1 ಸಭೆನ ದೊಡ್ದಂವ ದೈವ ಆದ್ ಕೊಂಡವರ್ ಅವ್ವಗಗ್ ಅವ ಮಕ್ಕಗ್ ಬರಿವದ್ಯಾನಂದಲೇ 2 -ನಂಗಲ್ ನೆಲೆಇರದ್ ಹಿಂದೆ ಯಾಗ್ಲ್ ನಂಗಜ್ವತೆಲ್ ಇರ ಸತ್ಯಯಿಂದ ನಾ ನಿಂಗನೆ ನಿಜಾಗಿ ಇಷ್ಟಪಡ್ತೀನಿ;ನಾ ಅಲ್ಲದೆ ಸತ್ಯನೇ ತ್ ಳ್ದ್ರವರ್ಯಲ್ಲರ್ ನಿಂಗನೇ ಇಷ್ಟಪಡ್ತೆರೆ. 3 ಅಪ್ಪಾಗಿರ ದೈವಯಿಂದ ಅಪ್ಪನ ಮಗಆದ ಯೇಸುಕ್ರಿಸ್ತುಯಿಂದ ಕೃಪೆ ಕರ್ಣೇ ಶಾಂತಿ ಸತ್ಯಪೂರ್ವಕವಾಗಿ ಇಷ್ಟಾಗಿ ನಂಗಜ್ವತೆಇರ್ತೆದೆ. 4 ನಿನ್ನ ಮಕ್ಕಲ್ ಅರ್ಧಾಳ್ ಅಪ್ಪನಿಂದ ನಂಗಗಾದ ಮಾತ್ ವಿಚಾರಆಗಿ ಸತ್ಯವಂತರಾಗಿ ನಡೆದ್ನೆಕಂಡ್ ಬಾಳ ಖುಷಿಯಿರಂವ ಹಾನಿ. 5 ಅವ್ವದಿರೇ ,ನಾ ವಸ ಮಾತ್ನೆ ನಿಂಗಗ್ ಬರಿವದೆ ಮೊದ್ಲ್ ಯಿಂದ ನಂಗಗ್ ಬಂದ ಮಾತ್ನೆ ಬರ್ದಂವಾಗಿ -ನಂಗ ಒಬ್ಬೊಬ್ಬರ್ ಇಷ್ಟಪಡವರಾಗಿರಮ್ವ ಅಂದ್ ನಿನ್ನೆ ಕ್ ಳಿಕೊತ್ತಿನಿ. 6 ದೈವನ ಮಾತ್ನೆ ಕೈಗೊಂಡು ನಡೆದೆವೆ ಪ್ರೀತಿ; ಪ್ರೀತಿಲ್ ನಡೆಕಂಬದೆ ನಿಂಗ ಮೊದ್ಲಿಂದ ಕ್ ಳಿದ ಅಪ್ಪಣೆಆಗಿದೆದೆ. 7 ಮೈಸಾಗಿ ಬಂದ್ರ ಯೇಸುಕ್ರಿಸ್ತುನೆ ವಪ್ಪದೆ ಇರ ಮ್ವಾಸಮಾಡವರ್ ಸುಮಾರ್ ಹಾಳ್ ಹೋಗಿ ಲೋಕವಳಗೆ ವೋಗಿದೆರೆ.ಯೇಸುಸ್ವಾಮಿನೆ ವಪ್ಪದಂವ ಮ್ವಾಸಮಾಡಂವ ಕ್ರಿಸ್ತುನೆ ವಿರೋಧಮಾಡಂವ ಆಗಿದೆನೆ. 8 ನಂಗ ಕಷ್ಟಪಟ್ಟ್ ಮಾಡಿದದ್ನೆ ನಿಂಗ ಕಳ್ದಬದೆ ತುಂಬಪಲನೆ ವಂದಲೇ ಉಸಾರಾಗಿರ್ನ್. 9 ಕ್ರಿಸ್ತುನ ಮಾತ್ಲ್ ನೆಲೆಯಾಗಿರದೆ ಅದ್ನೆ ಬ್ ಟ್ಟ್ ಮುಂದಕ್ ವಾಗಂವನಗ್ ದೈವನ ಒಗ್ಗಟ್ ಕಾಣಿ.ಆ ಮಾತ್ಲ್ ನೆಲೆಯಾಗಿರಂವನಾಗ್ ಅಪ್ಪನ ಹಿಂದೆ ಮಗನ ಒಗ್ಗಟ್ ಇದ್ದೆ. 10 ಈ ಮಾತ್ನೆ ಕಾಳದಂವ ಯಾವುನಾರ್ ನಿಂಗ ತಣ ಬಂದಲೆ ಅಂವನೆ ಮನೆವಳಗೆ ಸೇರ್ಸಬಡ, ಅಂವನಗ್ ವಳ್ಳೆದಾಗಲಿ ಅಂದ್ ಆಳಬಡ. 11 ಅಂವನಗ್ ವಳ್ಳೆದಾಗಲಿ ಅಂದ್ ಆಳಂವ ಅಂವನ ಕ್ಯಟ್ಟಕಾರ್ಯಲ್ ಸೇರಿದಂವಆಗಿದೆನೆ. 12 ನಿಂಗಗ್ ಬರೆಲೆ ನನ್ನಗ್ ಸುಮಾರ್ ಸುದ್ದಿ ಇದ್ದಲೀನ್ ಅದ್ನ್ಯಲ್ಲ ಮಸಿಯಿಂದ ಆಳೇ ಮೇಲೆ ಬರ್ದ್ ಆಳಲೆ ಮನ್ಸ್ ಕಾಣಿ.ನಾ ನಿಂಗ ನ ಬಂದ್ ನಿಂಗ ಜ್ವತೆ ಎದ್ರೆದ್ರಾಗಿ ಮಾತಾಡೀತಿನಿ ಅಂದ್ ನಂಬಿದಿನಿ. 13 ಆಗ ನಿಂಗ ಸಂತೋಸ ಪರಿಪೂರ್ಣಾತೆದೆ. ದೈವ ಕರ್ದ್ರವಾಗಿರ ನಿನ್ನ ಜ್ವತೆಗಾರ್ತಿ ಮಕ್ಕ ನಿನಗ್ ವಂದನೆ ಹ್ ಳಿತ್ತೇರೆ