Chapter 9

1 ಅಂಗವೇ ಯೇಸು ಜನರ್ಗ್ “ನಾ ನಿಂಗಗ್ ಸತ್ಯಗಿ ಹಾಳಿತಿನಿ, ಇಲ್ಲಿ ನಿತೋಡಿರ ಸೆಟೆ ಜನರ್ ತಂಗ ಸಾಯದೆ ಮುಚ್ಚೆವೆ ದ್ಯಾವರ ರಾಜ್ಯ ಮಹಿಮೆಲ್ ಬರದ್ನೆ ನೋಡಿತರೆ” ಅತ್ತ ಹಾಳಿದರ್. 2 ಆರು ಜನ ಆದಗ, ಪೇತ್ರ ಯಾಕೋಬ ಮತ್ತು ಯೋಹಾನನೇ ಕರ್ದೂಡು ಯೇಸು ದೊಡ್ಡದಾದ ಬಟ್ಟಗ್‍ವಾದರ್ ಅಲ್ಲಿ ಅವರೆಲ್ಲಾರ್ ಮಾತ್ರವೇ ಇದ್ದರ್. ಈ ಶಿಷ್ಯರ್ ಯೇಸುನೇ ನ್ವಾಡಗ ಅವರ್ ರೂಪು ಬೇರ್ ಆತ್. 3 ಅವನ ಬಟ್ಟೆಗ ಬಳ್ಳಗೆ ವಳಿತಿತ್ ಭೂಲೋಕಲ್ ಇರ ಯಾವ ಅಗಸ ಅಗದರ್ ಆಸೂ ಬಳ್ಳಗೆ ಮಾಡಲೆ ಆತಿತ್ತೀಲೆ. 4 ಆಗ ಮೋಶೆ ಮತ್ತೆ ಎಲೀಯ ಯೇಸು ಜೊತೆಲ್ ಮಾತಡದ್ನೆ ಶಿಷ್ಯರ್ ನೋಡಿದರ್. 5 ಆಗ ಪೇತ್ರ ಯೇಸುಗ್, “ಗುರುವೇ ನಂಗ ಇಲ್ಲಿವೆ ಇರದ್ ಒಳ್ಳೆದ್. ನಂತ ಇಲ್ಲಿ ಮೂರು ಗಡ್ಸುಲ್ ಕಟ್ಟಿತಿಗೆ ಒಂದು ನಿಂಗಗ್. 6 ಮತ್ತೆ ಒಂದು ಮೋಶೆಗ್ ಇನ್ನೊಂದು ಎಲೀಯನಾಗ್ “ಅತ್ತ ಹಾಳಿನ.ಪೇತ್ರನಗ್ ಯಾನ ಹಾಳಕ್ ಅತ್ತ ಗೊತ್ತಾತಿಲೆ. ಆಗ ಶಿಷ್ಯರ್ ಅಸೂ ಅಂಜಿನಡಿಗಿತಿದರ್! 7 ಆಗ ಮೋಡವೆ ಒಂದು ಬಂದು ಅವರ್ ಮೇಲೆ ಮುಚ್ಚೊಡಿತ್ ಮೋಡವಳಗೆಯಿಂದ, “ಇಂವಾ ಪ್ರಿಯನಾಗಿರ ನನ್ನ ಮಙ. ಇವನ ಮಾತುನೆ ಕಾಳ್‍ನ್ ಅತ್ತ ಒಂದು ಸದ್ದು ಕಾಳಿಸಿತ್. 8 ಆಗವೇ, ಶಿಷ್ಯರ್ ಸುತ್ತ ನೋಡಿದಾಗ ತಂಗ ಜೊತೆಲ್ ಯೇಸು ಒಬ್ಬರುವೆ ಮತ್ತೆ ಬೇರೆ ಯಾರ್ನೆ ಕಾಣ್ಸಿಲೆಲೇ. 9 ಆಗ ಅವರ್ ಆ ಬಟ್ಟ ಇಳುದ್ ಬರ್ಗ, ಅಂವಾ ಅವರ್ಗ್ ನಿಂಗ ಕಂಡದ್ನೆ. “ಮನಸಮಷ ಸತ್ತು ಜೀವಾಗಿ ಎದ್ದು ಬರಗಟ್ಟಿ ಯಾರ್ಸ ಹಾಳಲೆಗ” ಅತ್ತ ಅವರ್ಗ್ ಖಂಡಿತ ಆಗಿ ಹಾಳಿದರ್. 10 ಅಂಗೆವೇ ಶಿಷ್ಯರ್ ಇದ್ನೆ ಯಾರ್ಗ ಹಾಳಿತಿಲೆ. ಅಂಗೆ “ಸತ್ತು ಜೀವಾಗಿ ಬರದ್” ಅಮದರೆ ಯಾನ? ಅತ್ತ ತಂಗತಂಗವಳಗೆ ಮಾತಡೊಡರ್. 11 ಅಗವೇ “ಎಲೀಯ ಮೊದ್ದು ಬರಕತ್ತ ದ್ಯಾವರ್ ವಾಕ್ಯನೇ ಕಲ್ಸಿಕೊಡವರ್ ಹಾಳಿತರಲ್ಲಾ ಅದು ಎಂಗೆ?” ಅತ್ತ ಶಿಷ್ಯರ್ ಯೇಸುನೆ ಕಾಳಿದರ್. 12 ಅದ್ದು ಅವರ್, ಎಲ್ಲೀಯ ಮೊದಲು ಬಂದು ಎಲ್ಲಿನೆ ತಿರಿಗಿ ಸರಮಾಡದ್ ನಿಜವೆ, ಮತ್ತೆ ಮನುಸಮಙ ಸುದ್ದಲು ಅಂವಾ ಸುಮಾರ್ ಕಷ್ಟನೆ ಅನುಭವುಸಕ್ ಜನರ್ ಅನವೆ ಹಿಂಸೆಪಡಿಸಿತ್ತರೆ; ಅತ್ತ ಪವಿತ್ರ ಪುಸ್ತಕಲ್ ಯಾಕ ಹಾಳಿತದೆ? 13 ಆಗ ನಾ ನಿಂಗಗ್ ಹಾಳದ್ ಯಾನಂದರೆ, “ಎಲ್ಲೀಯ ಬನ್ನ; ಮತ್ತೆ ಅವನ ;ಸುದ್ದಿಲು ಬರ್ದಿರಂಗೆ ಜನರ್ ತಂಗ ಮನ್ಸ್‍ಗ ಬಂದಂಗೆ ಅವನಗ್ ಮಾಡಿದರ್” ಅತ್ತ ಹಾಳಿದರ್. 14 ಅವರೆಲ್ಲರ್ ತಿರಿಗಿ ಬಂದಗ ಉಳ್ದ. ಶಿಷ್ಯರ್ ಸುತ್ತವೆ ಜನರ್ ದೊಡ್ಡ ಗುಂಪು ಸೇರಿರದ್ನೆ ದ್ಯಾವರ್ ವಾಕ್ಯನೇ ಕಲ್ಸಿಕೊಡುವರ್ ಇವರ್ ಜೊತೆಲ್ ವಾದ ಮಾಡದ್ನೆ ನೋಡಿದರ್. 15 ಸೇರಿದ ಜನರ್ ಯೇಸುನೆ ಕಂಡಗ ಆಸರ್ಯಪಟ್ಟೋಡ್, ಓಡಿಬಂದ್ ಅವರ್ಗ್ ಸಮಸ್ಕರ ಮಾಡಿದರ್. 16 ಯೇಸು, “ನಿಂಗೆ ಯಾವುದರ ವಿಷಯಲ್ ವಾದಿಸಿತಿದೆರ್?” ಅತ್ತ ಕಾಳಿದರ್. 17 ಆ ಗುಂಪುಲ್ ಇದ್ದ ಒಬ್ಬ “ಗುರುವೇ ನನ್ನ ಮಙನೇ ತಂಗತ್ತ ಕರ್ದ್‍ಡ್ ಬಂದೆ. 18 ಅವನಗ್ ಒಂದು ಮೂಗುದೆವ ಹಿಡ್ತಿದಿಗೆ. ಅಂವನ ಮೇಲೆ ಅದು ಬಂದಗ ಎಲ್ಲಿ ಅಂವನನೆ ನೆಲಗ್ ಬೂಳಿಸಿತದೆ. ಮತ್ತೆ ಅಂವಾ ಬಾಯಿಲ್ ಸೊರೆ ಸುರೂಸೋಡ್ ಹಲ್ಲ್‍ಗನೇ ಕಚ್ಚಿತನೆ. ಆಗ ಅಂವನ ತಡಿವೆ ಬಂಡ್‍ಬುದ್ಧವಾತದೆ. ಆ ದೆವ್ವನೆ ಬುಡ್ಸಕತ್ತ ತಂಗ ಶಿಷ್ಯರ್ನೆ ಕಾಳೊಣೆ. ಆಂಗೆವೆ ಅದು ಅವರ್ ಕೈಲ್ ಆತಿಲೆ” ಅತ್ತ ಹಾಳಿನ. 19 ಅದ್ಕು ಅಂವಾ, “ಎಲಾ ನಂಬಿಕೆ ಇಲ್ಲದ ಸಂತಾನ, ನಾ ಇನ್ಯಾಸ ಜಿನಾ ನಿಂಗ ಜೊತೆಲ್ ಇರಕ್? ಇನ್ಯಾಸ ಜಿನಾ ನಿಂಗನೆ ಸಹಿಸೊಕ್? ಅಂವನೇ ನನ್ನತ್ರಗ್ ಕರ್‍ದೊಡ್ ಬಾರ್ಸ್” ಅತ್ತ ಹಾಳಿದರ್. 20 ಆಗ ಆ ಐದನೆ ಯೇಸು ಅತ್ರಗ್ ಕರ್ದ್‍ತಂದರ್, ಯೇಸುನೇ ನೋಡಿದಾಗವೆ ಆ ದೆವ್ವಾ ಐದನೆ ನೆಲ್ಗ್ ಬೊಳಿಸಿ ಒದ್ದಾಡಿಸಿತು. ಐದ ಒದ್ದಾಡಿ ನೊರೆಸುರಿಸಿತಿನ. 21 ಯೇಸು ಅಂವನ. ಅಪ್ಪನಗ್ ಇದು “ಇವನಗ್ ಬಂದು ಯಾಸಜಿನ ಆತ್ತು? ಅತ್ತ ಕಾಳಿದಾಗ. 22 ಅಂವಾ ಸಣ್ಣದ್ರಿಂದವೇ ಬಂದದ್, ಮತ್ತೆ ಇವನೆ ಕೊಂದಕಲೆ ಆಗಾಗವೆ ಜಿಕ್ಸ್‍ಗೆ ಮತ್ತೆ ನೀರುಗ್ ಬೂಲಿಸಿತದೆ; ನಿಂಗ ಕೈಲ್ ಯಾನದರ್ ಆಗಾಂಗೆ ಇದ್ದರೆ ನಂಗೆ ಮೇಲೆ ದಯೆತೋರ್ಸಿ ನಂಗಗ್ ಒಳ್ಳೆದು ಮಾಡು ಅನ್ನ. 23 ಯೇಸು ಅವನಗ್ ನಿಂಗ ಕೈಲ್ ಅಂಗಾಂಗೆ ಇದ್ದರೆ ಅತ್ತಿದೆಯಲ್ಲ? ನಂಬಿದವನಗ್ ಎಲ್ಲಾವೇ ಆತದೆ” ಅತ್ತ ಹಾಳಿದರ್. 24 ಆ ಐದನೆ ಅಪ್ಪ ನಂಬಿತಿನಿ. ನನ್ನಗ್ ನಂಬಿಕೆ ಕಡಿಮೆ ಇದ್ದರೆ ಸಹಾಯ ಮಾಡ್” ಅತ್ತ ಹಾಳಿನ. 25 ಆಗ ಯೇಸು ಜನರ್ ಗುಂಪು ಓಡಿಬರದ್ನೆ ಕಂಡೊಡ್ ಆ ದೆವ್ವನೆ ಅಂದಿನಿ “ಎಯ್ ಕಿವುಡು ಮೂಗುದೆವ್ವಾ ಇವನನೆ ಬುಟ್ಟುಹೋಗು; ಇನ್ನೂ ಮುಂದಕ್ ಇವನನ್ನೆ ಹಿಡಯಾಲೆಗ ಅತ್ತ ನಾನಿನನ್ಗ್ ಖಂಡಿತಾ ಆಗಿ ಹಾಳಿತಿನಿ” ಅತ್ತ ಹಾಳಿದರ್. 26 ಆ ದೆವ್ವಾ ಕಿರ್‍ಸೋಡು, ಆ ಐದನೆ ಪುನ ನೆಲಗ್ ಬೂಳಿಸಿ ಒದ್ದಾಡಿಸಿ ಬುಟ್ಟುಹೋತು. ಆಗ ಐದ ಸತ್ತುವಾದನಂಗ ಬುದ್ದರದ್ನೆ ಸುಮಾರ್ ಜನರ್ ಅಂವ ಸತ್ತವಾದ್” ಅಂದರ್. 27 ಆಗ ಯೇಸು ಅವನ ಕೈಯಿಡ್ತು ಎತ್ತಗ ಅಂವಾ ಇದ್ದು ನಿತ್ತ. 28 ಆಗ ಯೇಸು ಮನೆವಳಗೆ ವಾದ ಮೇಲೆ ಅವರ್ ಶಿಷ್ಯರ್ ಮಾತ್ರ ಅವರ್ ಜೊತೆಲ್ ಹೋಗಿ “ಆ ದೆವ್ವಾನೆ ಓಡ್ಸುಲ್ ನಂಗಗ್ ಯಾಕ ಅತಿಲೆ ಅತ್ತ ಕಾಳಿದರ್. 29 ಅದ್ದು ಯೇಸು “ಈ ತರದ ದೆವ್ವಾಗನೆ ಓಡ್ಸುಲೆ ಪಾರ್ಥನೆ ಬುಟ್ಟರೆ ಬೇರೆ ದಾರಿ ಕಾಣೆ” ಅತ್ತ ಹಾಳಿದರ್. 30 ಯೇಸು ಮತ್ತೆ ಶಿಷ್ಯರ್ ಗಲಿಲಾಯ ದಾರಿಲ್ ಮುಂದಕ್ ವಾಗಗ ಇದು ಯಾಗ ಗೊತ್ತಾಗಲೆಗೆ ಅತ್ತ ಯೇಸು ಆಸೆಪಟ್ಟರ್. 31 ಯಾನಂದರೆ, ಅಂವಾ ತನ್ನ, ಶಿಷ್ಯರ್, ಜೊತೆ ಮಾತಡಿ, ಮನುಸಮಙ ಜನರ್ ಕೈಗ್ ಸಿಕ್ಕಿಕೊತ್ತನೆ: ಅವರ್ ಅಂವಾನನೆ ಕೊಂದಕಿತರೆ. ಆಗ ಕೊಂದು ಮೂರು ಜಿನ ಆದಾಗ ಪುನ ಜೀವಾಗಿ ಎದ್ದು ಬತ್ತನೆ: ಅತ್ತ ಹಾಳಿದರ್. 32 ಅಂಗೆ ಯೇಸು ಹಾಳಿದರ್ ಶಿಷ್ಯರ್ಸ್ ಅರ್ಥ ಅತಿಲೆ, ಮತ್ತು ಅದರ ಅರ್ಥನೇ ಕಾಳಲೆ ಅವರ್ ಅಂಕಿದರ್. 33 ಆಗ ಅವರೆಲ್ಲರ ಕಫೆರ್ನವುಮಿಗ್ ಬಂದರ್. ಮನೆಗೆ ಬಂದಗ ಯೇಸು. “ದಾರಿಲ ಬರಗ ನಿಂಗನಿಂಗವೇ ಯಾನ ಮಾತಡಿಕೊತ್ತಿದರ್? ಅತ್ತ ಶಿಷ್ಯರ್ನೆ ಕಾಳಿದರ್ ಅವರ್ ಸುಮ್ಮನೆ ಇದ್ದರ್. 34 ಯಾನಂದರೆ, ತಂಗತ್ರ ಯಾವನ ದೊಡ್ಡಂವಾ ಅತ್ತ ತಂಗ ತಂಗವೇ ಮಾತಾಡೊಡ್ ಬಂದಿದರ್. 35 ಯೇಸು ಕೂತೊಡ್, ಹನ್ನೆರಡು ಶಿಷ್ಯರ್ನೆ ಕರ್ದು, ಅವರ್ಗ್ ನಿಂಗತ್ರ ಕೊಡ್ಡಂವ ಆಗಲೆ ಇರಂವಾ ಇಲ್ಲಾರ್ಗ ಸಣ್ಣಂವಾ ಆಗಿರಕ್; ಮತ್ತೆ ಎಲ್ಲಾರ್ ಸೇವೆ ಮಾಡಂವಾ ಆಗಿರಕ್; ಅತ್ತ ಹಾಳಿದರ್. 36 ಅಂಗೆವೇ ಯೇಸು, ಒಂದು ಸಣ್ಣಕೂಸನೆ ಕರ್ದು ಅವರ್ ಮದ್ದೆ ನಿಲ್ಸಿ. ಅದ್ನೆ ತಬ್ಬೊಡು ತಂಗ ಶಿಷ್ಯರ್ಗ್. 37 “ನನ್ನ ಯಸ್ರ್ಲ್ ಇಂಥ ಒಂದು ಕೂಸನೆ ಯಾರ ಸೇರಿಸಿಕೊತ್ತನೆಯೋ ಅಂವಾ ನನ್ನನೆ ಸೇರಿಸಿಕೊತ್ತನೆಯೋ ನನ್ನನ್ನೆ ಸೇರುಸಿಕೊತ್ತನೆಯೋ ಅಂವಾ ನನ್ನನೇ ಅಲ್ಲ. ನನ್ನಗೆ ಕಾಳಿಸಿಕೊಟ್ಟವನೆ ಸೇರಿಸಿಕೊತ್ತನೆ” ಅಂದರ್. 38 ಯೋಹಾನ ಯೇಸುಗ್, “ಗುರುವೆ, ಯಾವನ ಒಬ್ಬ ತಂಗ ಯಾಸರ್ಸ್ ದೆವ್ವ ಬುಡುಸದ್ನೆ ನೋಡಿನೋ. ಅಂವಾ ನಂಗಂವಾ ಅಲ್ಲ ಅಂಗೆವೆ ಅವನೆ ತಡುತೊ” ಅಂದರ್. 39 ಅದ್ಕು ಯೇಸು, “ಅವನ್ನನೆ ತಡಿಯಬಡ ನನ್ನ ಯಾಸರ್ಲ್ ಅದ್ಬುತ ಮಾಡಂವಾ ಆ ಗಳಿಗೆವೆ ನನ್ನ ಸುದ್ದಿನೆ ದೊಸಣೆ ಮಾಡದಿಲ್ಲೆ” ಅತ್ತ ಹಾಳಿದರ್. 40 ನಂಗಗ್ ವಿರೋಧಿ ಅಲ್ಲದಂವ ನಂಗಂವ ಅಗಿರಿತ್ತನೆ. 41 ನಾ ನಿಂಗಗ್ ಸತ್ಯ ಹಳಿತಿನಿ ನಿಂಗ ಕ್ರಿಸ್ತನವರ್ ಅತ್ತ ಯಾರಾದರ್ ನಿಂಗಗ್ ಕುಡಿಯಲೆ ಒಂದು ಗಿಳಸು ನೀರ್ ಕೊಟ್ಟರೆ ಅವನಗ್ ಅದು ಪ್ರತಿಫಲ ನಿಜಗುಲ್ ಸಿಕ್ಕಿತದೆ. 42 “ನಂಗತ್ರ ನಂಬಿಕೆ ಇಟ್ಟಿರ ಈ ಸಣ್ಣ ಮಕ್ಕಳ್ ಯಾವನದರ್ ಅಡ್ಡಿಮಾಡಿದರ್ ಅಂಥವನ ಕತ್ತ್‍ಗೆ ಬೀಸಕಲ್ಲುಕಟ್ಟಿ ಅವನನೆ ಸಮುದ್ರಗ್ ಹಾಖಿದರ್ ಅವನಗ್ ಒಳ್ಳೆದು. 43 ನಿಂಗ ಕೈ ನಿಮಗನೆ ಪಾಪಲ್ ಸಿಕ್ಕಿಸಿದರೆ ಅದ್ನೆ ತರ್ತ್‍ಬುಡು; 44 ಎರಡು ಕೈಯಿದ್ಗದ ನರಕಲ್ ದಡಕ ಬಿಕ್ಕೆಗ್ ಬೂಳಕಿಂತ ಕೈ ಕಳ್ದೊಡವನಾಗಿ ಯಾಗ್‍ಲೆ ಜೀವಲು ಸ್ಯಾರದ್ ನಿಂಗಗ್ ಒಳ್ಳೆದು. 45 ನಿಮಗ ಕಾಲು ನಿಮಗಗ್ ಪಾಪಲ್ ಸಿಕ್ಕಿಸಿದರೆ ಅದ್ನೆ ತರ್ತ್‍ಬುಡು. 46 ಎರಡು ಕಾಲಿದ್ದಂವನಾಗಿ ನರಕಲ್ ಬುಳಕ್ಕಿಮತ ಕಾಳು ಕಳ್ದೂಡವನಾಗಿ ಯಾಗಲ್ ಜೀವಲೆ ಸ್ಯಾರದ್ ನಿಂಗಗ್ ಒಳ್ಳದು. 47 ನಿಂಗ ಕಣ್ಣು ನಿಂಗಗ್ ಪಾಪಲ್ ಸಿಕ್ಕಿಸಿದರೆ ಅದ್ನೆ ಕಿತ್ತುಹಾಕ್, ಎರುಡು ಕಣ್ಣ ಇರಂವಾ ಅಗಿ ನರಕಲ್ ಬೂಳಕ್ಕಿಂತ ಒಂದೇ ಕಣ್ಣು ಇರಂವಾಗಿ ದ್ಯಾವರ ರಾಜ್ಯಲ್ ಸ್ಯಾರದ ನಿಂಗಗ್ ಒಳ್ಳೆದು. 48 ನರಕಲ್ ಅವರ್ನೆ ಕಚ್ಚುಹುಳು ಸಾಯದಿಲೆ. ಸುಡಬಿಕ್ಕೆ ಕಡದಿಲೆ. 49 ಯಾನಂದರ್ ಊಟಗ್ ಉಪ್ಪುಯಿಂದವೇ ಸಂದಾಗಿ ಅಗಂಗೆ ಉಪ್ಪು ಒಬ್ಬನಗ್ ಬಿಕ್ಕೆಯಿಂದವೇ ಸಂದಾಗಿ ಆಗಕ್. 50 ಉಪ್ಪು ಒಳ್ಳೆ ಸಾಮಾನು: ಉಪ್ಪವೆ ಸಪ್ಪೆ ಆದರೆ ಅದುನೆ ಇನ್ನು ಯಾವುದಲ್ ರುಸಿಮಾಡಿತ್ತಿದೆರ್? ನಿಂಗವಳಗೆ ಉಪ್ಪು ಇರಲಿ. ಒಬ್ಬನ ಜೊತೆಲ್ ಇನ್ನೊಬ್ಬ ಸಮಾಧನಾಲ್ ಇರ್ನು” ಅತ್ತ ಹಾಳಿದರ್.