20

1 ಗಲಾಟಿ ಆದ ಗಳಿಗೆಲ್ ಪೌಲ ಶಿಷ್ಯರನೆ ಕರ್ದ್ ಅವರ್ಗ್ ದೈರ್ಯಯಿಂದ ಇರ್ ನ್ ಅಂದ್ ಹೇಳ್ ಅವರನೆ ಬುಟ್ ಮೆಕೆದೋನಿಗ್ ವಾನ 2 ಆ ದೇಶಗಣೆಯಲ್ಲಾ ಜನಃ ಗ್ ಅನೇಕ ಉತ್ಸಾಹದ ಮಾತ್ನೆ ಹೇಳ್ಸೋಡ್ ಗ್ರೀಸ್ ಅಂಬ ಜಾಗಗ್ ವಾನ. 3 ಇಲ್ಲಿ ಅವನ್ ಮೂರ್ ತಿಂಗಳ್ ಇದ್ದಾ ಗಳಿಗೆವೆ ಸಿರಿಯಾಗ ಹಡಗ್ ಲ್ ವೋಗಬೇಕೆಂದ್ ಇರಗ,ಯೆಹುದ್ಸರ್ ಅವನ ವಿರುದ್ದ ಒಳಸಂಚು ಮಾಡುತ್ತಿರುವುದಾಗಿ ಗೊತ್ತಾತ್,ಅದ್ಗ್ ತ್ತಾ ಅವನ್ ಮೆಕೆದೋನಿಯಿಂದ ಪುನಃ ಬರಲೇ ತೀರ್ಮಾನ ಮಾಡಿನ. 4 ಬೆರೋಯನ ಮಗ ಸುಪುತ್ರ, ಥೆಸಲೋನಿಕನ ಅರಿಸ್ತಾರ್ಕ ಇಂದೇ ಸೆಂಕುದ. ದೆರ್ಬೆಯ ಗಾಯೆ ತಿಮೊಥೆ ಇಂದೇ ಏಷ್ಯ ಖಂಡನ ತುಖಕ ತ್ರೂಪಿಮ್ ಅವನ ಜ್ಯೊತೆಲ್ ವಾದರ್. 5 ಇವರೆಲ್ರ ಮುಂಚೆವೇ ವೋಗಿ ತ್ರೂವ ಅಂಬ ಜಾಗಲ್ ನಂಗನೆ ಕಾತ್ ದರ್ 6 ನಾಗ ಹುಳಿರಹಿತ ರೊಟ್ಟಿಯ ಹಬ್ಬದಗಳಿಗೆ ಪಿಲಿಪ್ಪಿಯಿಂದ ಹಡಗಲ್ಲಿ ವೋಗಿ, ಐದ್ ಜೀನ ಆದಾಗ ತ್ರೂವಲ್ ಇದ್ದವರ್ ವಂದಿಗೆ ಸೇರಿ ಅಲ್ಲಿ ಯೋಳ್ ಜೀನ ಇದ್,ಯೂತಿಕ ಸತ್ತ ಬುದ್ ದಾಗ ಜೀವಾನಿ ಎದೆಸಿದದ್. 7 ಭಾನುವಾರ ಜೀನ ಪಂತಿಯಿದ್ದಗ ನಂಗ ಅಲ್ಲಿಗ್ ಬಂದಾಗ ಪೌಲನ್ ಅಲ್ಲಿ ಕಲ್ ಜ್ಯಾಡ್ ಇದ್ದ ಅದರ ಬಾಳಗಾಗಿ ಅವನ್ ವಾಗಕೊಡಗ್ ಮದ್ಯೆರಾತ್ರಿಗಂಟ ಮಾತ್ ಡ್ಯೋಡ್ ಇದ್ದ. 8 ನಂಗ ಗುಂಪು ಸೇರಿದ್ದ ಮೇಲೆ ಮನೆಲ್ ಸುಮಾರ್ ದೀಪ ಎರ್ದ್ಯೋಡ್ ಇತ್. 9 ಒಂದ್ ಕಿಟಕಿಲ್ ಒಬ್ಬ ಯೋತಿರ ಅಂಬವನ್ ಕುಳ್ ತಿಳಿಸಿನ ಪೌಲನ್ ಒಳವೊತ್ ಮಾತಾಡ್ಯೋಡಿದ ಕಂಡ್ಗ್ ಅವನಾಗ್ ಒಳ ನಿದ್ದೆ ಬಂತ್ ನಿದ್ದೆ ಮಾಡಿದ ಅವನ ಮೂರ್ ಮಹಡಿನ ಮೇಲೆಯಿಂದ ಕೆಳಗೆ ಬುದ್ದವನೆ ಬಂದ್ ಎತ್ತಿ ನಿಸ್ಸಿದಾಗ ಅವನ್ ಸತ್ ವೋಗಿನ. 10 ಆಗ ಪೌಲನ್ ಕೆಳಗ್ ವೋಗಿ ಆ ಮಹಿಷನೆ ತಬ್ಬೋಷ್ " ಗಾಬರಿ ಆಗಬೇಡ ಅವನ ಜೀವಾ ಅವನತ ಇವೆ ಇದೆದ" ಅಂದ್ ಹೇಳಿನಾ. 11 ಆಗ ಅವನ್ ಮಹಡಿಮನೆಗೆ ವೋಗಿ ರೊಟ್ಟಿ ಮುರ್ ತ್ ತಿಂದ್, ಬಾಳಗ ಗಂಟ ಅವರ್ವೊಂದಿಗೆ ಮಾತಾಡಿ ಅಲ್ಲಿಂದ ವಾನ. 12 ಜೀವಾಗಿ ಎದ್ದಿ ಬಂದ ಆ ಮಹಿಷನ್ ಜಾನಃ ಮನೆಗ್ ಕರ್ ದ ಬೀಡ್ ವಾದರ್. ಆವರ್ಗ್ ಒಳ ಆದರಣೆ ದೊರೆಯಿತು? ಮಿಲೇಮಿಲೇತಸ್ಕೆಗ್ ಪೌಲ ವಾದದ್. 13 ವೆಂದ್ಗ್ ನಂಗ ಹಡಗ್ ವೋಗಿ ಅಸ್ಸೋಸ್ ಲಾಬ ಜಾಗಗ್ ಸಮುದ್ರಗಣೆ ವಾನು. ಅಲ್ಲಿ ಪೌಲನ್ ನಂಗವಂದಿಗೆ ಬಂದ್ ಹಡಗಲ್ ವಾಗಕಂದ್ ಇಡ್ಗ್. 14 ಅಲ್ಲಿಗ್ ನಡ್ ದ್ಯೋಡ್ ಹೋಗಬೇಕಾದುದರಿಂದ ಅವನ್ ಈ ಏರ್ಪಾಡು ಮಾಡಿನ. 15 ಅಸ್ಸೋಸಿಲ್ ಅವನ್ ನಂಗನೆ ಕೊಡಗ, ಅವನೇ ಹಡಗಲ್ ಕರ್ದ್ಯೋಡ್ ವೋಗಿ ಮಿತಿಲೇನಿನ್ ವಾನ್ 16 ಅಲ್ಲಿನ ಹಡಗಲ್ ವೋಗಿ ಖಿಯೋಸ್ ದ್ವೀಪನೆ ಸೇರಿನು ಇದರ ಬಾಳಿಗಾಗಿ ಸಾಮೋಸ ಅಂಬ ಜಾಗಗ್ ವಾನ್ ಇದರ ಮೂರ್ ನ ಜೀವ ಮಿಲೇತ ಅಂಬ ಜಾಗಗ್ ಬಂದ್ ಸೇರಿನು."ಪಂಚಾಶತ್ತಮ ಹಬ್ಬಗ್ ಜೀನ ಜೆರುಸಲೇಮಿಲ್ ಇರಕ್ ಅಂಬ ಅತ್ತ ಇದ್ದಕಂಡ್ಗ್ ಏಷ್ಯ ಖಂಡಲ್ ಸಮಯನೆ ಹಾಳ್ ಬಾಂಡದೆ ಎಫೆಸನೆ ದಾಟಿ ಹೋರ್ ಅಂದ್ ಅವನ ತೀರ್ಮಾನ ಹೀಗಿತ್. ಎಫೆಸನಲ್ ಇದ್ದ ದೊಡ್ದವರ್ ನ ಬುದ್ದಿಮಾತ್. 17 ಮಿಲೆತಯಿಂದ ಪೌಲನ್ ಎಫೆಸಗ್ ಸುದ್ದಿನ ಕಳ್ಸಿ, ಅಲ್ಲಿನ ಸಭೆನ ದೊಡ್ದವರ್ ಬರಕಂದ್ ತಿಳ್ಸಿನ. 18 ಅವರ್ ಬಂದ ಮೇಲೆ ಪೌಲನ್ ಆವರ್ಗ್ ಹೀಗೆ ಹೇಳಿನ: "ನಾ ಏಷ್ಯಾ ಖಂಡ್ಗ್ ಬಂದ ಮೊದ್ಲ್ ಜಿನಾಯಿಂದ ನಿಂಗವಂದಿಗೆ ಇದ್ದ ಕಾಲನೆ ಯಾಂಗ್ಯ ಕೇಳಿದಿ ಅಂಬದ್ ನಿಂಗಗ್ ಗೊತ್ತ್. 19 ಯೆಹುದ್ಯರ ಒಳಸಂಚುಗಳಿಂದ ನಾ ಕಠಿಣವಾಗಿ ಪರೀಕ್ಷಿಸಲ್ಪಟ್ಟರು ಬಹಳ ದೀನತೆಯಿಂದಲೂ ಕಣ್ಣೀರ್ ಯಿಂದ ಸ್ವಾಮಿನ ಸೇವೆ ಮಾಡಿನಿ, 20 ನಿಂಗಗ್ ಹಿತಕರ ವಾದುದೆಲ್ಲವನ್ನು ಬಹಿರಂಗದಿಂದಲೂ ಮನೆ ಮನೆಗಣೆ ಹಿಂಜಲಿಯದೆ ಭೋದಿಸಿದ್ದೇನೆ, ಇಂದೇ ಕಲಿಸಿದ್ದೇನೆ. 21 ಪಾಪಯಿಮದ ಮಾನಸಾಂತರಪಟ್ಟು ದೈವನ ವರಗ್ ತಿರಿಗ್ಯುಕ್ ಇಂದೇ ನಂಗ ಯೇಸುಸ್ವಾಮಿನ ಮೇಲೆ ನಂಬಿಕೆ ಇರಕಂದ್ ಯೆಹುದ್ಯರ್ಗ್ ಗ್ರೀಕದಮರ್ಗ್ ಸಾಕ್ಷಿ ಹೇಳಿದೀನಿ. 22 ಇರಾಗ್,ಪವಿತ್ರಾತ್ಮ ಪರವಶನಾಗಿ ನಾ ಜೆರುಸಲೇಮಿಗ್ ವೋತ್ತೀನಿ ಅಲ್ಲಿ ನನಗ್ ಯಾನ್ ಹಾತೆದೆಂದ್ ಗೊತ್ಕಾಣಿ. 23 ಜೈಲ್ ಮನೆನ ಬಾದೆಯೂ ನನಗ್ ಕಾದಿವೆಯೆಂದು ಯಲ್ಲಾ ಪಟ್ಟಣಲ್ ಪವಿತ್ರಾತ್ಮನು ನನಗ್ ದಿಟಗೆವೆ ಸಾಹೇಳಿತ್ತಿನಿ. 24 ನನ್ನ ಜೀವವೇ ಅಮೂಲ್ಯವೆಂದು ನಾ ಹೇಳಲ್ ಹಾಗದಿಲ್ಲೇ, ಹೀಗೆ ಇರಗ ನಾ ದೈವನ ದಯೆಯಿಂದ ದೈವನ ಸುದ್ದಿನೇ ಸಮದಾನಯಿಂದ ಸಾಕ್ಷಿ ಕ್ವೊಡಲೇ ಕರ್ತನಾದ ಯೇಸುಸ್ವಾಮಿಯಿಂದ ನಾ ಮಾಡ ಸೆವೆಂದನೆ ಮಾಡಿ ತೀರ್ಸಕಂದ್ ನನ್ನ ಆಸೆ. 25 ನಿಂಗ ಮುಂದಕ್ ನಾ ದೈವನ ಸುದ್ದಿನೇ ಸಾರ್ಯೋಡಿದಿ ಆಗ ನಿಂಗಲ್ ಯಾರ್ ನನ್ನ ಮೊಕನೆ ಇನ್ ಮುಂದಕ್ ನೋಡದಿಲ್ಲೇ ಅಂದ್ ನನಗ್ ಗೊತ್. 26 ಹೀಗೆ ಇರಗ ನಾ ನಿಂಗಗ್ ಹೇಳದ್ ಯಾನ ಅಂದಲೇ "ನಿಂಗಲ್ ಯಾರಾರ್ ಹಾಳ್ ಅಂದಲೇ ಅದ್ ಗ್ ನಾನೇ ಹೇಳ್ಬೇಡ. 27 ಯಾನ್ಗಂದಲೇ ದೈವನ ಸುದ್ದಿನೇ ಬಂದ್ ಬೇಡದೆ ನಿಂಗಗ್ ಸಾರಲೇ ನಾ ಅಂಜಿತಿಲ್ಲೇ. 28 ದೈವ ತನ್ನ ರಕ್ತಯಿಮದ ಎತ್ಪೋದ ಸಭೆನೆ ನಿಂಗ ಕುರುಬರಾಗಿರುವುದಕ್ಕಾಗಿ ಪವಿತ್ರಾತ್ಮನು ನಿಂಗನೇ ಮಂದಯಲ್ಲಿ ಅದ್ಯಕ್ಷರಾಗಿ ಇರಕಂಡ್ಗ್, ನಿಂಗ ಬಗ್ಗೆ ಇಡೀ ಮಂದೆಯ ಬಗ್ಗೆಲ್ ಎಚ್ಚರಿಕೆಯಿಂದ ಇರ್ ನ್. 29 ನಾ ವಾದಗಳಿಗೆ ಅತೀ ಕೆಟ್ಟವಾದ ಕೊಳ ನಿಮಗ ಮುಂದಕ್ ಬಂದ್ ಮಂದೆಯನ್ನು ಹಾಳ್ ಮಾಡದೆ ಇರದಿಲ್ಲೆ ಅಂದ್ ನಂಗ್ ಗೊತ್ತು. 30 ನಿಂಗತಣಲ್ಲಿದ್ದವರೆ ಜನಃ ಬಂದ್ ವಕ್ರಮಾತುಗಳ್ನಾಡಿ ಶಿಷ್ಯರ್ ನೆ ತಂಗ ಕರ್ ದ್ ಕ್ವೊತ್ತೇವೆ. 31 ನಾ ಮೂರು ವರ್ಷ ಕಾಟ ಹಗಲ್ ರಾತ್ರಿ ಕಣ್ಣೀರ್ ಹಾಕ್ಸೋಡ್ ಯಲ್ರಗ್ ಬುದ್ದಿ ಹೇಳಬಡಿದಿ ಅಂಬದ್ ನೆ ಎಚ್ಚರಿಕೆ ಯಿಂದ ಮರಬೇಡ್. 32 "ಈಗ ನಿಂಗನೇ ದೈವಗ್ ಕೈಗ್, ಅದರ ಅನುಗ್ರಹ ಸಂದೇಶಕ್ಕು, ಒಪ್ಪಿಸಿಬಿಟ್ತೀನಿ ಅದ್ ನಿಂಗನೇ ಅಭಿವ್ರುದ್ದಿಗೊಳಿಸಬಲ್ಲದು. ಇದ್ ಅಲ್ಲದೇ, ಪಾವನಪುರುಷರ ಬಾದ್ಯತೆಯಲ್ಲಿ ಭಾಗಿಗಳಾಗುವಂತೆ ಮಾಡಿತ್ತದೆ. 33 ನಾ ಯಾರ ಬೆಳ್ಳಿ ಬಂಗಾರಗ್, ಬಟ್ಟೆ ಬರೆಗ್ ಹಾಗಲಿ ಆಸೆ ಪಟ್ಟದಿಲ್ಲೇ. 34 ನನ್ನ ಇಂದೇ ನನ್ನ ಜ್ಯೊತೆಲ್ ಇದ್ದವನ ಅವಶ್ಯಕತೆಗಳನ್ನು ನೀಗಿಸಲು ಈ ಯಿಂದವೇ ಮಾಡಿದಿನಿ ಅಂಬದ್ ನಿಂಗ ಯೆಲ್ರಗ್ ಗೊತ್ತ್ ಇದೆ. 35 ಹೀಗೆ ಕಷ್ಟಪಟ್ಟು ಕ್ಯಲ್ಸ ಮಾಡಿ ದುರ್ಬಲರಿಗೆ ನೆರವಾಗಬೇಕೆಂದು ನಾ ನಿಂಗಗ್ ಸುಮಾರ್ ವಿಧದಲ್ಲಿ ತೋರ್ಸಿಕೊಟ್ಟಿದ್ದಿನಿ ಯೆಸೆದ್ ಕೈಗಿಂತ ಕೊಡಕ್ಕೆ ಒಳ್ಳೇದ್,ಯೇಸುಸ್ವಾಮಿನ ಮಾತ್ ಮನಸಲ್ಲಿ ಇದೆ? 36 ಇದ್ ಎಲ್ಲಾ ಹೇಳಿತೀರಿದ ಗಳಿಗೆ ಪೌಲ ಅವರೆಲ್ರ ಜ್ಯೊತೆಲ್ ಕುಳಿತು ಪ್ರಾರ್ಥನೆ ಮಾಡಿದರ್. 37 ಅವರೆಲ್ಲರೂ ಪೌಲನ ತಬ್ಬೋಡ್, ಅತ್ವೊಡ್ ಅವನ್ ಮುದ್ ಮಾಡಿದರ್. 38 ನಿಂಗ ನನ್ನ ಇನ್ ಮೇಲೆ ನ್ವೋಡದಿಲ್ಲೇ , ಅಂದ್ ಅವನ್ ಹೇಳಿದ ಮಾತನ್ ಕೇಳಿ ಆವರ್ಗ್ ಬಹಳ ದುಃಖ ಹಾತ್, ಆಗ ಪೌಲನೆ ಹಡಗಲ್ ವೋಗಲೇ ಕ್ವೊಂಡಿಗೆ ಬೇಟರ್.