9

1 .ಆತುಡು ಪನ್ನೆಂಡು ಮಂದಿ ಶಿಷ್ಯಾಲ್ನಿ ಒಟ್ಗಪಿಲ್ಚಿ ವಾಳ್ಗಿ ಅಂತಾ ದೈಯ್ಯಾಲ್ನಿ ಉಡ್ಬಿಚ್ಚ ಮಲಿ ರೋಗಾಲ್ನಿ ವಾಸಿಸೆಸ ಶಕ್ತಿ ಅಧಿಕಾರಲ್ನಿ ಇಚ್ಚಿ 2 .ದೇವುಡ ರಾಜ್ಯಮ್ನ ವಿಶ್ಯoಮ್ನಿ ಸಾರದಾನ್ಗು ಅಸ್ವಸ್ಥಲೈನವಾಳ್ನೀ ಸ್ವಸ್ಥಂಸೇಸೆದಾನ್ಗಿ ವಾಳ್ನೀ ಅಂಪಿಚ್ಚಾಡು. 3 .ಅಂಪಿಚ್ಚೆಪ್ದು ವಾಳ್ಗಿ ಸೊಪ್ಪಿoದೇಮಂಟೆ -ದಾವ್ಗಿ ಏಮು ತಿಸ್ಗಾನ್ನಿ ಪೋವ್ವದಂಡಿ,ಕಟ್ಟಾ ಹಸ್ಬಿ ಬುತ್ತಿ ದುಡ್ಲು ವದ್ದು;ರೊಂಡಗ್ಗಿಲುoಡಗೂಡ್ಗು. 4 ಮೀಳು ಯಾವ ಇಟ್ಲಾ ದಿಗ್ಗನ್ನೂ ಅನೇ ಉಂಡoಡಿ,ಆನ್ನಿಂಕನೇ ಎಲ್ಲಂಡಿ. 5 .ಮಲಿ ಯಾವ ಊರೋಲೈನು ಮಿಮ್ಮಲ್ನಿ ಸೇರ್ಬಿಚ್ಚ್ಕೊಕುಂಡ ಪಾತೆ ಆ ಊರ್ನಿ ಮೀಳು ಉಡ್ಸಿಪಾಯಪ್ಡು ಮೀ ಕಾಳ್ಗಿ ಅಂಟ್ನ ಧೂಳ್ನಿ ಝಾಡ್ಸಿಉಡoಡಿ;ಆದಿ ವಾಳ್ಗಿ ವಿರೋಧಂಗ ಸಾಕ್ಷಿಗಉಂಡ್ನಿ ಅನ್ನಾಡು. 6 .ಅಪ್ಡು ವಾಳು ಎಲ್ಲಿ ಪಾಯಿ ಯಾನ್ಯಾನು ಸುವಾರ್ತಾನ್ನಿ ಸಾರ್ತಾ ರೋಗಿಲ್ಗಿ ವಾಸಿಸೇಸ್ತಾ ಗ್ರಾಮಲಂತ ಸಂಚರಿಚ್ಚಾಡು. 7 .ಇಟ್ಟುoಡಗ ಉಪರಾಜುಡೈನ ಹೇರೋದುಡು ನಡ್ಸ್ನಾ ಸಂಗತಿಲ್ನoತ ಇನಿ ಬಹಳಂಗ ಕಳವಳಪಡವಾಡೈನಾಡು.ಯದ್ಗoಟ್ಟೆ ಸಚ್ಚುಂಡ ಯೋಹಾನುಡು ತಿರ್ಗಿ ಬದ್ಕುoಟಾಡನೀ ಕೆಲ್ವಲು, 8 .ಎಲೀಡು ಕಂಬಿಚ್ಗಾನಡನೀ ಕೆಲವ್ಳು ಪೂರ್ವಂನ ಪ್ರವಾದಿಲ್ಲ ಯವ್ವಡೂ ಒಕ್ಕಡು ಲೇಸ್ನಾಡನಿ ಕೆಲವ್ಳು ಸೋಪ್ಗಟಾಉಂಟಾರು. 9 .ಆಯ್ತೇ ಹೇರೋದುಡು ಯೋಹಾನಡ್ನಿ ನೀನೇ ಪೋಸ್ನಾನಂತೆ.ಊಡುಯವ್ವಡು?ಊಡ ವಿಷ್ಯಮಾಯಿ ಆಶ್ಚರ್ಯಕರಮೈನ ಸಂಗತಿಲ್ನಿ ಇoಟಾಡಕದ ಅನಿ ಸೊಪ್ಪಿ ವಾಡ್ನಿ ಸೋಡಾಲನಿ ಪ್ರಯತ್ನಿಚ್ಚಾಡು. 10 .ಇಟ್ಲಾಗ ಅಪೋಸ್ತಾಲು ಯನ್ಕಿತಿರ್ಗಿ ವಚ್ಚಿ ತಾವು ಸೇಸಿದಂತ ಯೇಸುಗಿ ವಿವರಂಗ ಸೋಪ್ಪಾಲು ಆತುಡು ವಾಳ್ನೀ ಬೇತ್ಸಾಯಿದoಅನ ಊರ್ಗಿ ವಿಂಗಡoಗ ಪಿಲ್ಚ್ಗಾನ್ನಿ ಪೈನ್ನಾಡು. 11 ಜನಲಗುಂಪು ದೀನ್ನಿ ತಿಳ್ಚಿ ಆತುಡ ಏನ್ಕ ಪೈಯ್ಯಲು ಆತುಡು ವಾಳ್ನೀ ಪ್ರೀತಿನಿಂಕ ಸ್ವೀಕರಿಚ್ಚಿ ದೇವುಡ ರಾಜ್ಯಮ್ನ ವಿಷ್ಯಂಗ ವಾಳ ಸಂಗಡ ಮಾಟಾಡಿ ಕ್ಷೆಮಂಕಾವ್ವಲನವಾಳ್ಗಿ ವಾಸಿ ಸೇಸ್ನಾಡು. 12 .ಪದ್ದು ದಿಗ್ತಾ ಊಟಾನ್ಗಿ ಬೇಕೈನ ಪದಾರ್ಥಲ್ನಿ ದೊರ್ಕಿಚ್ಗಾನ್ನಿ;ಮಾಮು ಇನ ಅಡವಿಯ ಸ್ಥಳಮ್ಲಾ ಉಂಡಾಂಕದ ಅನಿ ಅತುಡ್ಗಿ ಸೋಪ್ಪಾಲಾಯಿ ಆತುಡು ಮೀಳೇ ವಾಳ್ಗಿ ಊಟನ್ಗಿ ಇಯ್ಯಂಡಿ ಅನ್ನಾಡು. 13 -ಮಾಲಾ ಐದುರೊಟ್ಳು ರೊಂಡು ಸ್ಯಾಪ್ಲು ಹೊರ್ತು ಹೆಚ್ಚೇಮಿ ಲೇದು;ಮಾಮು ಪಾಯಿ ಈ ಜನಲ್ಗಂತ ಆಹಾರಮ್ನಿ ಕೊಂಡ್ಗವಾಲ್ನಾ?ಅನ್ನಾಳು. 14 .ಮೊಗವಾಳೆ ಹೆಚ್ಚು ಕಡ್ಮೆಐದುಸಾವಿರ ಮಂದಿಉನ್ನಾರು.ಅಪ್ಡು ಆತುಡು ತನ್ನ ಶಿಷ್ಯಲ್ಗಿ -ಊಳ್ನೀ ಒಕ್ಕೊಕ್ಕ ಪಂಕ್ತಿಗಿ ಹೆಚ್ಚುಕಡ್ಮೆ ಯಾಭಾಯಿಯಾಭಾಯಟ್ಲ ಕುಚ್ಪಟ್ಟoಡಿ ಅನಿ 15 16 17 ಹಾಗೆಯೇ ಎಲ್ಲರನ್ನೂ ಕುಳ್ಳಿರಿಸಿದರು. 16ಆ ಮೇಲೆ ಯೇಸುವು ಆ ಐದು ರೊಟ್ಟಿ ಎರಡು ಮೀನುಗಳನ್ನು ತೆಗೆದುಕೊಂಡು ಆಕಾಶದ ಕಡೆಗೆ ನೋಡಿ ಅವುಗಳನ್ನು ಆಶೀರ್ವದಿಸಿ ಮುರಿದು ಶಿಷ್ಯರ ಕೈಗೆ ಕೊಟ್ಟು - ಇದನ್ನು ಜನರ ಗುಂಪಿಗೆ ಹಂಚಿರಿ ಅಂದನು. 17ಅವರೆಲ್ಲರು ಊಟಮಾಡಿ ತೃಪ್ತರಾದರು; ನಂತರ ಉಳಿದ ತುಂಡುಗಳನ್ನು ಕೂಡಿಸಲಾಗಿ ಅವು ಹನ್ನೆರಡು ಪುಟ್ಟಿ ಆದವು. ಪೇತ್ರನು ಯೇಸುವನ್ನು ಕ್ರಿಸ್ತನೆಂದು ಅರಿಕೆಮಾಡಿದ್ದು; ಯೇಸು ತನ್ನ ಮರಣವನ್ನು ಮುಂತಿಳಿಸಿದ್ದು 18 19 ಒಂದು ದಿನ ಯೇಸುವು ಏಕಾಂತವಾಗಿ ಪ್ರಾರ್ಥನೆಮಾಡುತ್ತಿರುವಾಗ ಆತನ ಶಿಷ್ಯರು ಆತನ ಸಂಗಡ ಇದ್ದರು. ಅನಂತರ ಆತನು ಅವರಿಗೆ, <<ಜನರು ನನ್ನನ್ನು ಕುರಿತು ಏನು ಹೇಳುತ್ತಾರೆ?>> ಎಂದು ಶಿಷ್ಯರನ್ನು ಕೇಳಲು ಅವರು - 19<<ನಿನ್ನನ್ನು ಸ್ನಾನಿಕನಾದ ಯೋಹಾನನು ಎಂದೂ; ಕೆಲವರು ಎಲೀಯನು ಎಂದೂ; ಇನ್ನು ಕೆಲವರು ಪೂರ್ವದ ಪ್ರವಾದಿಗಳಲ್ಲಿ ಯಾರೋ ಒಬ್ಬನು ಜೀವದಿಂದ ಎದ್ದಿದ್ದಾನೆ ಎಂದು ಅನ್ನುತ್ತಿದ್ದಾರೆ>> ಎಂದು ಹೇಳಿದರು. 20 21 22 ಯೇಸು ಅವರನ್ನು - <<ಆದರೆ ನೀವು ನನ್ನನ್ನು ಯಾರು ಅನ್ನುತ್ತೀರಿ?>> ಎಂದು ಕೇಳಲಾಗಿ ಪೇತ್ರನು - <<ನೀನು ದೇವರಿಂದ ಬರಬೇಕಾಗಿರುವ ಕ್ರಿಸ್ತನು>> ಎಂದು ಉತ್ತರ ಕೊಟ್ಟನು. 21ಆಗ ಯೇಸುವು - ಇದನ್ನು ಯಾರಿಗೂ ಹೇಳಬೇಡಿರಿ ಎಂದು ಬಹು ಖಂಡಿತವಾಗಿ ಅವರಿಗೆ ಅಪ್ಪಣೆ ಕೊಟ್ಟು - 22<<ಮನುಷ್ಯಕುಮಾರನು ಬಹು ಕಷ್ಟಗಳನ್ನನುಭವಿಸಿ ಹಿರಿಯರಿಂದಲೂ ಮುಖ್ಯಯಾಜಕರಿಂದಲೂ ಶಾಸ್ತ್ರಿಗಳಿಂದಲೂ ನಿರಾಕರಿಸಲ್ಪಟ್ಟು ಕೊಲ್ಲಲ್ಪಟ್ಟು ಮೂರನೆಯ ದಿನದಲ್ಲಿ ಜೀವಿತನಾಗಿ ಎಬ್ಬಿಸಲ್ಪಡಬೇಕಾಗಿದೆ>> ಎಂದು ಹೇಳಿದನು. 23 24 25 ಇದಲ್ಲದೆ ಆತನು ಎಲ್ಲರಿಗೂ ಹೇಳಿದ್ದೇನಂದರೆ - <<ಯಾವನಿಗಾದರೂ ನನ್ನ ಹಿಂದೆ ಬರುವುದಕ್ಕೆ ಮನಸ್ಸಿದ್ದರೆ ಅವನು ತನ್ನನ್ನು ತಾನು ನಿರಾಕರಿಸಿ ತನ್ನ ಶಿಲುಬೆಯನ್ನು ಹೊತ್ತುಕೊಂಡು ನನ್ನ ಹಿಂದೆ ಪ್ರತಿದಿನ ಬರಲಿ. 24ತನ್ನ ಪ್ರಾಣವನ್ನು ಉಳಿಸಿಕೊಳ್ಳಬೇಕೆಂದಿರುವವನು ಅದನ್ನು ಕಳೆದುಕೊಳ್ಳುವನು; ಆದರೆ ನನ್ನ ನಿಮಿತ್ತವಾಗಿ ತನ್ನ ಪ್ರಾಣವನ್ನು ಕಳೆದುಕೊಳ್ಳುವವನು ಅದನ್ನು ಉಳಿಸಿಕೊಳ್ಳುವನು. 25ಒಬ್ಬ ಮನುಷ್ಯನು ಲೋಕವನ್ನೆಲ್ಲಾ ಸಂಪಾದಿಸಿಕೊಂಡರೂ ತನ್ನನ್ನೇ ತಾನು ಹಾಳುಮಾಡಿಕೊಂಡರೆ ಅಥವಾ ನಷ್ಟಪಡಿಸಿಕೊಂಡರೆ ಅವನಿಗೆ ಪ್ರಯೋಜನವೇನು? 26 27 ಯಾವನು ನನಗೂ ನನ್ನ ಮಾತುಗಳಿಗೂ ನಾಚಿಕೊಳ್ಳುತ್ತಾನೋ ಅವನಿಗೆ ಮನುಷ್ಯಕುಮಾರನು ತನಗೂ ತನ್ನ ತಂದೆಗೂ ಪರಿಶುದ್ಧ ದೂತರಿಗೂ ಇರುವ ಮಹಾಪ್ರಭಾವದೊಡನೆ ಬರುವಾಗ ಅವನ ಕುರಿತು ನಾಚಿಕೊಳ್ಳುವನು. 27ನಿಮಗೆ ಸತ್ಯವಾಗಿ ಹೇಳುತ್ತೇನೆ, ಇಲ್ಲಿ ನಿಂತಿರುವವರೊಳಗೆ ಕೆಲವರು ದೇವರ ರಾಜ್ಯವನ್ನು ನೋಡುವ ತನಕ ಮರಣಹೊಂದುವುದಿಲ್ಲವೆಂದು>> ಹೇಳಿದನು. ಯೇಸು ಪ್ರಕಾಶರೂಪದಿಂದ ಕಾಣಿಸಿಕೊಂಡದ್ದು 28 29 ಯೇಸು ಈ ಮಾತುಗಳನ್ನು ಹೇಳಿ ಸುಮಾರು ಎಂಟು ದಿವಸಗಳಾದ ಮೇಲೆ ಪೇತ್ರ ಯೋಹಾನ ಯಾಕೋಬರನ್ನು ಕರದುಕೊಂಡು ಪ್ರಾರ್ಥನೆಮಾಡುವುದಕ್ಕೆ ಬೆಟ್ಟವನ್ನು ಹತ್ತಿದನು. 29ಆತನು ಪ್ರಾರ್ಥನೆಮಾಡುತ್ತಿರಲಾಗಿ ಆತನ ಮುಖಭಾವವು ಬದಲಾಯಿತು. 30 31 0ಆತನ ಉಡುಪು ಬೆಳ್ಳಗಾಗಿ ಮಿಂಚುತ್ತಾ ಬಂದಿತು. ಇದಲ್ಲದೆ ಇಬ್ಬರು ಪುರುಷರು ಆತನ ಸಂಗಡ ಮಾತನಾಡುತ್ತಿದ್ದರು! ಅವರು ಯಾರೆಂದರೆ ಮೋಶೆಯೂ ಎಲೀಯನೂ. 31ಅವರು ವೈಭವದೊಡನೆ ಕಾಣಿಸಿಕೊಂಡು ಯೆರೂಸಲೇಮಿನಲ್ಲಿ ಆತನು ಹೊಂದಬೇಕಾಗಿದ್ದ ಮರಣದ ವಿಷಯವಾಗಿ ಮಾತನಾಡುತ್ತಿದ್ದರು. 32 33 ಇಷ್ಟರಲ್ಲಿ ಪೇತ್ರನಿಗೂ ಅವನ ಸಂಗಡ ಇದ್ದವರಿಗೂ ನಿದ್ರೆಯಿಂದ ಮೈಭಾರವಾಗಿತ್ತು. ಆದರೆ ಎಚ್ಚರವಾದ ಮೇಲೆ ಅವರು ಆತನ ಮಹಿಮೆಯನ್ನೂ ಆತನ ಸಂಗಡ ನಿಂತಿದ್ದ ಆ ಇಬ್ಬರು ಪುರುಷರನ್ನೂ ಕಂಡರು. 33ಅವರು ಯೇಸುವನ್ನು ಬಿಟ್ಟುಹೋಗುತ್ತಿರುವಾಗ ಪೇತ್ರನು ಯೇಸುವಿಗೆ - <<ಗುರುವೇ ನಾವು ಇಲ್ಲೇ ಇರುವುದು ಒಳ್ಳೆಯದು, ಮೂರು ಗುಡಾರಗಳನ್ನು ಕಟ್ಟುವೆವು; ನಿನಗೊಂದು ಎಲೀಯನಿಗೊಂದು ಹಾಗೂ ಮೋಶೆಗೊಂದು>> ಎಂದು ಹೇಳಿದನು. ತಾನು ಏನು ಹೇಳುತ್ತಿದ್ದೇನೆನ್ನುವುದು ತನಗೇ ಗೊತ್ತಾಗಲಿಲ್ಲ. 34 35 36 ಅವನು ಇದನ್ನು ಹೇಳುತ್ತಿರುವಲ್ಲಿ ಮೋಡವು ಬಂದು ಅವರ ಮೇಲೆ ಕವಿಯಿತು. ಮೋಡವು ಅವರನ್ನು ಆವರಿಸಿಕೊಂಡಾಗ ಅವರು ಹೆದರಿದರು. 35ಆಗ ಆ ಮೋಡದೊಳಗಿಂದ; <<ಈತನು ನನ್ನ ಮಗನು. ನಾನು ಆರಿಸಿಕೊಂಡವನು; ಈತನ ಮಾತನ್ನು ಕೇಳಿರಿ>> ಎಂಬ ವಾಣಿ ಆಯಿತು. 36ಆ ವಾಣಿ ಆದ ಮೇಲೆ ಯೇಸುವನ್ನು ಮಾತ್ರ ಕಂಡರು. ತಾವು ಕಂಡ ಈ ಸಂಗತಿಗಳಲ್ಲಿ ಒಂದನ್ನಾದರೂ ಆ ದಿವಸಗಳಲ್ಲಿ ಯಾರಿಗೂ ತಿಳಿಸದೆ ಸುಮ್ಮನಿದ್ದರು. ಯೇಸು ಮೂರ್ಛೆ ರೋಗಿಯನ್ನು ಸ್ವಸ್ಥಮಾಡಿದ್ದು 37 38 39 40 ಮರುದಿವಸ ಅವರು ಬೆಟ್ಟದಿಂದ ಇಳಿದು ಬಂದಾಗ ಜನರ ದೊಡ್ಡ ಗುಂಪೊಂದು ಆತನನ್ನು ಎದುರುಗೊಂಡರು. 38ಆಗ ಆ ಗುಂಪಿನಲ್ಲಿದ್ದ ಒಬ್ಬನು - <<ಬೋಧಕನೇ, ನನ್ನ ಮಗನನ್ನು ಕಟಾಕ್ಷಿಸು ಎಂದು ನಿನ್ನನ್ನು ಬೇಡಿಕೊಳ್ಳುತ್ತೇನೆ. ನನಗೆ ಇವನೊಬ್ಬನೇ ಮಗನು. 39ಇವನನ್ನು ದೆವ್ವಹಿಡಿಯುತ್ತದೆ, ಹಿಡಿಯುತ್ತಲೇ ಕೂಗಿಕೊಳ್ಳುತ್ತಾನೆ. ಅದು ಬಾಯಲ್ಲಿ ನೊರೆ ಬರುವಷ್ಟು ಇವನನ್ನು ಒದ್ದಾಡಿಸುತ್ತದೆ; ಮತ್ತು ಬಹು ಕಷ್ಟಕೊಟ್ಟು ತೊಂದರೆಪಡಿಸಿದ ಹೊರತು ಬಿಡುವುದಿಲ್ಲ. 40ಅದನ್ನು ಬಿಡಿಸಬೇಕೆಂದು ನಿನ್ನ ಶಿಷ್ಯರನ್ನು ಬೇಡಿಕೊಂಡೆನು. ಆದರೆ ಅವರಿಂದ ಆಗದೆಹೋಯಿತು>> ಎಂದು ಹೇಳಿದನು. 41 42 ಅದಕ್ಕೆ ಯೇಸು - <<ಎಲಾ ಅಪನಂಬಿಕೆಯುಳ್ಳಂಥ ಮೂರ್ಖಸಂತಾನವೇ, ನಾನು ಇನ್ನೆಷ್ಟು ದಿನ ನಿಮ್ಮ ಸಂಗಡ ಇದ್ದು ನಿಮ್ಮನ್ನು ಸಹಿಸಿಕೊಳ್ಳಲಿ? ನಿನ್ನ ಮಗನನ್ನು ಇಲ್ಲಿಗೆ ಕರದುಕೊಂಡು ಬಾ>> ಅಂದನು. 42ಆ ಹುಡುಗನು ಇನ್ನೂ ಬರುತ್ತಿರುವಾಗಲ್ಲೇ ಆ ದೆವ್ವವು ಅವನನ್ನು ನೆಲಕ್ಕೆ ಅಪ್ಪಳಿಸಿ ಬಹಳವಾಗಿ ಒದ್ದಾಡಿಸಿತು. ಆದರೆ ಯೇಸು ಆ ದೆವ್ವವನ್ನು ಗದರಿಸಿ ಆ ಹುಡುಗನಿಗೆ ವಾಸಿಮಾಡಿ ಅವನ ತಂದೆಯ ಕೈಗೆ ಕೊಟ್ಟನು. 43 44 45 ಅದನ್ನು ನೋಡಿ ಎಲ್ಲರು ದೇವರ ಮಹತ್ಕಾರ್ಯಕ್ಕೆ ಬೆರಗಾದರು. ಯೇಸು ತನ್ನ ಮರಣವನ್ನು ಎರಡನೆಯ ಸಾರಿ ಮುಂತಿಳಿಸಿದ್ದು ಯೇಸುಮಾಡಿದ ಎಲ್ಲಾ ಮಹತ್ಕಾರ್ಯಗಳಿಗೆ ಎಲ್ಲರೂ ಆಶ್ಚರ್ಯಪಡುತ್ತಿರಲಾಗಿ ಆತನು ತನ್ನ ಶಿಷ್ಯರಿಗೆ - 44<<ನೀವಂತೂ ಈ ಮಾತುಗಳನ್ನು ನಿಮ್ಮ ಮನಸ್ಸಿನಲ್ಲಿ ಇಟ್ಟುಕೊಳ್ಳಿರಿ; ಯಾಕೆಂದರೆ ಮನುಷ್ಯಕುಮಾರನು ಮನುಷ್ಯರ ಕೈಗೆ ಒಪ್ಪಿಸಲ್ಪಡುವನು>> ಎಂದು ಹೇಳಿದನು. 45ಅವರು ಈ ಮಾತನ್ನು ಗ್ರಹಿಸಲಿಲ್ಲ; ಅದು ಅವರಿಗೆ ಮರೆಯಾಗಿದ್ದುದರಿಂದ ಅದರ ಅರ್ಥವನ್ನು ಅವರು ತಿಳಿಯದೆ ಹೋದರು. ಆ ಮಾತಿನ ವಿಷಯದಲ್ಲಿ ಅವರು ಆತನನ್ನು ಕೇಳುವುದಕ್ಕೆ ಅಂಜಿದರು. ಯೇಸು ತನ್ನ ಶಿಷ್ಯರಲ್ಲಿ ನಮ್ರತೆಯುಳ್ಳವನೇ ದೊಡ್ಡವನೆಂದು ತೋರಿಸಿದ್ದು 46 47 48 ತರುವಾಯ ಶಿಷ್ಯರೊಳಗೆ - ತಮ್ಮಲ್ಲಿ ಯಾವನು ಹೆಚ್ಚಿನವನು ಎಂಬ ವಿಚಾರಹುಟ್ಟಿತು. 47ಯೇಸು ಅವರ ಮನಸ್ಸಿನ ವಿಚಾರವನ್ನು ತಿಳಿದವನಾಗಿ, ಒಂದು ಚಿಕ್ಕಮಗುವನ್ನು ತನ್ನ ಪಕ್ಕದಲ್ಲಿ ನಿಲ್ಲಿಸಿ ಅವರಿಗೆ, 48<<ಯಾವನಾದರೂ ನನ್ನ ಹೆಸರಿನಲ್ಲಿ ಈ ಚಿಕ್ಕ ಮಗುವನ್ನು ಸೇರಿಸಿಕೊಂಡರೆ ನನ್ನನ್ನು ಸೇರಿಸಿಕೊಂಡ ಹಾಗಾಯಿತು; ಮತ್ತು ಯಾವನಾದರೂ ನನ್ನನ್ನು ಸೇರಿಸಿಕೊಂಡರೆ ನನ್ನನ್ನು ಕಳುಹಿಸಿಕೊಟ್ಟಾತನನ್ನೇ ಸೇರಿಸಿಕೊಂಡ ಹಾಗಾಯಿತು; ಯಾಕೆಂದರೆ ನಿಮ್ಮೆಲ್ಲರಲ್ಲಿ ಯಾವನು ಚಿಕ್ಕವನೋ ಅವನೇ ದೊಡ್ಡವನು>> ಎಂದು ಹೇಳಿದನು. ಯೇಸುವಿನ ಶಿಷ್ಯರಿಗೆ ವಿರುದ್ಧವಲ್ಲದವರು ಅವರ ಪಕ್ಷದವರಾಗಿದ್ದಾರೆಂಬುವ ಬೋಧೆ 49 50 ಅದಕ್ಕೆ ಯೋಹಾನನು - <<ಗುರುವೇ, ಯಾವನೋ ಒಬ್ಬನು ನಿನ್ನ ಹೆಸರನ್ನು ಹೇಳಿ ದೆವ್ವಬಿಡಿಸುವುದನ್ನು ನಾವು ಕಂಡು ಅವನು ನಮಗೆ ಸೇರಿದವನಲ್ಲವಾದ್ದರಿಂದ ಅವನಿಗೆ ಅಡ್ಡಿಮಾಡಿದೆವು>> ಅನ್ನಲು 50ಯೇಸು ಅವನಿಗೆ - <<ಅಡ್ಡಿಮಾಡಬೇಡಿರಿ; ನಿಮಗೆ ವಿರುದ್ಧವಲ್ಲದವನು ನಿಮ್ಮ ಪಕ್ಷದವನೇ>> ಎಂದು ಹೇಳಿದನು. ಯೇಸು ಯೆರೂಸಲೇಮಿಗೆ ಹೋಗುವಾಗ ಆತನನ್ನು ಸಮಾರ್ಯದವರು ಸೇರಿಸಿಕೊಳ್ಳದೆ ಹೋದದ್ದು 51 52 53 ಯೇಸು ತಾನು ಪರಲೋಕಕ್ಕೆ ಏರಿಹೋಗುವ ದಿವಸಗಳು ಸಮೀಪಿಸುತ್ತಿರುವಾಗ ಯೆರೂಸಲೇಮಿಗೆ ಹೋಗುವುದಕ್ಕೆ ಮನಸ್ಸನ್ನು ದೃಢಮಾಡಿಕೊಂಡು 52ತನ್ನ ಮುಂದಾಗಿ ದೂತರನ್ನು ಕಳುಹಿಸಿದನು. ಇವರು ಹೊರಟು ಆತನಿಗೆ ಬೇಕಾದದ್ದನ್ನು ಸಿದ್ಧಮಾಡುವುದಕ್ಕಾಗಿ ಸಮಾರ್ಯದವರ ಒಂದು ಹಳ್ಳಿಗೆ ಬಂದರು. 53ಆದರೆ ಯೇಸುವು ಯೆರೂಸಲೇಮಿಗೆ ಹೋಗುವವನಾದ್ದರಿಂದ ಆ ಸಮಾರ್ಯದವರು ಆತನನ್ನು ಸೇರಿಸಿಕೊಳ್ಳಲಿಲ್ಲ. 54 55 56 ಆತನ ಶಿಷ್ಯರಾದ ಯಾಕೋಬ, ಯೋಹಾನರು ಇದನ್ನು ಕಂಡು - <<ಕರ್ತನೇ, ಆಕಾಶದಿಂದ ಬೆಂಕಿಬಿದ್ದು ಇವರನ್ನು ನಾಶ ಮಾಡಲಿ ಎಂದು ನಾವು ಆಜ್ಞಾಪಿಸುವುದಕ್ಕೆ ನಿನಗೆ ಮನಸ್ಸುಂಟೋ?>> ಎಂದು ಕೇಳಲು 55ಯೇಸುವು ತಿರುಗಿಕೊಂಡು ಅವರನ್ನು ಗದರಿಸಿ, ("ನೀವು ಎಂಥ ಆತ್ಮದವರಾಗಿದ್ದೀರೆಂದು ನಿಮಗೆ ತಿಳಿಯದು. ನರಪುತ್ರನು ಬಂದಿರುವುದು ಮಾನವ ಪ್ರಾಣಗಳನ್ನು ನಾಶಮಾಡುವುದಕ್ಕಾಗಿ ಅಲ್ಲ ಅವರನ್ನು ರಕ್ಷಿಸುವುದಕ್ಕಾಗಿ ಬಂದನು") 56ಆಗ ಅವರೆಲ್ಲರೂ ಹೊರಟು ಬೇರೆ ಹಳ್ಳಿಗೆ ಹೋದರು. ತನ್ನ ಶಿಷ್ಯರು ದೇವರ ಸೇವೆಗಿಂತ ಮೊದಲು ಬೇರೆ ಯಾವುದನ್ನೂ ಚಿಂತಿಸಕೂಡದೆಂದು ಯೇಸು ಬೋಧಿಸಿದ್ದು 57 58 ಅವರು ದಾರಿಯಲ್ಲಿ ಹೋಗುತ್ತಿರುವಾಗ ಒಬ್ಬನು ಯೇಸುವಿಗೆ - <<ನೀನು ಎಲ್ಲಿಗೆ ಹೋದರೂ ನಾನು ನಿನ್ನ ಹಿಂಬಾಲಿಸುತ್ತೇನೆ>> ಎಂದು ಹೇಳಲು ಆತನು ಅವನಿಗೆ - <<ನರಿಗಳಿಗೆ ಗುದ್ದುಗಳಿವೆ, 58ಆಕಾಶದಲ್ಲಿ ಹಾರಾಡುವ ಹಕ್ಕಿಗಳಿಗೆ ಗೂಡುಗಳಿವೆ; ಆದರೆ ಮನುಷ್ಯಕುಮಾರನಿಗೆ ತಲೆಯಿಡುವಷ್ಟು ಸ್ಥಳವೂ ಇಲ್ಲ>> ಎಂದು ಹೇಳಿದನು. 59 60 ಯೇಸುವು ಮತ್ತೊಬ್ಬನಿಗೆ - <<ನನ್ನನ್ನು ಹಿಂಬಾಲಿಸು>> ಎಂದು ಹೇಳಲು ಅವನು - <<ಕರ್ತನೇ, ನಾನು ಮೊದಲು ಹೋಗಿ ನನ್ನ ತಂದೆಯ ಉತ್ತರಕ್ರಿಯೆಗಳನ್ನು ಮಾಡಿ ಬರುವಂತೆ ನನಗೆ ಅಪ್ಪಣೆಯಾಗಬೇಕು>> ಅಂದನು. 60ಆದರೆ ಯೇಸು ಅವನಿಗೆ - <<ಸತ್ತವರೇ ತಮ್ಮವರಲ್ಲಿ ಸತ್ತುಹೋದವರ ಉತ್ತರಕ್ರಿಯೆಗಳನ್ನು ಮಾಡಲಿ, ನೀನಂತೂ ಹೋಗಿ ದೇವರ ರಾಜ್ಯವನ್ನು ಪ್ರಸಿದ್ಧಿಪಡಿಸು>> ಎಂದು ಹೇಳಿದನು. 61 62 ಇನ್ನೊಬ್ಬನು ಸಹ - <<ಕರ್ತನೇ, ನಾನು ನಿನ್ನನ್ನು ಹಿಂಬಾಲಿಸುತ್ತೇನೆ; ಆದರೆ ಮೊದಲು ನನ್ನ ಮನೆಯವರಿಗೆ ಹೇಳಿ ಬರುವುದಕ್ಕೆ ನನಗೆ ಅಪ್ಪಣೆಯಾಗಬೇಕು>> ಅಂದನು. 62ಯೇಸು ಅವನಿಗೆ - <<ಯಾವನಾದರೂ ನೇಗಿಲಿನ ಮೇಲೆ ತನ್ನ ಕೈಯನ್ನಿಟ್ಟು ಹಿಂದಕ್ಕೆ ನೋಡಿದರೆ ಅವನು ದೇವರ ರಾಜ್ಯಕ್ಕೆ ತಕ್ಕವನಲ್ಲವೆಂದು>> ಹೇಳಿದನು