Matthew 28

Matthew 28:1

ಮಗ್ದಲದ ಮರಿಯಳು ಮತ್ತು ಇನ್ನೊಬ್ಬ ಮರಿಯಳು ಯಾವ ದಿನ ಮತ್ತು ಸಮಯದಲ್ಲಿ ಯೇಸುವಿನ ಸಮಾಧಿಯ ಬಳಿಗೆ ಹೋದರು?

ವಾರದ ಮೊದಲನೆಯ ದಿನದಲ್ಲಿ ಇನ್ನೂ ಮೊಬ್ಬಿರುವಾಗಲೇ, ಅವರು ಯೇಸುವಿನ ಸಮಾಧಿಯ ಬಳಿಗೆ ಹೋದರು [೨೮:೧].

ಯೇಸುವಿನ ಸಮಾಧಿಯ ಬಳಿಯಲ್ಲಿ ಕಲ್ಲನ್ನು ಹೇಗೆ ಉರುಳಿಸಲಾಗಿತ್ತು?

ದೇವದೂತನು ಇಳಿದು ಬಂದು ಕಲ್ಲನ್ನು ಉರುಳಿಸಿದ್ದನು [೨೮:೨].

Matthew 28:3

ಕಾವಲುಗಾರರು ದೇವದೂತನನ್ನು ನೋಡಿದಾಗ ಏನು ಮಾಡಿದರು?

ಕಾವಲುಗಾರರು ಹೆದರಿಕೊಂಡರು ಮತ್ತು ದೇವದೂತನನ್ನು ನೋಡಿದಾಗ ಸತ್ತವರಂತಾದರು [೨೮:೪].

Matthew 28:5

ದೇವದೂತನು ಯೇಸುವಿನ ಬಗ್ಗೆ ಇಬ್ಬರು ಸ್ತ್ರೀಯರಿಗೆ ಏನು ಹೇಳಿದನು?

ಯೇಸು ಎದ್ದಿದ್ದಾನೆ ಮತ್ತು ನಿಮಗಿಂತ ಮುಂಚೆ ಗಲಿಲಾಯಕ್ಕೆ ಹೋಗುತ್ತಾನೆ ಎಂದು ಹೇಳಿದನು [೨೮:೫-೭].

Matthew 28:8

ಇಬ್ಬರು ಸ್ತ್ರೀಯರು ಶಿಷ್ಯರಿಗೆ ಹೇಳಲು ಹೋಗುವಾಗ ದಾರಿಯಲ್ಲಿ ಏನಾಯಿತು?

ಸ್ತ್ರೀಯರು ಯೇಸುವನ್ನು ಭೇಟಿಮಾಡಿದರು ಮತ್ತು ಆತನ ಪಾದಗಳನ್ನು ಮುಟ್ಟಿದರು ಹಾಗೂ ಆರಾಧನೆ ಮಾಡಿದರು [೨೮:೮-೯].

Matthew 28:11

ಸಮಾಧಿಯ ಬಳಿಯಲ್ಲಿ ನಡೆದ ಕಾರ್ಯಗಳನ್ನು ಕಾವಲುಗಾರರು ಮಹಾಯಾಜಕರಿಗೆ ಹೇಳಿದಾಗ, ಮಹಾಯಾಜಕರು ಏನು ಮಾಡಿದರು?

ಮಹಾಯಾಜಕರು ಸಿಪಾಯಿಗಳಿಗೆ ಬಹಳ ಹಣವನ್ನು ಕೊಟ್ಟರು ಮತ್ತು ಯೇಸುವಿನ ಶಿಷ್ಯರು ಆತನ ದೇಹವನ್ನು ಕದ್ದುಕೊಂಡು ಹೋಗಿದ್ದಾರೆ ಎಂದು ಹೇಳಬೇಕು ಎಂಬದಾಗಿ ಹೇಳಿದರು [೨೮:೧೧-೧೩].

Matthew 28:16

ಶಿಷ್ಯರು ಯೇಸುವನ್ನು ಗಲಿಲಾಯದಲ್ಲಿ ನೋಡಿದಾಗ ಏನು ಮಾಡಿದರು?

ಶಿಷ್ಯರು ಯೇಸುವನ್ನು ಆರಾಧಿಸಿದರು ಆದರೆ ಯಾರೋ ಸಂದೇಹಪಟ್ಟನು [೨೮:೧೭].

Matthew 28:18

ತನಗೆ ಯಾವ ಅಧಿಕಾರ ಕೊಡಲಾಗಿದೆ ಎಂದು ಯೇಸು ಹೇಳಿದನು?

ಭೂಲೋಕದಲ್ಲಿ ಮತ್ತು ಪರಲೋಕದಲ್ಲಿ ಎಲ್ಲಾ ಅಧಿಕಾರವನ್ನು ತನಗೆ ಕೊಡಲಾಗಿದೆ ಎಂದು ಯೇಸು ಹೇಳಿದನು [೨೮:೧೮].

ಯೇಸು ತನ್ನ ಶಿಷ್ಯರಿಗೆ ಆಜ್ಞಾಪಿಸಿದ ಮೂರು ಕಾರ್ಯಗಳು ಯಾವುವು?

ಯೇಸು ತನ್ನ ಶಿಷ್ಯರಿಗೆ ಹೋಗಿರಿ ಶಿಷ್ಯರನ್ನು ಮಾಡಿರಿ, ಅವರಿಗೆ ದೀಕ್ಷಾಸ್ನಾನ ಮಾಡಿಸಿರಿ ಮತ್ತು ನನ್ನ ಉಪದೇಶಗಳಿಗೆ ವಿಧೇಯರಾಗಬೇಕೆಂದು ಆಜ್ಞಾಪಿಸಿರಿ ಎಂದು ಹೇಳಿದನು [೨೮:೧೯-೨೦].

ಯಾವ ಹೆಸರಿನ ಮೇಲೆ ದೀಕ್ಷಾಸ್ನಾನ ಮಾಡಿಸಬೇಕೆಂದು ಯೇಸು ತನ್ನ ಶಿಷ್ಯರಿಗೆ ಹೇಳಿದ್ದಾನೆ?

ತಂದೆ, ಮಗ ಮತ್ತು ಪವಿತ್ರಾತ್ಮನ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಬೇಕೆಂದು ಆತನು ತನ್ನ ಶಿಷ್ಯರಿಗೆ ಹೇಳಿದನು [೨೮:೧೯].

Matthew 28:20

ಯೇಸು ತನ್ನ ಶಿಷ್ಯರಿಗೆ ನೀಡಿದ ಅಂತಿಮವಾದ ವಾಗ್ದಾನ ಯಾವುದು?

ಯುಗದ ಸಮಾಪ್ತಿಯವರೆಗೂ ನಾನು ನಿಮ್ಮ ಜೊತೆಯಲ್ಲಿರುತ್ತೇನೆ ಎಂಬ ವಾಗ್ದಾನವನ್ನು ಆತನು ಮಾಡಿದ್ದಾನೆ [೨೮:೨೦].