Ruth 1

Ruth 1:1

ಯೆಹೂದ್ಯರ ಇತಿಹಾಸದಲ್ಲಿ ಯಾವ ಕಾಲದಲ್ಲಿ ರೂತಳ ಚರಿತ್ರೆ ಸಂಭವಿಸಿತು?

ನ್ಯಾಯಸ್ಥಾಪಕರು ಆಳ್ವಿಕೆ ಮಾಡುತ್ತಿದ್ದ ಕಾಲಗಳಲ್ಲಿ ಅದು ಸಂಭವಿಸಿತ್ತು.

ಎಲೀಮೆಲೆಕನು ತನ್ನ ಕುಟುಂಬದೊಂದಿಗೆ ಯಾಕೆ ಮೋವಾಬಿಗೆ ಹೋದನು?

ಯೆಹೂದ ದೇಶದಲ್ಲಿ ಬರಗಾಲ ಇದ್ದುದರಿಂದ ಅವನು ಅಲ್ಲಿಗೆ ಹೋದನು.

Ruth 1:3

ಮೋವಾಬಿನಲ್ಲಿ ಎಲೀಮೆಲೆಕನಿಗೆ ಏನಾಯಿತು?

ಅವನು ಸತ್ತುಹೋದನು, ನವೊಮಿಯು ವಿಧವೆಯಾದಳು.

Ruth 1:5

ಮೋವಾಬಿನಲ್ಲಿ ನವೊಮಿಯ ಪುತ್ರರಿಗೆ ಏನಾಯಿತು?

ಅವರು ಸಾವನ್ನಪ್ಪಿದರು, ನವೊಮಿಯೂ ಆಕೆಯ ಇಬ್ಬರು ಸೊಸೆಯರು ಉಳಿದರು.

Ruth 1:6

ನವೊಮಿಯು ಯೆಹೂದ ದೇಶಕ್ಕೆ ತಿರಿಗಿ ಹೋಗಲು ಯಾಕೆ ನಿರ್ಧರಿಸಿದಳು?

ಯೆಹೋವನು ಯೆಹೂದದ ಜನರಿಗೆ ಆಹಾರವನ್ನು ಕೊಟ್ಟಿದಾನೆಂದು ಅವಳು ಕೇಳಿಸಿಕೊಂಡಳು.

Ruth 1:8

ನವೊಮಿಯು ತನ್ನ ಇಬ್ಬರು ಸೊಸೆಯಂದಿರು ಎಲ್ಲಿಗೆ ಹೋಗಬೇಕೆಂದು ಬಯಸಿದ್ದಳು?

ಅವರು ತಮ್ಮ ತಾಯಂದಿರ ಮನೆಗಳಿಗೆ ತಿರಿಗಿ ಹೋಗಬೇಕೆಂದು ಅವಳು ಬಯಸಿದ್ದಳು.

Ruth 1:9

ನವೊಮಿಯು ತನ್ನ ಇಬ್ಬರು ಸೊಸೆಯಂದಿರು ಏನನ್ನು ಹೊಂದಬೇಕೆಂದು ಬಯಸಿದಳು?

ಅವರು ಬೇರೆ ಗಂಡಂದಿರನ್ನು ಹೊಂದಬೇಕೆಂದು ಅವಳು ಬಯಸಿದಳು.

Ruth 1:13

ನವೊಮಿಯು ತನ್ನ ತೊಂದರೆಗಳಿಗೆ ಕಾರಣ ಯಾರೆಂದು ನಂಬಿದ್ದಳು?

ಯೆಹೋವನು ತನಗೆ ವಿರುದ್ಧವಾಗಿದ್ದಾನೆ ಎಂದು ಅವಳು ನಂಬಿದ್ದಳು.

Ruth 1:16

ರೂತಳು ನವೊಮಿಯೊಂದಿಗೆ ಇದ್ದಾಗ, ರೂತಳು ನವೊಮಿಗೆ ಏನೆಂದು ಮಾತು ಕೊಟ್ಟಿದ್ದಳು?

“ಏಕೆಂದರೆ ನೀನು ಹೋಗುವ ಸ್ಥಳಕ್ಕೆ ನಾನು ಬರುವೆನು, ಮತ್ತು ನೀನು ವಾಸಿಸುವ ಸ್ಥಳದಲ್ಲೇ ನಾನು ವಾಸಿಸುವೆನು. ನಿನ್ನ ಜನರೇ ನನ್ನ ಜನರು; ನಿನ್ನ ದೇವರೇ ನನ್ನ ದೇವರು. ನೀನು ಸಾಯುವ ಸ್ಥಳದಲ್ಲೇ ನಾನು ಸಾಯುವೆನು, ಮತ್ತು ಅಲ್ಲೇ ನಾನು ಹೂಣಲ್ಪಡುವೆನು. ಮರಣವು ನನ್ನನ್ನು ಮತ್ತು ನಿನ್ನನ್ನು ಆಗಲಿಸಿದ್ದರೆ, ಯೆಹೋವನು ನನಗೆ ಹಾಗೆ ಮಾಡಲಿ, ಮತ್ತು ಆತನು ಹಾಗೆ ಹೆಚ್ಚಿಸಲಿ” ಎಂದು ಅವಳು ಹೇಳಿದಳು.

Ruth 1:17

ನವೊಮಿಯೊಂದಿಗೆ ಎಲ್ಲಿಯ ತನಕ ಇರುವುದಾಗಿ ರೂತಳು ಹೇಳಿದಳು?

ಅವಳು ಸಾಯುವವರೆಗೂ ತಾನು ನವೊಮಿಯೊಂದಿಗೆ ಇರುತ್ತೇನೆ ಎಂದು ಅವಳು ಹೇಳಿದಳು.

Ruth 1:19

ನವೊಮಿ ಯಾವ ಪಟ್ಟಣಕ್ಕೆ ತಿರಿಗಿ ಹೋದಳು?

ಅವಳು ಬೇತ್ಲೆಹೇಮಿಗೆ ತಿರಿಗಿ ಹೋದಳು.

Ruth 1:20

ತನ್ನನ್ನು ಯಾವ ಹೆಸರಿನಿಂದ ಕರೆಯಬೇಕೆಂದು ನವೊಮಿ ಬಯಸಿದಳು ಮತ್ತು ಯಾಕೆ ಬಯಸಿದಳು?

ಅವಳು “ಮಾರಾ” (ಅಂದರೆ “ಕಹಿ”) ಎಂದು ಕರೆಯಬೇಕೆಂದು ಕೇಳಿಕೊಂಡಳು, ಯಾಕೆಂದರೆ ಯೆಹೋವನು ಆಕೆಯನ್ನು ಕಟುವಾಗಿ ಶಿಕ್ಷಿಸಿದ್ದಾನೆಂದು ಅವಳು ನಂಬಿದ್ದಳು.

Ruth 1:22

ವರ್ಷದ ಯಾವ ಸಮಯದಲ್ಲಿ ನವೊಮಿ ಮತ್ತು ರೂತಳು ಬೇತ್ಲೆಹೀಮಿಗೆ ಬಂದರು?

ಜವೆಗೋದಿಯ ಸುಗ್ಗಿ ಕಾಲದ ಪ್ರಾರಂಭದಲ್ಲಿ ಬಂದರು.