಿರುತ್ತಾರೆ. ಈ ಸಭಾ ನಾಯಕರು ಸಾಧ್ಯವಾದಷ್ಟು ಮಟ್ಟಿಗೆ ಭಾಷೆಯ ಸಮುದಾಯದಲ್ಲಿ ವಿಭಿನ್ನವಾದ ಸಭೆಯ ಸಂಬಂಧಗಳನ್ನು ತಿಳಿಸಬೇಕಾಗಿರುತ್ತದೆ.
ಈ ಪುನಪರಿಶೀಲಕರು ಈ ಕೆಳಗಿನ ನಿಯಮಗಳನ್ನು ಅನುಸರಿಸಬೇಕು:
ಹೊಸ ಅನುವಾದವು ನಿಖರವಾಗಿದೆಯೋ ಇಲ್ಲವೋ ಎಂದು ನೋಡುವುದು ತುಂಬಾ ಪ್ರಾಮುಖ್ಯವಾದ ವಿಷಯ. ಮೂಲ ಭಾಷೆಯಲ್ಲಿ ಇರುವ ಅರ್ಥವನ್ನೇ ಅನುವಾದದಲ್ಲಿ ಉಪಯೋಗಿಸಿರುವದಾದರೆ ಆ ಅನುವಾದವು ನಿಖರತೆಯಾಗಿದೆಯೆಂದರ್ಥ. ಬೇರೊಂದು ಮಾತುಗಳಲ್ಲಿ ಹೇಳಬೇಕಾದರೆ, ಮೂಲ ರಚನಾಕಾರರು ಉದ್ದೇಶಿಸಿ ಹೇಳಬೇಕಾದ ಸಂದೇಶವನ್ನೇ ನಿಖರತೆಯ ಅನುವಾದವು ಕೂಡ ಅದೇ ಸಂದೇಶವನ್ನೇ ಹೇಳಿರುತ್ತದೆ. ಅನುವಾದದಲ್ಲಿ ಹೆಚ್ಚಿನ ಪದಗಳು ಬಳಸುವದರಿಂದಲೂ ಅಥವಾ ಕಡಿಮೆ ಪದಗಳು ಬಳಸುವದರಿಂದಲೂ ಅಥವಾ ಬೇರೊಂದು ಕ್ರಮದಲ್ಲಿ ಆಲೋಚನೆಗಳನ್ನು ಇಡುವುದರಿಂದಲೂ ಅದು ನಿಖರತವಾಗಿರಲು ಸಾಧ್ಯವಿದೆ. ಅನುವಾದ ಮಾಡಬೇಕಾದ ಭಾಷೆಯಲ್ಲಿ ಸ್ಪಷ್ಟವಾಗಿ ಮೂಲ ಸಂದೇಶವನ್ನು ತಿಳಿಸುವ ಕ್ರಮದಲ್ಲಿ ಇದು ಅನೇಕಬಾರಿ ತುಂಬ ಅವಶ್ಯಕವಾಗಿರುತ್ತದೆ.
ಅನುವಾದ ತಂಡದ ಸದಸ್ಯರೆಲ್ಲರೂ ಒಬ್ಬರಿಗೊಬ್ಬರು ಮೌಖಿಕ ಪಾಲುದಾರ ಪರಿಶೀಲನೆಯಲ್ಲಿ ಅನುವಾದವನ್ನು ನಿಖರತೆಗಾಗಿ ಪರಿಶೀಲನೆ ಮಾಡಿದಾಗ್ಯೂ, ಅನೇಕ ಜನರಿಂದ, ವಿಶೇಷವಾಗಿ ಸಭಾಪಾಲಕರಿಂದ ಮತ್ತು ಸಭೆಯ ನಾಯಕರುಗಳಿಂದ ಪರಿಶೀಲನೆ ಮಾಡಲ್ಪಡುವಾಗ ಆ ಅನುವಾದವನ್ನು ಇನ್ನೂ ಹೆಚ್ಚಾಗಿ ಉತ್ತಮವಾಗಿರಲು ಸಾಧ್ಯವಾಗುತ್ತದೆ, ಪ್ರತಿಯೊಂದು ವಾಕ್ಯಭಾಗವನ್ನು ಅಥವಾ ಪುಸ್ತಕವನ್ನು ಒಬ್ಬ ಸಭಾ ನಾಯಕನಿಂದ ಪರಿಶೀಲನೆ ಮಾಡಿಸಬಹುದು, ಅಥವಾ, ಅನೇಕಮಂದಿ ನಾಯಕರು ಲಭ್ಯವಿರುವದಾದರೆ, ಪ್ರತಿಯೊಂದು ವಾಕ್ಯಭಾಗವನ್ನು ಅಥವಾ ಪುಸ್ತಕವನ್ನು ಅನೇಕಮಂದಿ ಸಭಾ ನಾಯಕರುಗಳಿಂದ ಪರಿಶೀಲನೆ ಮಾಡಿಸಬಹುದು. ಒಬ್ಬ ವ್ಯಕ್ತಿಗಿಂತಲೂ ಹೆಚ್ಚಾದ ಜನರು ಒಂದು ಕಥೆಯನ್ನು ಅಥವಾ ಒಂದು ವಾಕ್ಯಭಾಗವನ್ನು ಪರಿಶೀಲನೆ ಮಾಡಿದಾಗ ಅದು ತುಂಬಾ ಸಹಾಯಕರವಾಗಿರುತ್ತದೆ, ಯಾಕಂದರೆ ಅನೇಕಬಾರಿ ಬೇರೆ ಬೇರೆ ಜನರು ಬೇರೆ ಬೇರೆ ವಿಷಯಗಳನ್ನು ಕಂಡುಹಿಡಿಯುತ್ತಾರೆ.
ನಿಖರತೆಯ ಪರಿಶೀಲನೆಯನ್ನು ಮಾಡುವ ಸಭೆಯ ನಾಯಕರು ಅನುವಾದ ಭಾಷೆಯನ್ನು ಮಾತನಾಡುವವರಾಗಿರಬೇಕು, ಆ ಸಮುದಾಯದಲ್ಲಿ ಗೌರವವನ್ನು ಪಡೆದಿರುವವರಾಗಿರಬೇಕು, ಮತ್ತು ಅವರ ಭಾಷೆಯಲ್ಲಿ ಸತ್ಯವೇದದ ಕುರಿತಾಗಿ ಚೆನ್ನಾಗಿ ಗೊತ್ತಿರಬೇಕು .ವಾಕ್ಯಭಾಗವನ್ನಾಗಲಿ ಅಥವಾ ಪುಸ್ತಕವನ್ನಾಗಲಿ ಅನುವಾದ ಮಾಡಿದವರು ಮತ್ತು ಪರಿಶೀಲನೆ ಮಾಡುವವರು ಒಂದೇಯಾಗಿರಬಾರದು. ಅನುವಾದ ತಂಡಕ್ಕೆ ಸಹಾಯಕರಾಗಿರುವ ನಿಖರತೆಯ ಪರಿಶೀಲಕರು ಮೂಲ ರಚನೆಯಲ್ಲಿರುವುದೇ ಅನುವಾದವು ಕೂಡ ಹೇಳುತ್ತಿದೆಯೆಂದು ಮತ್ತು ಮೂಲ ಸಂದೇಶದಲ್ಲಿರದ ವಿಷಯಗಳು ಯೂವುದೇ ಸೇರಿಸಲ್ಪಟ್ಟಿಲ್ಲವೆಂದು ಧೃಡೀಕರಣೆ ಮಾಡಬೇಕು. ಏನೇಯಾಗಲಿ, ನಿಖರತೆಯ ಅನುವಾದಗಳು ಕೂಡ [ಸ್ಪಷ್ಟತೆಯ ಮಾಹಿತಿಯನ್ನು] ಒಳಗೊಂಡಿರಬೇಕೆಂದು ಮನಸ್ಸಿನಲ್ಲಿಟ್ಟುಕೊಂಡಿರಬೇಕು (../../translate/figs-explicit/01.md).
ಭಾಷೆಯ ಸಮುದಾಯ ಪರಿಶೀಲನೆ ಮಾಡುವ ಭಾಷೆಯ ಸಮುದಾಯ ಸದಸ್ಯರು ಅನುವಾದವನ್ನು ಪರಿಶೀಲನೆ ಮಾಡುವಾಗ ಸಹಜ ಅನುವಾದಕ್ಕಾಗಿ ಮತ್ತು ಸ್ಪಷ್ಟತೆಗೋಸ್ಕರ ಖಂಡಿತವಾಗಿ ಮೂಲ ವಾಕ್ಯಗಳನ್ನು ನೋಡಬಾರದು. ಆದರೆ ನಿಖರತೆಯ ಪರೀಕ್ಷೆಗೋಸ್ಕರ, ನಿಖರತೆಯ ಪರಿಶೀಲಕರು ತಪ್ಪದೇ ಮೂಲ ವಾಕ್ಯಗಳನ್ನು ನೋಡಲೇಬೇಕು, ಇದರಿಂದ ಅವರು ಹೊಸ ಅನುವಾದದೊಂದಿಗೆ ಹೋಲಿಸಿಕೊಳ್ಳಬಹುದು.
ಸಭೆಯ ನಾಯಕರು ಮಾಡುವ ನಿಖರತೆಯ ಪರಿಶೀಲನೆಯು ಈ ಕೆಳಗಿನ ಹಂತಗಳನ್ನು ಪರಿಶೀಲನೆ ಮಾಡಬೇಕು:
ನೀವು ಅರ್ಥಮಾಡಿಕೊಳ್ಳುವ ಯಾವುದೇ ಭಾಷೆಯಲ್ಲಿನ ಅನೇಕ ವಿಧವಾದ ಅನುವಾದಗಳನ್ನು ಓದಿರಿ. ಯುಎಲ್.ಟಿ ಮತ್ತು ಯುಎಸ್.ಟಿಗಳಲ್ಲಿನ ಭಾಗಗಳನ್ನು ಓದಿರಿ, ಅದರ ಜೊತೆಯಲ್ಲಿ ಅನುವಾದದ ಪದಗಳನ್ನು ಮತ್ತು ವಿಷಯದ ಅಂಶಗಳನ್ನು ಓದಿರಿ. ನೀವು ಇವುಗಳನ್ನು ಟ್ರಾನ್ಸ್.ಲೇಶನ್ ಸ್ಟುಡಿಯೋನಲ್ಲಿ ಅಥವಾ ಬೈಬಲ್ ವೀವರ್.ನಲ್ಲಿ ಇವುಗಳನ್ನು ಓದಿರಿ.
ಅನುವಾದದಲ್ಲಿ ಅನಿಖರತೆಯು ಏನಾದರೂ ಇದ್ದರೆ ಅದನ್ನು ಕಂಡುಕೊಳ್ಳುವುದಕ್ಕೋಸ್ಕರ ಈ ಪ್ರಶ್ನೆಗಳು ಕೂಡ ತುಂಬಾ ಸಹಾಯಕರವಾಗಿರುತ್ತವೆ:
ಇನ್ನಿತರ ಹೆಚ್ಚಿನ ಅಂಶಗಳನ್ನು ಪರಿಶೀಲನೆ ಮಾಡಬೇಕಾದರೆ, ಪರಿಶೀಲನೆ ಮಾಡುವುದಕ್ಕೆ ಇನ್ನಿತರ ಅಂಶಗಳು ಎನ್ನುವದನ್ನು ನೋಡಿರಿ.
ನಮ್ಮ ಭಾಷೆಯ ಸಮುದಾಯದಲ್ಲಿ ಸಭಾ ನಾಯಕರುಗಳಾಗಿರುವ ನಾವು ಈ ಕೆಳಗಿನವುಗಳನ್ನು ಅನುಮೋದನೆ ಮಾಡುತ್ತಿದ್ದೇವೆ :
5.
12 ಇನ್ನೂ ಏನಾದರೂ ಸಮಸ್ಯೆಗಳು ಉಳಿದುಕೊಂಡಿದ್ದರೆ, ಕ್ರಮಬದ್ಧೀದ್ಧ ಪರಿಶೀಲಕರ ಗಮನಕ್ಕೋಸ್ಕರ ಅವುಗಳನ್ನು ಇಲ್ಲಿ ಬರೆಯಿರಿ.
ನಿಖರತೆಯ ಪರಿಶೀಲಕರ ಹೆಸರುಗಳು ಮತ್ತು ಸ್ಥಾನಗಳು :
ಭಾಷೆಯ ಸಮುದಾಯದಲ್ಲಿರುವ ಸಭೆಯ ನಾಯಕರಿಂದ ಆಯ್ಕೆ ಮಾಡಲ್ಪಟ್ಟ ಜನರಿಂದ ಕ್ರಮಬದ್ಧವಾದ ಪರಿಶೀಲನೆಯು ನಡೆಸಲ್ಪಡುವದು. ಈ ಜನರು ಭಾಷಾಂತರ ಮಾಡುವ ಭಾಷೆಯನ್ನು ಮಾತನಾಡುವವರಾಗಿರುತ್ತಾರೆ, ಇವರು ಬೈಬಲಿನ ಕುರಿತು ಜ್ಞಾನವಿದ್ದವರಾಗಿ ಅಭಿಪ್ರಾಯಗಳು ಸಭಾ ನಾಯಕರಿಂದ ಗೌರವಿಸಲ್ಪಡುತ್ತವೆ. ಸಾಧ್ಯವಾದಲ್ಲಿ, ಅವರು ವಾಕ್ಯಾನುಸಾರವಾದ ಭಾಷೆಗಳಲ್ಲಿ, ವಿಷಯಗಳಲ್ಲಿ ಮತ್ತು ಅನುವಾದದ ನಿಯಮಗಳಲ್ಲಿ ತರಬೇತಿ ಹೊಂದಿದವರಾಗಿರಬೇಕು . ಯಾವಾಗ ಈ ಜನರು ಅನುವಾದವನ್ನು ಅನುಮೋದಿಸುವರೋ ಆಗ ಸಭಾ ನಾಯಕರು ಆ ಗ್ರಂಥ ಜನರ ಮಧ್ಯೆದಲ್ಲಿ ಉಪಯೋಗಿಸುವ ಹಾಗೆ ಅದನ್ನು ವಿತರಣೆ ಮಾಡುವುದಕ್ಕಾಗಿ ಅನುಮತಿ ಕೊಡುವರು ಮತ್ತು
ಈ ಜನರು ಭಾಷೆಯ ಸಮುದಾಯದಲ್ಲಿರದಿದ್ದರೆ, ಅನುವಾದ ತಂಡವು ಅನುವಾದ ಹಿನ್ನೆಲೆಯನ್ನು ಸಿದ್ಧಗೊಳಿಸುತ್ತದೆ. ಇದರಿಂದ ಭಾಷೆಯ ಸಮುದಾಯದ ಹೊರಗಿರಿವ ಬೈಬಲ್ ತಜ್ಞರು ಕ್ರಮಬದ್ಧವಾದ ಪರಿಶೀಲನೆಯನ್ನು ಮಾಡುವರು.
ಕ್ರಮಬದ್ಧವಾದ ಪರಿಶೀಲನೆ ಮಾಡುವವರು ಮುಂಚಿತವಾಗಿ ನಿಖರತೆ ಪರಿಶೀಲನೆ ಮಾಡಿದವರಾಗಿರಬಾರದು. ಕ್ರಮಬದ್ಧವಾದ ಪರಿಶೀಲನೆ ಕೂಡ ನಿಖರತೆ ಪರಿಶೀಲನೆಯ ಹಾಗೆಯೇ ಇರುತ್ತದೆ, ಈ ಎರಡು ವಿಭಿನ್ನವಾದ ಪರಿಶೀಲನೆಗಳನ್ನು ಇತರ ಜನರು ಮಾಡಿದಾಗ ಅನುವಾದ ಹೆಚ್ಹಿನ ಮಟ್ಟಿಗೆ ಪ್ರಯೋಜನವು ಉಂಟಾಗುವುದು.
ಕ್ರಮಬದ್ಧವಾದ ಪರಿಶೀಲನೆಯ ಉದ್ದೇಶವು ಏನಂದರೆ ಮೂಲ ಬೈಬಲ್ ಲೇಖನ ಭಾಗಗಳ ಸಂದೇಶವು ಅನುವಾದದಲ್ಲಿ ನಿಖರತೆಯಾಗಿ ಇದೆಯೋ ಇಲ್ಲವೋ ಎಂದು ನಿಶ್ಚಯಪಡಿಸಿಕೊಳ್ಳುವುದಾಗಿರುತ್ತದೆ ಮತ್ತು ಪ್ರಪಂಚದಾದ್ಯಂತ ಇತಿಹಾಸದ ಮೂಲಕ ಸಭೆಯ ಸಿದ್ಧಾಂತದ ವಿಷಯದಲ್ಲಿ ಪ್ರಭಾವವನ್ನು ಬೀರುತ್ತದೆ. ಕ್ರಮಬದ್ಧವಾದ ಪರಿಶೀಲನೆ ಮಾಡಿದಾದನಂತರ, ಭಾಷಾಂತರ ಮಾಡುವ ಭಾಷೆಯನ್ನು ಮಾತನಾಡುವ ಸಭೆಯ ನಾಯಕರು ಆ ಅನುವಾದವು ತಮ್ಮ ಜನರಿಗಾಗಿ ನಂಬತಕ್ಕದ್ದಾಗಿದೆಯೆಂದು ಅನುಮೋದನೆ ಮಾಡುತ್ತಾರೆ.
ಭಾಷೆಯ ಸಮುದಾಯದಲ್ಲಿ ಪ್ರತಿಯೊಂದು ಸಭೆಯ ಗುಂಪಿನಿಂದ ನಾಯಕರು ಕ್ರಮಬದ್ಧವಾದ ಪರಿಶೀಲನೆ ಮಾಡುವ ಕೆಲವೊಂದು ಜನರನ್ನು ಈ ಗುಂಪಿನಿಂದ ಆಯ್ಕೆ ಮಾಡಿಕೊಳ್ಳುವುದು ಇನ್ನೂ ಉತ್ತಮ. ಆ ವಿಧಾನದಲ್ಲಿ, ಸಭೆಯ ನಾಯಕರೆಲ್ಲರೂ ಅನುವಾದ ಯೋಗ್ಯವಾಗಿದೆ ಮತ್ತು ಸಮುದಾಯದ ಸಭೆಗಳೆಲ್ಲರಿಗೆ ಉಪಯೋಗಕರವಾಗಿದೆಯೆಂದು ಅನುಮೋದನೆ ಮಾಡುವವರಾಗಿರಬೇಕು.
ಕ್ರಮಬದ್ಧವಾದ ಪರಿಶೀಲನೆಗಾಗಿ ನಾವು ಶಿಫಾರಸು ಮಾಡುವ ಉಪಕರಣ ಯಾವುದೆಂದರೆ ಜೋಡಣೆ ಮಾಡುವ ಉಪಕರಣ. ಹೆಚ್ಚಿನ ಸಂಗತಿಗಳಿಗಾಗಿ , [ಜೋಡಣೆಮಾಡುವ ಉಪಕರಣ]ಕ್ಕೆ ನೋಡಿರಿ (../alignment-tool/01.md).
ಪರಿಶೀಲನೆ ಮಾಡುವುದಕ್ಕೆ ವಿವಿಧ ವಿಧಾನಗಳನ್ನು ಹೆಚ್ಚಿನ ಮಟ್ಟಿಗೆ ಕಲಿತುಕೊಳ್ಳುವುದಕ್ಕೆ, [ಪರಿಶೀಲನೆ ಮಾಡಲು ಅನೇಕ ವಿಧಾನಗಳು] ನೋಡಿರಿ (../vol2-things-to-check/01.md).
ಕ್ರಮಬದ್ಧವಾದ ಪರಿಶೀಲನೆಯೊಂದಿಗೆ ಮುಂದುವರಿಯಬೇಕಾದರೆ, [ಕ್ರಮಬದ್ಧವಾದ ಪರಿಶೀಲನೆಗೆ ಹಂತಗಳು] ನೋಡಿರಿ (../vol2-steps/01.md).
ಕ್ರಮಬದ್ಧ ಪರಿಶೀಲನೆಯ ಮಾಡುವಾಗ ಸಭೆಯ ಪ್ರತಿನಿಧಿಗಳು ಈ ಹಂತಗಳನ್ನು ಅನುಸರಿಸಬೇಕು. ಪರೀಕ್ಷಕನು, ಅನುವಾದಕನಿಗು ಅಥವ ಅನುವಾದ ತಂಡಕ್ಕು ನೇರ ಸಂಪರ್ಕ ಹೊಂದಿದ್ದಾನೆ ಎಂದು ಈ ಎಲ್ಲಾ ಹಂತಗಳು ಊಹಿಸುತ್ತದೆ, ಮತ್ತು ಆತನು ಮುಖಮುಖಿಯಾಗಿ ಪ್ರಶ್ನೆಗಳನ್ನು ಕೇಳಬಹುದು ಯಾಕಂದರೆ ಪರೀಕ್ಷಕ ಮತ್ತು ಅನುವಾದ ತಂಡವು ಒಟ್ಟಾಗಿ ಪರಿಶೀಲಿಸುತ್ತದೆ. ಇದು ಸಾಧ್ಯವಾಗದಿದ್ದರೆ, ಪರೀಕ್ಷಕನು ವಿಮರ್ಶೆಗಾಗಿ ಅನುವಾದ ತಂಡಕ್ಕೆ ಪ್ರಶ್ನೆಗಳನ್ನು ಬರೆಯಬಹುದು. ಇದು ಮುದ್ರಿತ ಅನುವಾದ ಕರಡು ಪ್ರತಿಯ ಅಂಚಿನಲ್ಲಿರಬಹುದು, ಅಥವಾ ಸ್ಪ್ರೆಡ್ ಶೀಟಲ್ಲಿರಬಹುದು ಅಥವಾ ಮೂಲ ಅನುವಾದದ ಹೇಳಿಕೆ ವೈಶಿಷ್ಟ್ಯವನ್ನು ಬಳಸಬಹುದು.
ನೀವು ಉದ್ದೇಶಿತ ಭಾಷೆಯನ್ನು ಮಾತನಾಡುವವರಾಗಿದ್ದರೆ, ನೀವು ಅನುವಾದವನ್ನು ಕೇಳಬಹುದು ಅಥವ ಓದಬಹುದು ಮತ್ತು ಅದರ ಬಗ್ಗೆ ನೇರವಾಗಿ ಅನುವಾದ ತಂಡವನ್ನು ಕೇಳಬಹುದು.
ನೀವು ಉದ್ದೇಶಿತ ಭಾಷೆಯನ್ನು ಮಾತನಾಡದಿದ್ದರೆ, ನೀವು ಅದನ್ನು ಹೊಂದಿಸಲು ಸಾಧ್ಯವಾಗುವುದಿಲ್ಲ. ಆದರೆ ನೀವು ಗೇಟ್ ವೇ ಭಾಷೆಯನ್ನು ಮಾತನಾಡುವ ಸತ್ಯವೇದದ ವಿದ್ವಾಂಸರಾಗಿರಬಹುದು ಮತ್ತು ಅನುವಾದ ತಂಡಕ್ಕೆ ಅನುವಾದವನ್ನು ಸುಧಾರಿಸಲು ನೀವು ಸಹಾಯ ಮಾಡಬಹುದು. ಅಂತಹ ಸಂದರ್ಭದಲ್ಲಿ, ನೀವು ಗೇಟ್ ವೇ ಭಾಷೆಯಲ್ಲಿ ಹಿಂದಿನ ಅನುವಾದದಿಂದ ಕೆಲಸ ಮಾಡಬೇಕಾಗುತ್ತದೆ. ಇದನ್ನು ಅನುವಾದದಿಂದ ಪ್ರತ್ಯೇಕವಾಗಿ ಬರೆಯಬಹುದು, ಅಥವಾ ಇದನ್ನು ಸಾಲುಗಳ ನಡುವೆ ಬರೆಯಬಹುದು, ಅಂದರೆ, ಅನುವಾದದ ಪ್ರತಿಯೊಂದು ಸಾಲಿನ ಅಡಿಯಲ್ಲಿ ಹಿಂದಿನ ಅನುವಾದದ ರೇಖೆಯೊಂದಿಗೆ ಬರಯಬಹುದು. ಸಾಲುಗಳ ನಡುವೆ ಬರೆಯುವಾಗ ಅನುವಾದವನ್ನು ಹಿಂದಿನ ಅನುವಾದೊಂದಿಗೆ ಹೋಲಿಸುವುದು ಸುಲಭ, ಮತ್ತು ಪ್ರತ್ಯೇಕವಾಗಿ ಬರೆಯಲಾದ ಹಿಂದಿನ ಅನುವಾದವನ್ನು ಓದುವುದು ಸುಲಭ. ಪ್ರತಿಯೊಂದು ವಿಧಾನವು ತನ್ನದೇ ಆದ ಶಕ್ತಿಯನ್ನು ಹೊಂದಿದೆ. ಹಿಂದಿನ ಅನುವಾದವನ್ನು ಮಾಡುವ ವ್ಯಕ್ತಿಯು ಅನುವಾದವನ್ನು ಮಾಡುವಲ್ಲಿ ಭಾಗಿಯಾಗದ ವ್ಯಕ್ತಿಯಾಗಿರಬೇಕು. ಹೆಚ್ಚಿನ ವಿವರಗಳಿಗಾಗಿ ಹಿಂದಿನ ಅನುವಾದ ನೋಡಿರಿ.
ಅನುವಾದಕರೊಂದಿಗೆ ಭೇಟಿಯಾಗುವ ಮೊದಲು ಹಿಂದಿನ ಅನುವಾದವನ್ನು ಪರಿಶೀಲಿಸಲು ನಿಮಗೆ ಸಾಧ್ಯವಾಗದಿದ್ದರೆ, ನೀವು ಒಟ್ಟಿಗೆ ಕೆಲಸಮಾಡುವಾಗ ಪ್ರಶ್ನೆಗಳು ಮತ್ತು ಸಮಸ್ಯೆಗಳ ಕುರಿತು ಚರ್ಚಿಸಿರಿ ನಂತರ ನೀವು ಅನುವಾದಕರೊಂದಿಕೆ ಕೆಲಸ ಮಾಡಿರಿ. ಆಗಾಗ್ಗೆ ಅನುವಾದವನ್ನು ಹಿಂದಿನ ಅನುವಾದಕ್ಕೆ ಹೋಲಿಸುವಾಗ ಅನುವಾದಕನು ಅನುವಾದದ ಸಮಸ್ಯೆಗಳನ್ನು ಸಹ ಕಂಡುಕೊಳ್ಳುತ್ತಾನೆ.
ಯಾವುದೇ ಹಿಂದಿನ ಲಿಖಿತ ಅನುವಾದವಿಲ್ಲದಿದ್ದರೆ, ಉದ್ದೇಶಿತ ಭಾಷೆಯನ್ನು ತಿಳಿದಿರುವ ಹಾಗೆಯೇ ನೀವು ಅರ್ಥಮಾಡಿಕೊಳ್ಳುವ ಭಾಷೆಯಲ್ಲಿ ನಿಮಗಾಗಿ ಮೌಖಿಕವಾಗಿ ಹಿಂದಿನ ಅನುವಾದ ಮಾಡುವ ಹಾಗೆ ಯಾರನ್ನಾದರು ನಿಮ್ಮೊಂದಿಗೆ ಇಟ್ಟುಕೊಳ್ಳಿ. ಆ ವ್ಯಕ್ತಿಯು ಅನುವಾದ ಕಾರ್ಯದಲ್ಲಿ ಭಾಗಿಯಾಗದವನಾಗಿರಬೇಕು. ನೀವು ಮೌಖಿಕ ಹಿಂದಿನ ಅನುವಾದವನ್ನು ಕೇಳುತ್ತಿರುವಾಗ ತಪ್ಪಾದ ಅರ್ಥವನ್ನು ತಿಳಿಸುವ ಪದಗಳನ್ನು ಮತ್ತು ನಡುಗಟ್ಟುಗಳ ಟಿಪ್ಪಣಿ ಮಾಡಿ. ವ್ಯಕ್ತಿಯು ವಾಕ್ಯ ಭಾಗವನ್ನು ಸಣ್ಣ ಭಾಗಗಳಲ್ಲಿ ಭಾಷಾಂತರಿಸಬೇಕು, ಪ್ರತಿ ವಿಭಾಗಗಳ ನಡುವೆ ವಿರಾಮವಿರಬೇಕು .ಹೀಗೆ ನೀವು ಎಲ್ಲಾ ವಿಭಾಗವನ್ನು ಕೇಳಿದ ನಂತರ ಪ್ರಶ್ನೆಗಳನ್ನು ಕೇಳಬಹುದು.
ಪರಿಶೀಲನಾ ಅಧಿವೇಶನದ ನಂತರ ಕೆಲವು ಪ್ರಶ್ನೆಗಳನ್ನು ನಂತರಕ್ಕೆ ನಿಗದಿಪಡಿಸಬೇಕಾಗುತ್ತದೆ. ಈ ಪ್ರಶ್ನೆಗಳ ಉತ್ತರವನ್ನು ಚರ್ಚಿಸಲು ಮತ್ತೇ ಭೇಟಿಯಾಗಲು ಸಮಯವನ್ನು ಯೋಜಿಸಲು ಮರೆಯದಿರಿ. ಅವುಗಳು :
ಅನುವಾದ ತಂಡವು ಅನುವಾದಿಸುತ್ತಿರುವ ಸತ್ಯವೇದ ಭಾಗದಿಂದ ಪ್ರಮುಖ ಪದಗಳ ಪಟ್ಟಿಯನ್ನು (ಅನುವಾದ ಪದಗಳೆಂದು ಪರಿಗಣಿಸುವ ಪ್ರಮುಖ ಪದಗಳು) ಮತ್ತು ಪ್ರತಿಯೊಂದು ಪ್ರಮುಖ ಪದಗಳಿಗೆ ಬಳಸಲು ಅವರು ನಿರ್ಧರಿಸಿದ ಉದ್ದೇಶಿತ ಭಾಷೆಯಲ್ಲಿನ ಪದಗಳನ್ನು ಇಟ್ಟುಕೊಂಡಿದೆಯೆ ಎಂದು ಖಚಿತಪಡಿಸಿಕೊಳ್ಳಿ. ನೀವು ಮತ್ತು ಅನುವಾದ ತಂಡವು ಸತ್ಯವೇದ ಅನುವಾದ ಮುಂದುವರಿಸುವಾಗ, ಬಹುಶಃ ಉದ್ದೇಶಿತ ಭಾಷೆಯ ಪದಗಳನ್ನು ಮಾರ್ಪಡಿಸಿ ಪಟ್ಟಿಗೆ ಸೇರಿಸಬೇಕಾಗಬಹುದು. ನೀವು ಭಾಷಾಂತರಿಸುವ ವಾಕ್ಯ ಭಾಗದಲ್ಲಿ ಪ್ರಮುಖ ಪದಗಳಿದ್ದಾಗ ನಿಮ್ಮನ್ನು ಎಚ್ಚರಿಸಲು ಪ್ರಮುಖ ಪದಗಳ ಪಟ್ಟಿಯನ್ನು ಬಳಸಿ. ಸತ್ಯವೇದದಲ್ಲಿ ಪ್ರಮುಖ ಪದಗಳು ಇದ್ದಾಗೆಲ್ಲಾ, ಅನುವಾದವು ಆ ಪ್ರಮುಖ ಪದಕ್ಕಾಗಿ ಆಯ್ಕೆ ಮಾಡಲಾದ ಪದಗಳನ್ನು ಬಳಸುತ್ತಿದೆಯೆ ಎಂದು ಖಚಿತಪಡಿಸಿಕೊಳ್ಳಿ. ಪ್ರತಿ ಬಾರಿಯೂ ಅದು ಅರ್ಥಪೂರ್ಣವಾಗಿದೆಯೆ ಎಂದು ಖಚಿತಪಡಿಸಿಕೊಳ್ಳಿ. ಒಂದು ವೇಳೆ ಅದು ಅರ್ಥಪೂರ್ಣವಾಗದಿದ್ದರೆ, ಕೆಲವು ಸ್ಥಳಗಳಲ್ಲಿ ಮಾತ್ರ ಅದು ಏಕೆ ಅರ್ಥಪೂರ್ಣವಾಗಿದೆ ಎಂದು ನೀವು ಚರ್ಚಿಸಬೇಕಾಗುತ್ತದೆ. ಆಗ ನೀವು ಆಯ್ಕೆ ಮಾಡಿದ ಪದಗಳನ್ನು ಅಥವ ಬದಲಾಯಿಸಬೇಕಾಗಬಹುದು, ಅಥವ ಪ್ರಮುಖ ಪದಗಳು ಬಳಸುವ ವಿಭಿನ್ನ ವಿಧಾನಗಳಿಗೆ ಹೊಂದುಕೊಳ್ಳಲು ಉದ್ದೇಶಿತ ಭಾಷೆಯಲ್ಲಿ ಒಂದಕ್ಕಿಂತ ಹೆಚ್ಚು ಪದಗಳನ್ನು ಬಳಸಲು ನಿರ್ಧರಿಸಬಹುದು. ಇದನ್ನು ಮಾಡಲು ಒಂದು ಉಪಯುಕ್ತ ಮಾರ್ಗವೆಂದರೆ ಸ್ಪ್ರೆಡ್ ಶೀಟಲ್ಲಿ ಪ್ರತಿಯೊಂದು ಪ್ರಮುಖ ಪದವನ್ನು ಟ್ರ್ಯಾಕ್ ಮಾಡುವುದು, ಮೂಲ ಭಾಷೆಯ ಪದ, ಉದ್ದೇಶಿತ ಭಾಷೆಯ, ಪರ್ಯಾಯ ಪದ ಮತ್ತು ಸತ್ಯವೇದದ ಭಾಗದಲ್ಲಿ ನೀವು ಬಳಸುವ ಪ್ರತಿ ಪದ. ಈ ಅನುವಾದ ಸ್ಟುಡಿಯೋದ ಮುಂದಿನ ಆವೃತಿಗಳಲ್ಲಿರುತ್ತದೆ ಎಂದು ಭಾವಿಸುತ್ತೇವೆ.
ನೀವು ಸತ್ಯವೇದ ಕ್ರಮಬದ್ಧ ಪರಿಶೀಲನೆಯ ಪೂರ್ಣಗೊಳಿಸಿದಾಗ, ಪ್ರಶ್ನೆಗೆ ಉತ್ತರಿಸಿ: ಕ್ರಮಬದ್ಧ ಪರಿಶೀಲನೆಯ ಪ್ರಶ್ನೆಗಳು.
ಒಂದು ವಾಕ್ಯಕ್ಕಾಗಿ ಈ ವಿಧಾನವನ್ನು ಸಂಪೂರ್ಣಗೊಳಿಸಿದನಂತರ, ಅನುವಾದ ಮಾಡುವ ಪದಗಳ ಬ್ಯಾಂಕಿನಲ್ಲಿ ಅಥವಾ ಮೂಲ ಭಾಷೆಯ ಫಲಕದಲ್ಲಿ ಪದಗಳು ಏನಾದರೂ ಉಳಿದುಹೋಗಿದ್ದಾವೋ ಇಲ್ಲವೋ ಎಂದು ನೋಡುವುದಕ್ಕೆ ಸುಲಭವಾಗಿರಬೇಕು.
ಜೋಡಣೆಯ ಸಾಧನೆಯು ಒಂದರಿಂದ ಒಂದಕ್ಕೆ, ಒಂದರಿಂದ ಹಲವು , ಹಲವುಗಳಿಂದ ಒಂದಕ್ಕೆ, ಮತ್ತು ಅನೇಕವಾದವುಗಳಿಂದ ಅನೇಕವಾದ ಜೋಡಣೆಗಳಿಗೆ ಸಹಕಾರ ಮಾಡುತ್ತದೆ. ಎರಡು ಭಾಷೆಗಳಿಂದ ವ್ಯಕ್ತವಾಗಿರುವ ಅರ್ಥದ ಸರಿಯಾದ ಜೋಡಣೆಯನ್ನು ಹೊಂದಿಕೊಳ್ಳುವ ಅವಶ್ಯಕತೆಯ ಮೇಲೆ, ಒಂದು ಅಥವಾ ಅನೇಕವಾದ ಅನುವಾದ ಭಾಷೆಯ ಪದಗಳು ಒಂದು ಅಥವಾ ಅನೇಕವಾದ ಮೂಲ ಭಾಷೆಯ ಪದಗಳಿಗೆ ಜೋಡಣೆಯಾಗುತ್ತವೆ ಎಂದರ್ಥ, ಏನಾದರೊಂದು ವಿಷಯವನ್ನು ತಿಳಿಯಪಡಿಸುವದಕ್ಕೆ ಮೂಲ ಭಾಷೆಗಿಂತಲೂ ಅನುವಾದ ಮಾಡುವ ಭಾಷೆಯಲ್ಲಿ ಕಡಿಮೆ ಪದಗಳಾಗಲಿ ಅಥವಾ ಹೆಚ್ಚುವರಿ ಪದಗಳನ್ನಾಗಲಿ ಉಪಯೋಗಿಸಿದ್ದರೆ ಅದನ್ನು ಲೆಕ್ಕಕ್ಕೆ ತೆಗೆದುಕೊಳ್ಳಬೇಡಿರಿ, ಯಾಕಂದರೆ ಅದು ಸಹಜವಾಗಿ ಬರುವುದುಂಟು. ಜೋಡಣೆಯ ಸಾಧನೆಯೊಂದಿಗೆ, ನಾವು ಕೇವಲ ಮಾತುಗಳನ್ನು ಅಥವಾ ಪದಗಳನ್ನು ಮಾತ್ರವಲ್ಲದೆ, ನಿಜವಾಗಿ ಅರ್ಥವನ್ನು ಕೂಡ ಜೋಡಣೆ ಮಾಡುತ್ತಿದ್ದೇವೆ. ಮೂಲ ಬೈಬಲ ಅರ್ಥವನ್ನು ಚೆನ್ನಾಗಿ ವ್ಯಕ್ತಪಡಿಸುವುದೇ ಪ್ರಾಮುಖ್ಯ, ಈ ಕೆಲಸ ಮಾಡುವುದಕ್ಕೆ ಎಷ್ಟು ಪದಗಳನ್ನು ಬಳಸಿದರೂ ಸಮಸ್ಯೆಯಿಲ್ಲ. ಮೂಲ ಭಾಷೆಯ ಅರ್ಥವನ್ನು ವ್ಯಕ್ತಪಡಿಸುವ ಅನುವಾದ ಭಾಷೆಯ ಪದಗಳನ್ನು ಜೋಡಣೆ ಮಾಡುವುದರ ಮೂಲಕ ಅನುವಾದದಲ್ಲಿ ಮೂಲ ಭಾಷೆಯ ಅರ್ಥವು ಇದೆಯೋ ಇಲ್ಲವೋ ಎಂದು ನಾವು ನೋಡಬಹುದು.
ಯಾಕಂದರೆ ವಾಕ್ಯವನ್ನು ನಿರ್ಮಾಣ ಮಾಡುವುದಕ್ಕೆ ಪ್ರತಿಯೊಂದು ಅನುವಾದ ಮಾಡುವ ಭಾಷೆಯು ವಿಭಿನ್ನವಾದ ಅಗತ್ಯತೆಗಳನ್ನು ಹೊಂದಿಕೊಂಡಿರುತ್ತದೆ ಮತ್ತು ಕೊಡಬೇಕಾದ ಸ್ಪಷ್ಟತೆಯ ಮಾಹಿತಿಯನ್ನು ಹೊಂದಿರುತ್ತದೆ, ಮೂಲ ಭಾಷೆಯಲ್ಲಿರುವ ಯಾವುದೇ ಪದಗಳಿಗೆ ಸಂಬಂಧಪಡದ ಅನುವಾದ ಮಾಡುವ ಭಾಷೆಯ ಕೆಲವು ಪದಗಳು ಅನೇಕಬಾರಿ ಬರುತ್ತಾ ಇರುತ್ತವೆ. ವಾಕ್ಯಕ್ಕೆ ಅರ್ಥವನ್ನು ಕೊಡುವ ಕ್ರಮದಲ್ಲಿ ಈ ಪದಗಳು ವಾಕ್ಯಕ್ಕೆ ಬೇಕಾದ ಮಾಹಿತಿಯನ್ನು ಕೊಡುವುದಾದರೆ, ಅಥವಾ ಆ ವಾಕ್ಯವನ್ನು ಅರ್ಥಮಾಡಿಕೊಳ್ಳುವುದಕ್ಕೋಸ್ಕರ ಬೇಕಾದ ವಿವರಣಾತ್ಮಕ ಮಾಹಿತಿಯನ್ನು ಕೊಡುತ್ತಿರುವುದಾದರೆ, ಕೊಡಲ್ಪಟ್ಟಿರುವ ಅನುವಾದ ಮಾಡುವ ಭಾಷೆಯಲ್ಲಿನ ಪದಗಳನ್ನು ಅಳವಡಿಸಿಕೊಳ್ಳುವ ವಿಧಾನದಲ್ಲಿ ಅಥವಾ ವಿವರಣೆ ಕೊಡುವುದಕ್ಕೆ ಅವು ಸಹಾಯ ಮಾಡುವ ಪದ್ಧತಿಯಲ್ಲಿ ಮೂಲ ಭಾಷೆಯ ಪದಗಳೊಂದಿಗೆ ಜೋಡಣೆ ಮಾಡಬೇಕು.
ನೀವು ಅನುವಾದದ ಕುರಿತಾಗಿ ಪ್ರಶ್ನೆಗಳನ್ನು ಮತ್ತು ವ್ಯಾಖ್ಯೆಗಳನ್ನು ಮಾಡಿ ಬೈಬಲ್ ಪುಸ್ತಕವನ್ನು ಜೋಡಣೆ ಮಾಡಿ ಮುಗಿಸಿದನಂತರ, ಅನುವಾದ ತಂಡಕ್ಕೆ ಪ್ರಶ್ನೆಗಳನ್ನು ಕಳುಹಿಸುವ ಸಮಯವಿದು ಅಥವಾ ಅನುವಾದ ತಂಡದೊಂದಿಗೆ ಭೇಟಿ ಮಾಡಿ ಚರ್ಚೆ ಮಾಡುವ ಸಮಯವಿದು. ಈ ಪದ್ಧತಿಯನ್ನು ಸಂಪೂರ್ಣಗೊಳಿಸುವುದಕ್ಕೆ ಕೆಲವೊಂದು ಸೂತ್ರಗಳಿಗಾಗಿ ನೀವು ಎಲ್ಲಿ ಬಿಟ್ಟಿದ್ದೀರೋ ಅಲ್ಲಿಗೆ ತಿರುಗಿ ಹೋಗಿ ನೋಡಿರಿ. ಕ್ರಮಬದ್ಧವಾದ ಪರಿಶೀಲನೆಗೆ ಮೆಟ್ಟಿಲುಗಳು ಪುಟ.
ಸಾಮಾನ್ಯವಾಗಿ:
.ಮೂಲ ಪಠ್ಯದ ಅರ್ಥಕ್ಕಿಂತ ಭಿನ್ನವಾಗಿ ಕಂಡುಬರುವ ಯಾವುದೇ ಅರ್ಥವಿದ್ದರೂ ಅದನ್ನು ಪರಿಶೀಲಿಸಿರಿ.
ಈ ಎಲ್ಲಾ ವಿಷಯಗಳನ್ನು ಪರಿಶೀಲಿಸಿದ ನಂತರ ಮತ್ತು ತಿದ್ದುಪಡಿಗಳನ್ನು ಮಾಡಿದ ನಂತರ, ಎಲ್ಲಾ ಸಹಜ ರೀತಿಯಲ್ಲಿದೆ ಮತ್ತು ಸರಿಯಾದ ಸಂಬಂಧ ಕಲ್ಪಿಸಿದೆ ಎಂದು ಖಚಿತಪಡಿಸಲು ಅನುವಾದ ತಂಡವು ಪರಸ್ಪರ ಅಥವಾ ಸಮುದಾಯದ ಇತರ ಸದ್ಯಸರಿಗೆ ಆ ಭಾಗವನ್ನು ಜೋರಾಗಿ ಓದಲು ಹೇಳಲಿ. ತಿದ್ದುಪಡಿಗಳು ಅಸ್ವಾಭಾವಿಕ ವ್ಯತ್ಯಾಸಗಳನ್ನು ಉಂಟುಮಾಡಿದರೆ, ಅವರು ಅನುವಾದಕ್ಕೆ ಹೆಚ್ಚುವರಿ ಹೊಂದಾಣಿಕೆ ಮಾಡುವ ವರೆಗೂ ಅದನ್ನು ಸರಿಪಡಿಸಬೇಕಾಗುತ್ತದೆ.
ಕ್ರಮಬದ್ಧವಾದ ಪರಿಶೀಲನೆ ಮಾಡುವವರು ಹೊಸ ಅನುವಾದವನ್ನು ಓದುತ್ತಿರುವಾಗ ಕೆಲವು ಪ್ರಶ್ನೆಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು .
ಅನುವಾದದ ಭಾಗಗಳನ್ನು ನೀವು ಓದಿದನಂತರ ಅಥವಾ ವಾಕ್ಯಭಾಗಗಳ ಮುಖಾಂತರ ಸಮಸ್ಯೆಗಳನ್ನು ಅರಿತನಂತರ ನೀವು ಈ ಪ್ರಶ್ನಗಳಿಗೆ ಉತ್ತರಗಳನ್ನು ಕೊಡಬಹುದು. ಮೊದಲ ಗುಂಪಿನಲ್ಲಿ ಕೇಳುವ ಪ್ರಶ್ನೆಗಳಿಗೆ ನಿಮ್ಮ ಉತ್ತರ “ಇಲ್ಲ” ಎಂದು ಇರುವುದಾದರೆ, ದಯವಿಟ್ಟು ಇನ್ನೂ ಹೆಚ್ಚಾಗಿ ವಿವರಿಸಿರಿ, ಅದರಲ್ಲಿ ನಿಮಗೆ ಸರಿಯಾಗಿಲ್ಲವೆಂದೆಣಿಸಿದ ಪ್ರತ್ಯೇಕಭಾಗಗಳನ್ನು ಸೇರಿಸಿರಿ, ಮತ್ತು ಅನುವಾದ ತಂಡವು ಇದನ್ನು ಹೇಗೆ ಸರಿಪಡಿಸಬೇಕೆಂದು ನಿಮ್ಮ ಸಲಹೆಗಳನ್ನು ನೀಡಿರಿ.
ಅನುವಾದ ತಂಡದ ಮುಖ್ಯ ಗುರಿ ಮೂಲ ವಾಕ್ಯದಲ್ಲಿರುವ ಅರ್ಥವನ್ನು ಭಾಷಾಂತರ ಮಾಡುವ ಭಾಷೆಯಲ್ಲಿ ಸ್ವಾಭಾವಿಕವಾಗಿ ಮತ್ತು ಸ್ಪಷ್ಟವಾಗಿ ವ್ಯಕ್ತಪಡಿಸುವುದಾಗಿರುತ್ತದೆ. ಕೆಲವೊಂದು ಉಪವಾಕ್ಯಗಳನ್ನು ಬದಲಾಯಿಸುವ ಅವಶ್ಯಕತೆ ಇರಬಹುದು ಮತ್ತು ಮೂಲ ಭಾಷೆಯಲ್ಲಿರುವ ಕೆಲವು ಏಕ ಪದಗಳನ್ನು ಭಾಷಾಂತರ ಮಾಡುವ ಭಾಷೆಯಲ್ಲಿ ಹೆಚ್ಚಿನ ಮಾತುಗಳಿಂದ ವ್ಯಕ್ತಪಡಿಸುವ ಅವಶ್ಯಕತೆಯು ಇರಬಹುದು. ಈ ಎಲ್ಲಾ ವಿಷಯಗಳು ಇತರ ಭಾಷೆಯ ಅನುವಾದಗಳಲ್ಲಿ ಸಮಸ್ಯೆಗಳಾಗಿ ಇರದೇ ಇರಬಹುದು. ಅನುವಾದಕರು ಒಂದೇ ಒಂದು ಸಮಯದಲ್ಲಿ ಈ ಎಲ್ಲಾ ತಿದ್ದುಪಡಿಗಳನ್ನು ತಪ್ಪಿಸಬಹುದು ಅದು ಯುಎಲ್.ಟಿ ಮತ್ತು ಯುಎಸ್.ಟಿ ಗೇಟ್ ವೆ ಅನುವಾದಗಳಿಗಾಗಿ ಮಾತ್ರವೇ. ಯುಎಲ್.ಟಿಯ ಉದ್ದೇಶವು ಏನಂದರೆ ಇತರ ಭಾಷೆಯ ಅನುವಾದಕರು ಮೂಲ ಬೈಬಲ್ ಭಾಷೆಗಳಲ್ಲಿ ಅರ್ಥವನ್ನು ಹೇಗೆ ವ್ಯಕ್ತಪಡಿಸಿದ್ದಾರೆಂದು ತಿಳಿಸುವುದಾಗಿರುತ್ತದೆ, ಮತ್ತು ಯುಎಸ್.ಟಿ ಉದ್ದೇಶವು ಏನಂದರೆ ಇತರ ಭಾಷೆಯಲ್ಲಿ ನಾಣ್ಣುಡಿಯನ್ನು ಉಪಯೋಗಿಸುವುದಕ್ಕೆ ತುಂಬಾ ಸ್ವಾಭಾವಿಕವಾಗಿದ್ದರೂ ಅದೇ ಅರ್ಥವನ್ನು ಸುಲಭವಾದ ರೂಪದಲ್ಲಿ, ಸ್ಪಷ್ಟವಾಗಿ ವ್ಯಕ್ತಪಡಿಸುವುದಾಗಿರುತ್ತದೆ. ಗೇಟ್ ವೆ ಭಾಷೆಯ ಅನುವಾದಕರು ಆ ಎಲ್ಲಾ ವಿಧಾನಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕಾದ ಅವಶ್ಯಕತೆಯುಂಟು. ಆದರೆ ಇತರ ಭಾಷೆಯ ಅನುವಾದಕಾರಿಗೆ ಯಾವಾಗಲು ಸ್ವಾಭಾವಿಕವಾಗಿ, ಸ್ಪಷ್ಟವಾಗಿ ಮತ್ತು ನಿಖರತೆಯಾಗಿ ಇರಬೇಕು.
ಅನುವಾದಕರು ವಾಸ್ತವಿಕವಾದ ಸಂದೇಶದಿಂದ ವಾಸ್ತವಿಕವಾದ ಪ್ರೇಕ್ಷಕರು ಅರ್ಥಮಾಡಿಕೊಳ್ಳುವ ಮಾಹಿತಿಯನ್ನು ಸೇರಿಸರಬಹುದೆಂದು, ಆದರೆ ಮೂಲ ಲೇಖಕರು ಅದನ್ನು ಸ್ಪಷ್ಟವಾಗಿ ವ್ಯಕ್ತಪಡಿಸದೇ ಇರಬಹುದೆಂದು ಮನಸ್ಸಿನಲ್ಲಿ ನೆನಪಿಟ್ಟುಕೊಳ್ಳಿರಿ. ವಾಕ್ಯವನ್ನು ಅರ್ಥಮಾಡಿಕೊಳ್ಳಬೇಕಾದ ಅವಶ್ಯಕತೆ ಪ್ರೇಕ್ಷಕರಿಗೆ ಇದೆಯೆಂದೆನ್ನುವಾಗ, ವಿವರವಾಗಿ ಬರೆಯುವುದಕ್ಕೆ ಮಾಹಿತಿಯನ್ನು ಸೇರಿಸುವುದು ಒಳ್ಳೇಯದು. ಇದರ ಕುರಿತಾಗಿ ಹೆಚ್ಚಿನ ವಿವರಣೆಗಳಿಗಾಗಿ, ಸೂಚ್ಯ ಮತ್ತು ಸ್ಪಷ್ಟವಾದ ಮಾಹಿತಿ ನೋಡಿರಿ.
ಈ ಎರಡನೇ ಗುಂಪಿನಲ್ಲಿ ಯಾವುದೇ ಪ್ರಶ್ನೆಗಳಿಗೆ “ಹೌದು” ಎಂದು ನೀವು ಉತ್ತರ ಕೊಡುವುದಾದರೆ, ಅದರ ಕುರಿತಾಗಿ ಹೆಚ್ಚಿನ ರೀತಿಯಲ್ಲಿ ವಿವರಿಸಿರಿ, ಇದರಿಂದ ಅನುವಾದ ತಂಡಕ್ಕೆ ವು ಸಮಸ್ಯೆ ಯಾವುದೆಂದು ಸ್ಪಷ್ಟವಾಗಿ ತಿಳಿದುಬರುತ್ತದೆ , ಅನುವಾದದಲ್ಲಿ ಯಾವ ವಾಕ್ಯಭಾಗಕ್ಕೆ ತಿದ್ದುಪಡಿ ಬೇಕಾಗಿರುತ್ತದೆಯೆಂದು ಅವುಗಳನ್ನು ಯಾವರೀತಿ ತಿದ್ದುಪಡಿ ಮಾಡಬೇಕೆಂದು ತಿಳಿದುಕೊಳ್ಳುತ್ತಾರೆ.
ಅನುವಾದದೊಂದಿಗೆ ಏನಾದರೂ ಸಮಸ್ಯೆಗಳು ಇದ್ದರೆ, ಈ ಎಲ್ಲಾ ಸಮಸ್ಯೆಗಳನ್ನು ಪರಿಷ್ಕಾರ ಮಾಡಿಕೊಳ್ಳುವುದಕ್ಕೆ ಅನುವಾದ ತಂಡವನ್ನು ಭೇಟಿ ಮಾಡುವುದಕ್ಕೆ ಪ್ರಣಾಳಿಕೆಗಳನ್ನು ಮಾಡಿರಿ. ನೀವು ಅವರನ್ನು ಭೇಟಿ ಮಾಡಿದಾದನಂತರ, ಅನುವಾದವು ಚೆನ್ನಾಗಿದೆಯೆಂದು ನಿಶ್ಚಯ ಮಾಡಿಕೊಳ್ಳುವುದಕ್ಕೆ ಅನುವಾದ ತಂಡವು ಸಮುದಾಯದ ನಾಯಕರುಗಳೊಂದಿಗೆ ಪರಿಶೀಲನೆ ಮಾಡಿದ ತಮ್ಮ ಅನುವಾದವನ್ನು ಪರಿಶೀಲನೆ ಮಾಡಬೇಕಾದ ಅವಶ್ಯಕತೆಯಿದೆ. ಇದಾದನಂತರ ಮತ್ತೊಂದುಬಾರಿ ನಿಮ್ಮೊಂದಿಗೆ ಭೇಟಿಯಾಗಬಹುದು.
ನೀವು ಅನುವಾದವನ್ನು ಅನುಮೋದನೆ ಮಾಡುವುದಕ್ಕೆ ಸಿದ್ಧವಾಗಿರುವಾಗ, ಇಲ್ಲಿಗೆ ಹೋಗಿರಿ: ಕ್ರಮಬದ್ಧವಾದ ಅನುಮೋದನೆ.
ಹಿಂದಿನ ಅನುವಾದವು ಸ್ಥಳಿಯ ಉದ್ದೇಶಿತ ಭಾಷೆಯಿಂದ (OL) ಸತ್ಯವೇದದ ಪಠ್ಯವನ್ನು ವಿಶಾಲವಾಗಿ ತಿಳಿಸುವ ಭಾಷೆಗೆ (GL) ಅನುವಾದಿಸುವುದು. ಇದನ್ನು “ಹಿಂದಿನ ಅನುವಾದ” ಎಂದು ಕರೆಯಲಾಗುತ್ತದೆ ಏಕೆಂದರೆ ಇದು ಸ್ಥಳಿಯ ಉದ್ದೇಶಿತ ಭಾಷಾ ಅನುವಾದವನ್ನು ರಚಿಸಲು ಮಾಡಿದ್ದಕ್ಕಿಂತ ವಿರುದ್ಧ ದಿಕ್ಕಿನಲ್ಲಿರುವ ಅನುವಾದವಾಗಿದೆ. ಉದ್ದೇಶಿತ ಭಾಷೆ ಮಾತನಾಡದ ಯಾರಿಗಾದರು ಉದ್ದೇಶ ಭಾಷ ಅನುವಾದ ಏನೆಂದು ತಿಳಿಯಲು ಅವಕಶ ನೀಡುವುದೇ ಹಿಂದಿನ ಅನುವಾದದ ಉದ್ದೆಶವಾಗಿದೆ.
ಹಿಂದಿನ ಅನುವಾದವನ್ನು ಸಂಪೂರ್ಣವಾಗಿ ಸಾಮಾನ್ಯ ಶೈಲಿಯಲ್ಲಿ ಮಾಡಲಾಗುವುದಿಲ್ಲ, ಆದಾಗ್ಯೂ, ಏಕೆಂದರೆ ಇದು ಅನುವಾದದ ಭಾಷೆಯಲ್ಲಿ ಸ್ವಭಾವಿಕತೆಯನ್ನು ಉದ್ದೇಶವಾಗಿ ಹೊಂದಿಲ್ಲ (ಈ ಸಂದರ್ಭದಲ್ಲಿ ಇದು ವಿಶಾಲವಾಗಿ ತಿಳಿಸುವ ಭಾಷೆಯಾಗಿದೆ). ಬದಲಾಗಿ, ಸ್ಥಳಿಯ ಭಾಷಾಂತರದ ಪದಗಳನ್ನು ಮತ್ತು ಅಭಿವ್ಯಕ್ತಿಯನ್ನು ಅಕ್ಷರಶಃ ರೀತಿಯಲ್ಲಿ ಪ್ರತಿನಿಧಿಸುವುಸು ಹಿಂದಿನ ಅನುವಾದದ ಗುರಿಯಾಗಿದೆ , ಆದರೆ ವ್ಯಾಪಕ ಸಂಪರ್ಕದ ಭಾಷೆಯ ವ್ಯಾಕರಣ ಮತ್ತು ಪದ ಕ್ರಮವನ್ನು ಸಹ ಬಳಸುತ್ತದೆ. ಈ ರೀತಿಯಾಗಿ, ಅನುವಾದ ಪರೀಕ್ಷಕನು ಉದ್ದೇಶಿತ ಭಾಷೆಯ ಪಠ್ಯದಲ್ಲಿನ ಪದಗಳನ್ನು ಸ್ಪಷ್ಟವಾಗಿ ನೋಡಬಹುದು ಮತ್ತು ಹಿಂದಿನ ಅನುವಾದವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬಹುದು ಮತ್ತು ಅದನ್ನು ವೇಗವಾಗಿ ಹಾಗು ಸುಲಭವಾಗಿ ಓದಬಹುದು.
ಹಿಂದಿನ ಭಾಷಾಂತರದ ಉದ್ದೇಶವೆಂದರೆ, ಉದ್ದೇಶಿತ ಭಾಷೆಯನ್ನು ಅರ್ಥಮಾಡಿಕೊಳ್ಳದ ಸತ್ಯವೇದದ ಸಲಹೆಗಾರ ಅಥವಾ ಪರೀಕ್ಷಕನು ,ಅವನು ಅಥವ ಅವಳು ಉದ್ದೇಶಿತ ಭಾಷೆಯನ್ನು ಅರ್ಥಮಾಡಿಕೊಳ್ಳದಿದ್ದರೂ ಸಹ ಉದ್ದೇಶಿತ ಭಾಷಾ ಅನುವಾದದಲ್ಲಿ ಏನಿದೆ ಎಂಬುವುದನ್ನು ನೋಡಲು ಸಾಧ್ಯವಾಗುತ್ತದೆ. ಈ ರೀತಿಯಾಗಿ ಪರೀಕ್ಷಕನು ಹಿಂದಿನ ಅನುವಾದವನ್ನು “ನೋಡಬಹುದು” ಮತ್ತು ಉದ್ದೇಶಿತ ಭಾಷೆಯನ್ನು ತಿಳಿಯದೆ ಉದ್ದೇಶಿತ ಭಾಷೆಯ ಅನುವಾದವನ್ನು ಪರಿಶೀಲಿಸಬಹುದು. ಆದುದರಿಂದ ಹಿಂದಿನ ಅನುವಾದದ ಭಾಷೆಯು, ಹಿಂದಿನಅನುವಾದವನ್ನು ಭಾಷಾಂತರ ಮಾಡುವ ವ್ಯಕ್ತಿಗು (ಹಿಂದಿನ ಅನುವಾದಕ) ಮತ್ತು ಪರೀಕ್ಷಿಕನು ವ್ಯಾಪಕ ಸಂಪರ್ಕಿಸುವ ಭಾಷೆಯಾಗಿರಬೇಕು. ಇದರರ್ಥ ಹಿಂದಿನ ಅನುವಾದಕರು ಉದ್ದೇಶಿತ ಭಾಷೆಯ ಪಠ್ಯವನ್ನು ಬಳಸಲಾದ ವ್ಯಾಪಕ ಸಂಪರ್ಕಿಸುವ ಅದೇ ಭಾಷೆಗೆ ಅನುವಾದಿಸಬೇಕಾಗುತ್ತದೆ.
ಕೆಲವು ಜನರು ಇದನ್ನು ಅನಗತ್ಯವೆಂದು ಪರಿಗಣಿಸಬಹುದು, ಏಕೆಂದರೆ ಸತ್ಯವೇದದ ಪಠ್ಯವು ಈಗಾಗಲೇ ಮೂಲ ಭಾಷೆಯಲ್ಲಿ ಅಸ್ತಿತ್ವದಲ್ಲಿದೆ. ಆದರೆ ಹಿಂದಿನ ಅನುವಾದದ ಉದ್ದೇಶವನ್ನು ನೆನಪಿನಲ್ಲಿಡಿ: ಉದ್ದೇಶಿತ ಭಾಷ ಅನುವಾದದಲ್ಲಿ ಏನು ಅಡಕವಾಗಿದೆ ಎಂದು ತಿಳಿದುಕೊಳ್ಳಲು ಪರೀಕ್ಷಕರಿಗೆ ಅನುಮತಿಸುವುದು. ಮೂಲ ಭಾಷೆಯ ಪಠ್ಯವನ್ನು ಓದುವುದರಿಂದ ಮಾತ್ರ ಉದ್ದೇಶಿತ ಭಾಷಾ ಅನುವಾದದಲ್ಲಿ ಏನಿದೆ ಎಂದು ನೋಡಲು ಪರಿಕ್ಷಕನಿಗೆ ಅನುಮತಿಸುವುದಿಲ್ಲ. ಆದ್ದರಿಂದ ಹಿಂದಿನ ಅನುವಾದಕನು ಹೊಸ ಅನುವಾದವನ್ನು ವ್ಯಾಪಕ ಸಂಪರ್ಕ ಭಾಷೆಯಲ್ಲಿ ಮತ್ತೆ ಮಾಡಬೇಕು. ಅದು ಉದ್ದೇಶಿತ ಭಾಷಾ ಅನುವಾದವನ್ನು ಮಾತ್ರ ಆಧರಿಸುತ್ತದೆ. ಈ ಕಾರಣಕ್ಕಾಗಿ,ಹಿಂದಿನ ಅನುವಾದ ಮಾಡಿರುವ ವ್ಯಕ್ತಿ ತನ್ನ ಹಿಂದಿನ ಅನುವಾದವನ್ನು ಮಾಡುವಾಗ ಮೂಲ ಭಾಷೆಯ ಪಠ್ಯವನ್ನು ನೋಡಲು ಸಾಧ್ಯವಿರುವುದಿಲ್ಲ, ಆದರೆ ಉದ್ದೇಶಿತ ಪಠ್ಯ ಮಾತ್ರ ನೋಡಲು ಸಾಧ್ಯ. ಈ ರೀತಿಯಲ್ಲಿ, ಉದ್ದೇಶಿತ ಭಾಷಾ ಅನುವಾದದಲ್ಲಿ ಇರುವ ಯಾವುದೇ ಸಮಸ್ಯೆವನ್ನು ಪರೀಕ್ಷಕನು ಗುರುತಿಸಬಹುದು ಮತ್ತು ಅದನ್ನು ಪರಿಹರಿಸಲು ಅನುವಾದಕರೊಂದಿಗೆ ಕೆಲಸ ಮಾಡಬಹುದು.
ಅನುವಾದವನ್ನು ಪರಿಶೀಲಿಸಲು ಪರೀಕ್ಷಕರು ಉದ್ದೇಶಿತ ಅನುವಾದವನ್ನು ಪರಿಶೀಲಿಸುವ ಮೊದಲೇ ಉದ್ದೇಶಿತ ಭಾಷೆಯನ್ನು ಸುಧಾರಿಸಲು ಹಿಂದಿನ ಅನುವಾದವು ತುಂಬಾ ಉಪಯುಕ್ತವಾಗಿದೆ. ಅನುವಾದ ತಂಡವು ಹಿಂದಿನ ಅನುವಾದವನ್ನು ಓದುವಾಗ, ಹಿಂದಿನ ಅನುವಾದಕರು ತಮ್ಮ ಅನುವಾದವನ್ನು ಹೇಗೆ ಅರ್ಥಮಾಡಿಕೊಂಡಿದ್ದಾರೆ ಎಂಬುವುದನ್ನು ಅವರು ನೋಡಬಹುದು. ಕೆಲವೊಮ್ಮೆ, ಅವರು ಉದ್ದೇಶಿಸಿದ್ದಕ್ಕಿಂತ ವಿಭಿನ್ನವಾದ ರೀತಿಯಲ್ಲಿ ಹಿಂದಿನ ಅನುವಾದಕರು ತಮ್ಮ ಅನುವಾದವನ್ನು ಅರ್ಥಮಾಡಿಕೊಂಡಿಕೊಳ್ಳುತ್ತಾರೆ. ಅಂತಹ ಸಂದರ್ಭಗಳಲ್ಲಿ, ಅವರು ಅನುವಾದವನ್ನು ಬದಲಾಯಿಸಬಹುದು ಇದರಿಂದ ಅವರು ಉದ್ದೇಶಿಸಿದ ಅರ್ಥವನ್ನು ಹೆಚ್ಚು ಸ್ಪಷ್ಟವಾಗಿ ತಿಳಿಸಬಹುದು. ಅನುವಾದ ತಂಡವು ಹಿಂದಿನ ಅನುವಾದವನ್ನು ಪರೀಕ್ಷಕರಿಗೆ ನೀಡುವ ಮೊದಲು ಅದನ್ನು ಬಳಸಲು ಸಾಧ್ಯವಾದಾಗ, ಅವರು ತಮ್ಮ ಅನುವಾದಕ್ಕೆ ಹಲವು ಸುಧಾರಣೆಗಳನ್ನು ಮಾಡಬಹುದು. ಅವರು ಹೀಗೆ ಮಾಡುವಾಗ, ಪರೀಕ್ಷಿಕರು ತಮ್ಮ ಪರೀಶೀಲನೆಯನ್ನು ಹೆಚ್ಚು ವೇಗವಾಗಿ ಮಾಡಬಹುದು, ಏಕೆಂದರೆ ಅನುವಾದ ತಂಡವು ಪರೀಕ್ಷಕನೊಂದಿಗೆ ಭೇಟಿಯಾಗುವ ಮೊದಲು ಅನುವಾದದಲ್ಲಿನ ಅನೇಕ ಸಮಸ್ಯೆಗಳನ್ನು ಸರಿಪಡಿಸಲಾಗುತ್ತದೆ.
ಉತ್ತಮ ಅನುವಾದವನ್ನು ಮಾಡಲು, ವ್ಯಕ್ತಿಯು ಮೂರು ಅರ್ಹತೆಯನ್ನು ಹೊಂದಿರಬೇಕು.
ಪೂರಕ ಅನುವಾದವನ್ನು ಮಾಡುವ ವ್ಯಕ್ತಿಯು ಸತ್ಯವೇದವನ್ನು ಚೆನ್ನಾಗಿ ತಿಳಿಯದ ವ್ಯಕ್ತಿಯಾಗಿರಬೇಕು. ಇದಕ್ಕೆ ಕಾರಣವೆಂದರೆ, ಪೂರಕ ಅನುವಾದಕನು ಉದ್ದೇಶಿತ ಭಾಷಾ ಅನುವಾದವನ್ನು ನೋಡುವುದರಿಂದ ಅವನು ಅರ್ಥಮಾಡಿಕೊಳ್ಳುವ ಅರ್ಥವನ್ನು ಮಾತ್ರ ನೀಡಬೇಕು ಹೊರತಾಗಿ ಇತರ ಭಾಷೆಯಲ್ಲಿ ಸತ್ಯವೇದ ಓದುವುದರಿಂದ ಆತನಿಗಿರುವ ಜ್ಞಾನದಿಂದಲ್ಲ.
ಯಾವ ರೀತಿಯ ಪೂರಕ ಅನುವಾದವಿದೆ?
ಮೌಖಿಕ ಪೂರಕ ಅನುವಾದವೆಂದರೆ ಪೂರಕ ಅನುವಾದಕನು ಉದ್ದೇಶಿತ ಭಾಷೆಯಲ್ಲಿ ಅನುವಾದವನ್ನು ಓದುತ್ತಿದ್ದಂತೆ ಅಥವಾ ಕೇಳುತ್ತಿದ್ದಂತೆ ಅನುವಾದ ಪರೀಕ್ಷಕನನ್ನು ವ್ಯಾಪಕ ಸಂಪರ್ಕಿತ ಭಾಷೆಯಲ್ಲಿ ಮಾತನಾಡುತ್ತಾನೆ. ಅವನು ಸಾಮಾನ್ಯವಾಗಿ ಒಂದು ಸಮಯದಲ್ಲಿ ಒಂದು ವಾಕ್ಯವನ್ನು ಮಾಡುತ್ತಾನೆ, ಚಿಕ್ಕದಾಗಿದ್ದರೆ ಒಂದೇ ಸಮಯದಲ್ಲಿ ಎರಡು ವಾಕ್ಯವನ್ನು ಮಾಡುತ್ತಾನೆ. ಅನುವಾದ ಪರೀಕ್ಷಕನು ತಪ್ಪಾಗಿರುವ ವಾಕ್ಯವನ್ನು ಕೇಳಿಸಿಕೊಳ್ಳುವಾಗ, ಮೌಖಿಕ ಪೂರಕ ಅನುವಾದವನ್ನು ಮಾಡುವ ವ್ಯಕ್ತಿಯನ್ನು ವಾಕ್ಯ ಓದುವುದನ್ನು ತಡೆದು ಅದರಲ್ಲಿನ ಸಮಸ್ಯೆಗಳ ಬಗ್ಗೆ ಆತನು ಅವರಿಗೆ ಪ್ರಶ್ನೆಗಳನ್ನು ಕೇಳಬಹುದು. ಅನುವಾದ ತಂಡದ ಒಂದು ಅಥವ ಹೆಚ್ಚಿನ ಸದಸ್ಯರು ಹಾಜರಿರಬೇಕು ಆದರಿಂದ ಅವರು ಅನುವಾದದ ವಿಷಯದಲ್ಲಿ ಕೇಳುವ ಪ್ರಶ್ನೆಗಳಿಗೆ ಉತ್ತರಿಸಬಹುದು.
ಮೌಖಿಕ ಪೂರಕ ಅನುವಾದದ ಒಂದು ಪ್ರಯೋಜನವೇನೆಂದರೆ ಪೂರಕ ಅನುವಾದಕನು ಅನುವಾದ ಪರೀಕ್ಷಕನಿಗೆ ತಕ್ಷಣ ಲಭ್ಯವಿರುತ್ತಾರೆ ಮತ್ತು ಪೂರಕ ಅನುವಾದದ ಕುರಿತು ಅನುವಾದ ಪರೀಕ್ಷಕರ ಪ್ರಶ್ನೆಗೆ ಉತ್ತರಿಸಬಹುದು. ಮೌಖಿಕ ಪೂರಕ ಅನುವಾದದಲ್ಲಿರುವ ಲಾಭವೆಂದರೆ, ಅನುವಾದ ಮಾಡುವ ಉತ್ತಮ ಮಾರ್ಗದ ಬಗ್ಗೆ ಯೋಚಿಸಲು ಅನುವಾದಕನಿಗೆ ಬಹಳ ಕಡಿಮೆ ಸಮಯವಿರುತ್ತದೆ ಮತ್ತು ಅನುವಾದದ ಅರ್ಥವನ್ನು ಉತ್ತಮ ರೀತಿಯಲ್ಲಿ ವ್ಯಕ್ತಪಡಿಸದಿರಬಹುದು. ಪೂರಕ ಅನುವಾದವನ್ನು ಉತ್ತಮ ರೀತಿಯಲ್ಲಿ ವ್ಯಕ್ತಪಡಿಸಿದ್ದಕ್ಕಿಂತ ಅನುವಾದ ಪರೀಕ್ಷಕನು ಹೆಚ್ಚಿನ ಪ್ರಶ್ನೆಗಳನ್ನು ಕೇಳುವ ಅಗತ್ಯವನ್ನು ಇದು ಉಂಟುಮಾಡುತ್ತದೆ. ಮತ್ತೊಂದು ಅನಾನುಕೂಲವೆಂದರೆ, ಅನುವಾದವನ್ನು ಮೌಲ್ಯಮಾಪನೆ ಮಾಡಲು ಪರೀಕ್ಷಕರಿಗೆ ಬಹಳ ಕಡಿಮೆ ಸಮಯ ಸಿಗುತ್ತದೆ. ಅವನಿಗೆ ಒಂದು ವಾಕ್ಯವನ್ನು ಕೇಳಿ ಇನ್ನೊಂದು ವಾಕ್ಯವನ್ನು ಕೇಳುವ ಮೊದಲು ಯೋಚಿಸಲು ಕೆಲವೇ ಸೆಕೆಂಡ್ ಇರುತ್ತದೆ. ಈ ಕಾರಣದಿಂದ, ಪ್ರತಿ ವಾಕ್ಯದ ಬಗ್ಗೆ ಯೋಚಿಸಲು ಸಮಯವಿದ್ದಾಗ ಕಂಡುಹಿಡಿಯಬಹುದಾದ ಎಲ್ಲಾ ಸಮಸ್ಯೆವನ್ನು ಈಗ ಕಂಡುಹಿಡಿಯಲಾಗುವುದಿಲ್ಲ.
ಲಿಖಿತ
ಲಿಖಿತ ರೂಪದ ಪೂರಕ ಅನುವಾದದಲ್ಲಿ ಎರಡು ವಿಧಗಳಿವೆ. ಇವೆರಡ ನಡುವಿನ ವ್ಯತ್ಯಾಸಕ್ಕಾಗಿ,ಲಿಖಿತ ರೂಪದ ಪೂರಕ ಅನುವಾದ ನೋಡಿ. ಲಿಖಿತ ಪೂರಕ ಅನುವಾದವು ಮೌಕಿಕ ಪೂರಕ ಅನುವಾದಕ್ಕಿಂತ ಹಲವಾರು ಪ್ರಯೋಜನಗಳನ್ನು ಹೊಂದಿದೆ. ಮೊದಲನಯದಾಗಿ, ಪೂರಕ ಅನುವಾದವನ್ನು ಬರೆದಾಗ, ಅನುವಾದ ತಂಡವು ಅನುವಾದವನ್ನು ತಪ್ಪಾಗಿ ಅರ್ಥೈಸಿಕೊಂಡ ಯಾವುದೇ ಸ್ಥಳಗಳಿವೆಯೇ ಎಂದು ನೋಡಲು ಅದನ್ನು ಓದಬಹುದು. ಪೂರಕ ಅನುವಾದಕರು ಅನುವಾದವನ್ನು ತಪ್ಪಾಗಿ ಅರ್ಥೈಸಿಕೊಂಡರೆ, ಶ್ರೋತೃಗಳು ಅದನ್ನು ತಪ್ಪಾಗಿ ಅರ್ಥೈಸಿಕೊಳ್ಳುತ್ತಾರೆ, ಮತ್ತು ಅನುವಾದ ತಂಡವು ಆ ಸಮಯದಲ್ಲಿ ಅವರ ಅನುವಾದವನ್ನು ಪರಿಷ್ಕರಿಸುವ ಅಗತ್ಯವಿರುತ್ತದೆ.
ಎರಡನೆಯದಾಗಿ, ಪೂರಕ ಅನುವಾದವನ್ನು ಬರೆದಾಗ, ಅನುವಾದ ಪರೀಕ್ಷಕನು ಅನುವಾದ ತಂಡದೊಂದಿಗೆ ಭೇಟಿಯಾಗುವ ಮೊದಲು ಪೂರಕ ಅನುವಾದವನ್ನು ಓದಬಹುದು ಮತ್ತು ಪೂರಕ ಅನುವಾದದಿಂದ ಉದ್ಭವಿಸುವ ಯಾವುದೇ ಪ್ರಶ್ನೆಯನ್ನು ಸಂಶೋಧಿಸಲು ಸಮಯ ತೆಗೆದುಕೊಳ್ಳಬಹುದು. ಅನುವಾದ ಪರೀಕ್ಷಕನು ಸಮಸ್ಯೆಯನ್ನು ಸಂಶೋಧಿಸುವ ಅಗತ್ಯವಿಲ್ಲದಿದ್ದರೂ ಸಹ, ಲಿಖಿತ ರೂಪದ ಪೂರಕ ಅನುವಾದವು ಅನುವಾದದ ಬಗ್ಗೆ ಯೋಚಿಸಲು ಹೆಚ್ಚು ಸಮಯವನ್ನು ನೀಡುತ್ತದೆ. ಅವರು ಅನುವಾದದಲ್ಲಿ ಹೆಚ್ಚಿನ ಸಮಸ್ಯೆಗಳನ್ನು ಗುರುತಿಸಬಹುದು ಮತ್ತು ಪರಿಹರಿಸಬಹುದು ಮತ್ತು ಕೆಲವೊಮ್ಮೆ ಸಮಸ್ಯೆಗಳಿಗೆ ಉತ್ತಮ ಪರಿಹಾರವನನ್ನು ಸಹ ಪಡೆಯಬಹುದು.ಏಕೆಂದರೆ ಪ್ರತಿ ವಾಕ್ಯದ ಬಗ್ಗೆ ಯೋಚಿಸಲು ಕೆಲವೇ ಸೆಕೆಂಡುಗಳಿಂತಲೂ ಪ್ರತಿಯೊಂದರ ಬಗ್ಗೆ ಯೋಚಿಸಲು ಅವರಿಗೆ ಹೆಚ್ಚು ಸಮಯ ಸಿಗುತ್ತದೆ
ಮೂರನೆಯದಾಗಿ, ಪೂರಕ ಅನುವಾದವನ್ನು ಬರೆದಾಗ, ಅನುವಾದ ಪರೀಕ್ಷಕನು ಅನುವಾದ ತಂಡದೊಂದಿಗೆ ಭೇಟಿಯಾಗುವ ಮೊದಲು ತನ್ನ ಪ್ರಶ್ನೆಗಳನ್ನು ಲಿಖಿತ ರೂಪದಲ್ಲಿ ಸಿದ್ಧಪಡಿಸಬಹುದು. ಅವರು ಸಭೆ ಸೇರುವ ಮೊದಲು ಸಮಯವಿದ್ದರೆ ಮತ್ತು ಸಂಪರ್ಕಿಸಲು ಮಾರ್ಗವಿದ್ದರೆ, ಪರೀಕ್ಷಕನು ಅನುವಾದಿಸಲು ತನ್ನ ಲಿಖಿತ ರೂಪದ ಪ್ರಶ್ನೆಗಳನ್ನು ತಂಡಕ್ಕೆ ಕಳುಹಿಸಬಹುದು. ಇದನ್ನು ಅವರು ಓದಬಹುದು ಮತ್ತು ಪರೀಕ್ಷಕನು ತಪ್ಪೆಂದು ಭಾವಿಸಿದರೆ ಅನುವಾದದ ಭಾಗಗಳನ್ನು ಬದಲಾಯಿಸಬಹುದು. ಅನುವಾದ ತಂಡದವರು ಮತ್ತು ಪರೀಕ್ಷಕರು ಒಟ್ಟಿಗೆ ಭೇಟಿಯಾದಾಗ ಹೆಚ್ಚಿನ ಸತ್ಯವೇದಡ ಸಂಗತಿಗಳನ್ನು ಪರಿಶೀಲಿಸಲು ಸಹಾಯಮಾಡುತ್ತದೆ , ಯಾಕೆಂದರೆ ಭೇಟಿಯಾಗುವ ಮೊದಲೇ ಅನುವಾದದ ಅನೇಕ ಸಮಸ್ಯೆಗಳನ್ನು ಪರಿಹರಿಸಲು ಅವರಿಗೆ ಸಾಧ್ಯವಾಯಿತು. ಸಭೆಯಾಗಿ ಸೇರುವಾಗ ಅವರು ಉಳಿದ ಸಮಸ್ಯೆಗಳ ಮೇಲೆ ಮಾತ್ರ ಗಮನ ಹರಿಸುತ್ತಾರೆ. ಇವು ಸಮಾನ್ಯವಾಗಿ ಅನುವಾದ ತಂಡವು ಪರೀಕ್ಷಕರ ಪ್ರಶ್ನೆಗಳನ್ನು ಅರ್ಥಮಾಡಿಕೊಳ್ಳದ ಸ್ಥಳವಾಗಿದೆ ಅಥವಾ ಪರೀಕ್ಷಕರು ಉದ್ದೇಶಿತ ಭಾಷೆಯ ಬಗ್ಗೆ ಅರ್ಥಮಾಡಿಕೊಳ್ಳದೆ, ಇಲ್ಲದಿರುವ ಸಮಸ್ಯೆಗಳನ್ನು ಇದೆ ಎಂದು ಭಾವಿಸುತ್ತಾರೆ.
ಸಭೆ ಸೇರುವ ಮುಂಚೆ ಪರೀಕ್ಷಕ ತನ್ನ ಪ್ರಶ್ನೆಗಳನ್ನು ತಂಡಕ್ಕೆ ಕಳುಹಿಸಲು ಸಮಯವಿಲ್ಲದಿದ್ದರೂ ಸಹ, ಅವರು ಇನ್ನು ಸಭೆಯಲ್ಲಿ ಹೆಚ್ಚಿನ ವಿಷಯಗಳನ್ನು ಪರೀಕ್ಷಿಸಲು ಸಾಧ್ಯವಾಗುತ್ತದೆ, ಇಲ್ಲದಿದ್ದರೆ ಪರಿಶೀಲಿಸಲು ಸಾಧ್ಯವಾಗುವುದರಿಂದ ಪರೀಕ್ಷಕ ಈಗಾಗಲೆ ಪೂರಕ ಅನುವಾದವನ್ನು ಓದಿರುತ್ತಾರೆ ಮತ್ತು ಈಗಾಗಲೆ ಅವರ ಪ್ರಶ್ನೆಗಳನ್ನು ಸಿದ್ದಪಡಿಸಿರುತ್ತಾರೆ . ಈ ಪೂರಕ ಸಿದ್ಧತಾ ಸಮಯವನ್ನು ಹೊಂದಿದ್ದರಿಂದ, ಅವರು ಮತ್ತು ಅನುವಾದ ತಂಡವು ತಮ್ಮ ಸಭೆಯ ಸಮಯವನ್ನು ಮೌಖಿಕ ರೂಪದ ಪೂರಕ ಅನುವಾದ ಮಾಡುವಾಗ ಅಗತ್ಯವಿರುವಷ್ಟು ನಿಧಾನಗತಿವಾಗಿ ಸಂಪೂರ್ಣ ಅನುವಾದವನ್ನು ಓದುವುದಕ್ಕಿಂತ ಹೆಚ್ಚಾಗಿ ಅನುವಾದದ ಸಮಸ್ಯೆಯ ಪ್ರದೇಶಗಳನ್ನು ಮಾತ್ರ ಚರ್ಚಿಸಲು ಬಳಸಬಹುದು.
ನಾಲ್ಕನೆಯದಾಗಿ, ಲಿಖಿತ ಪೂರಕ ಅನುವಾದವು ಒಂದು ಸಮಯದಲ್ಲಿ ಹಲವು ಗಂಟೆಗಳ ಕಾಲ ಮೌಖಿಕ ಅನುವಾದವನ್ನು ಕೇಳುವುದನ್ನು ಮತ್ತು ತಿಳಿದುಕೊಳ್ಳುವುದನ್ನು ಕೇಂದ್ರೀಕರಿಸದಂತೆ ಪರೀಕ್ಷಕನ ಒತ್ತಡವನ್ನು ತಡೆಯುತ್ತದೆ. ಪರೀಕ್ಷಕನು ಮತ್ತು ಅನುವಾದ ತಂಡವು ಗದ್ದಲದ ವಾತವರಣದಲ್ಲಿ ಭೇಟಿಯಾಗುತ್ತಿದ್ದರೆ, ಅವನು ಪ್ರತಿ ಪದವನ್ನು ಸರಿಯಾಗೆ ಕೇಳುತ್ತಾನ ಎಂದು ಖಚಿತಪಡಿಸಿಕೊಳ್ಳುವ ತೊಂದರೆಯಿಂದ ಪರೀಕ್ಷಕನು ಹೆಚ್ಚಾಗಿ ಬಳಲುವನು. ಏಕಾಗ್ರತೆಯ ಮಾನಸಿಕ ಒತ್ತಡದಿಂದ ಪರೀಕ್ಷಕನು ಸತ್ಯವೇದ ಪಠ್ಯವನ್ನು ಸರಿಪಡಿಸುವ ಫಲತಾಂಶದಲ್ಲಿ ಕೆಲವು ಸಮಸ್ಯೆಗಳನ್ನು ತಪ್ಪಿಸುವ ಸಾಧ್ಯತೆಗಳಿರುತ್ತವೆ . ಈ ಕಾರಣಕ್ಕಾಗಿ ಸಾಧ್ಯವಾದಗೆಲ್ಲಾ ಲಿಖಿತ ರೂಪದ ಪೂರಕ ಅನುವಾದವನ್ನು ನಾವು ಶಿಫಾರಸ್ಸು ಮಾಡುತ್ತೇವೆ.
ಪೂರಕ ಅನುವಾದಗಳಲ್ಲಿ ಎರಡು ವಿಧಗಳಿವೆ
ಇಂಟರ್ ಲೀನಿಯರ್ ಪೂರಕ ಅನುವಾದದಲ್ಲಿ ಪೂರಕ ಅನುವಾದಕನು ಆ ಪದದ ಕೆಳಗೆ ಉದ್ದೇಶಿತ ಭಾಷಾ ಅನುವಾದದ ಪ್ರತಿಯೊಂದು ಪದಕ್ಕೂ ಅನುವಾದವನ್ನು ಇಡುತ್ತಾನೆ. ಉದ್ದೇಶಿತ ಭಾಷೆಯ ಅನುವಾದದ ಪ್ರತಿಯೊಂದು ಸಾಲಿನ ನಂತರ ವ್ಯಾಪಕ ಸಂಪರ್ಕಿಸುವ ಭಾಷೆಯ ಒಂದು ಸಾಲಿನ ಪಾಠ್ಯಕ್ಕೆ ಕಾರಣವಾಗುತ್ತದೆ. ಈ ರೀತಿಯ ಪೂರಕ ಅನುವಾದದ ಪ್ರಯೋಜನವೆಂದರೆ, ಉದ್ದೇಶಿತ ಭಾಷೆಯ ಪ್ರತಿಯೊಂದು ಪದವನ್ನು ಅನುವಾದ ತಂಡವು ಹೇಗೆ ಅನುಭವಿಸುತ್ತಿದೆ ಎಂಬುವುದನ್ನು ಪರೀಕ್ಷಕನು ಸುಲಭವಾಗಿ ನೋಡಬಹುದು. ಈ ರೀತಿಯ ಪೂರಕ ಅನುವಾದದ ಅನಾನುಕೂಲವೆಂದರೆ, ವ್ಯಾಪಕ ಸಂಪರ್ಕಿಸುವ ಭಾಷೆಯಲ್ಲಿನ ಪಠ್ಯದ ಸಾಲು ಪ್ರತ್ಯೇಕ ಪದಗಳ ಅನುವಾದದಿಂದ ಕೂಡಿದೆ. ಇದರಿಂದ ಪಠ್ಯವನ್ನು ಓದಲು ಮತ್ತು ಅರ್ಥಮಾಡಿಕೊಳ್ಳಲು ಕಷ್ಟವಾಯಿತು, ಮತ್ತು ಪೂರಕ ಅನುವಾದದ ಇತರ ವಿಧಾನಕ್ಕಿಂತ ಅನುವಾದ ಪರೀಕ್ಷಕನ ಮನಸಿನಲ್ಲಿ ಹೆಚ್ಚಿನ ಪ್ರಶ್ನೆಗಳನ್ನು ಮತ್ತು ತಪ್ಪು ಗ್ರಹಿಕೆಯನ್ನು ಉಂಟುಮಾಡಬಹುದು. ನಾವು ಈ ಕಾರಣದಿಂದಲೇ ಸತ್ಯವೇದ ಅನುವಾದದಲ್ಲಿ ಪದದಿಂದ ಪದ ಅನುವಾದವನ್ನು ಶಿಫಾರಿಸು ಮಾಡುವುದಿಲ್ಲ.
ಪೂರಕ ಅನುವಾದಕಾರನು ಉದ್ದೇಶಿತ ಭಾಷೆ ಅನುವಾದದಿಂದ ಪ್ರತ್ಯೇಕ ಜಾಗದಲ್ಲಿ ವ್ಯಾಪಕ ಸಂಪರ್ಕಿಸುವ ಭಾಷೆಯಲ್ಲಿ ಅನುವಾದ ಮಾಡುವುದು ಉಚಿತ ಪೂರಕ ಅನುವಾದವಾಗಿದೆ. ಈ ವಿಧಾನದ ಅನಾನುಕೂಲವೆಂದರೆ ಪೂರಕ ಅನುವಾದವು ಉದ್ದೇಶಿತ ಭಾಷಾ ಅನುವಾದಕ್ಕೆ ಸಂಭಂಧಿಸಿಲ್ಲ. ಪೂರಕ ಅನುವಾದಕನು ಸತ್ಯವೇದವನ್ನು ಅನುವಾದಿಸುವಾಗ ಈ ಅನಾನುಕೂಲತೆಯನ್ನು ನಿವಾರಿಸಲು ಸಹಾಯ ಮಾಡಬಹುದು, ಹೇಗೆಂದರೆ, ವಚನ ಸಂಖ್ಯೆ ಮತ್ತು ವಿರಾಮ ಚಿಹ್ನೆಯನ್ನು ಪೂರಕ ಅನುವದಕ್ಕೆ ಸೇರಿಸುವ ಮೂಲಕ ಮಾಡಬಹುದು. ಎರಡು ಅನುವಾದಗಳಲ್ಲಿ ವಚನ ಸಂಖ್ಯೆಗಳನ್ನು ಉಲ್ಲೇಖಿಸುವ ಮೂಲಕ ಮತ್ತು ಸರಿಯಾದ ಸ್ಥಳಗಳಲ್ಲಿ ವಿರಾಮ ಚಿಹ್ನೆಗಳನ್ನು ಎಚ್ಚರಿಕೆಯಿಂದ ಪುನರುತ್ಪಾದಿಸುವ ಮೂಲಕ, ಅನುವಾದ ಪರೀಕ್ಷಕನು ಪೂರಕ ಭಾಷಾಂತರದ ಯಾವ ಭಾಗವನ್ನು ಉದ್ದೇಶಿತ ಭಾಷಾ ಅನುವಾದದ ಯಾವ ಭಾಗವನ್ನು ಪ್ರತಿನಿಧಿಸುತ್ತದೆ ಎಂಬುವುದನ್ನು ಟ್ರ್ಯಾಕ್ ಮಾಡಬಹುದು. ಈ ವಿಧಾನದ ಪ್ರಯೋಜನವೆಂದರೆ ಪೂರಕ ಅನುವಾದವು ವ್ಯಾಪಕ ಸಂಪರ್ಕಿಸು ಭಾಷೆಯ ವ್ಯಾಕರಣ ಮತ್ತು ಪದ ಕ್ರಮವನ್ನು ಬಳಸಬಹುದು, ಮತ್ತು ಆದ್ದರಿಂದ ಅನುವಾದ ಪರೀಕ್ಷಕನಿಗೆ ಓದಲು ಮತ್ತು ಅರ್ಥಮಾಡಕೊಳ್ಳಲು ಸುಲಭವಾಗಬೇಕು. ವ್ಯಾಪಕ ಸಂಪರ್ಕಿಸುವ ಭಾಷೆಯ ವ್ಯಾಕರಣ ಮತ್ತು ಪದ ಕ್ರಮವನ್ನ ಬಳಸುವಾಗಲೂ, ಪೂರಕ ಅನುವಾದಕಾರನು ಪದಗಳನ್ನು ಅಕ್ಷರಶಃ ಅನುವಾದಿಸಲು ನೆನಪಿಟ್ಟುಕೊಳ್ಳಬೇಕು. ಇದು ಪರೀಕ್ಷಕನಿಗೆ
ಈ ಘಟಕದ ಉದ್ದೇಶಕ್ಕಾಗಿ, ”ಉದ್ದೇಶಿತ ಭಾಷೆ” ಸತ್ಯವೇದದ ಕರಡು ಪ್ರತಿಯನ್ನು ಮಾಡಿದ ಭಾಷೆಯನ್ನು ಸೂಚಿಸುತ್ತದೆ, ಮತ್ತು “ವ್ಯಾಪಕ ಸಂಪರ್ಕ ಭಾಷೆ” ಎನ್ನುವುದು ಪೂರಕ ಅನುವಾದ ಮಾಡುವ ಭಾಷೆಯನ್ನು ಸೂಚಿಸುತ್ತದೆ.
ಒಂದು ಪದವು ಕೇವಲ ಒಂದೇ ಮೂಲ ಅರ್ಥವನ್ನು ಹೊಂದಿದ್ದರೆ, ಪೂರಕ ಅನುವಾದಕನು ವ್ಯಾಪಕ ಸಂಪರ್ಕ ಭಾಷೆಯಲ್ಲಿನ ಮೂಲ ಅರ್ಥವನ್ನು ಪ್ರತಿನಿಧಿಸುವ ಪದವನ್ನು ಪೂರಕ ಅನುವಾದ ಉದ್ದಕ್ಕೂ ಬಳಸಬೇಕು. ಅದಾಗ್ಯೂ, ಉದ್ದೇಶಿತ ಭಾಷೆಯಲ್ಲಿನ ಒಂದು ಪದವು ಒಂದಕ್ಕಿಂತ ಹೆಚ್ಚು ಅರ್ಥವನ್ನು ಹೊಂದಿದ್ದರೆ, ಸಂದರ್ಭಕ್ಕೆ ಅನುಗುಣವಾಗಿ ಅರ್ಥವ ಬದಲಾಗುತ್ತದೆ, ನಂತರ ಪೂರಕ ಅನುವಾದಕನು ವ್ಯಾಪಕ ಸಂಪರ್ಕಿಸುವ ಭಾಷೆಯಲ್ಲಿನ ಪದ ಅಥವ ನುಡಿಗಟ್ಟನ್ನು ಬಳಸಬೇಕು, ಅದು ಪದವನ್ನು ಸನ್ನೀವೇಶದಲ್ಲಿ ಬಳಸಿದ ವಿಧಾನವನ್ನು ಉತ್ತಮವಾಗಿ ಪ್ರತಿನಿಧಿಸುತ್ತದೆ. ಅನುವಾದ ಪರೀಕ್ಷಕನಿಗೆ ಗೊಂದಲವನ್ನು ತಪ್ಪಿಸಲು, ಪೂರಕ ಅನುವಾದಕನು ಮೊದಲ ಬಾರಿಗೆ ಈ ಪದವನ್ನು ಬೇರೆ ರೀತಿಯಲ್ಲಿ ಬಳಸಿದಾಗ ಇತರ ಅರ್ಥವನ್ನು ಆವರಣ ಚಿಹ್ನೆಯಲ್ಲಿ ಹಾಕಬಹುದು, ಇದರಿಂದಾಗಿ ಅನುವಾದಕ ಪರೀಕ್ಷಕನು ಪದಕ್ಕೆ ಒಂದಕ್ಕಿಂತ ಹೆಚ್ಚು ಅರ್ಥವನ್ನು ಹೊಂದಿರುವುದನ್ನು ನೋಡಬಹುದು ಮತ್ತು ಅರ್ಥಮಾಡಿಕೊಳ್ಳಬಹುದು. ಉದಾಹರಣೆಗೆ, ಪೂರಕ ಅನುವಾದದಲ್ಲಿ ಉದ್ದೇಶಿತ ಭಾಷೆಯ ಪದವನ್ನು “ಹೋಗು” ಎಂದು ಅನುವಾದಿಸಿದ್ದರೆ “ಬನ್ನಿ(ಹೋಗಿ)” ಎಂದು ಅವರು ಬರೆಯಬಹುದು, ಆದರೆ ಹೊಸ ಸನ್ನಿವೇಶದಲ್ಲಿ ಇದನ್ನು “ ಬನ್ನಿ” ಎಂದು ಉತ್ತಮವಾಗಿ ಅನುವಾದಿಸಲಾಗುತ್ತದೆ.
ಉದ್ದೇಶಿತ ಭಾಷಾ ಅನುವಾದವು ಒಂದು ನಾಣ್ಣುಡಿಯನ್ನು ಬಳಸಿದರೆ, ಪೂರಕ ಅನುವಾದದ ಅನುವಾದಕನು ನಾಣ್ಣುಡಿಯನ್ನು ಅಕ್ಷರಶಃ ಅನುವಾದಿಸಿದರೆ (ಪದಗಳ ಅರ್ಥಕ್ಕೆ ಅನುಗುಣವಾಗಿ) ಅನುವಾದ ಪರೀಕ್ಷಿಕನಿಗೆ ಇದು ಹೆಚ್ಚು ಸಹಾಯಕವಾಗುತ್ತದೆ, ಆದರೆ ನಾಣ್ಣುಡಿಯ ಅರ್ಥವನ್ನು ಆವರಣದ ಚಿಹ್ನೆಯಲ್ಲಿ ಸೇರಿಸಿ. ಈ ರೀತಿಯಲ್ಲಿ, ಉದ್ದೇಶಿತ ಭಾಷಾ ಅನುವಾದವು ಆ ಸ್ಥಳದಲ್ಲಿ ಒಂದು ನಾಣ್ಣುಡಿಯನ್ನು ಬಳಸುವುದನ್ನು ಅನುವಾದ ಪರೀಕ್ಷಕರು ನೋಡಬಹುದು ಮತ್ತು ಅದರ ಅರ್ಥವನ್ನು ಸಹ ತಿಳಿದುಕೊಳ್ಳಬಹುದು. ಪೂರಕ ಅನುವಾದಕನು ನಾಣ್ಣುಡಿಯನ್ನು ಈ ರೀತಿಯಾಗಿ ಅನುವಾದಿಸಬಹುದು, “ಆತನು ಬಕೆಟ್ ಒದ್ದನು (ಅವನು ಸತ್ತನು).” ನಾಣ್ಣುಡಿಗಳು ಒಂದಕ್ಕಿಂತ ಹೆಚ್ಚು ಬಾರಿ ಕಂಡುಬಂದಲ್ಲಿ, ಪೂರಕ ಅನುವಾದದ ಅನುವಾದಕನು ಪ್ರತಿ ಬಾರಿಯು ಅದನ್ನು ವಿವರಿಸುವ ಅಗತ್ಯವಿರುವುದಿಲ್ಲ, ಆದರೆ ಅದನ್ನು ಅಕ್ಷರಶಃ ಅನುವಾದಿಸಬಹುದು ಅಥವ ಅದರ ಅರ್ಥವನ್ನು ವಿವರಿಸಬಹುದು.
ಪೂರಕ ಅನುವಾದದಲ್ಲಿ, ಪೂರಕ ಅನುವಾದಕರು ವ್ಯಾಪಕ ಸಂಪರ್ಕಿಸುವ ಭಾಷೆಯ ಅಲಂಕಾರಗಳನ್ನು ಪ್ರತಿನಿಧಿಸಬೇಕು. ಇದರರ್ಥ ಪೂರಕ ಅನುವಾದಕ ನಾಮಪದವನ್ನು ನಾಮಪದಗಳೊಂದಿಗೆ, ಕ್ರಿಯಾಪದವನ್ನು ಕ್ರಿಯಪದಗಳೊಂದಿಗೆ ಮತ್ತು ಮಾರ್ಪಡಕಗಳನ್ನು ಮಾರ್ಪಡಕಗಳೊಂದಿಗೆ ಅನುವಾದಿಸಬೇಕು. ಉದ್ದೇಶಿತ ಭಾಷೆ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುವುದನ್ನು ನೋಡಲು ಅನುವಾದ ಪರೀಕ್ಷಕರಿಗೆ ಇದು ಸಹಾಯ ಮಾಡುತ್ತದೆ
ಪೂರಕ ಅನುವಾದದಲ್ಲಿ, ಪೂರಕ ಅನುವಾದಕನು ಉದ್ದೇಶಿತ ಭಾಷೆಯ ಪ್ರತಿಯೊಂದು ಉಪವಾಕ್ಯವನ್ನು ವ್ಯಾಪಕ ಸಂಪರ್ಕಿಸುವ ಭಾಷೆಯಲ್ಲಿ ಒಂದೇ ರೀತಿಯ ಉಪವಾಕ್ಯಗಳೊಂದಿಗೆ ಪ್ರತಿನಿಧಿಸಬೇಕು. ಉದಾಹರಣೆಗೆ, ಉದ್ದೇಶಿತ ಭಾಷೆಯ ಉಪವಾಕ್ಯವು ಆಜ್ಞೆಯನ್ನು ಬಳಸಿದರೆ, ಪೂರಕ ಅನುವಾದವು ಸಲಹೆ ಅಥವ ವಿನಂತಿ ಬಳಸದೆ ಆಜ್ಞೆಯನ್ನೆ ಬಳಸಬೇಕು. ಅಥವಾ ಉದ್ದೇಶಿತ ಭಾಷೆಯ ಉಪವಾಕ್ಯವು ವಾಕ್ಚಾತುರ್ಯದ ಪ್ರಶ್ನೆಯನ್ನು ಬಳಸಿದರೆ, ಪೂರಕ ಅನುವಾದವು ಸಹ ಹೇಳಿಕೆ ಅಥವಾ ಇತರ ಅಭಿವ್ಯಕ್ತಿಗಿಂತ ಪ್ರಶ್ನೆಯನ್ನು ಬಳಸುತ್ತದೆ.
ಉದ್ದೇಶಿತ ಭಾಷಾ ಅನುವಾದದಲ್ಲಿರುವಂತೆ ಪೂರಕ ಅನುವಾದಕರು ಅದೇ ರೀತಿಯಲ್ಲಿ ವಿರಾಮಚಿಹ್ನೆಯನ್ನು ಬಳಸಬೇಕು. ಉದಾಹಾಣಗೆ ಉದ್ದೇಶಿತ ಭಾಷೆಯಲ್ಲಿ ಅಲ್ಪವಿರಾಮ ಇದ್ದರೆ, ಪೂರಕ ಅನುವಾದಕನು ಸಹ ಪೂರಕ ಅನುವಾದದಲ್ಲಿ ಅಲ್ಪವಿರಾಮ ಬಳಸಬೇಕು. ಪೂರ್ಣ ವಿರಾಮ ಚಿಹ್ನೆ, ಆಶ್ಚರ್ಯಕರ ಚಿಹ್ನೆಗಳು, ಉಲ್ಲೇಖ ಗಳು ಮತ್ತು ಎಲ್ಲಾ ಚಿಹ್ನೆಗಳು ಎರಡು ಅನುವಾದಲ್ಲಿ ಒಂದೇ ರೀತಿಯಲ್ಲಿರಬೇಕು. ಈ ರೀತಿಯಲ್ಲಿ ಪೂರಕ ಅನುವಾದದ ಯಾವ ಭಾಗಗಳು ಉದ್ದೇಶ ಭಾಷೆಯ ಯಾವ ಭಾಗಗಳನ್ನು ಪ್ರತಿನಿಧಿಸುತ್ತದೆ ಎಂಬುವುದನ್ನು ಅನುವಾದ ಪರೀಕ್ಷಕರು ಸುಲಭಾವಾಗಿ ನೋಡಬಹುದು. ಸತ್ಯವೇದದ ಪೂರಕ ಅನುವಾದವನ್ನು ಮಾಡುವಾಗ, ಎಲ್ಲಾ ಅಧ್ಯಾಯಗಳು ಮತ್ತು ವಚನ ಸಂಖ್ಯೆಗಳು ಸರಿಯಾದ ಸ್ಥಳದಲ್ಲಿವೆಯೆ ಎಂದು ಖಚಿತಪಡಿಸಿಕೊಳ್ಳುವುದು ಬಹಳ ಮುಖ್ಯ.
ಕೆಲವೊಮ್ಮೆ ಉದ್ದೇಶಿತ ಭಾಷೆಯಲ್ಲಿನ ಪದಗಳು ವ್ಯಾಪಕ ಸಂಪರ್ಕಿಸುವ ಭಾಷೆಯಲ್ಲಿರುವ ಪದಗಳಿಗಿಂತ ಹೆಚ್ಚು ಸಂಕೀರ್ಣವಾಗಿರುತ್ತದೆ. ಈ ಸಂದರ್ಭದಲ್ಲಿ, ಪೂರಕ ಅನುವಾದವು ಉದ್ದೇಶಿತ ಭಾಷೆಯ ಪದವನ್ನು ವ್ಯಾಪಕ ಸಂಪರ್ಕಿಸುವ ಭಾಷೆಯಲ್ಲಿ ದೀರ್ಘ ನುಡಿಗಟ್ಟಿನೊಂದಿಗೆ ಪ್ರತಿನಿಧಿಸುವ ಅಗತ್ಯವಿದೆ. ಅನುವಾದ ಪರೀಕ್ಷಕನು ಸಾಧ್ಯವಾದಷ್ಟು ಅರ್ಥವನ್ನು ನೋಡಲು ಇದು ಸಹಾಯವಾಗುತ್ತದೆ. ಉದ್ದೇಶಿತ ಭಾಷೆಯಲ್ಲಿ ಒಂದು ಪದವನ್ನು ಭಾಷಾಂತರಿಸಲು ವ್ಯಾಪಕ ಸಂಪರ್ಕಿಸುವ ಭಾಷೆಯಲ್ಲಿನ ಒಂದು ನುಡಿಗಟ್ಟನ್ನು ಬಳಸುವುದು ಅಗತ್ಯವಾಗಿರಬಹುದು (ಉದಾಹರಣೆಗೆ “ಮೇಲಕ್ಕೆ ಹೋಗು” ಅಥವ “ಮಲಗಿಕೊಳ್ಳಿ”). ಅನೇಕ ಭಾಷೆಗಳಲ್ಲಿ ವ್ಯಾಪಕ ಸಂಪರ್ಕಿಸುವ ಭಾಷೆಯಲ್ಲಿನ ಸಮಾನ ಪದಗಳಿಂತ ಹೆಚ್ಚಿನೆ ಮಾಹಿತಿಯನ್ನು ಒಳಗೊಂಡಿರುವ ಪದಗಳನ್ನು ಹೊಂದಿವೆ. ಈ ಸಂದರ್ಭದಲ್ಲಿ, ಪೂರಕ ಅನುವಾದಕರು ಹೆಚ್ಚುವರಿ ಮಾಹತಿಯನ್ನು ಆವರಣ ಚಿಹ್ನೆಯಲ್ಲಿ ಒಳಗೊಂಡಿದ್ದರ ಹೆಚ್ಚು ಸಹಾಯವಾಗುತ್ತದೆ , ಉದಾಹರಣೆಗೆ “ನಾವು(ಅಂತರ್ಗತ)”,ಅಥವಾ “ನೀವು(ಸ್ತ್ರೀಲಿಂಗ, ಬಹುವಚನ)”.
ಪೂರಕ ಅನುವಾದವು ವ್ಯಾಪಕ ಸಂಪರ್ಕಿಸುವ ಭಾಷೆಯಲ್ಲಿನ ವಾಕ್ಯ ರಚನೆಯನ್ನು ಬಳಸಬೇಕೆ ಹೊರತಾಗಿ ಉದ್ದೇಶಿತ ಭಾಷೆಯಲ್ಲಿ ಬಳಸುವ ರಚನೆಯಲ್ಲಾ. ಇದರರ್ಥ ಪೂರಕ ಅನುವಾದವು ವ್ಯಾಪಕ ಸಂಪರ್ಕ ಭಾಷೆಯಲ್ಲಿನ ಸ್ವಾಭಾವಿಕ ಪದ ಕ್ರಮವನ್ನು ಬಳಸಬೇಕೇ ಹೊರತಾಗಿ ಉದ್ದೇಶಿತ ಭಾಷೆಯಲ್ಲಿ ಬಳಸುವ ಪದ ಕ್ರಮವಲ್ಲ. ಪೂರಕ ಅನುವಾದವು ಪರಸ್ಪರ ನುಡಿಗಟ್ಟುಗಳಿಗೆ ಸಂಬಂಧಿಸಿದ ವಿಧಾನವನ್ನು ಮತ್ತು ವ್ಯಾಪಕ ಸಂಪರ್ಕಿಸುವ ಭಾಷೆಯ ಸ್ವಾಭಾವಿಕವಾದ ಕಾರಣ ಅಥವಾ ಉದ್ದೇಶದಂತಹ ತಾರ್ಕಿಕ ಸಂಬಂಧಗಳನ್ನು ಸೂಚಿಸುವ ವಿಧಾನವನ್ನು ಸಹ ಬಳಸಬೇಕು.
ನಾನು ಸಭೆಯ ಗುಂಪಿಗೆ ಅಥವಾ ಬೈಬಲ್ ಅನುವಾದ ಸಂಸ್ಥೆಯ ಪ್ರತಿನಿಧಿಯಾಗಿ ಬೈಬಲ್ ಅನುವಾದ ಸಂಸ್ಥೆಯ ಹೆಸರನ್ನು ಅಥವಾ ಸಭೆಯ ಗುಂಪಿನ ಹೆಸರನ್ನು ಇಲ್ಲಿ ತುಂಬಿಸಿರಿ ಭಾಷೆಯ ಸಮುದಾಯಕ್ಕೆ ಭಾಷೆಯ ಸಮುದಾಯದ ಹೆಸರನ್ನು ಇಲ್ಲಿ ಬರೆಯಿರಿ ಸೇವೆ ಮಾಡುತ್ತಿದ್ದೇನೆ. ಅನುವಾದವನ್ನು ಅನುಮೋದನೆ ಮಾಡುತ್ತೇನೆ, ಮತ್ತು ಈ ಕೆಳಗಿನವು ದೃಢೀಕರಿಸುತ್ತಿದ್ದೇನೆ :
ಎರಡನೇ ಬಾರಿ ಅನುವಾದ ತಂಡದೊಂದಿಗೆ ಭೇಟಿಯಾದನಂತರವು ಸಮಸ್ಯೆಗಳು ಪರಿಷ್ಕಾರವಾಗದೇ ಇದ್ದಲ್ಲಿ, ದಯವಿಟ್ಟು ಅವುಗಳನ್ನು ಇಲ್ಲಿ ಬರೆಯಿರಿ.
ಸಹಿ ಮಾಡಲಾಗಿದೆ: ಇಲ್ಲಿ ನಿಮ್ಮ ಸಹಿಹಾಕಿರಿ
ಸ್ಥಾನ : ಇಲ್ಲಿ ನಿಮ್ಮ ಸ್ಥಾನವನ್ನು ಬರೆಯಿರಿ
ಗೇಟ್ ವೆ ಭಾಷೆಗಳಿಗಾಗಿ, ನೀವು [ಮೂಲ ವಾಕ್ಯಭಾಗಗಳ ವಿಧಾನ] ವನ್ನು ಅನುಸರಿಸಬೇಕಾದ ಅವಶ್ಯಕತೆಯಿದೆ (../../process/source-text-process/01.md) ಇದರಿಂದ ನಿಮ್ಮ ಅನುವಾದವು ಮೂಲ ವಾಕ್ಯಗಳಾಗಿ ಮಾರ್ಪಡುವುದು.
ಅನುವಾದವು ಸುಲಭವಾಗಿ ಮಾಡಬಲ್ಲ, ಅರ್ಥಮಾಡಿಕೊಳ್ಳ ಮತ್ತು ಸಾಧ್ಯವಾದಷ್ಟು ಓದುವುದಕ್ಕೆ ಸುಲಭವಾಗಿರುವ ಹಾಗೆ ಬೈಬಲ್ ಪುಸ್ತಕದ ಅನುವಾದದನಂತರ, ಇಲ್ಲದೇ ಅದರ ಮಧ್ಯದಲ್ಲಿ ಅಥವಾ ಅದಕ್ಕೆ ಮುಂಚಿತವಾಗಿಯೂ ನೀವು ಮಾಡುವ ಪರಿಶೀಲನೆಗಳು ಇರುತ್ತವೆ. ಈ ವಿಷಯಗಳ ಮೇಲೆ ಪ್ರಮಾಣದ ಮಾದರಿಗಳು ಇಲ್ಲಿ ಕ್ರಮವುಳ್ಳ ಮತ್ತು ಪ್ರಕಾಶನ ಕೆಳಗೆ ಒಂಗೂಡಿಸಲ್ಪಟ್ಟಿವೆ, ಆದರೆ ಅನುವಾದ ತಂಡವು ಅನುವಾದದ ವಿಧಾನದ ಕುರಿತಾಗಿ ಆಲೋಚನೆ ಮಾಡುವ ಮತ್ತು ನಿರ್ಣಯ ತೆಗೆದುಕೊಳ್ಳುವ ವಿಷಯಗಳಿವೆ.
ನೀವು ಅನುವಾದ ಮಾಡುವುದಕ್ಕೆ ಮುಂಚಿತವಾಗಿ ಈ ಕೆಳಗೆ ಕೊಡಲ್ಪಟ್ಟಿರುವ ವಿಷಯಗಳ ಕುರಿತಾಗಿ ಅನುವಾದ ತಂಡವು ನಿರ್ಣಯಗಳು ತೆಗೆದುಕೊಳ್ಳಬೇಕಾಗಿರುತ್ತದೆ.
ನೀವು ಕೆಲವೊಂದು ಅಧ್ಯಾಯಗಳನ್ನು ಅನುವಾದ ಮಾಡಿದನಂತರ, ಅನುವಾದ ತಂಡವು ಅನುವಾದ ಮಾಡುವಾಗ ಕಂಡುಕೊಂಡ ಕೆಲವೊಂದು ಸಮಸ್ಯೆಗಳನ್ನು ಪರಿಷ್ಕಾರ ಮಾಡುವುದಕ್ಕೆ ಈ ನಿರ್ಣಯಗಳಲ್ಲಿ ಕೆಲವೊಂದನ್ನು ತಿರುಗಿ ಸರಿಪಡಿಸಬಹುದು. ನಿಮಗೆ ಪ್ಯಾರ ಟೆಕ್ಸ್ಟ್ ಲಭ್ಯದಲ್ಲಿರುವುದಾದರೆ, ಈ ಸಮಯದಲ್ಲಿ ಪ್ಯಾರ ಟೆಕ್ಸ್ಟ್.ನಲ್ಲಿ ಸರಿಯಾದ ಪರಿಶೀಲನೆಗಳನ್ನು ಮಾಡಬಹುದು. ಇದರಿಂದ ನೀವು ನುಡಿಗಟ್ಟುಗಳ ಕುರಿತಾಗಿ ಮತ್ತು ಚಿಹ್ನೆಗಳ ಕುರಿತಾಗಿ ಹೆಚ್ಚಿನ ನಿರ್ಣಯಗಳನ್ನು ತೆಗೆದುಕೊಳ್ಳಬೇಕೋ ಇಲ್ಲವೋ ಎಂದು ತಿಳಿದುಕೊಳ್ಳಬಹುದು.
ಪುಸ್ತಕವನ್ನು ಸಂಪೂರ್ತಿಗೊಳಿಸಿದನಂತರ, ಎಲ್ಲಾ ವಚನಗಳು ಅಲ್ಲಿವೆಯೆಂದು ನಿರ್ಧಾರ ಮಾಡಿಕೊಳ್ಳುವುದಕ್ಕೆ ನೀವು ಪರಿಶೀಲನೆ ಮಾಡಬಹುದು, ಮತ್ತು ನೀವು ಆಯಾ ವಿಭಾಗಗಳ ಹೆಸರುಗಳನ್ನು ಕೂಡ ನಿರ್ಣಯಿಸಬಹುದು. ನೀವು ಅನುವಾದ ಮಾಡುತ್ತಿರುವಾಗ ವಿಭಾಗಗಳ ಹೆಸರುಗಳನ್ನು ಬರೆಯುವ ಆಲೋಚನೆಗಳಿಗೆ ಇದು ಸಹಾಯಕರವಾಗಿರುತ್ತದೆ.
ನೀವು ಅನುವಾದವನ್ನು ಓದುತ್ತಿರುವಾಗ, ಪದಗಳು ಯಾವ ರೀತಿ ಉಪಯೋಗಿಸಲ್ಪಟ್ಟಿವೆ ಎನ್ನುವದರ ಕುರಿತಾಗಿ ನಿಮಗೆ ನೀವೇ ಈ ಪ್ರಶ್ನೆಗಳನ್ನು ಹಾಕಿಕೊಳ್ಳಿರಿ. ಒಳ್ಳೇಯ ಭಾಷೆಯನ್ನು ವ್ಯಕ್ತಪಡಿಸುವುದಕ್ಕೆ ಸೂಕ್ತವಾದ ವರ್ಣಮಾಲೆಯನ್ನು ಉಪಯೋಗಿಸಿದ್ದಾರೋ ಇಲ್ಲವೋ ಎಂದು ತಿಳಿದುಕೊಳ್ಳಲು ಮತ್ತು ಸರಿಯಾದ ವಿಧಾನದಲ್ಲಿ ಪದಗಳು ಬರೆದಿದ್ದಾರೋ ಇಲ್ಲವೋ ಎಂದು ನಿರ್ಧಾರ ಮಾಡಿಕೊಳ್ಳಲು ಈ ಪ್ರಶ್ನೆಗಳು ಸಹಾಯ ಮಾಡುತ್ತವೆ. ಇದರಿಂದ ಅನುವಾದವನ್ನು ಓದುವುದಕ್ಕೆ ತುಂಬಾ ಸುಲಭವಾಗಿರುತ್ತದೆ.
ಅಕ್ಷರವಾಗಲಿ ಅಥವಾ ನುಡಿಗಟ್ಟಾಗಲಿ ಸರಿಯಾಗಿಲ್ಲವೆಂದು ಕಂಡುಬಂದರೆ, ಅದರ ಕುರಿತಾಗಿ ಬರೆದುಕೊಳ್ಳಿರಿ, ಇದರಿಂದ ನೀವು ಸರಿಯಿಲ್ಲದ ವಿಷಯಗಳ ಕುರಿತಾಗಿ ಅನುವಾದ ತಂಡದೊಂದಿಗೆ ಚರ್ಚಿಸಬಹುದು.
ಶ್ರೋತೃಗಳು ಅನುವಾದವನ್ನು ಸುಲಭವಾಗಿ ಓದಿ ಅರ್ಥಮಾಡಿಕೊಳ್ಳಬೇಕಾದರೆ, ನೀವು ಪದಗಳನ್ನು ಸಮಂಜಸವಾಗಿ ಉಚ್ಚರಿಸುವುದು ಬಹಳ ಮುಖ್ಯ. ಉದ್ದೇಶಿತ ಭಾಷೆಯಲ್ಲಿ ಬರವಣಿಗೆ ಅಥವಾ ಕಾಗುಣಿತ ಸಂಪ್ರದಾಯವಿಲ್ಲದಿದ್ದರೆ ಇದು ಕಷ್ಟಕರವಾಗುತ್ತದೆ. ಅನುವಾದದ ವಿವಿಧ ಭಾಗದಲ್ಲಿ ಹಲವಾರು ಜನರು ಕೆಲಸ ಮಾಡುತ್ತಿರುವಾಗ, ಅವರು ಪರಸ್ಪರ ಒಂದೇ ಪದವನ್ನು ವಿಭಿನ್ನವಾಗಿ ಉಚ್ಚರಿಸಬಹುದು. ಆ ಕಾರಣಕ್ಕಾಗಿ, ಅನುವಾದದ ತಂಡವು ಪದಗಳನ್ನು ಉಚ್ಚರಿಸಲು ಹೇಗೆ ಯೋಜಿಸುತ್ತದೆ ಎಂಬುವುದರ ಕುರಿತು ಮಾತನಾಡಲು ಅನುವಾದಡ ತಂಡ ಅನುವಾದವನ್ನು ಪ್ರಾರಂಭಿಸುವ ಮೊದಲು ಒಟ್ಟಿಗೆ ಭೇಟಿಯಾಗುವುದು ಬಹಳ ಮುಖ್ಯ
ಉಚ್ಚರಿಸಲು ಕಷ್ಟಕರವಾದ ಪದಗಳ ಬಗ್ಗೆ ತಂಡವಾಗಿ ಚರ್ಚಿಸಿರಿ. ಪದಗಳಲ್ಲಿ ಪ್ರತಿನಿಧಿಸಲು ಕಷ್ಟವಾಗಿರುವ ಶಬ್ದಗಳಿದ್ದರೆ ನೀವು ಬಳಸುತ್ತಿರುವ ಬರವಣೆಗೆಯ ವ್ಯವಸ್ಥೆಯಲ್ಲಿ ನೀವು ಬದಲಾವಣೆ ಮಾಡಬೇಕಾಗಬಹುದು (ನೋಡಿಆಲ್ಫಾet/Orthography). ಪದಗಳಲ್ಲಿನ ಶಬ್ದಗಳನ್ನು ವಿಭಿನ್ನ ರೀತಿಯಲ್ಲಿ ಪ್ರತಿನಿಧಿಸಬಹುದಾದರೆ, ಅವುಗಳನ್ನು ಹೇಗೆ ಉಚ್ಚರಿಸಬೇಕೆಂದು ತಂಡವು ಬೇಕಾಗುತ್ತದೆ. ವರ್ಣಮಾಲೆಯ ಕ್ರಮಕ್ಕನುಗುಣಾಗಿ ಉಪಯೋಗಿಸಲು ತೀರ್ಮಾನಿಸಿದ ಕಾಗುಣಿತಗಳ ಪಟ್ಟಿಯನ್ನು ಮಾಡಿರಿ. ಭಾಷಾಂತರಿಸುವಾಗ ಸಮಾಲೊಚಿಸುವುದಕ್ಕಾಗಿ ತಂಡದ ಪ್ರತಿಯೊಬ್ಬರು ಈ ಪಟ್ಟಿಯ ನಕಲನ್ನು ಹೊಂದಿದ್ದಾರೆಂದು ಖಚಿತಪಡಿಸಿಕೊಳ್ಳಿ. ಇತರ ಕಷ್ಟಕರವಾದ ಪದಗಳನ್ನು ಪಟ್ಟಿಗೆ ಸೇರಿಸಿರಿ, ಮತ್ತು ಎಲ್ಲರಪಟ್ಟಿಗೆ ಆಎಲ್ಲಾ ಕಾಗುಣಿತಗಳು ಸೇರಿಸೆಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಿರಿ. ನಿಮ್ಮ ಕಾಗುಣಿತ ಪಟ್ಟಿಯನ್ನು ನಿರ್ವಹಿಸಲು ಸ್ಪ್ರೆಡ್ಶೀಟ್ ಬಳಸುವುದು ಸಹಾಯಕರವಾಗಬಹುದು. ಇದನ್ನು ಸುಲಭವಾಗಿ ನವಿಕರಿಸಬಹುದು ಮತ್ತು ವಿದ್ಯುನ್ಮಾನವಾಗಿ ಹಂಚಿಕೊಳ್ಳಬಹುದು ಅಥವ ನಿಯತಕಾಲಿಕವಾಗಿ ಮುದ್ರಿಸಬಹುದು.
ಸತ್ಯವೇದದಲ್ಲಿರುವ ಜನರ ಮತ್ತು ಸ್ಥಳಗಳ ಹೆಸರುಗಳು ಉಚ್ಚರಿಸಲು ಕಷ್ಟಕರವಾಗಿರುತ್ತದೆ ಏಕೆಂದರೆ ಅವುಗಳಲ್ಲಿ ಉದ್ದೇಶಿತ ಭಾಷೆಯಲ್ಲಿ ತಿಳಿದಿರುವುದಿಲ್ಲ. ಇವುಗಳನ್ನು ನಿಮ್ಮ ಕಾಗುಣಿತ ಪಟ್ಟಿಯಲ್ಲಿ ಸೇರಿಸಲು ಮರಿಯಬಾರದು
ಕಾಗುಣಿತವನ್ನು ಪರೀಕ್ಷಿಸಲು ಕಂಪ್ಯೂಟರ್ ಉತ್ತಮ ಸಹಾಯವಾಗಬಹುದು. ನೀವು ಗೇಟ್ ವೇ ಭಾಷೆಯಲ್ಲಿ ಕೆಲಸ ಮಾಡುತ್ತಿದ್ದರೆ, ಅದರಲ್ಲಿ ವರ್ಡ್ ಪ್ರೊಸೆಸರ್ ಶಬ್ದಕೋಶವನ್ನು ಮೊದಲೇ ಹೊಂದಿರುತ್ತದೆ. ನೀವು ಬೇರೆ ಭಾಷೆಯಲ್ಲಿ ಅನುವಾದಿಸುತ್ತಿದ್ದರೆ, ತಪ್ಪಾಗಿ ಬರೆಯಲಾದ ಪದಗಳನ್ನು ಸರಿಪಡಿಸಲು ನೀವು ವರ್ಡ್ ಪ್ರೊಸೆಸರ್ನ ’ಹುಡುಕಾಟ ಮತ್ತು ಬದಲಿ’ ಆಯ್ಕೆಯನ್ನು ಬಳಸಬಹುದು. ಪ್ಯಾರಾ ಪಠ್ಯವು ಎಲ್ಲಾ ರೂಪಾಂತರ ಕಾಗುಣಿತಗಳನ್ನು ಹೊಂದಿರುವ ಕಾಗುಣಿತ ಪರಿಶೀಲನಾ ವೈಶಿಷ್ಟ್ಯವನ್ನು ಹೊಂದಿದೆ. ಇದು ನಿಮಗೆ ಇವುಗಳನ್ನು ಪ್ರಸ್ತುತಪಡಿಸುತ್ತದೆ ಮತ್ತು ನಂತರ ನೀವು ಯಾವ ಕಾಗುಣಿತಗಳನ್ನು ಬಳಸಲು ನಿರ್ಧರಿಸಿದ್ದೀರಿ ಎಂಬುವುದನ್ನು ನೀವು ಆಯ್ಕೆ ಮಾಡಬಹುದು.
“ವಿರಾಮ ಚಿಹ್ನೆ” ಎನ್ನುವದು ಒಂದು ವಾಕ್ಯವನ್ನು ಯಾವರೀತಿ ಓದಬೇಕು ಅಥವಾ ಯಾವ ರೀತಿ ಅರ್ಥಮಾಡಿಕೊಳ್ಳಬೇಕು ಎಂದು ತಿಳಿಸುವ ಗುರುತುಗಳನ್ನು ಸೂಚಿಸುತ್ತದೆ. ಅಲ್ಪ ವಿರಾಮ ಅಥವಾ ಪೂರ್ಣ ವಿರಾಮ ಚಿಹ್ನೆ ಮತ್ತು ಮಾತನಾಡುವ ವ್ಯಕ್ತಿಯ ಮಾತುಗಳ ಸುತ್ತಲು ಇರುವ ಉಲ್ಲೇಖನ ಗುರುತುಗಳಂತೆ ಅಲ್ಲಲ್ಲಿ ನಿಲ್ಲಿಸಿ ಓದುವುದಕ್ಕೆ ಇರುವ ಗುರುತುಗಳೆಲ್ಲವನ್ನು ಉದಾಹರಣೆಗಳಲ್ಲಿ ನೋಡಬಹುದು . ಓದುಗಾರರು ಅನುವಾದವನ್ನು ಸರಿಯಾಗಿ ಅರ್ಥ ಮಾಡಿಕೊಂಡು ಮತ್ತು ಓದುವುದಕ್ಕೆ ಸುಲಭವಾಗಿರುವಂತೆ ಮಾಡುವ ಕ್ರಮದಲ್ಲಿ, ನೀವು ಸಮಂಜಸವಾದ ವಿರಾಮ ಚಿಹ್ನೆಗಳನ್ನು ಉಪಯೋಗಿಸುವದು ತುಂಬಾ ಪ್ರಾಮುಖ್ಯ.
ಅನುವಾದ ಮಾಡುವುದಕ್ಕೆ ಮುಂಚಿತವಾಗಿ, ಅನುವಾದ ತಂಡವು ಅನುವಾದದಲ್ಲಿ ನೀವು ಉಪಯೋಗಿಸುವ ವಿರಾಮ ಚಿಹ್ನೆಗಳ ವಿಧಾನಗಳ ಕುರಿತು ನಿರ್ಣಯಿಸುವ ಅವಶ್ಯಕತೆ ಇರುತ್ತದೆ. ರಾಷ್ಟ್ರೀಯ ಭಾಷೆಯು ಉಪಯೋಗಿಸುವ ಅಥವಾ ಅದಕ್ಕೆ ಸಂಬಂಧಪಟ್ಟ ಭಾಷೆಯ ಬೈಬಲ್ ಉಪಯೋಗಿಸುವ ವಿರಾಮ ಚಿಹ್ನೆಗಳ ವಿಧಾನವನ್ನು ತೆಗೆದುಕೊಳ್ಳುವುದು ತುಂಬಾ ಸುಲಭವಾಗಿರಬಹುದು. ಒಂದುಸಲ ತಂಡವು ವಿಧಾನದ ಕುರಿತಾಗಿ ನಿರ್ಣಯಿಸಿದಾಗ, ಪ್ರತಿಯೊಬ್ಬರು ಅದನ್ನೇ ಅನುಸರಿಸತಕ್ಕದ್ದು . ವಿವಿಧ ವಿರಾಮ ಚಿಹ್ನೆಗಳ ಗುರುತುಗಳನ್ನು ಸರಿಯಾಗಿ ಉಪಯೋಗಿಸುವು ಉದಾಹರಣೆಗಳ ಮಾರ್ಗದರ್ಶಕ ಹಾಳೆಯನ್ನು ತಂಡದಲ್ಲಿರುವ ಪ್ರತಿಯೊಬ್ಬ ಸದಸ್ಯರಿಗೆ ಕೊಡುವುದು ತುಂಬಾ ಸಹಾಯಕರವಾಗಿರುತ್ತದೆ.
ಮಾರ್ಗದರ್ಶಕ ಹಾಳೆ ಇದ್ದಾಗ್ಯೂ , ವಿರಾಮ ಚಿಹ್ನೆಗಳನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸದಿರುವುದು ಅನುವಾದಕರು ಮಾಡುವ ಸಹಜವಾದ ತಪ್ಪು . ಈ ಕಾರಣದಿಂದಲೇ, ಒಂದು ಪುಸ್ತಕವನ್ನು ಅನುವಾದ ಮಾಡಿದಾದನಂತರ, ಅದನ್ನು ParaTExt (ಸಾಹಿತ್ಯಿಕ ವ್ಯಾಖ್ಯಾಯನ) ಒಳಗೆ ತೆಗೆದುಕೊಂಡು ಬರಬೇಕೆಂದು ನಾವು ಶಿಫಾರಸು ಮಾಡುತ್ತೇವೆ. ParaTExt ನೊಳಗೆ ಭಾಷಾಂತರ ಮಾಡುವ ಭಾಷೆಯಲ್ಲಿ ವಿರಾಮ ಚಿಹ್ನೆಗಳಿಗಾಗಿ ನೀವು ಕೆಲವೊಂದು ನಿಯಮಗಳನ್ನು ಇಡಬಹುದು, ಇದಾದನಂತರ ಅದರಲ್ಲಿರುವ ವಿವಿಧ ವಿರಾಮ ಚಿಹ್ನೆಗಳನ್ನು ಪರಿಶೀಲನೆ ಮಾಡಿರಿ. ParaTExt ವಿರಾಮ ಚಿಹ್ನೆಗಳ ತಪ್ಪುಗಳನ್ನು ಕಂಡುಹಿಡಿಯುತ್ತದೆ. ಆಗ ನೀವು ಅವುಗಳನ್ನು ಸರಿಪಡಿಸಬಹುದು. ಈ ಎಲ್ಲಾ ವಿರಾಮ ಚಿಹ್ನೆಗಳ ಪರಿಶೀಲನೆಯನ್ನು ಮಾಡಿದಾದನಂತರ, ಅನುವಾದದಲ್ಲಿ ಸರಿಯಾಗಿ ವಿರಾಮ ಚಿಹ್ನೆಗಳನ್ನು ಉಪಯೋಗಿಸಿದ್ದಾರೆಂದು ನಿಶ್ಚಯತೆಯನ್ನು ಪಡೆದುಕೊಂಡಿರಬೇಕು.
ಅನುವಾದ ಮಾಡುವುದನ್ನು ಸಂಪೂರ್ಣಗೊಳಿಸಲಾಗಿದೆಯೆಂದು ನಿರ್ಧಾರ ಮಾಡುವುದೇ ಈ ವಿಭಾಗದ ಉದ್ದೇಶವಾಗಿದೆ . ಈ ವಿಭಾಗದಲ್ಲಿ ಹೊಸ ಅನುವಾದವನ್ನು ಮೂಲ ಅನುವಾದಕ್ಕೆ ಹೋಲಿಸಿ ನೋಡಬೇಕಾಗಿರುತ್ತದೆ. ಎರಡು ಅನುವಾದಗಳನ್ನು ನೀವು ಹೋಲಿಸಿ ನೋಡುವಾಗ, ಈ ಪ್ರಶ್ನೆಗಳನ್ನು ನಿಮ್ಮಲ್ಲಿ ನೀವೇ ಕೇಳಿಕೊಳ್ಳಿರಿ:
ಅನುವಾದವು ಸಂಪುರ್ಣವಾಗಿಲ್ಲವೆಂದು ಕಾಣಿಸಿಕೊಂಡರೆ, ಆ ಸ್ಥಳದಲ್ಲಿ ಅದಕ್ಕೆ ಸಂಬಂಧಪಟ್ಟ ಟಿಪ್ಪಣಿಗಳನ್ನು ಬರೆಯಿರಿ, ಇದರಿಂದ ನೀವು ಆ ವಿಷಯಗಳ ಕುರಿತಾಗಿ ಅನುವಾದ ತಂಡದೊಂದಿಗೆ ಚರ್ಚೆ ಮಾಡಬಹುದು.
ನಿಮ್ಮ ಉದ್ದೇಶಿತ ಭಾಷೆಯ ಅನುವಾದವು ಮೂಲ ಭಾಷೆಯ ಸತ್ಯವೇದದಲ್ಲಿ ರುವ ಎಲ್ಲಾ ವಚನವನ್ನು ಒಳಗೊಂಡಿರುವುದು ಮುಖ್ಯ. ಯಾವುದೇ ವಚನಗಳು ಕಾಣೆಯಾಗಿರುವುದನ್ನು ನಾವು ಬಯಸುವುದಿಲ್ಲ. ಆದರೆ ಕೆಲವು ಸತ್ಯವೇದಗಳಲ್ಲಿ ಇತರ ಸತ್ಯವೇದದಲ್ಲಿಲ್ಲದ ವಚನಗಳನ್ನು ಹೊಂದಲು ಉತ್ತಮ ಕಾರಣಗಳಿವೆ ಎಂದು ನೆನಪಿಡಿ.
ನಿಮ್ಮ ಅನುವಾದದಲ್ಲಿ ಬಿಟ್ಟು ಹೋಗಿರುವ ವಚನಗಳನ್ನು ಪರಿಶಿಲಿಸಲು, ಪುಸ್ತಕವನ್ನು ಪರಿಶೀಲಿಸಿದ ನಂತರ, ಅನುವಾದವನ್ನು ಪ್ಯಾರಟೆಕ್ಸ್ಟ್ಗ್ ಗೆ ಅಮದಮಾಡಿ. ನಂತರ “ಅಧ್ಯಾಯ/ವಚನಗಳ ಸಂಖ್ಯೆಗಳು” ಪರಿಶೀಲಿಸಿ .ಪ್ಯಾರಟೆಕ್ಸ್ಟ್ ಬಿಟ್ಟುಹೋಗಿರುವ ವಚನಗಳನ್ನು ನಿಮಗೆ ತೋರಿಸಿಕೊಡುತ್ತದೆ , ಪುಸ್ತಕದ ಎಲ್ಲೆಡಯ ಪಟ್ಟಿಯನ್ನು ನೀಡುತ್ತದೆ. ಮೇಲಿನ ಮೂರು ಕಾರಣಗಳಲ್ಲಿ ಒಂದಾದ ಕಾರಣ ನೀವು ಆ ಪ್ರತಿಯೊಂದು ಸ್ಥಳಗಳನ್ನು ನೋಡಬಹುದು ಮತ್ತು ವಚನದ ಉದ್ದೇಶಪೂರ್ವಕವಾಗಿ ಕಾಣೆಯಾಗಿದೆ ಎಂದು ನಿರ್ಧರಿಸಬಹುದು, ಅಥವಾ ವಚನವು ತಪ್ಪಾಗಿ ಬಿಟ್ಟುಹೋಗಿದ್ದರೆ ನೀವು ಮತ್ತೆ ವಚನವನ್ನು ಅನುವಾದಿಸಬೇಕಾಗಿದೆ.
ವಿಭಾಗದ ಶೀರ್ಷಿಕೆಗಳು
ಅನುವಾದ ತಂಡವು ಮಾಡಬೇಕಾದ ಅನೇಕ ನಿರ್ಣಯಗಳಲ್ಲಿ ಒಂದು ನಿರ್ಣಯ ಏನೆಂದರೆ ವಿಭಾಗದ ಶೀರ್ಷಿಕೆಗಳನ್ನು ಉಪಯೋಗಿಸಬೇಕೋ ಇಲ್ಲವೋ ಎಂಬುದು . ವಿಭಾಗದ ಶೀರ್ಷಿಕೆಗಳು ಹೊಸ ವಿಷಯದೊಂದಿಗೆ ಆರಂಭವಾಗುವ ಬೈಬಲಿನ ಪ್ರತಿಯೊಂದು ಭಾಗಕ್ಕೂ ಕೊಡುವ ಶೀರ್ಷಿಕೆಯಾಗಿರುತ್ತದೆ. ವಿಭಾಗದ ಶೀರ್ಷಿಕೆಯ ಮೂಲಕ ಆ ಭಾಗದಲ್ಲಿ ಏನಿದೆಯೆಂದು ಜನರು ತುಂಬಾ ಸುಲಭವಾಗಿ ತಿಳಿದುಕೊಳ್ಳುತ್ತಾರೆ. ಕೆಲವೊಂದು ಬೈಬಲ್ ಅನುವಾದಗಳು ಅವುಗಳನ್ನು ಉಪಯೋಗಿಸುತ್ತಾರೆ, ಕೆಲವೊಂದು ಅನುವಾದಗಳು ಉಪಯೋಗಿಸುವುದಿಲ್ಲ. ಹೆಚ್ಚಿನ ಜನರು ಉಪಯೋಗಿಸುವ ರಾಷ್ಟ್ರೀಯ ಭಾಷೆಯಲ್ಲಿ ಬೈಬಲನ್ನು ಅನುಸರಿಸುವುದಕ್ಕೆ ನೀವು ಬಯಸುತ್ತಿರಬಹುದು. ಆದರೆ ಭಾಷೆಯ ಸಮುದಾಯದ ಜನರು ಯಾವ ಅನುವಾದವನ್ನು ಉಪಯೋಗಿಸಬೇಕೆಂದು ಬಯಸುತ್ತಿದ್ದಾರೆನ್ನುವದನ್ನು ನೀವು ಕಂಡುಹಿಡಿಯಬೇಕಾದ ಅವಶ್ಯಕತೆ ಇದೆ.
ವಿಭಾಗದ ಶೀರ್ಷಿಕೆಗಳನ್ನು ಉಪಯೋಗಿಸುವುದೆನ್ನುವುದು ಹೆಚ್ಚಿನ ಕೆಲಸವನ್ನು ತೆಗೆದುಕೊಳ್ಳುತ್ತದೆ, ಯಾಕಂದರೆ ನೀವು ಪ್ರತಿಯೊಂದು ಹೆಸರನ್ನು ಬೈಬಲ್ ವಾಕ್ಯಭಾಗದೊಂದಿಗೆ ಬರೆಯಬೇಕು ಅಥವಾ ಅನುವಾದ ಮಾಡಬೇಕು. ಇದರಿಂದ ನಿಮ್ಮ ಬೈಬಲ್ ಅನುವಾದವು ಇನ್ನೂ ಹೆಚ್ಚಿನ ಸಮಯ ತೆಗೆದುಕೊಳ್ಳುವ ಅವಶ್ಯಕತೆ ಇರುತ್ತದೆ. ಆದರೆ ವಿಭಾಗದ ಶೀರ್ಷಿಕೆಗಳು ನಿಮ್ಮ ಓದುಗರಿಗೆ ತುಂಬಾ ಸಹಾಯಕವಾಗಿರುತ್ತವೆ. ವಿಭಾಗಗಳ ಶೀರ್ಷಿಕೆಗಳು ಸುಲಭವಾಗಿ ಬೈಬಲ್ ಮಾತನಾಡುವ ವಿವಿಧ ವಿಷಯಗಳನ್ನು ಕಂಡುಕೊಳ್ಳುವುದಕ್ಕೆ ಸಹಾಯಕವಾಗುವವು. ಒಬ್ಬ ವ್ಯಕ್ತಿ ಯಾವುದರೊಂದರ ವಿಷಯದ ಕುರಿತಾಗಿ ಬೈಬಲಿನಲ್ಲಿ ಹುಡುಕುತ್ತಿದ್ದರೆ, ಆತನಿಗೆ ಬೇಕಾದ ವಿಷಯವು ಸಿಗುವವರೆಗೂ ಆತನು ವಿಭಾಗದ ಶೀರ್ಷಿಕೆಗಳನ್ನು ಓದಿ ಮುಂದಕ್ಕೆ ಸಾಗುತ್ತಾ ಹೋಗಬಹುದು. ಆದರ ನಂತರ ಆತನು ವಿಭಾಗದ ಹೆಸರನ್ನು ಓದಬಹುದು.
ನೀವು ವಿಭಾಗದ ಶೀರ್ಷಿಕೆಗಳನ್ನು ಉಪಯೋಗಿಸುವುದಕ್ಕೆ ನಿರ್ಣಯಿಸಿಕೊಂಡರೆ, ಆಗ ನೀವು ಯಾವರೀತಿ ಉಪಯೋಗಿಸಬೇಕೆಂದು ನಿರ್ಣಯಿಸಿಕೊಳ್ಳಬೇಕಾಗಿರುತ್ತದೆ. ಆದ ಮೇಲೆ, ಭಾಷೆಯ ಸಮುದಾಯದ ಜನರು ಯಾವ ರೀತಿಯ ವಿಭಾಗದ ಶೀರ್ಷಿಕೆಗಳನ್ನು ಉಪಯೋಗಿಸುವರೆಂದು ನೀವು ಕಂಡುಕೊಳ್ಳಬೇಕಾಗಿರುತ್ತದೆ, ಮತ್ತು ನೀವು ಜಾತೀಯ ಭಾಷೆಯ ವಿಭಾಗದ ಹೆಸರನ್ನು ಅನುಸರಿಸಲು ಆಯ್ಕೆ ಮಾಡಿಕೊಳ್ಳಬೇಕಾಗಿರುತ್ತದೆ. ಪರಿಚಯಿಸಲ್ಪಟ್ಟ ವಾಕ್ಯಭಾಗವಲ್ಲದೇ ಜನರು ಚೆನ್ನಾಗಿ ಅರ್ಥಮಾಡಿಕೊಳ್ಳುವ ವಿಭಾಗದ ಹೆಸರನ್ನು ಉಪಯೋಗಿಸಲು ನಿರ್ಣಯಿಸಿಕೊಳ್ಳಲು ನಿಶ್ಚಯಿಸಿಕೊಳ್ಳಿರಿ. ವಿಭಾಗದ ಶೀರ್ಷಿಕೆ ವಾಕ್ಯಭಾಗದಲ್ಲಿರಬಾರದು. ಇದು ಕೇವಲ ವಿವಿಧವಾದ ವಾಕ್ಯಭಾಗಗಳಿಗೆ ಮಾರ್ಗಸೂಚಿಯಾಗಿರಬೇಕು. ವಿಭಾಗದ ಹೆಸರಿಗೆ ಮುಂಚೆ ಮತ್ತು ತದನಂತರ ತೆರವು ಕೊಡುವುದರ ಮೂಲಕ ಮತ್ತು ವಿಭಿನ್ನವಾದ ಅಕ್ಷರ ಶೈಲಿಯನ್ನು ಉಪಯೋಗಿಸುವದರ ಮೂಲಕ ಅಥವಾ ಅಕ್ಷರಗಳ ಗಾತ್ರವನ್ನು ವಿಭಿನ್ನವಾಗಿ ಬಳಸುವುದರ ಮೂಲಕ ನೀವು ಇದನ್ನು ಸ್ಪಷ್ಟಪಡಿಸಬಹುದು. ರಾಷ್ಟ್ರೀಯ ಭಾಷೆಯಲ್ಲಿ ಬೈಬಲನ್ನು ಹೇಗೆ ಅನುವಾದ ಮಾಡಿದ್ದಾರೋ ನೋಡಿರಿ, ಮತ್ತು ಭಾಷೆಯ ಸಮುದಾಯದೊಂದಿಗೆ ವಿಭಿನ್ನವಾದ ಪದ್ಧತಿಗಳನ್ನು ಉಪಯೋಗಿಸಿ ಪರಿಶೀಲನೆ ಮಾಡಿರಿ.
ಅನೇಕ ವಿಧವಾದ ವಿಭಾಗದ ಶೀರ್ಷಿಕೆಗಳು ಇವೆ. ಇಲ್ಲಿ ಕೆಲವು ವಿಧವಾದ ಶೀರ್ಷಿಕೆಗಳಿವೆ, ಮಾರ್ಕ.2:1-12 ವಾಕ್ಯಭಾಗಕ್ಕಾಗಿ ಶೀರ್ಷಿಕೆ ಹೇಗೆ ಕಾಣಿಸಿಕೊಳ್ಳಬೇಕೆಂದು ಉದಾಹರಣೆ ಈ ಕೆಳಗಿನಂತಿವೆ:
ನೀವು ನೋಡುತ್ತಿದ್ದಂತೆಯೇ, ಅನೇಕ ವಿಧವಾದ ವಿಭಾಗದ ಶೀರ್ಷಿಕೆಗಳನ್ನು ಮಾಡಬಹುದು, ಆದರೆ ಅವುಗಳೆಲ್ಲವುಗಳ ಉದ್ದೇಶವು ಒಂದೇಯಾಗಿರುತ್ತದೆ. ಬೈಬಲ್ ವಿಭಾಗದ ಮುಖ್ಯ ವಿಷಯದ ಕುರಿತಾದ ಮಾಹಿತಿಯನ್ನು ಆ ಶೀರ್ಷಿಕೆಗಳೆಲ್ಲವು ಕೊಡುತ್ತವೆ. ಕೆಲವು ಚಿಕ್ಕದಾಗಿರಬಹುದು ಮತ್ತು ಕೆಲವೊಂದು ವಾಕ್ಯಗಳಲ್ಲಿ ದೊಡ್ಡದಾಗಿರಬಹುದು. ಕೆಲವೊಂದು ಕೇವಲ ಶೀರ್ಷಿಕೆಯ ಮಾಹಿತಿಯನ್ನು ಕೊಡಬಹುದು, ಮತ್ತು ಕೆಲವೊಂದು ಇನ್ನೂ ಹೆಚ್ಚಿನ ಮಾಹಿತಿಯನ್ನು ಕೊಡಬಹುದು. ನೀವು ವಿವಿಧವಾದ ಶೀರ್ಷಿಕೆಗಳೊಂದಿಗೆ ಪ್ರಯೋಗ ಮಾಡಬೇಕೆನ್ನುವ ಬಯಕೆ ಇರಬಹುದು, ಮತ್ತು ಜನರಿಗೆ ಹೆಚ್ಚಾಗಿ ಸಹಾಯಕರವಾಗಿರುವ ಆಲೋಚನೆಯನ್ನು ಅವರನ್ನೇ ಕೇಳಿ ತಿಳಿದುಕೊಳ್ಳಿರಿ.
ವಿಷಯವನ್ನು ಉಪಯೋಗಿಸುವ ಸಭೆಯ ಮೂಲಕ ನಿರ್ಧಾರಣೆಯಾಗುವಂತೆಯೇ ಈ ದಾಖಲಾತಿಯಲ್ಲಿ ವಿವರಿಸಲ್ಪಟ್ಟ ವಿಷಯಗಳ ವಿಧಾನವನ್ನು ಮತ್ತು ಅವುಗಳನ್ನು ಪರಿಶೀಲನೆ ಮಾಡುವುದೆನ್ನುವುದು ವಿಷಯವನ್ನು ಪರಿಷ್ಕರಿಸುವುದರ ಮೇಲೆ ಮತ್ತು ಪುನರ್ ಪರಿಶೀಲನೆ ಮಾಡುವುದರ ವಿಧಾನದ ಮೇಲೆ ಆಧಾರವಾಗಿರುತ್ತದೆ . ಹೆಚ್ಚಿನ ಸಂಖ್ಯೆಯ ಜನರಿಂದ ಹೆಚ್ಚಿನ ಮಾಹಿತಿಗಳನ್ನು ತೆಗೆದುಕೊಳ್ಳುವ ಜನರ ಪ್ರತಿಕ್ರೀಯೆಯನ್ನು ಪ್ರೋತ್ಸಾಹಗೊಳಿಸಿಲಾಗುವುದು ಪ್ರೋತ್ಸಾಹ ಮಾಡಲಾಗಿದೆ (ಮತ್ತು ಕಾರ್ಯ ಸಾಧ್ಯವಾದ ಅನುವಾದ ಮಾಡುವ ಸಾಫ್ಟ್ ವೇರಿನಲ್ಲಿ ತೋರಿಸಲಾಗಿದೆ). ಆ ಕಾರಣದಿಂದಲೇ, ವಿಷಯದ ಅನುವಾದಗಳೆಲ್ಲವು ಅನಿರ್ದಿಷ್ಟವಾಗಿ ಅನುವಾದದ ವೇದಿಕೆಯ ಮೇಲೆ (http://door43.org ನೋಡಿರಿ) ವಿಷಯದ ಅನುವಾದಗಳು ಲಭ್ಯವಾಗಿರಲು ಮುಂದುವರಿಸಲಾಗಿರುತ್ತದೆ. ಇದರಿಂದ ಉಪಯೋಗಿಸುವವರು ಅವುಗಳನ್ನು ಇನ್ನಷ್ಟು ಹೆಚ್ಚಾಗಿ ಸುಧಾರಣೆ ಮಾಡಬಹುದು. ಈ ವಿಧಾನದಲ್ಲಿ ಹಂತ ಹಂತವಾಗಿ ಅನುವಾದದ ಗುಣಮಟ್ಟವನ್ನು ಹೆಚ್ಚಿಸುವ ಆಲೋಚನೆಯಲ್ಲಿ ವಾಕ್ಯಾನುಸಾರವಾದ ವಿಷಯಗಳನ್ನು ರಚಿಸಲು ಸಭೆಯೆಲ್ಲರು ಸೇರಿ ಕೆಲಸ ಮಾಡಬಹುದು.
ಅನುವಾದದ ಗುಣಮಟ್ಟವನ್ನು ಸಭೆ ವಿಶ್ವಾಸಾರ್ಹವಾಗಿ ನಿರ್ಧರಿಸುವ ಪ್ರಕ್ರಿಯೆಯನ್ನು ವಿವರಿಸುವುದು ಈ ವಿಭಾಗದ ಉದ್ದೇಶವಾಗಿದೆ. ಬಳಸಬಹುದಾದ ಪ್ರತಿಯೊಂದು ಕಾಲ್ಪನಿಯ ಪರಿಶೀಲನೆಯನ್ನು ವಿವರಿಸುವ ಬದಲಿಗೆ, ಈ ಕೆಳಗಿನ ಮೌಲ್ಯಮಾಪನವು ಅನುವಾದವನ್ನು ಪರಿಶೀಲಿಸುವ ಕೆಲವು ಪ್ರಮುಖ ತಂತ್ರಗಳನ್ನು ಸೂಚಿಸುವ ಉದ್ದೇಶವನ್ನು ಹೊಂದಿದೆ. ಅಂತಿಮವಾಗಿ ಯಾವ ರೀತಿಯ ಪರಿಶೀಲನೆ ಬಳಸಲಾಗುತ್ತದೆ, ಯಾವಾಗ ಮತ್ತು ಯಾರಿಂದ ಎಂಬುವುದನ್ನು ಸಭೆ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ.
ಈ ಮೌಲ್ಯಮಾಪನ ವಿಧಾನವು ಎರಡು ರೀತಿಯ ಹೇಳಿಕೆಯನ್ನು ಬಳಸಿಕೊಳ್ಳುತ್ತದೆ. ಕೆಲವು “ಹೌದು/ಇಲ್ಲ” ಹೇಳಿಕೆಗಳಾಗಿವೆ, ಅಲ್ಲಿ ನಕಾರಾತ್ಮಕ ಪ್ರತಿಕ್ರಿಯೆಯು ಪರಿಹರಿಸಬೇಕಾದ ಸಮಸ್ಯೆಯನ್ನು ಸೂಚಿಸುತ್ತದೆ. ಇತರ ವಿಭಾಗಗಳು ಸಮಾನ-ತೂಕದ ವಿಧಾನವನ್ನು ಬಳಸುತ್ತವೆ, ಅದು ಅನುವಾದ ತಂಡಗಳಿಗೆ ಅನುವಾದದ ಬಗ್ಗೆ ಹೇಳಿಕೆಯನ್ನು ನೀಡುತ್ತದೆ. ಪ್ರತಿ ಹೇಳಿಕೆಯನ್ನು 0-2 ಪ್ರಮಾಣದಲ್ಲಿ ಪರಿಶೀಲನೆ ಮಾಡುವ ವ್ಯಕ್ತಿಯು(ಅನುವಾದದ ತಂಡದಿಂದ ಪ್ರಾರಂಭಿಸಿ) ಸ್ಕೋರ್ ಮಾಡಬೇಕು.
0 -ಒಪ್ಪದಿರುವುದು
1 -ಸ್ವಲ್ಪಮಟ್ಟಿಗೆ ಒಪ್ಪುತ್ತೇನೆ
2 -ಬಲವಾಗಿ ಒಪ್ಪುತ್ತೇನೆ
ಮಿಮರ್ಶೆಯ ಕೊನೆಯಲ್ಲಿ, ಒಂದು ವಿಭಾಗದಲ್ಲಿನ ಎಲ್ಲಾ ಪ್ರತಿಕ್ರಿಯೆಗಳ ಒಟ್ಟು ಮೌಲ್ಯವನ್ನು ಸೇರಿಸಬೇಕು ಮತ್ತು ಪ್ರತಿಕ್ರಿಯೆಗಳು ಅನುವಾದದ ಸ್ಥಿತಿಯನ್ನು ನಿಖಾರವಾಗಿ ಪ್ರತಿಬಿಂಬಿಸಿದರೆ, ಈ ಮೌಲ್ಯವು ಅನುವಾದಿತ ಅಧ್ಯಾಯವು ಉತ್ತಮ ಗುಣಮಟ್ಟದ್ದಾಗಿದೆ ಎಂಬ ಸಂಭವನೀತೆಯ ಅಂದಾಜನ್ನು ವಿಮರ್ಶಕರಿಗೆ ನೀಡುತ್ತದೆ. ಅನುಸರಿಸಬೇಕಾದ ನಿಯಮಗಳನ್ನು ಸರಳವಾಗಿ ವಿನ್ಯಾಸಗೊಳಿಸಲಾಗಿದೆ ಮತ್ತು ಎಲ್ಲಿ ಕೆಲಸದ ಸುಧಾರಣೆ ಅಗತ್ಯವಿದೆ ಎಂಬುವುದನ್ನು ವಸ್ತುನಿಷ್ಠ ವಿಧಾನದೊಂದಿಗೆ ವಿಮರ್ಶಕರಿಗೆ ಒದಗಿಸುತ್ತದೆ. *ಉದಾಹರಣೆಗೆ, ಅನುವಾದವು “ನಿಖರತೆ”ಯಲ್ಲಿ ಉತ್ತಮವಾಗಿದ್ದರೂ “ಸ್ವಾಭಾವಿಕತೆ” ಮತ್ತು “ಸ್ಪಷ್ಟತೆ” ಯಲ್ಲಿ ಕಳಪೆಯಾಗಿದ್ದರೆ, ಅನುವಾದ ತಂಡವು ಹೆಚ್ಚಿನ ಪರಿಶೀಲನೆಯನ್ನು ಮಾಡಬೇಕಾಗುತ್ತದೆ. *
ಅನುವಾದಿತ ಸತ್ಯವೇದದ ವಿಷಯದ ಪ್ರತಿ ಅಧ್ಯಾಯಕ್ಕೂ ಅನುಸರಿಸಬೇಕಾದ ನಿಯಮಗಳು ಬಳಸಲು ಉದ್ದೇಶಿಸಲಾಗಿದೆ. ಅನುವಾದ ತಂಡವು ಇತರ ಪರಿಶೀಲನೆ ಮಾಡಿದ ನಂತರ ಪ್ರತಿ ಅಧ್ಯಾಯದ ಮೌಲ್ಯಮಾಪನವನ್ನು ಮಾಡಬೇಕು, ತದನಂತರ 2ನೆಯ ಹಂತದ ಪರೀಕ್ಷಿಕರು ಇದನ್ನು ಮತ್ತೆ ಮಾಡಬೇಕು, ಮತ್ತು ನಂತರ 3ನೆಯ ಹಂತದ ಪರೀಕ್ಷಿಕರು ಈ ಪರಿಶೀಲನಾಪಟ್ಟಿಯೊಂದಿಗೆ ಅನುವಾದವನ್ನು ಪ್ರವೇಶಿಸಬಹುದು. ಪ್ರತಿಹಂತದಲ್ಲೂ ಅಧ್ಯಾಯದ ಹೆಚ್ಚು ವಿವರವಾದ ಮತ್ತು ವ್ಯಾಪಕವಾದ ಪರಿಶೀಲನೆಯನ್ನು ಸಭೆ ನಿರ್ವಹಿಸುವುದರಿಂದ, ಅಧ್ಯಾಯದ ಅಂಶಗಳನ್ನು ಮೊದಲ ನಾಲ್ಕು ವಿಭಾಗಗಳಿಂದ (ಅವಲೋಕನ, ನೈಸರ್ಗಿಕತೆ, ಸ್ಪಷ್ಟತೆ,ನಿಖರತೆ) ನವೀಕರಿಸಬೇಕು, ಅನುವಾದ ಹೇಗೆ ಸುಧಾರಿಸಿದೆ ಎಂಬುವುದನ್ನು ನೋಡಲು ಸಭೆ ಮತ್ತು ಸಮಾಜಕ್ಕೆ ಅವಕಾಶ ಮಾಡಿಕೊಡುತ್ತದೆ.
ಪ್ರಕ್ರಿಯೆಯನ್ನು ಐದು ಭಾಗವಾಗಿ ವಿಂಗಡಿಸಲಾಗಿದೆ: ಅವಲೋಕನ (ಅನುವಾದದ ಬಗ್ಗೆ ಮಾಹಿತಿ), ಸ್ವಾಭಾವಿಕತೆ,ಸ್ಪಷ್ಟತೆ,ನಿಖರತೆ, ಮತ್ತು ಸಭೆಯ ಅನುಮೋದನೆ.
ಇಲ್ಲ/ಹೌದು ಈ ಅನುವಾದವು ಅರ್ಥ ಆಧಾರಿತ ಅನುವಾದವಾಗಿದ್ದು, ಮೂಲ್ಯ ಪಠ್ಯದ ಅರ್ಥವನ್ನು ಉದ್ದೇಶಿತ ಭಾಷೆಯಲ್ಲಿ ನೈಸರ್ಗಿಕ, ಸ್ಪಷ್ಟ ಮತ್ತು ನಿಖಾರವಾದ ರೀತಿಯಲ್ಲಿ ತಿಳಿಸಲು ಪ್ರಯತ್ನಿಸುತ್ತದೆ.
ಇಲ್ಲ/ಹೌದು ಅನುವಾದವನ್ನು ಪರಿಶೀಲಿಸುವಲ್ಲಿ ತೊಡಗಿರುವವರು ಉದ್ದೇಶಿತ ಭಾಷೆಯ ಪ್ರಥಮ -ಭಾಷೆ ಮಾತನಾಡುವವರಗಿರುತ್ತಾರೆ
ಇಲ್ಲ/ಹೌದು ಈ ಅಧ್ಯಾಯದ ಅನುವಾದವು ನಂಬಿಕೆಯ ಹೇಳಿಕೆಯೊಂದಿಗೆ ಒಪ್ಪಂದದಲ್ಲಿರುತ್ತದೆ .
ಇಲ್ಲ/ಹೌದು ಈ ಅಧ್ಯಾಯದ ಅನುವಾದವನ್ನು ಅನುವಾದ ಮಾರ್ಗಸೂಚಿಗಳಿಗೆ ಅನುಗುಣವಾಗಿ ಮಾಡಲಾಗಿದೆ
ಹೆಚ್ಚಿನ ಸಮಾಜಿಕ ಪರಿಶೀಲನೆ ಮಾಡುವ ಮೂಲಕ ಈ ಭಾಗವನ್ನು ಬಲಪಡಿಸಬಹುದು.(ನೋಡಿ ಸಮಾಜಿಕ ಭಾಷ ಪರಿಶೀಲನೆ)
0 1 2 ಈ ಭಾಷೆಯನ್ನು ಮಾತನಾಡುವವರು ಮತ್ತು ಈ ಅಧ್ಯಾಯವನ್ನು ಕೇಳಿದವರು, ಇದನ್ನು ಭಾಷೆಯ ಸರಿಯಾದ ರೂಪವನ್ನು ಬಳಸಿ ಅನುವಾದಿಸಲಾಗಿದೆ ಎಂದು ಒಪ್ಪಿಕೊಳ್ಳುತ್ತಾರೆ.
0 1 2 ಈ ಅಧ್ಯಾಯದಲ್ಲಿ ಬಳಸಲಾದ ಪ್ರಮುಖ ಪದಗಳು ಈ ಸಂಸ್ಕೃತಿಗೆ ಸರಿಹೊಂದುತ್ತದೆ ಮತ್ತು ಸ್ವೀಕಾರಾರ್ಹವಾಗಿದೆ ಎಂದು ಈ ಭಾಷೆಯನ್ನು ಮಾತನಾಡುವವರು ಒಪ್ಪಿಕೊಳ್ಳುತ್ತಾರೆ.
0 1 2 ಈ ಅಧ್ಯಾಯದಲ್ಲಿನ ವಿವರಣೆಗಳು ಅಥವಾ ಕಥೆಗಳು ಈ ಭಾಷೆಯನ್ನು ಮಾತನಾಡುವ ಜನರಿಗೆ ಅರ್ಥಮಾಡಿಕೊಳ್ಳಲು ಸುಲಭವಾಗಿದೆ.
0 1 2 ಈ ಅಧ್ಯಾಯದಲ್ಲಿನ ಪಠ್ಯದ ವಾಕ್ಯ ರಚನೆ ಮತ್ತು ಕ್ರಮವು ಸ್ವಾಭಾವಿಕವಾಗಿದೆ ಮತ್ತು ಕ್ರಮಬದ್ಧವಾಗಿರುತ್ತದೆ ಎಂದು ಈ ಭಾಷೆಯನ್ನು ಮಾತನಾಡುವವರು ಒಪ್ಪಿಕೊಳ್ಳುತ್ತಾರೆ.
0 1 2 ಸ್ವಾಭಾವಿಕತೆಗೆಗಾಗಿ ಈ ಅಧ್ಯಾಯದ ಅನುವಾದದ ವಿಮರ್ಶೆಯಲ್ಲಿ ಅನುವಾದವನ್ನು ರಚಿಸುವಲ್ಲಿ ನೇರವಾಗಿ ಭಾಗಿಯಾಗಿಲ್ಲದ ಸಮುದಾಯದ ಸದಸ್ಯರು ಸೇರಿದ್ದಾರೆ.
0 1 2 ಸ್ವಾಭಾವಿಕತೆಗಾಗಿ ಈ ಅಧ್ಯಾಯದ ಅನುವಾದದ ವಿಮರ್ಶೆಯಲ್ಲಿ ವಿಶ್ವಾಸಿಗಳು ಮತ್ತು ಅವಿಶ್ವಾಸಿಗಳನ್ನು, ಅಥವ ಸತ್ಯವೇದದ ಬಗ್ಗೆ ಪರಿಚಯವಿಲ್ಲದ ಕನಿಷ್ಠ ವಿಶ್ವಾಸಿಗಳನ್ನು ಸಹ ಒಳಗೊಂಡಿದೆ, ಆದ್ದರಿಂದ ಪಾಠ್ಯವನ್ನು ಕೇಳುವ ಮೊದಲು ಅದು ಏನನ್ನು ಸೂಚಿಸುತ್ತದೆ ಎಂದು ಅವರಿಗೆ ತಿಳಿದಿರುವುದಿಲ್ಲ.
0 1 2 ಸ್ವಾಭಾವಿಕತೆಗಾಗಿ ಈ ಅಧ್ಯಾಯದ ಅನುವಾದದ ವಿಮರ್ಶೆಯು ವಿವಿಧ ವಯಸ್ಸಿನ ಮಾತುಗಾರರನ್ನು ಒಳಗೊಂಡಿದೆ.
0 1 2 ಸ್ವಾಭಾವಿಕತೆಗಾಗಿ ಈ ಅಧ್ಯಾಯದ ಅನುವಾದದ ವಿಮರ್ಶೆಯಲ್ಲಿ ಪುರುಷರು ಮತ್ತು ಮಹಿಳೆಯರನ್ನು ಸೇರಿದ್ದಾರೆ.
ಹೆಚ್ಚಿನ ಸಮಾಜಿಕ ಪರಿಶೀಲನೆ ಮಾಡುವ ಮೂಲಕ ಈ ವಿಭಾಗವನ್ನು ಬಲಪಡಿಸಬಹುದು. (ನೋಡಿಸಮಾಜಿಕ ಭಾಷ ಪರಿಶೀಲನೆ)
0 1 2 ಸ್ಥಳೀಯ ಭಾಷಿಕರು ಅರ್ಥಮಾಡಿಕೊಳ್ಳಲು ಸುಲಭವಾದ ಭಾಷೆಯನ್ನು ಬಳಸಿ ಈ ಅಧ್ಯಾಯವನ್ನು ಅನುವಾದಿಸಲಾಗಿದೆ.
0 1 2 ಈ ಅಧ್ಯಾಯದಲ್ಲಿನ ಹೆಸರುಗಳು, ಸ್ಥಳಗಳು ಮತ್ತು ಕ್ರಿಯಪದಗಳ ಅನುವಾದವು ಸರಿಯಾಗಿದೆ ಎಂದು ಈ ಭಾಷೆಯ ಭಾಷಿಕರು ಒಪ್ಪುತ್ತಾರೆ.
0 1 2 ಈ ಅಧ್ಯಾಯದಲ್ಲಿನ ಅಲಂಕಾರಗಳು ಈ ಸಂಸ್ಕೃತಿಯ ಜನರಿಗೆ ಅರ್ಥವಾಗುವ ಹಾಗೆ ಇರುತ್ತದೆ.
0 1 2 ಈ ಅಧ್ಯಾಯವನ್ನು ಸರಿಯಾದ ಅರ್ಥವನ್ನು ನೀಡುವ ರೀತಿಯಲ್ಲಿ ರಚಿಸಲಾಗಿದೆ ಎಂದು ಈ ಭಾಷೆಯ ಭಾಷಿಕರು ಒಪ್ಪುತ್ತಾರೆ.
0 1 2 ಸ್ಪಷ್ಟತೆಗಾಗಿ ಈ ಅಧ್ಯಾಯದ ಅನುವಾದದ ವಿಮರ್ಶೆಯಲ್ಲಿ ಈ ಅಧ್ಯಾಯದ ಅನುವಾದವನ್ನು ರಚಿಸುವಲ್ಲಿ ನೇರವಾಗಿ ಭಾಗಿಯಾಗಿಲ್ಲದ ಸಮುದಾಯದ ಸದಸ್ಯರು ಸೇರಿದ್ದಾರೆ.
0 1 2 ಸ್ಪಷ್ಟತೆಗಾಗಿ ಈ ಅಧ್ಯಾಯದ ಅನುವಾದದ ವಿಮರ್ಶೆಯಲ್ಲಿ ವಿಶ್ವಾಸಿಗಳು ಮತ್ತು ಅವಿಶ್ವಾಸಿಗಳನ್ನು, ಅಥವ ಸತ್ಯವೇದದ ಬಗ್ಗೆ ಪರಿಚಯವಿಲ್ಲದ ಕನಿಷ್ಠ ವಿಶ್ವಾಸಿಗಳನ್ನು ಸಹ ಒಳಗೊಂಡಿದೆ, ಆದ್ದರಿಂದ ಪಾಠ್ಯವನ್ನು ಕೇಳುವ ಮೊದಲು ಅದು ಏನನ್ನು ಸೂಚಿಸುತ್ತದೆ ಎಂದು
0 1 2 ಸ್ಪಷ್ಟತೆಗಾಗಿ ಈ ಅಧ್ಯಾಯದ ಅನುವಾದದ ವಿಮರ್ಶೆಯು ವಿವಿಧ ವಯಸ್ಸಿನ ಮಾತುಗಾರರನ್ನು ಒಳಗೊಂಡಿದೆ.
0 1 2 ಸ್ಪಷ್ಟತೆಗಾಗಿ ಈ ಅಧ್ಯಾಯದ ಅನುವಾದದ ವಿಮರ್ಶೆಯಲ್ಲಿ ಪುರುಷರು ಮತ್ತು ಮಹಿಳೆಯರನ್ನು ಸೇರಿದ್ದಾರೆ.
ಹೆಚ್ಚಿನ ಸಮಾಜಿಕ ಪರಿಶೀಲನೆ ಮಾಡುವ ಮೂಲಕ ಈ ವಿಭಾಗವನ್ನು ಬಲಪಡಿಸಬಹುದು. (ನೋಡಿಸಮಾಜಿಕ ಭಾಷ ಪರಿಶೀಲನೆ)
0 1 2 ಅನುವಾದದಲ್ಲಿ ಎಲ್ಲಾ ಪದಗಳು ಇರುವುದನ್ನು ಖಚಿತಪಡಿಸಿಕೊಳ್ಳಲು ಈ ಅಧ್ಯಾಯದ ಮೂಲ ಪಠ್ಯದಲ್ಲಿನ ಎಲ್ಲಾ ಪ್ರಮುಖ ಪದಗಳ ಸಂಪೂರ್ಣ ಪಟ್ಟಿಯನ್ನು ಬಳಸಲಾಗುತ್ತದೆ.
0 1 2 ಈ ಅಧ್ಯಾಯದಲ್ಲಿ ಎಲ್ಲಾ ಪ್ರಮುಖ ಪದಗಳನ್ನು ಸರಿಯಾಗಿ ಅನುವಾದಿಸಲಾಗಿದೆ.
0 1 2 ಈ ಅಧ್ಯಾಯದಲ್ಲಿನ ಎಲ್ಲಾ ಪ್ರಮುಖ ಪದಗಳನ್ನು ಹಾಗು ಇತರ ಸ್ಥಳಗಳಲ್ಲಿ ಕಾಣಿಸಿಕೊಳ್ಳುವ ಪ್ರಮುಖ ಪದಗಳನ್ನು ಏಕರೂಪವಾಗಿ ಅನುವಾದಿಸಲಾಗಿದೆ.
0 1 2 ಟಿಪಣ್ಣಿಗಳು ಮತ್ತು ಅನುವಾದ ಪದಗಳನ್ನು ಒಳಗೊಂಡಂತೆ ಅನುವಾದ ಸವಾಲುಗಳನ್ನು ಗುರುತಿಸಲು ಮತ್ತು ಪರಿಹರಿಸಲು ಇಡೀ ಅಧ್ಯಾಯದಲ್ಲಿ ವೇದಾಭ್ಯಾಸಕ್ಕೆ ಸಂಬಂಧಿಸಿದ ಸಂಪನ್ಮೂಲಗಳನ್ನು ಬಳಸಲಾಗುತ್ತದೆ.
0 1 2 ಮೂಲ ಪಠ್ಯದಲ್ಲಿನ ಐತಿಹಾಸಿಕ ವಿವರಗಳನ್ನು (ಹೆಸರುಗಳು, ಸ್ಥಳಗಳು ಮತ್ತು ಘಟಣೆಗಳನ್ನು) ಅನುವಾದದಲ್ಲಿ ಸಂರಕ್ಷಿಸಲಾಗಿದೆ.
0 1 2 ಅನುವಾದಿತ ಅಧ್ಯಾಯದಲ್ಲಿನ ಅಲಂಕಾರಗಳ ಅರ್ಥವನ್ನು ಮೂಲ ಉದ್ದಶಕ್ಕೆ ಹೋಲಿಸಲಾಗಿದೆ ಮತ್ತು ಜೋಡಿಸಲಾಗಿದೆ.*
0 1 2 ಅನುವಾದಿಸುವಾಗ ಭಾಗಿಯಾಗದ ಸ್ಥಳಿಯ ಭಾಷಿಕರಿಂದ ಅನುವಾದವನ್ನು ಪರೀಕ್ಷಿಸಲಾಗಿದೆ ಮತ್ತು ಅನುವಾದವು ಮೂಲ ಪಠ್ಯದ ಉದ್ದೇಶಿತ ಅರ್ಥವನ್ನು ನಿಖರವಾಗಿ ಸಂಪರ್ಕಿಸುತ್ತದೆ ಎಂದು ಅವರು ಒಪ್ಪಿಕೊಂಡಿದ್ದಾರೆ.
0 1 2 ಈ ಅಧ್ಯಾಯದ ಅನುವಾದವನ್ನು ಕನಿಷ್ಠ ಎರಡು ಮೂಲ ಪಠ್ಯಗಳಿಗೆ ಹೋಲಿಸಲಾಗಿದೆ.
0 1 2 ಈ ಅಧ್ಯಾಯದಲ್ಲಿನ ಯಾವುದೇ ಅರ್ಥದ ಬಗ್ಗೆ ಎಲ್ಲಾ ಪ್ರಶ್ನೆಗಳು ಮತ್ತು ಭಿನ್ನಾಭಿಪ್ರಾಯಗಳನ್ನು ಪರಿಹಾರಿಸಲಾಗಿದೆ.
0 1 2 ಪದಗಳ ಸರಿಯಾದ ವಾಖ್ಯಾನ ಮತ್ತು ಉದ್ದೇಶವನ್ನು ಪರೀಕ್ಷಿಸಲು ಈ ಅಧ್ಯಾಯದ ಅನುವಾದವನ್ನು ಮೂಲ ಪಠ್ಯಕ್ಕೆ (ಹೀಬ್ರೂ, ಗ್ರೀಕ್, ಅರಾಮಿಕ್) ಹೋಲಿಸಲಾಗಿದೆ.